Search
  • Follow NativePlanet
Share
» »ಕಾಣೆಯಾಗಿ ಪ್ರತ್ಯಕ್ಷಗೊಳ್ಳುವ ಮಂದಿರದ ಬಗ್ಗೆ ಕೇಳಿದ್ದೀರಾ?

ಕಾಣೆಯಾಗಿ ಪ್ರತ್ಯಕ್ಷಗೊಳ್ಳುವ ಮಂದಿರದ ಬಗ್ಗೆ ಕೇಳಿದ್ದೀರಾ?

ಈ ಸ್ಥಂಭೇಶ್ವರ ಮಹಾದೇವ ಮಂದಿರ ಇರುವುದು ಗುಜರಾತ್‌ನಲ್ಲಿ. ಈ ಮಂದಿರದ ವಿಶೇಷತೆಯೆಂದರೆ ಇದು ಪ್ರತಿದಿನ ಮುಳುಗುತ್ತದೆ ಹಾಗು ಮತ್ತೆ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಈ ಮಂದಿರವನ್ನು ಭಾರತದ ಕಾಣೆಯಾಗುವ ಶಿವಲಿಂಗ ಎನ್ನುತ್ತಾರೆ.

ಭಾರತದಲ್ಲಿರುವ ಈ ನದಿ ದ್ವೀಪಗಳನ್ನು ನೋಡಿದ್ದೀರಾ?ಭಾರತದಲ್ಲಿರುವ ಈ ನದಿ ದ್ವೀಪಗಳನ್ನು ನೋಡಿದ್ದೀರಾ?

ಸ್ಥಂಭೇಶ್ವರ ಮಂದಿರ

ಸ್ಥಂಭೇಶ್ವರ ಮಂದಿರ

ಈ ಮಂದಿರಕ್ಕೆ ಹೋಗುವುದರಿಂದ ನಿಮಗೆ ಪ್ರಕೃತಿಯ ವಿಶೇಷ ದೃಶ್ಯ ನಿಮಗೆ ಕಾಣಸಿಗುತ್ತದೆ. ಗುಜರಾತ್‌ನಲ್ಲಿರುವ ಸ್ಥಂಭೇಶ್ವರ ಮಂದಿರ ಒಂದು ಪ್ರಾಚೀನ ಮಂದಿರವಾಗಿದ್ದು, ಗುಜರಾತ್‌ನ ಅರಬ್‌ ಸಾಗರದ ಮಧ್ಯದಲ್ಲಿದೆ. ಈ ಮಂದಿರ ಪ್ರತಿದಿನ ಎತ್ತರ ಅಲೆ ಒಂದಾಗ ಮುಳುಗಿ ಹೋಗುತ್ತದೆ. ಅಲೆ ಹೋದ ನಂತರ ಮತ್ತೆ ಕಾಣಿಸುತ್ತದೆ. ಪ್ರತಿವರ್ಷ ದೇಶಾದ್ಯಂತ ಅನೇಕ ಜನರು ಇಲ್ಲಿಗೆ ಆಗಮಿಸುತ್ತಾರೆ.

ಕಾರ್ತೀಕೇಯ ನಿರ್ಮಿಸಿದ ಮಂದಿರ

ಕಾರ್ತೀಕೇಯ ನಿರ್ಮಿಸಿದ ಮಂದಿರ

ಪೌರಾಣಿಕ ಕಥೆಗಳ ಪ್ರಕಾರ ಈ ಮಂದಿರದಲ್ಲಿರುವ ಶಿವಲಿಂಗವನ್ನು ಸ್ವಯಂ ಕಾರ್ತಿಕೇಯನು ಸ್ಥಾಪನೆ ಮಾಡಿದ್ದನು. ಕಥೆಯ ಪ್ರಕಾರ ಕಾರ್ತೀಕೇಯ ತಾಡಕಾಸುರ್‌ನ್ನು ವಧೆ ಮಾಡಿ ದುಃಖಿತನಾಗಿರುತ್ತಾನೆ. ಯಾಕೆಂದರೆ ಆತ ಓರ್ವ ಶಿವಭಕ್ತನಾಗಿದ್ದ. ವಿಷ್ಣು ಕಾರ್ತೀಕೇಯನಿಗೆ ಆತನ ಮಾಡಿದ್ದು ತಪ್ಪಲ್ಲ ಎನ್ನುತ್ತಾ ಸಾಂತ್ವನ ನೀಡುತ್ತಾನೆ. ಕೊನೆಗೆ ಒಂದು ಉಪಾಯ ಹೇಳುತ್ತಾನೆ. ಅದೇನೆಂದರೆ ಶಿವಲಿಂಗವನ್ನು ಸ್ಥಾಪನೆ ಮಾಡಿ ಪ್ರತಿದಿನ ಕ್ಷಮೆ ಯಾಚಿಸುವಂತೆ ಹೇಳುತ್ತಾನೆ. ಹಾಗಾಗಿ ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಯಿತು.

ಕವಿ ಕಂಬೋಯಿ ತಲುಪುವುದು ಹೇಗೆ?

ಕವಿ ಕಂಬೋಯಿ ತಲುಪುವುದು ಹೇಗೆ?

ಕವಿ ಕಂಬೋಯಿ ಗುಜರಾತ್‌ನ ವಡೋದರದಿಂದ ಸುಮಾರು ೭೫ಕೀ.ಮಿ ದೂರದಲ್ಲಿದೆ. ವಡೋದರದಿಂದ ಕ್ಯಾಬ್ ಬುಕ್ ಮಾಡಿ ಈ ದೇವಸ್ಥಾನಕ್ಕೆ ತಲುಪುವುದು ಅತ್ಯಂತ ಅನುಕೂಲಕರವಾಗಿದೆ. ವಡೋದರ ರೈಲ್ವೆ ಸ್ಟೇಶನ್ ಇಲ್ಲಿಗೆ ಅತ್ಯಂತ ಸಮೀಪದ ರೈಲ್ವೆ ಸ್ಟೇಶನ್ ಆಗಿದೆ.

ಪ್ರತೀ ದಿನ ನೋಡಬಹುದು ಚಮತ್ಕಾರ

ಪ್ರತೀ ದಿನ ನೋಡಬಹುದು ಚಮತ್ಕಾರ

ಈ ಮಂದಿರದ ಅಧೀಕೃತ ವೆಬ್‌ಸೈಟ್‌ನಲ್ಲಿ ಮಂದಿರ ತೆರೆಯುವ ಹಾಗೂ ಮುಚ್ಚುವ ಸಮಯವನ್ನು ನೀಡಲಾಗಿದೆ. ನಿಮಗೆ ಪ್ರಕೃತಿಯ ಈ ಚಮತ್ಕಾರವನ್ನು ನೋಡಬೇಕಾದರೆ ಇಡೀ ದಿನ ವ್ಯಯಿಸಬೇಕಾಗುತ್ತದೆ. ಆಗ ಮಾತ್ರ ಮಂದಿರ ಅಲೆಯಲ್ಲಿ ಮುಳುಗಿ ಮೇಲೇಳುವ ರೋಮಾಂಚನಕಾರಿ ದೃಶ್ಯವನ್ನು ನೋಡಬಹುದು.

Read more about: temple gujarat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X