Search
  • Follow NativePlanet
Share
» »ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ!

ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ!

ಭಾರತದಲ್ಲಿ ಅಂತ್ಯವಿಲ್ಲದಷ್ಟು ದೇವಸ್ಥಾನಗಳು ಹಾಗೂ ಅವುಗಳಿಗೆ ಸಂಬಂಧೀಸಿದ ದಂತಕಥೆಗಳಿವೆ. ಪ್ರತಿಯೊಂದು ದೇವಸ್ಥಾನ ವು ಪುರಾಣ ಕಥೆಯನ್ನು ಹೊಂದಿದೆ. ಅದೇ ರೀತಿ, ವಿಶಿಷ್ಟ ಶಕ್ತಿ ಹೊಂದಿರುವ ದೇವಾಲಯಗಳೂ ಹಲವು ಇವೆ. ಅಂತಹ ದೇವಾಲಯಗಳಲ್ಲಿ ಇಂದು ನಾವು ಹೇಳ ಹೊರಟಿರುವುದು ಜೇಡದ ದೇವಾಲಯದ ಬಗ್ಗೆ. ಈ ದೇವಾಲಯದಲ್ಲಿ ಯಾವುದೇ ಜೇಡ ಕಚ್ಚಿದರೂ ಅದು ಗುಣಮುಖವಾಗುತ್ತಂತೆ. ಹಾಗಾದ್ರೆ ಬನ್ನಿ ಆ ದೇವಾಲಯದ ಬಗ್ಗೆ ತಿಳಿಯೋಣ.

ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!

ಚಿಲಂತಿ ದೇವಸ್ಥಾನ

ಚಿಲಂತಿ ದೇವಸ್ಥಾನ

ಕೊಡುಮನ್ ಜಂಕ್ಷನ್‌ನಿಂದ 1.5 ಕಿ.ಮೀ ದೂರದಲ್ಲಿರುವ ಚಿಲಂತಿ ದೇವಸ್ಥಾನವಿದೆ. ಚಿಲಂತಿ ದೇವಸ್ಥಾನ ದ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಇದು ಕೇರಳದ ಸಾರ್ವಭೌಮ ರಾಜ್ಯವಾದ ಚೆನ್ನೈಕೆಕ್ಕರ ಸ್ವರೂಪಮ್‌ನ ರಾಜನಾಗಿದ್ದ ರಾಜ ರವೀಂದ್ರನ್ ವಿಕ್ರಮಾನಿಗೆ ಸಂಬಂಧಿಸಿದ್ದಾಗಿದೆ. ಈ ರಾಜನು ಓರ್ವ ಆಯುರ್ವೇದಿಕ್‌ ವೈದ್ಯನೂ ಆಗಿದ್ದನು.

ಗಂಡು ಮಕ್ಕಳಿರಲಿಲ್ಲ

ಗಂಡು ಮಕ್ಕಳಿರಲಿಲ್ಲ

PC: youtube

ಈತನಿಗೆ ಮೂವರು ಹೆಣ್ಣು ಮಕ್ಕಳು. ತನ್ನ ಈ ಆಯುರ್ವೇದದ ವಿದ್ಯೆಯನ್ನು ಧಾರೆ ಎರೆಯಲು ಗಂಡು ಸಂತಾನವಿರಲಿಲ್ಲ. ತಾನು ಸಾಯುವ ಮೊದಲು ಅರಮನೆಯ ಸುತ್ತಲೂ ಎಲ್ಲಾ ಸಾಂಪ್ರದಾಯಿಕ ಗಿಡಮೂಲಿಕೆಗಳು ಮತ್ತು ಇತರ ಔಷಧಿಗಳನ್ನು ಹೂಳಲು ನಿರ್ಧರಿಸುತ್ತಾನೆ.

ಹೆಣ್ಮಕ್ಕಳು ಸಾವನ್ನಪ್ಪುತ್ತಾರೆ

ಹೆಣ್ಮಕ್ಕಳು ಸಾವನ್ನಪ್ಪುತ್ತಾರೆ

PC: youtube

ಈ ಘಟನೆಯ ನಂತರ, ಅರಮನೆಯ ವೈಭವಯುತ ಅವಧಿ ಕೊನೆಗೊಳ್ಳಲಾರಂಭಿಸುತ್ತದೆ. ಒಂದರ ಹಿಂದೊಂದರಂತೆ ದುರಂತಗಳು ಸಂಭವಿಸಲು ಪ್ರಾರಂಭವಾಗುತ್ತದೆ. ರಾಜನ ಹಿರಿಯ ಮಗಳು ಕಾಯಿಲೆಯಿಂದ ಸಾವನ್ನಪ್ಪುತ್ತಾಳೆ. ಮತ್ತು ಎರಡನೆಯ ಮಗಳು ದುಃಖದಿಂದಾಗಿ ಅಕಾಲಿಕ ಮರಣ ಹೊಂದುತ್ತಾಳೆ. ಮೂರನೆಯ ಮಗಳು ಆಕೆಯ ಪಲ್ಲಿಯಾರಾ (ರಾಯಲ್ ಚೇಂಬರ್) ನಲ್ಲಿ ಧ್ಯಾನವನ್ನು ಪ್ರಾರಂಭಿಸಿ ಅಲ್ಲೇ ಸಮಾಧಿಯಾಗುತ್ತಾಳೆ. ಆಕೆಯ ದೇಹದ ಮೇಲೆ ಯಾವಾಗಲೂ ಜೇಡ ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗುತ್ತದೆ. ಆಕೆಯ ಮರಣ ನಂತರ ಯಾರೂ ಕೂಡಾ ಅಲ್ಲಿಗೆ ಪ್ರವೇಶಿಸಿಲ್ಲ.

ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ

ಜೇಡದ ಮೂರ್ತಿ ಪ್ರತ್ಯಕ್ಷ

ಜೇಡದ ಮೂರ್ತಿ ಪ್ರತ್ಯಕ್ಷ

ಹಲವಾರು ವರ್ಷಗಳ ನಂತರ, ಪಲ್ಲಿಯಾರಾ ತನ್ನಿಂದ ತಾನೇ ತೆರೆದುಕೊಂಡಿತ್ತು. ಆ ಕೊಠಡಿಯೊಳಗೆ ಒಂದು ಜೇಡದ ಆಕಾರದಲ್ಲಿ ಸುಂದರವಾದ ಮೂರ್ತಿ ಪ್ರತಿಷ್ಠಾಪನೆಯಾಗಿತ್ತು. ರಾಜಕುಮಾರಿಯ ಸಮಾಧಿ ಇದ್ದ ಜಾಗದಲ್ಲಿ ಜೇಡನ ಮೂರ್ತಿಯನ್ನು ಕಂಡು ಅಂದಿನಿಂದ ರಾಜಮನೆತನದ ಕೊಠಡಿಯನ್ನು ಕೊಡುಮಾನ್ ಚಿಲಂತಿ ಕ್ಷೇತ್ರಂ ಎಂದು ಕರೆಯಲಾಗುತ್ತಿತ್ತು.

ಜೇಡದ ವಿಷದಿಂದ ಮುಕ್ತಿ

ಜೇಡದ ವಿಷದಿಂದ ಮುಕ್ತಿ

ದೇವಸ್ಥಾನದ ಒಳಗೆ ಜೇಡದ ವಿಷ ಅಥವಾ ಯಾವುದೇ ರೀತಿಯ ಕೀಟಗಳ ಕಚ್ಚುವಿಕೆಯಿಂದ ಬಳಲುತ್ತಿರುವ ಭಕ್ತರು ವಿಷಗಳಿಂದ ತಮ್ಮನ್ನು ಗುಣಪಡಿಸಲು ಇಲ್ಲಿಗೆ ಬರುತ್ತಾರೆ. ಇಲ್ಲಿನ ಬಾವಿಯ ನೀರಿಗೆ ಆ ವಿಷವನ್ನು ತೆಗೆಯುವ ಶಕ್ತಿ ಇದೆ ಎಂದು ನಂಬಲಾಗುತ್ತದೆ.

ವಾರ್ಷಿಕ ಉತ್ಸವ

ವಾರ್ಷಿಕ ಉತ್ಸವ

ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯುವ ಮಲಯಾಳಂ ತಿಂಗಳಿನ ವೃಶ್ಚಿಕಂನಲ್ಲಿ ಕಾರ್ತಿಕ ದಿನದಂದು ಇಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ. ಮಕರಾಮ್ ತಿಂಗಳಲ್ಲಿ, ಚಂದ್ರ ಪೊಂಗಲಾವನ್ನು ಇಲ್ಲಿ ಹುಣ್ಣಿಮೆಯ ದಿನದಲ್ಲಿ ಮಹಿಳೆಯರು ವೀಕ್ಷಿಸುತ್ತಾರೆ.

ಇತರ ದೇವಾಲಯಗಳು

ಇತರ ದೇವಾಲಯಗಳು

ಕೊಡುಮನ್ ವೈಕುಂಡಪುರ ದೇವಸ್ಥಾನ ಕೊಡುಮನ್ ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ವಿಷ್ಣು ದೇವರಿಗೆ ಸಮರ್ಪಿಸಲಾಗಿದೆ. ಪುತಂಕವಿಲ್ ದೇವಿ ದೇವಾಲಯ, ಚೊರೊಕುನ್ನಿಲ್ ಮಲೆನಾಡಾ ದೇವಸ್ಥಾನವು ಇಲ್ಲಿರುವ ಇತರ ಪ್ರಮುಖ ದೇವಾಲಯಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X