Search
  • Follow NativePlanet
Share
» »ತಂಜಾವೂರಿನಲ್ಲಿದ್ದಾಳೆ ಸಂತಾನ ಭಾಗ್ಯ ಕರುಣಿಸುವ ಗರ್ಭರಕ್ಷಾಂಬಿಕೆ

ತಂಜಾವೂರಿನಲ್ಲಿದ್ದಾಳೆ ಸಂತಾನ ಭಾಗ್ಯ ಕರುಣಿಸುವ ಗರ್ಭರಕ್ಷಾಂಬಿಕೆ

ಈ ದೇವಸ್ಥಾನವನ್ನು ಇತರ ದೇವಾಲಯಗಳಿಂತ ಭಿನ್ನವಾಗಿಸುವ ವಿಶೇಷ ಲಕ್ಷಣವೆಂದರೆ, ಇಲ್ಲಿ ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ್ ಮಹಿಳೆಯರಿಗೆ ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತಾಳೆ.

ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ ದೇವಸ್ಥಾನವು ದಕ್ಷಿಣ ಭಾರತದ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಕ್ಕರುಕಾವೂರ್ ಎಂಬ ಸಣ್ಣ ಗ್ರಾಮದಲ್ಲಿದೆ. ಇದು ಶ್ರೀ ಮುಳಿದಾನಾಥರ್ ಮತ್ತು ಶ್ರೀ ಗರ್ಭರಕ್ಷಾಂಬಿಕೆ ಅಮ್ಮನಿಗೆ ಸಮರ್ಪಿತವಾದ ಪುರಾತನ ದೇವಸ್ಥಾನವಾವಾಗಿದೆ. ಇಲ್ಲಿನ ಗರ್ಭರಕ್ಷಾಂಬಿಕೆಯು ಹೆಸರಿನಂತೆಯೇ ತನ್ನ ಭಕ್ತರ ಗರ್ಭದ ರಕ್ಷಣೆ ಮಾಡುತ್ತಾಳೆ. ಸಾಕಷ್ಟು ಮಂದಿ ಸಂತಾನ ಭಾಗ್ಯಕ್ಕಾಗಿ ಗರ್ಭರಕ್ಷಾಂಬಿಕೆಯ ಮೊರೆ ಹೋಗುತ್ತಾರೆ.

ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ್

ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ್

PC: templeofficialwebsite
ಈ ದೇವಸ್ಥಾನವನ್ನು ಇತರ ದೇವಾಲಯಗಳಿಂತ ಭಿನ್ನವಾಗಿಸುವ ವಿಶೇಷ ಲಕ್ಷಣವೆಂದರೆ, ಇಲ್ಲಿ ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ್ ಮಹಿಳೆಯರಿಗೆ ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತಾಳೆ. ಆಕೆಯು ಭಕ್ತರಿಗೆ ಸುರಕ್ಷಿತ ಮತ್ತು ತೊಂದರೆ ಮುಕ್ತ ಹೆರಿಗೆಯಾಗುವಂತೆ ಅವರಿಗೆ ಆಶೀರ್ವಾದ ಮಾಡುತ್ತಾಳೆ.

ಸಂತಾನ ಭಾಗ್ಯ

ಸಂತಾನ ಭಾಗ್ಯ

PC: templeofficialwebsite
ಸಂತಾನವನ್ನು ಹೊಂದುವುದು ಪ್ರತಿ ದಂಪತಿಗಳ ಕನಸು. ಆದರೆ ಆ ಕನಸು ಕೆಲವರಿಗೆ ನನಸಾಗೋದಿಲ್ಲ. ಆದರೆ ಇಲ್ಲಿನ ದೇವಿಯ ಮೇಲೆ ನಂಬಿಕೆ ಇಟ್ಟು ಆಕೆಯನ್ನು ಪೂಜಿಸಿದ್ದಲ್ಲಿ ಅವರ ಆಸೆ ನೆರವೇರುತ್ತದಂತೆ. ದೇವಿಯು ಭಕ್ತರ ಮೇಲೆ ತನ್ನ ಸಹಾನುಭೂತಿಯನ್ನು ತೋರುತ್ತಾಳೆ. ಅವಳ ಸಹಾನುಭೂತಿಯೊಂದಿಗೆ ಮತ್ತು ಮಹಿಳೆಯರಿಗೆ ಗರ್ಭಿಣಿಯಾಗಲು ಸಹಕರಿಸುತ್ತಾಳೆ ಮತ್ತು ಮಗುವನ್ನು ಪೂರ್ಣಾವಧಿಯವರೆಗೆ ಯಾವುದೇ ತೊಂದರೆ ಇಲ್ಲದೆ ನೋಡಿಕೊಳ್ಳುತ್ತಾಳೆ.

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ

PC: templeofficialwebsite
ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ್ ತನ್ನ ಭಕ್ತೆ ವೇದಿಕೈನನ್ನು ಗರ್ಭೀಣಿಯಾಗುವಂತೆ ಆಶೀರ್ವದಿಸಿದಳು. ಅದರಂತೆಯೇ ವೆದಿಕೈ ಗರ್ಭೀಣಿಯಾದಳು. ಆದರೆ ವೆದಿಕೈ ತನ್ನ ಭ್ರೂಣವನ್ನು ಕಳೆದುಕೊಂಡಾಗ ದೇವತೆ ಗರ್ಭರಕ್ಷಾಂಬಿಕೆ ಆಕೆಯ ರಕ್ಷೆಗೆ ಬಂದು ಆಕೆಯ ಭ್ರೂಣವನ್ನು ರಕ್ಷಿಸಿ ಹೆರಿಗೆ ಸುಸೂತ್ರವಾಗಿ ನಡೆಯುವಂತೆ ಮಾಡುತ್ತಾಳೆ. ಈ ದೈವಿಕ ತಾಯಿಯಿಂದ ಅನೇಕ ಭಕ್ತರು ಸಂತಾನ ಭಾಗ್ಯವನ್ನು ಪಡೆದಿದ್ದಾರೆ.

ದೇವಿಯ ದೈವಿಕ ಶಕ್ತಿ

ದೇವಿಯ ದೈವಿಕ ಶಕ್ತಿ

PC: templeofficialwebsite
ಈ ದೈವಿಕ ದೇವತೆಯಿಂದ ಆಶೀರ್ವದಿಸಲ್ಪಟ್ಟಿರುವ ಅನೇಕ ಜನರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಗರ್ಭ ಧರಿಸಲು ಹಾಗೂ ಹೆರಿಗೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ದೇಶ, ವಿದೇಶಗಳ ಅನೇಕ ಭಕ್ತರು ಸಹಾ ಇಲ್ಲಿನ ದೇವಿಗೆ ಪ್ರಾರ್ಥನೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

 ಶ್ರೀ ಮುಳ್ಳಿವಾನನಾಥರ್ ಸ್ವಾಮಿ

ಶ್ರೀ ಮುಳ್ಳಿವಾನನಾಥರ್ ಸ್ವಾಮಿ

PC: templeofficialwebsite
ಉತ್ತಮ ಆರೋಗ್ಯಕ್ಕಾಗಿ ಶ್ರೀ ಮುಳ್ಳಿವಾನನಾಥರ್ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಇಲ್ಲಿ ಸ್ವಾಮಿ ಸ್ವಯಂಭೂ ಎನ್ನಲಾಗುತ್ತದೆ. ಇವತ್ತು ನಾವು ಆತನ ಮೇಲೆ ಮುಲ್ಲೈ ಕ್ರೀಪರ್‌ನ ಪ್ರಭಾವವನ್ನು ನೋಡಬಹುದು. ಮುಳ್ಳಿವಾನನಾಥರ್ ಗಟ್ಟಿಯಾದ ಮಣ್ಣಿನಿಂದ ಮಾಡಲ್ಪಟ್ಟಿದ್ದಾರೆ ಮತ್ತು ಈ ದೇವರಿಗೆ ಅಭಿಷೇಕ ನಡೆಯುವುದಿಲ್ಲ.

ಪುನುಗು

ಪುನುಗು

PC: templeofficialwebsite
ಬದಲಾಗಿ ಪುನುಗು ಸಟ್ಟವನ್ನು ವಾಲರ್ಪಿರೈ ಪ್ರಡೋಶಂ ದಿನ, ಅಮಾವಾಸ್ಯೆಯ ನಂತರ 13 ನೇ ದಿನದಂದು ನೀಡಲಾಗುತ್ತದೆ . ಈ ಪುನುಗು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಇದು ಗುಣಪಡಿಸಲಾಗದ ಚರ್ಮ ರೋಗಗಳು, ಹೃದಯ ರೋಗಗಳು ಮತ್ತು ಶಸ್ತ್ರಚಿಕಿತ್ಸೆ ಕಾರಣದಿಂದ ಬಳಲುತ್ತಿರುವ ಜನರಿಗೆ ಇಲ್ಲಿನ ಪ್ರಸಾದವನ್ನು ನೀಡಲಾಗುತ್ತದೆ.

ನಡೆಸಲಾಗುವ ಪೂಜೆಗಳು

ನಡೆಸಲಾಗುವ ಪೂಜೆಗಳು

PC: templeofficialwebsite
ತುಪ್ಪ ಪ್ರಸಾದ ಪೂಜಾ
ಕ್ಯಾಸ್ಟರ್ ಆಯಿಲ್ ಪ್ರಸಾದ್ ಪೂಜಾ
ಪುನುಗು ಸತ್ತಂ ಪೂಜಾ
ಅಬಿಶೆಗಮ್
ಅನ್ನಧಾನಂ
ಕಟ್ಟಲೈ ಅರ್ಚಾನೈಯ್
ನವ ಕೊಡಿ ನಿಯಿ ದೀಪಮ್
ಸಂದಾನ ಕಪ್ಪೂ
ಥಾಂಗ ತೊಟ್ಟಿಲ್
ತುಲಾ-ಭಾರ
ಕಿವಿ ಚುಚ್ಚುವುದು ಮತ್ತು ಕೇಶ ಮುಂಡನೆ

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: templeofficialwebsite
ತಿರುಕೂರುವು ತಂಜಾವೂರು - ಕುಂಬಕೋಣಂ ಮುಖ್ಯ ರಸ್ತೆಯ ನಡುವಿನ ಪಟ್ಟಣದ ಪಾಪನಾಶಂನ ದಕ್ಷಿಣಕ್ಕೆ 6 ಕಿಮೀ ದೂರದಲ್ಲಿದೆ. ಬೆಂಗಳೂರಿನ ಭಕ್ತರು ಸೇಲಂ, ತಿರುಚ್ಚಿ, ತಂಜಾವೂರು ಮತ್ತು ಅಲ್ಲಿಂದ ತಿರುಕ್ಕರುಕಾವರನ್ನು ತಲುಪಬೇಕು. ರೈಲು ಸೌಲಭ್ಯಗಳು ಲಭ್ಯವಿವೆ. ಬಹುತೇಕ ರೈಲುಗಳು ಪಾಪನಾಶಂ ರೈಲು ನಿಲ್ದಾಣದಲ್ಲಿ ನಿಲ್ಲುತ್ತವೆ. ಈ ರೈಲು ನಿಲ್ದಾಣವು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಭಕ್ತರು ಈ ಸೇವೆಯನ್ನು ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X