Search
  • Follow NativePlanet
Share
» »ಒಂದೇ ವಿಗ್ರಹದಲ್ಲಿ ಹರಿಹರರು ಇದು ಪ್ರಪಂಚದಲ್ಲಿಯೇ ಏಕೈಕ ವಿಗ್ರಹ

ಒಂದೇ ವಿಗ್ರಹದಲ್ಲಿ ಹರಿಹರರು ಇದು ಪ್ರಪಂಚದಲ್ಲಿಯೇ ಏಕೈಕ ವಿಗ್ರಹ

ಭಾರತ ದೇಶದಲ್ಲಿ ಹರಿಹರ ಕ್ಷೇತ್ರಗಳು ಎಷ್ಟೊ ಇವೆ. ಆದರೆ ಒಂದೇ ದೇವಾಲಯದಲ್ಲಿ ವಿಷ್ಣು ಹಾಗು ಶಿವನು ಇಬ್ಬರು ಇರುವುದು ಮಾತ್ರ ವಿಶೇಷವೇ ಸರಿ. ಇಂಥಹ ದೇವಾಲಯಗಳು ಇರುವುದು ಅಪರೂಪ ಎಂದೇ ಹೇಳಬಹುದು. ಸಾಮಾನ್ಯವಾಗಿ ವಿಷ್ಣು ಹಾಗು ಶಿವನ ಮೂಲ ವಿಗ್ರಹವ

By Sowmyabhai

ಭಾರತ ದೇಶದಲ್ಲಿ ಹರಿಹರ ಕ್ಷೇತ್ರಗಳು ಎಷ್ಟೊ ಇವೆ. ಆದರೆ ಒಂದೇ ದೇವಾಲಯದಲ್ಲಿ ವಿಷ್ಣು ಹಾಗು ಶಿವನು ಇಬ್ಬರು ಇರುವುದು ಮಾತ್ರ ವಿಶೇಷವೇ ಸರಿ. ಇಂಥಹ ದೇವಾಲಯಗಳು ಇರುವುದು ಅಪರೂಪ ಎಂದೇ ಹೇಳಬಹುದು. ಸಾಮಾನ್ಯವಾಗಿ ವಿಷ್ಣು ಹಾಗು ಶಿವನ ಮೂಲ ವಿಗ್ರಹವು ಬೇರೆ-ಬೇರೆ ರೀತಿಯಲ್ಲಾದರೂ ಕಾಣಬಹುದು. ಆದರೆ ಇಲ್ಲಿ ಒಂದೇ ವಿಗ್ರಹದಲ್ಲಿ ಹರಿಹರರು ದರ್ಶನ ನೀಡುವುದು ಆಶ್ಚರ್ಯವೇ ಸರಿ. ಇಂತಹ ಆಶ್ಚರ್ಯವು ಪ್ರಪಂಚದಲ್ಲಿ ಒಂದೇ ಒಂದು ಪುಣ್ಯಕ್ಷೇತ್ರದಲ್ಲಿ ಕಾಣಬಹುದು.

ಅಷ್ಟೇ ಅಲ್ಲದೇ, ಇಲ್ಲಿ ಶಿವನಿಗೆ ಎದುರಿನಲ್ಲಿ ನಂದಿಯ ಜೊತೆಗೆ ಮತ್ತೊಂದು ವಿಗ್ರಹವು ಕೂಡ ಇರುವುದು ವಿಶೇಷ. ನಾರಾಯಣ ವನದಲ್ಲಿ ಪದ್ಮಾವತಿ ವಿವಾಹ ಮಾಡಿಕೊಂಡು ಹಳದಿ ಬಟ್ಟೆಯಲ್ಲಿ ತಿರುಮಲಕ್ಕೆ ಹೊರಡುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿರುವ ಈ ಕ್ಷೇತ್ರದಲ್ಲಿ 6 ತಿಂಗಳು ಇದ್ದಹಾಗೆ ಪುರಾಣಗಳ ಮೂಲಕ ತಿಳಿದುಕೊಳ್ಳಬಹುದು.

ಇಲ್ಲಿರುವ ಪವಿತ್ರವಾದ 5 ವೃಕ್ಷಗಳಿಗೆ ಪೂಜೆಯನ್ನು ಮಾಡಿದರೆ ಸಂತಾನಯೋಗವು ಉಂಟಾಗುತ್ತದೆ ಎಂಬುದು ಭಕ್ತರ ವಿಶ್ವಾಸವಾಗಿದೆ. ಇಷ್ಟು ವಿಶಿಷ್ಟತೆಯನ್ನು ಹೊಂದಿರುವ ದೇವಾಲಯದ ಬಗ್ಗೆ ಪೂರ್ತಿಯಾಗಿ ಮಾಹಿತಿಯನ್ನು ನೇಟಿವ್ ಪ್ಲಾನೆಟ್‍ನ ಮೂಲಕ ಪಡೆಯೋಣ.

1. ಸ್ಥಳ ಪುರಾಣದ ಪ್ರಕಾರ

1. ಸ್ಥಳ ಪುರಾಣದ ಪ್ರಕಾರ

PC:youtube

ಶಿವನ ಆದೇಶದ ಮೇರೆಗೆ ಅಗಸ್ತ್ಯೆಶ್ವರ ದಕ್ಷಿಣ ಭಾರತ ದೇಶದಲ್ಲಿನ ವಿವಿಧ ಸ್ಥಳಗಳಿಗೆ ತಿರುಗುತ್ತಾ ಪ್ರಜೆಗಳಲ್ಲಿ ಆಧ್ಯಾತ್ಮಿಕ ಭಾವನೆಯನ್ನು ಉಂಟು ಮಾಡುತ್ತಿದ್ದನು. ಈ ಕ್ರಮದಲ್ಲಿ ತಿರುಪತಿಗೆ 5 ಕಿ.ಮೀ ದೂರದಲ್ಲಿರುವ ತೊಂಡವಾಡ ಪ್ರದೇಶವನ್ನು ಸೇರಿಕೊಳ್ಳುತ್ತಾನೆ.

2.ಮೂರು ನದಿಗಳ ಸಂಗಮ ಪ್ರದೇಶ

2.ಮೂರು ನದಿಗಳ ಸಂಗಮ ಪ್ರದೇಶ

PC:youtube

ಆದಿ ಸ್ವರ್ಣಮುಖಿ, ಭೀಮ ಕಲ್ಯಾಣಿ ನದಿಗಳು ಸಂಗಮವಾಗುವ ಪ್ರದೇಶ. ಇಲ್ಲಿನ ಪ್ರಕೃತಿ ರಮಣೀಯತೆಗೆ ಮುಗ್ಧನಾದ ಅಗಸ್ತ್ಯೆಶ್ವರ ಮುನಿಯು ಅಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಿದನು. ಅದನ್ನು ರುದ್ರಕೋಟೇಶ್ವರ ಎಂದು ಕರೆದು ನಿತ್ಯವು ಆರಾಧಿಸುತ್ತಿದ್ದನು.

3.ಶಿವತತ್ವವನ್ನು ಬೊಧಿಸಿದರು

3.ಶಿವತತ್ವವನ್ನು ಬೊಧಿಸಿದರು

PC:youtube

ಅಷ್ಟೇ ಅಲ್ಲದೇ, ಈ ಪ್ರದೇಶಕ್ಕೆ ಬರುವ ಪ್ರಜೆಗಳಿಗೆ ಶಿವತತ್ವವನ್ನು ಬೋಧಿಸುತ್ತಾ ಅವರನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಪ್ರಯಾಣಿಸುವಂತೆ ಉತ್ತೇಜಿಸುತ್ತಿದ್ದನು. ಇದು ಹೀಗೆ ಇದ್ದರೆ, ಕಲಿಯುಗ ದೈವವಾದ ಶ್ರೀನಿವಾಸನು ಇಲ್ಲಿ ಸಮೀಪದಲ್ಲಿಯೇ ನಾರಾಯಣ ವನದಲ್ಲಿ ಪದ್ಮಾವತಿಯನ್ನು ವಿವಾಹ ಮಾಡಿಕೊಂಡು ಹಳದಿ ವಸ್ತ್ರದಿಂದ ತಿರುಮಲಕ್ಕೆ ಹೊರಟರಂತೆ.

4.ಅಗಸ್ತ್ಯೆಶ್ವರ ಮಹಾಮುನಿ ಕೋರಿಕೆಯ ಮೇರೆಗೆ

4.ಅಗಸ್ತ್ಯೆಶ್ವರ ಮಹಾಮುನಿ ಕೋರಿಕೆಯ ಮೇರೆಗೆ

PC:youtube

ಮಾರ್ಗಮಧ್ಯೆಯಲ್ಲಿ ತೊಂಡವಾಡಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿರುವ ಅಗಸ್ತ್ಯ ಮಹಾಮುನಿಯು ತನ್ನ ಹತ್ತಿರ ಆತಿಥ್ಯವನ್ನು ಸ್ವೀಕರಿಸಬೇಕು ಎಂದು ಕೋರಿಕೊಳ್ಳುತ್ತಾನೆ. ಮಹಾಶಿವನಿಗೆ ಸಮಾನನಾದ ಅಗಸ್ತ್ಯೆಶ್ವರ ಮುನಿಯ ಕೋರಿಕೆಯನ್ನು ಇಲ್ಲ ಅನ್ನದ ಹಾಗೆ ಶ್ರೀನಿವಾಸನು ಆ ತೊಂಡವಾಡದಲ್ಲಿ 6 ತಿಂಗಳ ಕಾಲ ಇರುತ್ತಾನಂತೆ.

5.ಪಾದಮುದ್ರೆ

5.ಪಾದಮುದ್ರೆ

PC:youtube

ತಿರುಮಲಕ್ಕೆ ತೆರುಳುತ್ತಾ ತನ್ನ ಪಾದಮುದ್ರೆಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾನೆ. ಹೀಗೆ ಆ ಕ್ಷೇತ್ರವು ಹರಿಹರರ ಕ್ಷೇತ್ರವಾಯಿತು ಎಂದು ಸ್ಥಳ ಪುರಾಣಗಳಿಂದ ತಿಳಿದುಬರುತ್ತದೆ. ಇನ್ನು ಇಲ್ಲಿರುವ ವಿಗ್ರಹವು ಸ್ವಯಂಭೂವಾಗಿ ನೆಲೆಸಿರುವುದು ಎಂದು ಕೆಲವು ಮಂದಿ ಹೇಳಿದರೆ, ಇನ್ನು ಕೆಲವು ಮಂದಿ ಸ್ಥಳೀಯ ರಾಜರು ಏರ್ಪಾಟು ಮಾಡಿರುವುದು ಎಂದು ಹೇಳುತ್ತಾರೆ.

6.ಒಂದೇ ವಿಗ್ರಹದಲ್ಲಿ

6.ಒಂದೇ ವಿಗ್ರಹದಲ್ಲಿ

PC:youtube

ಸಾಮಾನ್ಯವಾಗಿ ವಿಷ್ಣು ಹಾಗು ಶಿವನ ಮೂಲ ವಿಗ್ರಹವು ಬೇರೆ-ಬೇರೆ ರೀತಿಯಲ್ಲಾದರೂ ಕಾಣಬಹುದು. ಆದರೆ ಇಲ್ಲಿ ಒಂದೇ ವಿಗ್ರಹದಲ್ಲಿ ಹರಿಹರರು ದರ್ಶನ ನೀಡುವುದು ಆಶ್ಚರ್ಯವೇ ಸರಿ. ಇಂತಹ ಆಶ್ಚರ್ಯವು ಪ್ರಪಂಚದಲ್ಲಿ ಇದೊಂದೆ ಪುಣ್ಯಕ್ಷೇತ್ರದಲ್ಲಿ ಕಾಣಬಹುದು.

7.ಒಂದು ಕಡೆಯಿಂದ ಹರಿ, ಮತ್ತೊಂದು ಕಡೆಯಿಂದ ಹರ

7.ಒಂದು ಕಡೆಯಿಂದ ಹರಿ, ಮತ್ತೊಂದು ಕಡೆಯಿಂದ ಹರ

PC:youtube

ಶಿವಕೇಶವರು ಒಂದೇ ವಿಗ್ರಹದಲ್ಲಿ ಇದ್ದಾರೆ ಎಂಬ ಅರ್ಥ. ಒಂದು ಕಡೆಯಿಂದ ನೋಡಿದರೆ ಹರಿ, ಮತ್ತೊಂದು ಕಡೆಯಿಂದ ನೋಡಿದರೆ ಹರರು ನಮಗೆ ದರ್ಶನವನ್ನು ನೀಡುತ್ತಾರೆ. ಇಂತಹ ವಿಗ್ರಹವು ನಾವು ಇಲ್ಲಿನ ಅಗಸ್ತ್ಯೆಶ್ವರ ರುದ್ರಕೋಟೇಶ್ವರ ದೇವಾಲಯದಲ್ಲಿ ಮಾತ್ರವೇ ಕಾಣಬಹುದು.

8.ನಂದಿಯ ಜೊತೆ ಭೃಂಗಿ

8.ನಂದಿಯ ಜೊತೆ ಭೃಂಗಿ

PC:youtube

ಇನ್ನು ಇಲ್ಲಿ ಪರಮ ಶಿವನ ಮುಂದೆ ನಂದಿ ಇರುತ್ತಾನೆ. ಆದರೆ ಈ ಕ್ಷೇತ್ರದಲ್ಲಿ ನಂದಿಯ ಜೊತೆಗೆ ಭೃಂಗಿ ವಿಗ್ರಹವು ಕೂಡ ಇರುತ್ತದೆ. ಹೀಗೆ ನಂದಿಯ ಜೊತೆ ಭೃಂಗಿ ಕೂಡ ಇರುವುದು ಈ ದೇವಾಲಯದ ಮತ್ತೊಂದು ವಿಶೇಷ ಎಂದು ಹೇಳುತ್ತಾರೆ.

9.ಪಂಚ ವೃಕ್ಷಗಳು

9.ಪಂಚ ವೃಕ್ಷಗಳು

PC:youtube

ದೇವಾಲಯದಲ್ಲಿನ ಆವರಣದಲ್ಲಿ 5 ಮುಖ್ಯವಾದ ಹಾಗು ಪವಿತ್ರವಾದ ವೃಕ್ಷಗಳನ್ನು ಕಾಣಬಹುದು. ಈ ಪಂಚ ವೃಕ್ಷಗಳು ಅತ್ಯಂತ ಪ್ರಾಚೀನವಾದುದು, ಇಲ್ಲಿಯೇ ಅಗಸ್ತ್ಯ ಮಹಾಮುನಿಯು ತಪಸ್ಸು ಮಾಡಿದನು ಎಂದು ಹೇಳುತ್ತಾರೆ. ಸಂತಾನವಾಗದ ಮಹಿಳೆಯರ ಕೋರಿಕೆಗಳನ್ನು ಈ ವೃಕ್ಷಗಳಿಗೆ ಶ್ರದ್ಧೆ-ಭಕ್ತಿಯಿಂದ ಆರಾಧಿಸಿದರೆ ಉತ್ತಮ ಫಲ ದೊರೆಯುತ್ತದೆ ಎಂದು ನಂಬಲಾಗಿದೆ.

9.ಪೂಜೆಗಳು

9.ಪೂಜೆಗಳು

PC:youtube

ಕಾರ್ತಿಕ ಮಾಸ, ಮಹಾಶಿವರಾತ್ರಿ ದಿನದಂದು ಇಲ್ಲಿ ವಿಶೇಷವಾಗಿ ಪೂಜೆಗಳು ನಡೆಯುತ್ತವೆ. ಮುಖ್ಯವಾಗಿ ಕಾರ್ತಿಕ ಮಾಸದ ಪೌಣರ್ಮಿ ದಿನದಂದು ರುದ್ರ ಪಾದಗಳನ್ನು ಮುಕ್ಕೋಟಿ ಹೆಸರಿನಲ್ಲಿ ದೊಡ್ಡ ಉತ್ಸವವನ್ನು ನಡೆಯುತ್ತದೆ. ಈ ಉತ್ಸವಕ್ಕೆ ಆಂಧ್ರ ಪ್ರದೇಶದ ರಾಜ್ಯಗಳಿಂದಲೇ ಅಲ್ಲದೇ ತಮಿಳುನಾಡಿನಿಂದಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

11.ಹೇಗೆ ಸಾಗಬೇಕು?

11.ಹೇಗೆ ಸಾಗಬೇಕು?

PC:youtube

ತಿರುಪತಿ-ಚಿತ್ತೂರು, ತಿರುಪತಿ-ಚಂದ್ರಗಿರಿಗೆ ತೆರಳುವ ಪ್ರತಿ ಸರ್ಕಾರಿ, ಖಾಸಗಿ ಬಸ್ಸುಗಳು ಈ ಮಹಿಮಾನ್ವಿತವಾದ ದೇವಾಲಯವಿರುವ ತೊಂಡವಾಡಕ್ಕೆ ಸಂಪರ್ಕ ಸಾಧಿಸುತ್ತದೆ. ಟಿ.ಟಿ.ಡಿ ಯವರ ದರ್ಶನ ಬಸ್ಸುಗಳು ಕೂಡ ಇಲ್ಲಿಗೆ ತೆರಳುತ್ತವೆ. ಶ್ರೀನಿವಾಸ ಮಂಗಾಪುರದಲ್ಲಿರುವ ಕಲ್ಯಾಣ ವೆಂಕಟೇಶ್ವರನ ದೇವಾಲಯವು ಸಮೀಪದಲ್ಲಿಯೇ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X