Search
  • Follow NativePlanet
Share
» »ಶ್ರೀರಂಗಪಟ್ಟಣ-ಐತಿಹಾಸಿಕ ಮಹತ್ವವನ್ನು ಹೊಂದಿರುವ ಸ್ಥಳ

ಶ್ರೀರಂಗಪಟ್ಟಣ-ಐತಿಹಾಸಿಕ ಮಹತ್ವವನ್ನು ಹೊಂದಿರುವ ಸ್ಥಳ

ಮೈಸೂರಿಗೆ ಬಹಳ ಹತ್ತಿರವಿರುವ ಈ ಸ್ಥಳವು ಸುಮಾರು 13 ಚದರ ಕಿ.ಮೀಟರ್ ಗಳಷ್ಟು ವಿಸ್ತೀರ್ಣತೆಯನ್ನು ಹೊಂದಿದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಶಾಖೆಗಳ ಮಧ್ಯೆ ಇರುವ ಒಂದು ದ್ವೀಪವಾಗಿದ್ದು, ಈ ಸ್ಥಳವು ಸಾಕಷ್ಟು ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವುದರಿಂದ ನಿಮ್ಮ ಪ್ರವಾಸವನ್ನು ಸಾರ್ಥಕಗೊಳಿಸುತ್ತದೆ.

ಈ ಸ್ಥಳದ ಐತಿಹಾಸಿಕ ಮಹತ್ವಗಳು

ಶ್ರೀರಂಗ ಪಟ್ಟಣದಲ್ಲಿಯ ಪ್ರವಾಸಿ ಕೇಂದ್ರಗಳು ಅವುಗಳ ಐತಿಹಾಸಿಕ ಮಹತ್ವದಿಂದಾಗಿ ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿ ಅದ್ಭುತವಾದ ರಂಗನಾಥಸ್ವಾಮಿ ದೇವಾಲಯ ಇರುವುರಿಂದ ಈ ಸ್ಥಳವು ಅದೇ ಹೆಸರಿನಿಂದ ಕರೆಯಲ್ಪಡುತ್ತದೆ. ಈ ದೇವಾಲಯವು 9ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಗಳ ಸಂಯೋಜಿತ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿರುವುದರ ಪರಿಣಾಮವಾಗಿ ಹಲವಾರು ಅಲಂಕಾರಗಳನ್ನು ತನ್ನಲ್ಲಿ ಹೊಂದಿದೆ. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಮೈಸೂರಿನ ರಾಜಧಾನಿಯಾಗುವುದರ ಮೂಲಕ ಈ ಪಟ್ಟಣವು ಹೆಚ್ಚಿನ ಪ್ರಾಮುಖ್ಯತೆಗೆ ಬಂದಿತು.

Srirangapatna

ಈ ಪಟ್ಟಣದ ವಾಸ್ತುಶಿಲ್ಪವು ಇಂಡೋ- ಮುಸ್ಲಿಂ ಶೈಲಿಯನ್ನು ಹೊಂದಿದೆ ಹಾಗೂ ಇದರ ಪ್ರಭಾವವನ್ನು ದರಿಯಾ ದೌಲತ್ ಬಾಗ್ ಮತ್ತು ಜಾಮಾ ಮಸೀದಿಗಳಂತಹ ಸ್ಮಾರಕಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಶ್ರೀರಂಗ ಪಟ್ಟಣವು ಬೆರಗುಗೊಳಿಸುವ ಮನಮೋಹಕ ತಾಣಗಳನ್ನು ಹೊಂದಿದೆ. ಭಾರತದ ಎರಡನೇ ಅತಿ ದೊಡ್ಡ ಜಲಪಾತವಾಗಿರುವ ಶಿವನಸಮುದ್ರ ಜಲಪಾತವು ಇಲ್ಲಿಯ ಜನಪ್ರಿಯ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ. ಕಾವೇರಿ, ಕಬಿನಿ ಮತ್ತು ಹೇಮಾವತಿ ನದಿಗಳು ವಿಲೀನಗೊಳ್ಳುವ ಶ್ರೀರಂಗಪಟ್ಟಣದ ಸಂಗಮವು ನೋಡಬೇಕಾದ ಮತ್ತೊಂದು ಸುಂದರವಾದ ಸ್ಥಳವಾಗಿದೆ.

Srirangapatna

ಶ್ರೀರಂಗ ಪಟ್ಟಣವನ್ನು ತಲುಪುವುದು ಹೇಗೆ?

ಬೆಂಗಳೂರಿನಿಂದ 127 ಕಿ.ಮೀ ಮತ್ತು ಮೈಸೂರಿನಿಂದ 19 ಕಿ.ಮೀ ಅಂತರದಲ್ಲಿರುವ ಶ್ರೀರಂಗಪಟ್ಟಣವು ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದೆ ಮತ್ತು ಹತ್ತಿರದ ವಿಮಾನ ನಿಲ್ದಾಣವು ಮೈಸೂರಿನಲ್ಲಿದೆ. ಇದು ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವುದರಿಂದ ದ್ವೀಪಕ್ಕೆ ಉತ್ತಮ ರಸ್ತೆ ಸಂಪರ್ಕವಿದೆ. ಆದುದರಿಂದ ಇಲ್ಲಿಗೆ ರಸ್ತೆ, ರೈಲು ಮತ್ತು ವಿಮಾನದಿಂದಲೂ ಪ್ರಯಾಣಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X