Search
  • Follow NativePlanet
Share
» »ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

By Vijay

ದಿನ ಬೆಳಗಾಗುತ್ತಿದ್ದಂತೆ ಸಾಕು ಕಣ್ಣುಗಳಲ್ಲಿ ಹಿಂದಿನ ರಾತ್ರಿಯಲ್ಲಿ ಬಂದು ನೆಲೆ ನಿಂತಿದ್ದ ನಿದ್ರಾ ದೇವಿಯು ಸಾಕಪ್ಪಾ ಸಾಕು ನಿನ್ನ ಸಹವಾಸ ಅಂತ ಹೊರಟೇ ಬಿಡುತ್ತಾಳೆ. ದಿನ ಪೂರ್ತಿ ಕೆಲಸ ಮಾಡಿ ಚಿಂದಿ ಚಿತ್ರಾನ್ನವಾಗಿ ನಂತರ ಚೇತರಿಸಿಕೊಳ್ಳುತ್ತಿದ್ದ ಮೆದುಳು ಅಯ್ಯೊ ವಿಶ್ರಾಂತಿ ಮುಗಿಯಿತಾ ಎಂದು ಚಡಪಡಿಸ ತೊಡಗುತ್ತದೆ. ಒಲ್ಲದ ಮನಸ್ಸಿನಿಂದ ಅಂಗಾಂಗಗಳು ಮತ್ತೆ ನಿಧಾನವಾಗಿ ಚಲನವಲನಗಳಲ್ಲಿ ತೊಡಗುತ್ತವೆ.

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಇದು ಸಾಮಾನ್ಯವಾಗಿ ಮಹಾನಗರಗಳಲ್ಲಿ ಪ್ರತಿಯೊಬ್ಬರು ಅನುಭವಿಸುವಂತಹ ದಿನದ ಆರಂಭ. ಏಕೆಂದರೆ ಈ ರಭಸಮಯ ನಗರಗಳಲ್ಲಿ ಕೆಲಸದ ಒತ್ತಡವೆ ಹಾಗಿರುತ್ತದೆ. ಮನಸ್ಸು ಸದಾ ರಜೆಯನ್ನರುಸುತ್ತಾ ಕಾಯುತ್ತಿರುತ್ತದೆ. ಈ ಸಂದರ್ಭದಲ್ಲಿ ಒಂದೆರಡು ರಜೆಗಳು ಬಂತೆಂದರೆ ಸಾಕು, ಮರಳುಗಾಡಿನಲ್ಲಿ ಸಾಕಷ್ಟು ನಡೆದಾಡಿದ ನಂತರ ಒಂದು ಕುಡಿಕೆಯ ತುಂಬ ನೀರು ದೊರೆತ ಹಾಗೆ ಅನುಭವವಾಗುತ್ತದೆ.

ಹೋಟೆಲ್ ಮತ್ತು ವಿಮಾನ ಹಾರಾಟ ದರಗಳ ಮೇಲೆ 50% ರಷ್ಟು ಕಡಿತ!

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು


ಬೈಕ್ ತೆಗೆದುಕೊಂಡು ಹೊರಟುಬಿಡಿ
ಚಿತ್ರಕೃಪೆ: FlickreviewR

ಕೆಲವರು ಶಾಂತ ಚಿತ್ತರಾಗಿ ಮನೆಯಲ್ಲಿ ವಿಶ್ರಾಂತಿ ಪಡೆದರೆ ಇನ್ನೂ ಕೆಲವರಿಗೆ ರಜೆಗಳಲ್ಲಿ ಅಲ್ಲಿ ಇಲ್ಲಿ ಅಂತ ನಗರದ ತುಂಬ ಎಲ್ಲೆಲ್ಲೋ ಸುತ್ತಾಡುವ ಚಪಲವಿರುತ್ತದೆ. ಕೆಲವೊಮ್ಮೆ ನೀವು ವಿವಾಹಿತರಾಗಿದ್ದರು ಕೂಡ ಏಕಾಂಗಿಯಾಗಿ ಮನೆಯಲ್ಲಿರುವ ಪ್ರಸಂಗ ಒದಗಿ ಬರಬಹುದು. ಆ ಸಮಯದಲ್ಲಿ ರಜೆಯ ಒಂದು ದಿನವನ್ನು ಕಳೆಯುವುದು ತುಸು ಕಷ್ಟವೆ ಸರಿ.

ಈ ದೃಷ್ಟಿಕೋನವನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ಲೇಖನವು ಬೆಂಗಳೂರಿನಲ್ಲಿ ದಿನವನ್ನೂ ಹೀಗೂ ಕಳೆಯಬಹುದೆಂಬುದರ ಕುರಿತು ತಿಳಿಸುತ್ತದೆ. ಹಾಗೆ ನೋಡಿದರೆ ಸಾಕಷ್ಟು ಆಯ್ಕೆಗಳು ದೊರೆಯುತ್ತಾವಾದರೂ ಈ ಲೇಖನದ ಮೂಲಕ ಸಾಂಪ್ರದಾಯಿಕ ಬೆಂಗಳೂರನ್ನು ನೋಡುವುದಲ್ಲದೆ ರುಚಿಕರವಾದ ತಿಂಡಿ ತಿನಿಸುಗಳನ್ನೂ ಸಹ ಸವಿಯಬಹುದು.

ವಿಶೇಷ ಲೇಖನ : ಭಾರತದ ಬೃಹತ್ ಶಾಪಿಂಗ್ ಮಾಲ್ ಗಳು

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಮೆಜೆಸ್ಟಿಕ್ ನಿಲ್ದಾಣ
ಚಿತ್ರಕೃಪೆ: Shayak Sen

ನೀವೆಲ್ಲಿದ್ದರೂ ಸರಿ ಮೊದಲಿಗೆ ಬೆಂಗಳೂರಿನ ಹೆಗ್ಗುರುತಾದ ಮೆಜೆಸ್ಟಿಕ್ ಗೆ ಹೊರಟು ಬಿಡಿ. ಕೆಲ ಮೂಲಗಳ ಪ್ರಕಾರ, ಇಂದು ಕಾಣಬಹುದಾದ ಮೆಜೆಸ್ಟಿಕ್ ಬಸ್ಸು ನಿಲ್ದಾಣ ಪ್ರದೇಶವು ಹಿಂದೆ ಒಂದು ಕೆರೆಯಾಗಿತ್ತಂತೆ. ಆದರೆ ಇಂದು ಮೆಜೆಸ್ಟಿಕ್ ಬೆಂಗಳೂರಿನ ಪ್ರಬಲ ಹೆಗ್ಗುರುತಾಗಿದೆ. ಮೆಜೆಸ್ಟಿಕ್ ಅಗ್ಗದ ಜೀವನ ಶೈಲಿಗೂ ಸೈ ಹಾಗೂ ದುಬಾರಿ ಜೀವನ ಶೈಲಿಗೂ ಸೈ ಅನಿಸಿಕೊಂಡಿದೆ. ಕಾಮತ್, ಪವಿತ್ರಾ, ಅಡಿಗಾಸ್ ನಂತಹ ಹೋಟೆಲುಗಳು ಈ ಪ್ರದೇಶದಲ್ಲಿದ್ದು ಬೆಳಗಿನ ಬಿಸಿ ಬಿಸಿ ರುಚಿ ರುಚಿಯಾದ ಇಡ್ಲಿ ಸಾಂಬಾರನ್ನು ಇಲ್ಲಿ ಸವಿಯಬಹುದು. ನಂತರ ಇಷ್ಟವಿದ್ದಲ್ಲಿ ಇಲ್ಲಿರುವ ಚೈನಾ ಬಾಜಾರುಗಳಿಗೆ ಭೇಟಿ ನೀಡಿ ಕಡಿಮೆ ಬೆಲೆಗಳಲ್ಲಿ ಆಧುನಿಕ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಬಹುದು.

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಮಂತ್ರಿ ಮಾಲ್ ಒಳಾಂಗಣ
ಚಿತ್ರಕೃಪೆ: Ashwin Kumar

ಒಂದೊಮ್ಮೆ ಮೆಜೆಸ್ಟಿಕ್ ನಲ್ಲಿ ತೃಪ್ತಕರ ಸಮಯ ಕಳೆದ ನಂತರ ನೇರವಾಗಿ ಕೆಂಪೇಗೌಡ ಬಸ್ಸು ನಿಲ್ದಾಣಕ್ಕೆ ಹೊರಡಿ, ಒಂದು ವೇಳೆ ನಿಮ್ಮದೆ ಆದ ವಾಹನವಿದ್ದರೆ ಧನ್ವಂತರಿ ರಸ್ತೆಯ ಮೂಲಕ ಕರ್ನಾಟಕ ಸ್ಲಮ್ ಬೋರ್ಡ್ ಕಚೇರಿ ಕಟ್ಟಡ ತಲುಪಿ ಅಲ್ಲಿಂದ ಬಲ ತಿರುವು ಪಡೆದು ಪ್ಲ್ಯಾಟ್ ಫಾರ್ಮ್ ರಸ್ತೆ ಹಿಡಿದು ನೇರವಾಗಿ ಮಂತ್ರಿ ಸ್ಕ್ವೇರ್ ಮಾಲ್ ಗೆ ತಲುಪಿ. ಮಂತ್ರಿ ಮಾಲ್ ಬೆಂಗಳೂರಿನ ಪ್ರತಿಷ್ಠಿತ ಹಾಗೂ ದೊಡ್ಡದಾದ ಮಾಲ್ ಗಳ ಪೈಕಿ ಒಂದಾಗಿದ್ದು ಸಾಕಷ್ಟು ಬಗೆ ಬಗೆಯ ಎಲ್ಲ ರೀತಿಯ ವಸ್ತುಗಳನ್ನು ಅದರಲ್ಲೂ ವಿಶೇಷವಾಗಿ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸಬಹುದು. ಅಲ್ಲದೆ ತಿನ್ನಲು ಉಪಹಾರಗೃಹಗಳು ಇಲ್ಲಿವೆ. ಒಂದು ವೇಳೆ ಸಾಂಪ್ರದಾಯಿಕ ಹಾಗೂ ಹಳೆಯ ಹೋಟೆಲಿನಲ್ಲಿ ತಿನ್ನಲು ಇಷ್ಟವಾದರೆ ಮಾಲ್ ಎದುರಿನ ಅಡ್ಡ ರಸ್ತೆಯಲ್ಲಿರುವ ನಿವ್ ಕೃಷ್ಣ ಭವನ ಹೋಟೆಲ್ ಗೆ ಭೇಟಿ ನೀಡಬಹುದು. ಕೆಲ ವಿಶಿಷ್ಟ ತಿನಿಸುಗಳು ಇಲ್ಲಿ ದೊರೆಯುತ್ತವೆ.

ವಿಶೇಷ ಲೇಖನ : ಬೆಂಗಳೂರಿನಲ್ಲಿ ಶಾಪಿಂಗ್

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಮಲ್ಲೇಶ್ವರಂನ ಸಂಪಿಗೆ ರಸ್ತೆ
ಚಿತ್ರಕೃಪೆ: Sissssou

ಕೃಷ್ಣ ಭವನದಲ್ಲಿ ಊಟೋಪಚಾರವನ್ನು ಸಂಪೂರ್ಣಗೊಳಿಸಿ ನೇರವಾಗಿ ಪ್ಲ್ಯಾಟ್ ಫಾರ್ಮ್ ರಸ್ತೆಯಲ್ಲೆ ಮುಂದೆ ಸಾಗುತ್ತ ಮಲ್ಲೇಶ್ವರಂನ ಸಂಪಿಗೆ ರಸ್ತೆಯನ್ನು ತಲುಪಿರಿ. ಇದಕ್ಕೆ ತಗುಲುವ ಸಮಯ ಕೇವಲ ಐದರಿಂದ ಹತ್ತು ನಿಮಿಷಗಳು ಮಾತ್ರ. ಮಲ್ಲೇಶ್ವರಂ ಬೆಂಗಳೂರಿನ ಅತಿ ವಿಶಿಷ್ಟ, ಹಳೆಯ ಹಾಗೂ ಸಾಂಪ್ರದಾಯಿಕ ಪ್ರದೇಶವಾಗಿದೆ. ಬೆಂಗಳೂರಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಜೀವನ ಶೈಲಿಯನ್ನು ಇಲ್ಲಿ ಸವಿಯಬಹುದು. ಗುಡಿ ಗುಂಡಾರಗಳು, ಗ್ರಂಥಿಗೆ ಅಂಗಡಿಗಳು, ತರಕಾರಿ ಮಂಡಿಗಳು, ಸಾಂಪ್ರದಾಯಿಕ ಆಹಾರ ಖಾದ್ಯದಂಗಡಿಗಳು ಹೀಗೆ ಹಲವಾರು ವಸ್ತುಗಳು ಮಲ್ಲೇಶ್ವರಂನಲ್ಲಿ ದೊರೆಯುತ್ತವೆ. ನಿಮಗಿಷ್ಟವಿದ್ದಲ್ಲಿ 15 ನೇ ಕ್ರಾಸಿನ ಆಸು ಪಾಸಿನಲ್ಲಿ ಶಿರಡಿ ಸಾಯಿ ಮಂದಿರ, ಕಾಡು ಮಲ್ಲೇಶ್ವರ ಮಂದಿರ, ದಕ್ಷಿಣ ನಂದಿ ತೀರ್ಥ, ಗಂಗಮ್ಮಾ ದೇವಿ ದೇವಾಲಯ ಹೀಗೆ ಹಲವಾರು ದೇವಸ್ಥಾನಗಳಿದ್ದು ಭೇಟಿ ನೀಡಬಹುದು.

ವಿಶೇಷ ಲೇಖನ : ಬೆಂಗಳೂರಿನ ಪುರಾತನ ದೇವಾಲಯಗಳು

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಚಿತ್ರಕೃಪೆ: Santosh Kumar GM

ದೇವಸ್ಥಾನಗಳ ಭೇಟಿಯ ನಂತರ ಅದೆ ರಸ್ತೆಯಲ್ಲಿ ಮುಂದೆ ಸಾಗುತ್ತ ಮಲ್ಲೇಶ್ವರಂ 18 ನೇ ಕ್ರಾಸಿನ ಬಲಭಾಗದಲ್ಲಿ ಬೆಂಗಳೂರಿನ ಪ್ರಸಿದ್ಧ ಸ್ಯಾಂಕಿ ಕೆರೆ ಉದ್ಯಾನವನ್ನು ತಲುಪಬಹುದು. ಸುಮಾರು 100 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಸ್ಯಾಂಕಿ ಕೆರೆಯ ಪರಿಸರ ಅದ್ಭುತ ಮನಶಾಂತಿಯನ್ನು ಭೇಟಿ ನೀಡುವವರಿಗೆ ಕರುಣಿಸುತ್ತದೆ. ಸ್ಯಾಂಕಿ ಕೆರೆಯು 37 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದೆ. ಇದೊಂದು ಕೃತಕ ಕೆರೆಯಾಗಿದ್ದು, 1882 ರಲ್ಲಿ ಬ್ರಿಟೀಷರ ಆಡಳಿತದಲ್ಲಿ ಕರ್ನಲ್ ಆಗಿದ್ದ ರೈಚರ್ಡ್ ಹೈರ್‍ಯಾಮ್ ಸ್ಯಾಂಕಿ ಎಂಬಾತನು ಈ ಕೆರೆಯ ನಿರ್ಮಾತೃ. ಬೆಂಗಳೂರಿನ ನೀರಿನ ಬೇಡಿಕೆ ತಣಿಸಲು ನಿರ್ಮಾಣವಾದ ಈ ಕೆರೆ "ಗಂಧದಕೋಟಿ ಕೆರೆ" ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು.

ವಿಶೇಷ ಲೇಖನ : ಸ್ಯಾಂಕಿ ಕೆರೆಯಲ್ಲೊಂದು ದಿನ

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಗರಿ ಗರಿ ಶ್ರೀಸಾಗರದ ಬೆಣ್ಣೆ ಮಸಾಲೆ
ಚಿತ್ರಕೃಪೆ: Subhashish Panigrahi

ಸಾಯಂಕಾಲದವರೆಗೂ ಸ್ಯಾಂಕಿ ಕೆರೆಯ ಉದ್ಯಾನದಲ್ಲಿ ಹಾಯಾಗಿ ಪುಸ್ತಕ ಓದುತ್ತಲೊ, ಸಂಗೀತ ಕೇಳುತ್ತಲೊ ಸಮಯ ಕಳೆದು ನಂತರ ಮನೆಯ ಹತ್ತಿರ ಹೆಜ್ಜೆ ಹಾಕಬಹುದು. ಅರೆ...ಸ್ವಲ್ಪ ತಾಳಿ ಇಲ್ಲಿಯವರೆಗೆ ಬಂದು ಅತ್ಯಂತ ರುಚಿಕರ ಎಂದು ಖ್ಯಾತಿ ಪಡೆದ ಶ್ರೀಸಾಗರ ಹೋಟೆಲಿನ ಬೆಣ್ಣೆ ಮಸಾಲೆ ದೋಸೆ ಸವಿಯದೆ ಹೋದರೆ ಹೇಗೆ? ಹೌದು ಈ ಹೋಟೆಲಿನಲ್ಲಿ ಇಂದಿಗೂ ಹಿಟ್ಟನ್ನು ಸಾಂಪ್ರದಾಯಿಕವಾಗಿ ರುಬ್ಬಿ ರುಚಿಕರವಾದ ದೋಸೆಗಳನ್ನು ಮಾಡಲಾಗುತ್ತದೆ. ಹೋಟೆಲ್ ಗ್ರಾಹಕರಿಂದು ತುಂಬಿರುತ್ತದೆ. ಆದರೂ ನಾಲಿಗೆಯ ರುಚಿಯ ಚಪಲಕ್ಕೆ ನೀವು ಕಾಯಲೇಬೇಕು.

ವಿಶೇಷ ಲೇಖನ : ಬೆಂಗಳೂರಿನ ಕೆಲ ಪ್ರಸಿದ್ಧ ಉಪಹಾರಗೃಹಗಳು

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಮಲ್ಲೇಶ್ವರಂ ಮಾರುಕಟ್ಟೆಗಳು
ಚಿತ್ರಕೃಪೆ: ☻☺

ಸ್ಯಾಂಕಿ ಕೆರೆಯಿಂದ 18 ನೇ ಕ್ರಾಸ್ ಬಸ್ ನಿಲ್ದಾಣ ತಲುಪಿ ಅಲ್ಲಿಂದ ಮಾರ್ಗೋಸಾ ರಸ್ತೆ ಹಿಡಿದು ನೇರವಾಗಿ ಏಳನೇಯ ಅಡ್ಡ ರಸ್ತೆಗೆ ಬಂದಾಗ ಅಲ್ಲಿ ಶ್ರೀ ಸಾಗರ್ ಹೋಟೆ ಅನ್ನು ನೋಡಬಹುದು. ಇದನ್ನು ಸೆಂಟ್ರಲ್ ಟಿಫಿನ್ ರೂಮ್ಸ್ ಅಥವಾ ಸಿಟಿಆರ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಬೆಂಗಳೂರಿನ ವಿದ್ಯಾರ್ಥಿ ಭವನ, ಎಂಟಿಆರ್, ಬ್ರಹ್ಮಣ ಕಾಫಿ ಕೇಂದ್ರ, ಮಯ್ಯಾಸ್ ಹೇಗೋ ಅದೇ ರೀತಿಯಲ್ಲಿ ಸಿಟಿಆರ್ ಸಹ ಅತ್ಯಂತ ಸ್ವಾದಿಷ್ಟ ಹಾಗೂ ರುಚಿಕರವಾದ ಬೆಣ್ಣೆ ಮಸಾಲೆ ದೋಸೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ದೋಸೆ ಸವಿದ ನಂತರ ಮತ್ತೆ ಮೆಜೆಸ್ಟಿಕ್ ತೆರಳಿ ಅಲ್ಲಿಂದ ನಿಮ್ಮ ಪ್ರದೇಶಗಳತ್ತ ಮರಳಬಹುದು. ಹೀಗೆ ಏಕಾಂತವಿದ್ದರೂ ಸಹ ಬೇಸರವನ್ನು ಈ ರೀತಿಯಾಗಿ ಪ್ರವಾಸ ಮಾಡಿ ಹೊಡೆದೋಡಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X