Search
  • Follow NativePlanet
Share
» » ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳು ಇವೆ. ಆಶ್ಚರ್ಯವನ್ನು ಉಂಟು ಮಾಡುವ ಒಂದು ವಿಚಿತ್ರವಾದ ಮೂರ್ತಿಯ ದೇವಾಲಯವಿದೆ. ಆ ದೇವಾಲಯದಲ್ಲಿ ಗರ್ಭಗುಡಿಯ ಮೂರ್ತಿಯನ್ನು ಮುಟ್ಟಿದರೆ ಮೆತ್ತಗೆ ಇರುತ್ತದೆ ಎಂತೆ. ಸ್ಥಳ ಪುರಾಣದ ಪ್ರಕಾರ ಅಲ್ಲಿ ದೇವಾಲಯವು

By Sowmyabhai

ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳು ಇವೆ. ಆಶ್ಚರ್ಯವನ್ನು ಉಂಟು ಮಾಡುವ ಒಂದು ವಿಚಿತ್ರವಾದ ಮೂರ್ತಿಯ ದೇವಾಲಯವಿದೆ. ಆ ದೇವಾಲಯದಲ್ಲಿ ಗರ್ಭಗುಡಿಯ ಮೂರ್ತಿಯನ್ನು ಮುಟ್ಟಿದರೆ ಮೆತ್ತಗೆ ಇರುತ್ತದೆ ಎಂತೆ. ಸ್ಥಳ ಪುರಾಣದ ಪ್ರಕಾರ ಅಲ್ಲಿ ದೇವಾಲಯವು ಹೇಗೆ ನೆಲೆಸಿತು? ಎಂಬುದು ತಿಳಿಸುತ್ತದೆ. ಪ್ರತಿ ದೇವಾಲಯದಲ್ಲಿಯೂ ಕೂಡ ಕಲ್ಲಿನಿಂದ ಕೆತ್ತನೆ ಮಾಡಿರುವ ವಿಗ್ರಹಗಳೇ ಇರುತ್ತವೆ.

ಆದರೆ ಇಲ್ಲಿನ ದೇವಾಲಯದಲ್ಲಿ ಮಾತ್ರ ಒಂದು ವಿಶೇಷವೆಂದೇ ಹೇಳಬಹುದು. ಇಲ್ಲಿನ ಸ್ವಾಮಿಯ ವಿಗ್ರಹಕ್ಕೆ ಕಲ್ಲಿನದಲ್ಲದೇ ಮುಟ್ಟಿದರೆ ಮೆತ್ತಗೆ ಇರುವ ಹಾಗೆ ಇರುವುದು ಪ್ರತಿಯೊಬ್ಬರಿಗೂ ಆಶ್ಚರ್ಯ ಚಕಿತರನ್ನಾಗಿಸಿದೆ. ಹಾಗಾದರೆ ಇಷ್ಟು ಆಶ್ಚರ್ಯವನ್ನು ಉಂಟು ಮಾಡುತ್ತಿರುವ ದೇವಾಲಯ ಎಲ್ಲಿ? ಆ ದೇವಾಲಯದ ವಿಶೇಷಗಳೇನು ಎಂಬುದು ಲೇಖನದ ಮೂಲಕ ತಿಳಿದುಕೊಳ್ಳೋಣ.

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಈ ವಿಚಿತ್ರವಾದ ದೇವಾಲಯವು ತೆಲಂಗಾಣ ರಾಜ್ಯದ ವರಂಗಲ್ ಜಿಲ್ಲೆಯಲ್ಲಿನ ಮಂಗಂ ಪೇಟ ಮಂಡಲದ ಮಲ್ಲೂರು ಗ್ರಾಮದ ಚಿಕ್ಕದಾದ ಗುಡ್ಡದ ಮೇಲೆ ಇದೆ. ಇದೊಂದು ಮಹಿಮಾನ್ವಿತವಾದ ದೇವಾಲಯವಾಗಿದ್ದು, ಅದನ್ನು ಶ್ರೀ ಹೇಮಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಎಂದು ಕರೆಯುತ್ತಾರೆ. ಅದ್ಬುತವಾದ ಬೆಟ್ಟಗಳ ಮಧ್ಯೆ ಸ್ವಾಮಿಯು ನೆಲೆಸಿದ್ದಾನೆ. ಇದೊಂದು ಸ್ವಯಂ ಭೂ ಚರಿತ್ರೆಯನ್ನು ಹೊಂದಿರುವ ದೇವಾಲಯ ಎಂದು ಪ್ರಸಿದ್ಧಿಯನ್ನು ಪಡೆದಿದೆ.

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ನವ ನರಸಿಂಹಕ್ಷೇತ್ರಗಳಲ್ಲಿ ಈ ಕ್ಷೇತ್ರವೂ ಒಂದು ಎಂದು ಹೇಳುತ್ತಾರೆ. ಈ ಕ್ಷೇತ್ರವು ಅತ್ಯಂತ ಪ್ರಾಚೀನವಾದುದು ಅಂದರೆ ಸುಮಾರು 6 ಶತಮಾನಕ್ಕಿಂತ ಹಳೆಯದಾದುದು ಎಂದು ನಂಬಲಾಗಿದೆ. 12 ನೇ ಶತಮಾನದಲ್ಲಿ ಕಾಕತೀಯ ರಾಜವಂಶಿಕರು ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು. ಇನ್ನು 17 ನೇ ಶತಮಾನದಲ್ಲಿ ನವಾಬರು ಇಲ್ಲಿನ ಸ್ವಾಮಿಗೆ 150 ಕೆ.ಜಿ ಬೆಳ್ಳಿ ಕವಚವನ್ನು ಕಾಣಿಕೆಯಾಗಿ ನೀಡಿದರಂತೆ. ಈ ದೇವಾಲಯದಲ್ಲಿನ ಮೂಲ ವಿಗ್ರಹವು ಸುಮಾರು 9 ಅಡಿ ಎತ್ತರವಿದ್ದು, ಕಪ್ಪು ಕಲ್ಲಿನ ವಿಗ್ರಹದಲ್ಲಿದೆ.

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಇಲ್ಲಿ ಸ್ವಾಮಿಯು ಕತ್ತಿನ ತನಕ ನರರೂಪದಲ್ಲಿ, ತಲೆ ಭಾಗವು ಸಿಂಹ ರೂಪದಲ್ಲಿ ನಿಜ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಆದರೆ ಹೀಗೆ ಇರಲು ಕಾರಣವೆನೆಂದರೆ ಒಂದು ಕಾಲದಲ್ಲಿ ಹುತ್ತದಲ್ಲಿ ಇದ್ದ ಈ ಸ್ವಾಮಿಯನ್ನು ಭಕ್ತರು ತೆಗೆಯುವ ಸಮಯದಲ್ಲಿ ಸ್ವಲ್ಪ ಸ್ವಾಮಿಯ ಹಣೆಗೆ ತಗುಲಿ ಗಾಯವಾಗಿತಂತೆ. ಹಾಗಾಗಿಯೇ ಇಂದಿಗೂ ಆ ಪ್ರದೇಶದಲ್ಲಿ ದೇವಾಲಯದ ಅರ್ಚಕರು ಆ ಸ್ಥಳದಲ್ಲಿ ಚಂದನವನ್ನು ಹಚ್ಚುತ್ತಾರೆ.

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಹಾಗಾಗಿಯೇ ಈ ದೇವಾಲಯದಲ್ಲಿನ ವಿಗ್ರಹವನ್ನು ಎಲ್ಲಿ ಮುಟ್ಟಿದರು ಕೂಡ ಕಲ್ಲನ್ನು ಮುಟ್ಟಿದ ಹಾಗೆ ಅಲ್ಲದೇ ಸಜೀವ ಮಾನವನ ಶರೀರವನ್ನು ಮುಟ್ಟಿದ ಹಾಗೆ ಮೆತ್ತಗೆ ಇರುತ್ತದೆ ಎಂತೆ. ದಕ್ಷಿಣ ಭಾರತ ದೇಶದಲ್ಲಿಯೇ ಬೇರೆ ಎಲ್ಲಿಯೂ ಇಲ್ಲದ ವಿಗ್ರಹ. ಹಾಗೆಯೇ ಎಳ್ಳು ಎಣ್ಣೆಯಿಂದ ಎಲ್ಲಿಯೂ ಸ್ವಾಮಿಗೆ ಅಭಿಷೇಕವನ್ನು ಮಾಡುವುದಿಲ್ಲ.

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಆದರೆ ಈ ದೇವಾಲಯದಲ್ಲಿ ಮಾತ್ರ ಸ್ವಾಮಿಗೆ ಎಳ್ಳೆಣ್ಣೆಯಿಂದ ಅಭಿಷೇಕವನ್ನು ಮಾಡುವುದು ಮತ್ತೊಂದು ವಿಶೇಷವೇ ಆಗಿದೆ. ಈ ಪ್ರದೇಶವು ಅರ್ಧ ಚಂದ್ರಕಾರದಲ್ಲಿರುತ್ತದೆ. ಹಾಗಾಗಿ ಭರದ್ವಾಜ ಮಹಾಋಷಿಯು ಇದನ್ನು ಹೇಮಾಚಲಂ ಎಂದು ಹೆಸರನ್ನು ಇಟ್ಟರು ಎಂದು ಪ್ರತೀತಿ ಇದೆ. ಇಲ್ಲಿ ಚಿಂತಾಮಣಿ ಜಲಾಧಾರೆಗೆ ಒಂದು ವಿಶೇಷತೆ ಕೂಡ ಇದೆ. ಇಲ್ಲಿನ ನೀರು ಮೂತ್ರಪಿಂಡ ವ್ಯಾಧಿಗಳಿಗೆ, ಸೊಂಟಕ್ಕೆ ಸಂಬಂಧಿಸಿದ ವ್ಯಾಧಿಗಳಿಗೆ ದಿವ್ಯವಾದ ಔಷಧವಾಗಿದೆ.

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಇಲ್ಲಿನ ನೀರು ಸಕಲ ರೋಗಕ್ಕೂ ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದೇ ಹೇಳಬಹುದು. ಅಷ್ಟೇ ಅಲ್ಲ ಗುಡ್ಡದ ಮೇಲಿಂದ ಮರಗಳ ಮಧ್ಯೆಯಿಂದ ಜಲಧಾರೆಯಾಗಿ ಸುರಿಯುವ ನೀರು ಎಲ್ಲಿಂದ ಬರುತ್ತದೆಯೋ ಇಂದಿಗೂ ಯಾರು ಕಂಡುಹಿಡಿಯಲು ಸಾಧ್ಯವಾಗಲಿಲ್ಲವಂತೆ. ಈ ವಿಧವಾಗಿ ಇಲ್ಲಿ ನೆಲೆಸಿರುವ ಶ್ರೀ ಹೇಮಾಚಲ ಲಕ್ಷ್ಮೀನರಸಿಂಹಸ್ವಾಮಿ ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತದೆ.

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....

ಅತ್ಯುತ್ತಮ ಸಮಯ
ಈ ಮಹಿಮಾನ್ವಿತ ದೇವಾಲಯಕ್ಕೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ. ಬೇಸಿಗೆ ಕಾಲದಲ್ಲಿ ಅತ್ಯಂತ ಹೆಚ್ಚು ಉಷ್ಣತೆ ಇರುವುದರಿಂದ ಚಳಿಕಾಲ ಅಥವಾ ಮಳೆಗಾಲದಂದು ಭೇಟಿ ನೀಡುವುದು ಅತ್ಯುತ್ತಮ. ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಒಮ್ಮೆ ಭೇಟಿ ನೀಡಿ ಬನ್ನಿ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರಸ್ತೆ ಮಾರ್ಗ

ರಸ್ತೆ ಮಾರ್ಗದಲ್ಲಿ ತೆರಳಬೇಕಾದರೆ ಅನೇಕ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಹೈದ್ರಾಬಾದ್‍ನಿಂದ, ವಿಜಯವಾಡದಿಂದ ಮತ್ತು ವಿಶಾಖಪಟ್ಟಣದಂತಹ ನಗರಗಳಿಂದ ಬಸ್ಸುಗಳು ಇವೆ. ವರಂಗಲ್ ಮತ್ತು ಇತರ ನಗರಗಳ ಮಧ್ಯೆ ಖಾಸಗಿ ಬಸ್ಸುಗಳ ಕೂಡ ಲಭ್ಯವಿವೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರೈಲು ಮಾರ್ಗದ ಮೂಲಕ
ವರಂಗಲ್ ರೈಲ್ವೆ ಸ್ಟೇಷನ್ ಹೆಚ್ಚು ಮುಖ್ಯವಾದ ನಿಲ್ದಾಣವಾಗಿದೆ. ಇದು ದೇಶದ ಮುಖ್ಯವಾದ ನಗರಗಳಿಂದ ರೈಲುಗಳು ಸಂಪರ್ಕ ಸಾಧಿಸುತ್ತವೆ. ಚೆನ್ನೈ, ಬೆಂಗಳೂರು, ಮುಂಬೈ ಮತ್ತು ನ್ಯೂ ಡೆಲ್ಲಿಯಿಂದ ರೈಲುಗಳು ವರಂಗಲ್‍ನ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ವರಂಗಲ್ ಸ್ಟೇಷನ್‍ನಲ್ಲಿ ನಿಲ್ಲುತ್ತವೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ವಿಮಾನ ಮಾರ್ಗದ ಮೂಲಕ
ವರಂಗಲ್ ಸಮೀಪದಲ್ಲಿ ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅದು ವರಂಗಲ್ ನಗರಕ್ಕೆ ಸುಮಾರು 163 ಕಿ.ಮೀ ದೂರದಲ್ಲಿದೆ. ದೇಶದಲ್ಲಿರುವ ಮುಖ್ಯವಾದ ನಗರಕ್ಕೆಲ್ಲಾ ಸಂಪರ್ಕ ಸಾಧಿಸುತ್ತದೆ. ಹೈದ್ರಾಬಾದ್‍ನಿಂದ ವರಂಗಲ್‍ಗೆ ಟ್ಯಾಕ್ಸಿಯಲ್ಲಿ ತೆರಳಬೇಕಾದರೆ ಸುಮಾರು 2500 ರೂ ವೆಚ್ಚವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X