Search
  • Follow NativePlanet
Share
» »ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?

ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?

ದಾವಣಗರೆ ಸಮೀಪದಲ್ಲಿರುವ ಹೆಳವನಕಟ್ಟೆ ರಂಗನಾಥ ಸ್ವಾಮಿ, ಅಥವಾ ಹೆಳವನಕಟ್ಟೆ ಗಿರಿಯಮ್ಮನ ಬಗ್ಗೆ ಕೇಳಿದ್ದೀರಾ? ಗಿರಿಯಮ್ಮ ರಂಗನಾಥ ಸ್ವಾಮಿಯ ಮಹಾನ್ ಭಕ್ತೆ. ಈಕೆಯಿಂದಾಗಿಯೇ ಈ ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಹೊಂದಿತು.ಈ ಹೆಳವನಕಟ್ಟೆ ಗ್ರಾಮವನ್ನು ಕೋಮಾರನಹಳ್ಳಿ ಎಂದೂ ಕರೆಯುತ್ತಾರೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: facebook
ಬೆಂಗಳೂರಿನಿಂದ ಸುಮಾರು 5-6ಗಂಟೆಯಲ್ಲಿ ದಾವಣಗೆರೆಯನ್ನು ತಲುಪಬಹುದು. ಹೊನ್ನಾವಳಿ ಮಾರ್ಗದಲ್ಲಿ ಸಾಗಿದರೆ ಮಲೆಬೆನ್ನೂರು ಎನ್ನುವ ಊರು ಸಿಗುತ್ತದೆ. ಅಲ್ಲಿಗೆ ಸಮೀಪದಲ್ಲಿದೆ ರಂಗನಾಥನ ಸನ್ನಿಧಿ. ದಾವಣಗೆರೆಯಿಂದ ಸುಮಾರು 20 ಕಿ.ಮೀ ದೂರದಲ್ಲಿದೆ.

ನವಂಬರ್‌ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್ ನವಂಬರ್‌ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್

ಹೆಸರು ಬಂದಿದ್ದು ಹೇಗೆ?

ಹೆಸರು ಬಂದಿದ್ದು ಹೇಗೆ?

PC: facebook
ಸೂರ್ಯನ ಸಾರಥಿ ಅರುಣ ಶಾಪಗ್ರಸ್ಥನಾಗಿ ಹೆಳವನಾಗಿದ್ದನಂತೆ. ಹಸುವಿನ ಮೈ ತೊಳೆಯಲು ಹೆಳವನು ಒಂದು ಕಟ್ಟೆಯನ್ನು ನಿರ್ಮಿಸಿದ್ದನಂತೆ. ಹಾಗಾಗಿ ಇಲ್ಲಿಗೆ ಹೆಳವನ ಕಟ್ಟೆ ಎನ್ನಲಾಗುತ್ತದೆ. ಇಲ್ಲಿ ರಂಗನಾಥ ಸ್ವಾಮಿ ನೆಲೆಸಿರುವುದು ತಿಳಿದುಬಂದಿದ್ದು ಹಸುವಿನಿಂದ ಎನ್ನಲಾಗುತ್ತದೆ.

ರಂಗನಾಥನಿಗೆ ಹಾಲೆರೆಯುತ್ತಿದ್ದ ಹಸು

ರಂಗನಾಥನಿಗೆ ಹಾಲೆರೆಯುತ್ತಿದ್ದ ಹಸು

PC: facebook
ಹೆಳವ ತಾನು ಮೇಯಿಸುತ್ತಿದ್ದ ದನಗಳನ್ನು ಯಜಮಾನದ ಮನೆಗೆ ಹೋಗಿ ಬಿಡುತ್ತಿದ್ದ ಆಗ ಎಲ್ಲಾ ಹಸುಗಳು ಹಾಲನ್ನು ನೀಡುತ್ತಿದ್ದವು ಆದರೆ ಒಂದು ಹಸು ಮಾತ್ರ ಹಾಲು ನೀಡುತ್ತಿರಲಿಲ್ಲವಂತೆ. ಈ ಬಗ್ಗೆ ಪರೀಕ್ಷಿಸಿದಾಗ ಹಸು ರಂಗನಾಥ ಸ್ವಾಮಿಗೆ ಹಾಲು ಅರ್ಪಿಸುತ್ತಿದ್ದದು ಬೆಳಕಿಗೆ ಬರುತ್ತದೆ.

ಈ ನಕ್ಷತ್ರದಲ್ಲಿ ಜನಿಸಿದವರು ವರ್ಷಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿದ್ರೆ ಸಕಲ ಸಂಕಷ್ಟ ದೂರವಾಗುತ್ತಂತೆ! ಈ ನಕ್ಷತ್ರದಲ್ಲಿ ಜನಿಸಿದವರು ವರ್ಷಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿದ್ರೆ ಸಕಲ ಸಂಕಷ್ಟ ದೂರವಾಗುತ್ತಂತೆ!

ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ

PC: facebook

ಒಂದು ದಿನ ಸಾದ್ವಿ ಒಬ್ಬರು ಇಲ್ಲಿಗೆ ಭೇಟಿ ನೀಡಿ ರಂಗನಾಥನ ಸೇವೆ ಮಾಡುತ್ತಾಳೆ. ಆಕೆ ಇಲ್ಲಿಗೆ ಬಂದ ನಂತರ ಈ ಸ್ಥಳ ಪ್ರಖ್ಯಾತವಾಗಿದದ್ದು. ಆ ಸಾದ್ವಿಯ ಹೆಸರು ಹೆಳವನಕಟ್ಟೆ ಗಿರಿಯಮ್ಮ.

ರಂಗಸ್ಪರಣೆಯಲ್ಲೇ ಜೀವನ ಕಳೆದ ಗಿರಿಯಮ್ಮ

ರಂಗಸ್ಪರಣೆಯಲ್ಲೇ ಜೀವನ ಕಳೆದ ಗಿರಿಯಮ್ಮ

PC: facebook
ಗಿರಿಯಮ್ಮ ವಾಸಮಾಡುತ್ತಿದ್ದ ಮಲೆಬೆನ್ನೂರಿನ ಮನೆಯಲ್ಲಿ ಇಂದಿಗೂ ಬೃಂದಾವನವನ್ನು ಕಾಣಬಹುದು. ಇಲ್ಲಿ ಸಾಕಷ್ಟು ಗೀತೆಗಳನ್ನು ರಚಿಸಿದ್ದಾರಂತೆ. ರಂಗಸ್ಪರಣೆಯಲ್ಲೇ ಬದುಕನ್ನು ಕಳೆಯುತ್ತಿದ್ದರಂತೆ.

 ಹಿಮಾಲಯದಲ್ಲಿರುವ ಖೀರ್‌ಗಂಗಾಕ್ಕೆ ಚಾರಣ ಕೈಗೊಳ್ಳಲೇ ಬೇಕು ಹಿಮಾಲಯದಲ್ಲಿರುವ ಖೀರ್‌ಗಂಗಾಕ್ಕೆ ಚಾರಣ ಕೈಗೊಳ್ಳಲೇ ಬೇಕು

ದೇಹತ್ಯಾಗ ಮಾಡಿದ್ದ ಸ್ಥಳ

ದೇಹತ್ಯಾಗ ಮಾಡಿದ್ದ ಸ್ಥಳ

PC: facebook

ಕಮ್ಮಾರಗಟ್ಟೆ ಎನ್ನುವ ಸ್ಥಳದಲ್ಲಿ ಬುಡಮೇಲಾದ ಹುಣಸೆ ಮರದ ಕೆಳಗೆ ದೇಹತ್ಯಾಗ ಮಾಡಿದರು ಎನ್ನಲಾಗುತ್ತದೆ. ಈಗಲೂ ಆ ಬುಡಮೇಲಾದ ಹುಣಸೆಮರವನ್ನು ಕಾಣಬಹುದು.

ರಂಗನಾಥ ಆಶ್ರಮ

ರಂಗನಾಥ ಆಶ್ರಮ

PC: facebook

ಇಲ್ಲಿ ಶಿವ, ಮಹಾಲಕ್ಷ್ಮೀಯನ್ನೂ ಪೂಜಿಸಲಾಗುತ್ತದೆ. ಇನ್ನೂ ಇಲ್ಲಿಗೆ ಬರುವ ಭಕ್ತರಿಗೆ ಉಳಿಯಲು ರಂಗನಾಥ ಆಶ್ರಮದಲ್ಲಿ ಉಚಿತ ವ್ಯವಸ್ಥೆಯೂ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X