Search
  • Follow NativePlanet
Share
» »ವನ್ಯ ಜೀವಿಗಳ ಪತ್ತೆ: ಭಾರತದ ವನ್ಯಜೀವಿ ಧಾಮಗಳು

ವನ್ಯ ಜೀವಿಗಳ ಪತ್ತೆ: ಭಾರತದ ವನ್ಯಜೀವಿ ಧಾಮಗಳು

By Manjula Balaraj Tantry

ಭಾರತವು ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳ ನೆಲೆಯಾಗಿದೆ.ಇದು ಈ ದೇಶವು ಪ್ರಕೃತಿ ಮತ್ತು ವನ್ಯಜೀವಿಗಳನ್ನು ಹೇಗೆ ಸಂರಕ್ಷಿಸುತ್ತವೆ ಮತ್ತು ಹೇಗೆ ಅವುಗಳಿಗೆ ಕೊಡುವ ಪ್ರಾಮುಖ್ಯತೆಯ ಮಟ್ಟವನ್ನು ತೋರಿಸುತ್ತದೆ.

ಇಲ್ಲಿ ದೊಡ್ಡ ಪ್ರಮಾಣದಲ್ಲಿ ವೈವಿಧ್ಯಮಯ ವನ್ಯಜೀವಿಗಳು ಮತ್ತು ಅವುಗಳ ಇತರ ಜಾತಿಗಳನ್ನು ನೋಡಬಹುದಾಗಿದೆ. ಭಾರತವು ಪ್ರಾಣಿ ಮತ್ತು ಹಕ್ಕಿಗಳನ್ನು ತಮ್ಮಆವಾಸಸ್ಥಾನಗಳಲ್ಲಿಯೇ ಕಾಣಬಹುದಾದ ರಾಷ್ಟ್ರವಾಗಿದೆ. ಇದನ್ನು ನೋಡುವುದು ನಿಜವಾಗಿಯೂ ಜೀವಿತಾವಧಿಯ ಒಂದು ಅನುಭವವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಅಪರೂಪದ ಕೆಂಪು ಪಾಂಡಗಳು ಮತ್ತು ಬಹು ಉದ್ಯಾನವನಗಳು ಮತ್ತು ಅನೇಕ ಪ್ರಾಣಿಗಳೊಂದಿಗೆ ನಿಗೂಡ ಸ್ಥಳಗಳನ್ನು ಕಂಡುಹಿಡಿಯಬಹುದು; ಆದುದರಿಂದ ನೀವು ವನ್ಯಜೀವಿಗಳ ನಿರ್ದಿಷ್ಟ ಪ್ರಭೇದಗಳ ಬಗ್ಗೆ ಯೋಚಿಸಲು ಮತ್ತು ಅವುಗಳನ್ನು ನೈಸರ್ಗಿಕ ಪರಿಸರದಲ್ಲಿ ವೀಕ್ಷಿಸಲು ಒಂದು ಒಳ್ಳೆಯ ಅವಕಾಶ. ಕೆಲವು ಉದ್ಯಾನಗಳಲ್ಲಿ ಹುಲಿಗಳು, ಸಿಂಹಗಳು, ಆನೆಗಳು, ಪಕ್ಷಿಗಳು, ಮೊಸಳೆಗಳು ಮತ್ತು ಇನ್ನೂ ಅನೇಕ ಪ್ರಾಣಿಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ನೋಡಬೇಕಾದ ಕೆಲವು ಜಾಗಗಳ ಬಗ್ಗೆ ನೋಡೋಣ.

1. ಬಂದಾವ್ ಘರ್ ನ ಬಂಗಾಳಿ ಹುಲಿಗಳು

1. ಬಂದಾವ್ ಘರ್ ನ ಬಂಗಾಳಿ ಹುಲಿಗಳು

PC: skeeze

ಮಧ್ಯಪ್ರದೇಶದ ಬಾಂಧವಘರ್ ರಾಷ್ಟ್ರೀಯ ಉದ್ಯಾನವನವು ಪ್ರವೇಶಿಸಲು ಅಷ್ಟು ಸುಲಭವಲ್ಲದ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದಾಗಿದೆ.ಆದರೆ ಇದಕ್ಕೆ ವಿರುದ್ಧವಾಗಿ, ರಾಜಸ್ಥಾನದ ರಣಥಂಬೋರ್ ಮತ್ತು ಮಹಾರಾಷ್ಟ್ರದ ತಡೋಬದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳನ್ನು ಹೊರತುಪಡಿಸಿ ಹುಲಿಗಳನ್ನು ಪತ್ತೆಹಚ್ಚುವ ಅತ್ಯುತ್ತಮ ಅವಕಾಶಗಳನ್ನುಈ ಉದ್ಯಾನವನ ಹೊಂದಿದೆ. ದೊಡ್ಡ ಬೆಕ್ಕನ್ನು ನೋಡಲು ಇಚ್ಚಿಸುವವರಿಗೆ ಇಲ್ಲಿ ಉತ್ತಮ ಅವಕಾಶವಿದೆ. ನೀವು ಎರಡು ದಿನಗಳ ಸಫಾರಿಯನ್ನು ಯೋಜಿಸಿದರೆ, ಅವುಗಳಲ್ಲಿ ಕನಿಷ್ಟ ಪಕ್ಷ ಯಾವುದಾದರು ಒಂದನ್ನು ಗುರುತಿಸುವ ಸಾಧ್ಯತೆಗಳಿವೆ.

2. ಗೀರ್ ನ ಏಷ್ಯಾದ ಸಿಂಹಗಳು

2. ಗೀರ್ ನ ಏಷ್ಯಾದ ಸಿಂಹಗಳು

PC: Tambako The Jaguar

ದೇಶದಲ್ಲಿ ಹುಲಿಯಂತಹ ದೊಡ್ಡ ಬೆಕ್ಕುಗಳು ಮಾತ್ರವಲ್ಲದೆ ನೀವು ಕಾಡಿನ ರಾಜನಾದ ಏಷ್ಯಾದ ಸಿಂಹಗಳನ್ನೂ ಕೂಡ ಕಾಣಬಹುದು. ಗೀರ್ ನ ವನ್ಯಜೀವಿ ಧಾಮದಲ್ಲಿ ಅಳಿವಿನ ಅಂಚಿನಲ್ಲಿರುವ ಏಷ್ಯಾದ ಸಿಂಹಗಳನ್ನು ಇಲ್ಲಿ ಕಾಣಬಹುದು. ಅವುಗಳು ಸಿರಿಯಾದ ಪ್ರದೇಶಗಳವರೆಗೂ ಮೊದಲು ಕಂಡುಬಂದರರೂ, ನಂತರ 1870ರ ದಶಕಗಳಲ್ಲಿ ಭೇಟೆಯಾಡಿ ಈಗ ಅಳಿವಿನಂಚಿಗೆ ಬಂದು ನಿಂತಿವೆ.

ಇಲ್ಲಿಯ ಸಂರಕ್ಷಕರ ಪ್ರಯತ್ನದಿಂದ ಈ ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಇದಕ್ಕೆ ಧನ್ಯವಾದಗಳನ್ನು ಹೇಳಬೇಕು. ಸಿಂಹಗಳು ಕೆಲವೊಮ್ಮೆ ಡಿಯು ಕಡಲ ತೀರಗಳಿಗೆ ಮತ್ತು ಮೀಸಲು ಪ್ರದೇಶಕ್ಕೆ ಭೇಟಿಕೊಡುತ್ತವೆ. ಸಿಂಹಗಳಲ್ಲದೆ ಇಲ್ಲಿ ಜಿಂಕೆ, ಸಾಂಬಾ, ಗೆಸೆಲ್ ಗಳು ಮುಂತಾದ ಸುಮರು 40 ಬಗೆಯ ಪ್ರಾಣಿಗಳನ್ನು ಕಾಣಬಹುದು.

3. ರಾನ್ ಆಫ್ ಕಚ್ ನ ಕಾಡು ಕತ್ತೆಗಳು

3. ರಾನ್ ಆಫ್ ಕಚ್ ನ ಕಾಡು ಕತ್ತೆಗಳು

PC: Sumeet Moghe

ಸಣ್ಣ ಭೂಪ್ರದೇಶವಾದ ಕಚ್ ನ ರಾನ್ ಒಂದು ಕಠಿಣವಾದ ಭೂಪ್ರದೇಶವಾಗಿದ್ದು, ಇಲ್ಲಿನ ಹುತೇಕ ಒಣ ಮುಳ್ಳಿನ ಪೊದೆಗಳನ್ನು ಹೊಂದಿರುತ್ತದೆ.ಅದಕ್ಕೆ ಸರಿಯಾಗಿ ಇಲ್ಲಿನ ಹವಾಮಾನವು ಕೂಡ ಕಠಿಣವಾದುದಾಗಿದೆ. ಈ ಜಾಗವು ಅಳಿವಿನಂಚಿನಲ್ಲಿರುವ ಕೆಲವು ಭಾರತೀಯ ಕಾಡು ಕತ್ತೆಗಳ ವಾಸಸ್ಥಾನವಾಗಿದೆ. 5000 ಚ.ಕಿ.ಮೀ ವ್ಯಾಪ್ತಿಯಲ್ಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸುಮಾರು 3000 ಇವೆ ಮತ್ತು ನೀವು ಜೀಪ್ ಸಫಾರಿಯ ಮೇಲೆ ಹೋಗುವಾಗ ಅವುಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿದೆ.

ಕಾಡು ಕತ್ತೆಗಳು ವೇಗವಾಗಿ ಓಡುತ್ತವೆ, ಇವು ಸರಾಸರಿ 50 ಕಿ.ಮಿ / ಗಂ, ದೂರದ ಅಂತರದಲ್ಲ ವೇಗದಲ್ಲಿ ಓಡುತ್ತವೆ. ಕೆಲವು ಸುಂದವಾದ ಏವಿಯನ್ ಗಳನ್ನು ಪತ್ತೆಹಚ್ಚಲು ನಿಮಗೆ ಆಸಕ್ತಿ ಇದ್ದರೆ, ನಿಮ್ಮ ಪ್ರಯಾಣದಲ್ಲಿ ನಲ್ಸರೋವರ್ ಪಕ್ಷಿಧಾಮವನ್ನು ಸೇರಿಸಿ.

4. ನಾಗರಹೊಳೆ ಯು ಆನೆಗಳಿಗಾಗಿ

4. ನಾಗರಹೊಳೆ ಯು ಆನೆಗಳಿಗಾಗಿ

PC: Pradipta Majumder

ನಾಗರಹೊಳೆ ತನ್ನ ಹೆಸರನ್ನು ನಾಗನ ಆಕೃತಿಯ ನದಿಯಿಂದ ಪಡೆಯುತ್ತದೆ ಮತ್ತು ಇಲ್ಲಿ ಈ ನದಿಯು ಹಾದು ಹೋಗುವುದರಿಂದ ಈ ಹೆಸರನ್ನು ಪಡೆಯುತ್ತದೆ. ಇಲ್ಲಿಯ ಉದ್ಯಾನವನವು ಪ್ರಶಾಂತವಾದ ಕಾಡುಗಳು, ಹರಿಯುವ ಹೊಳೆಗಳು, ಮತ್ತು ಮಾಂತ್ರಿಕವಾದ ಸರೋವರಗಳನ್ನೊಳಗೊಂಡು ಹಾನಿಗೊಳಗಾಗದೇ ಇರುವ ಅರಣ್ಯಕ್ಕೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಉದ್ಯಾನವನದಲ್ಲಿ ಜೀಪ್ ಸಫಾರಿ, ಆನೆ ಸವಾರಿ ಅಥವಾ ದೋಣಿ ಸವಾರಿಗಾಗಿ ಕೂಡಾ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಟ್ರಕ್ಕಿಂಗ್ ಕೂಡ ಮಾಡುವ ಅವಕಾಶವಿದೆ. ಅಲ್ಲಿ ನೀವು ಕಬಿನಿ ನದಿ ತೀರದಲ್ಲಿ ಆನೆಗಳ ಹಿಂಡುಗಳನ್ನು ವೀಕ್ಷಿಸಿ ಆನಂದ ಪಡಬಹುದು.

5. ಹಿಮ ಚಿರತೆಗಳಿಗೆ ಹೆಮಿಸ್ ನ್ಯಾಷನಲ್ ಪಾರ್ಕ್

5. ಹಿಮ ಚಿರತೆಗಳಿಗೆ ಹೆಮಿಸ್ ನ್ಯಾಷನಲ್ ಪಾರ್ಕ್

PC: Tambako The Jaguar

ಕಾಡಿನಲ್ಲಿ ಚಿರತೆಗಳನ್ನು ನೋಡಿ ನೀವು ಪ್ರೇರಿತರಾಗದಿದ್ದಲ್ಲಿ, ಅತ್ಯಂತ ಎತ್ತರದಲ್ಲಿರುವ ಹೆಮಿಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಿಮ ಚಿರತೆಗಳನ್ನು ಕಂಡುಹಿಡಿಯಲು ನಿಮ್ಮ ಅದೃಷ್ಟವನ್ನು ನೀವು ಪ್ರಯತ್ನಿಸಬೇಕು. ಇದು ಜಮ್ಮು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿದೆ.

ಇಲ್ಲಿಯ ವಾತಾವರಣವು ಸಂಪೂರ್ಣವಾಗಿ ಹಿಮದ ಶಿಖರಗಳಿಂದ ಆವೃತ್ತವಾಗಿದೆ. ಅಲ್ಲದೆ ಆಲ್ಪೈನ್ ಕಾಡುಗಳು ಮತ್ತು ಮರುಭೂಮಿಗಳು ಇವೆ. ನೀವು ಲಡಾಖ್ ಗೆ ಹೋಗಲು ಆಗದಿದ್ದಲ್ಲಿ ಹಿಮಾಚಲ ಪ್ರದೇಶದ ಸುಂದರ ಕಣಿವೆಗಳಲ್ಲಿ ಹಿಮ ಚಿರತೆಗಳ ಅನ್ವೇಷಣೆಯನ್ನು ಮಾಡಲು ತಯಾರಾಗಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X