Search
  • Follow NativePlanet
Share
» »ಭಾರತದ ಈ ಅದ್ಭುತ ಕಡಲತೀರಗಳಲ್ಲಿ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ

ಭಾರತದ ಈ ಅದ್ಭುತ ಕಡಲತೀರಗಳಲ್ಲಿ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ

By Manjula Balaraj Tantry

ಎಲ್ಲರ ಜೀವನದಲ್ಲಿಯೂ ಕುಟುಂಬ ಎನ್ನುವುದು ಅತ್ಯಂತ ಮಹತ್ತರವಾದ ಕೊಡುಗೆಯಾಗಿದೆ. ಒಬ್ಬ ವ್ಯಕ್ತಿ ತನ್ನ ಜೀವನವನ್ನು ಕುಟುಂಬ ಅಥವಾ ಸಂಬಂಧಿಕರುಗಳಿಲ್ಲದೆ ಊಹಿಸಲೂ ಸಾಧ್ಯವಿಲ್ಲ. ಜೀವನದ ಚಕ್ರವು ಯಾವಾಗಲೂ ಪ್ರೀತಿ ಮತ್ತು ಬೆಂಬಲಗಳ ಮೇಲೆ ನಿಂತಿವೆ. ಈ ಬೆಂಬಲ ಮತ್ತು ಪ್ರೀತಿ ಒಂದು ಆಯಾಮಕ್ಕೆ ಬರಬೇಕಾದರೆ ನಮ್ಮ ಕುಟುಂಬದವರೊಡನೆ, ಸ್ನೇಹಿತರೊಡನೆ ಮತ್ತು ಸಂಬಂಧಿಕರೊಡನೆ ಸ್ವಲ್ಪ ಉತ್ತಮ ಸಮಯವನ್ನು ಕಳೆಯಬೇಕಾಗುತ್ತದೆ.

ಕುಟುಂಬದೊಂದಿಗಿನ ನಿಮ್ಮ ಬಂಧವನ್ನು ಇನ್ನೂ ಬಲಪಡಿಸಲು ಈ ಋತುವಿನಲ್ಲಿ ಭಾರತದಲ್ಲಿಯ ಕುಟುಂಬದ ಜೊತೆಗೆ ಭೇಟಿ ನೀಡಬಹುದಾದ ಕಡಲತೀರಗಳಿಗೆ ಭೇಟಿ ಕೊಟ್ಟರೆ ಹೇಗಿರಬಹುದು? ಪವಿತ್ರವಾದ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಿಡಿದು ನಿಮ್ಮ ಕುಟುಂಬದವರೊಡನೆ ಸುಮ್ಮನೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುವವರೆಗೆ ಈ ಬೀಚ್ ಗಳು ನೀವು ಬಯಸಿದ್ದನ್ನೆಲ್ಲಾ ಒದಗಿಸುತ್ತವೆ. ಆದುದರಿಂದ ಇವುಗಳ ಬಗ್ಗೆ ತಿಳಿದುಕೊಳ್ಳಲು ಇನ್ನಷ್ಟು ಓದಿ.

1) ಜುಹು ಬೀಚ್ , ಮಹಾರಾಷ್ಟ್ರ

1) ಜುಹು ಬೀಚ್ , ಮಹಾರಾಷ್ಟ್ರ

PC- Rajarshi MITRA

ಕಡಲತೀರಗಳ ಜೊತೆಗೆ ಮುಂಬೈನಲ್ಲಿಯ ಬೀದಿಯಲ್ಲಿರುವ ಸವಿಯಾದ ಆಹಾರಗಳ ರುಚಿಯನ್ನು ಏಕೆ ಸವಿಯಬಾರದು? ಜುಹು ಬೀಚ್ ಭಾರತದಲ್ಲಿಯ ಅಂತಹ ಕೆಲವೇ ಕೆಲವು ಬೀಚ್ ಗಳಲ್ಲಿ ಒಂದಾಗಿದ್ದು ಇಲ್ಲಿ ನೀವು ನಿಮ್ಮ ಕುಟುಂಬದ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಮೋಜು ಪಡೆಯಬಹುದಾದುದಾಗಿದೆ.

ಬೀದಿ ಮಾರಾಟಗಾರರಿಂದ ತಯಾರಿಸುವವರವರೆಗೆ ಮತ್ತು ಚಾಟ್ ಅಂಗಡಿಗಳಿಂದ ಹಿಡಿದು ಆಟಿಕೆ ಮಾರುವವರವರೆಗೆ ಮುಂಬೈನ ಈ ಪ್ರಮುಖ ಸ್ಥಳವು ಎಲ್ಲವನ್ನೂ ಹೊಂದಿದ್ದು ಸಾಯಂಕಾಲವನ್ನು ಕಡಲತೀರಗಳಲ್ಲಿ ಆರಾಮದಾಯಕವಾಗಿ ಕಳೆಯಬಯಸುವವರಿಗೆ ಮತ್ತು ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳಬಯಸುವವರಿಗೆ ಈ ಬೀಚ್ ನಲ್ಲಿ ಒಂದು ಉತ್ತಮವಾದ ಮತ್ತು ಉತ್ಸಾಹಭರಿತ ವಾತಾವರಣವನ್ನು ಪಡೆಯಬಹುದಾಗಿದೆ.

ಕಾಲಕ್ರಮೇಣ ಜುಹು ಬೀಚ್ ಒಂದು ಉತ್ತಮವಾದ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದೆ. ಇದು ಏಕೆಂದರೆ ಚಲನಚಿತ್ರ ನಿರ್ಮಾಪಕರಿಗೆ ಇದು ಪರಿಪೂರ್ಣವಾಗಿ ಶೂಟಿಂಗ್ ಮಾಡಲು ಸ್ಥಳಗಳನ್ನು ಒದಗಿಸುವುದು ಮತ್ತು ಇಲ್ಲಿಯ ಕಡಲ ನೀರಿನಲ್ಲಿ ಆಡಬಯಸುವವರಿಗೆ ಮತ್ತು ನಡೆದಾಡಬಯಸುವರರಿಗೆ ಒಂದು ಉತ್ಸಾಹ ಪೂರ್ಣವಾದ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

2) ಅಲಪು಼ಜಾ ಬೀಚ್ ಕೇರಳ

2) ಅಲಪು಼ಜಾ ಬೀಚ್ ಕೇರಳ

PC- Ronald Tagra

ದೇವರ ಈ ಸ್ವಂತ ನಾಡಿಗೆ ನೀವು ಹೋಗದೆ ಇರಲು ಯಾವ ಕಾರಣವು ನಿಮ್ಮಲ್ಲಿಲ್ಲ. ಇಲ್ಲಿಯ ಹಿನ್ನೀರಿನಲ್ಲಿ ಮತ್ತು ಸಂಯೋಜಿತ ಪ್ರಕೃತಿಯಲ್ಲಿ ನಿಮಗೆ ಅನ್ವೇಷಿಸಬಹುದಾದ ಅನೇಕ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಅಲಪುಜಾ ಬೀಚ್ ಕೇರಳದ ಒಂದು ಅತ್ಯಂತ ಹೆಸರುವಾಸಿಯಾದ ಕಡಲತೀರಗಳಲ್ಲೊಂದಾಗಿದೆ.

ಅದರ 150 ವರ್ಷ ಹಳೆಯದಾದ ಸೇತುವೆ ಕಡಲತೀರದ ನೀರಿಗೆ ವಿಸ್ತರಿಸಿದೆ. ಇಲ್ಲಿ ಅನೇಕ ಉತ್ಸವಗಳೂ ನಡೆಯುತ್ತವೆ ಅವುಗಳಲ್ಲಿ ಅಲಪು಼ಜಾ ಬೀಚ್ ಉತ್ಸವ, ಮರಳಿನಲ್ಲಿ ಕಲೆಯ ಉತ್ಸವ ಇತ್ಯಾದಿಗಳು ಸೇರಿವೆ. ನೀವು ಇಲ್ಲಿ ಈ ಸಮಯದಲ್ಲಿರುವ ಅದೃಷ್ಟವನ್ನು ಹೊಂದಿದ್ದರೆ ನಿಮ್ಮ ಕುಟುಂಬದವರ ಜೊತೆ ಈ ಅದ್ಬುತವಾದ ಉತ್ಸವಗಳಲ್ಲಿ ಪಾಲ್ಗೊಳ್ಳಬಹುದು.

3) ಪ್ರೊಮೆನೇಡ್ ಬೀಚ್ ಪಾಂಡೀಚೇರಿ

3) ಪ್ರೊಮೆನೇಡ್ ಬೀಚ್ ಪಾಂಡೀಚೇರಿ

PC- Sarath Kuchi

ಮುಂಜಾನೆ ಮತ್ತು ಮುಸ್ಸಂಜೆಯ ವೇಳೆಯಲ್ಲಿ ಜಾಗಿಂಗ್ ಮಾಡುವವರು ಮತ್ತು ವಾಕಿಂಗ್ ಮಾಡುವವರಿಂದ ಪ್ರೊಮೆನೇಡ್ ಬೀಚ್ ತುಂಬಿ ಹೋಗಿರುತ್ತದೆ ಮತ್ತು ಇದು ಪುದುಚೇರಿಯಲ್ಲಿಯ ಹೆಚ್ಚು ಭೇಟಿ ನೀಡಲ್ಪಡುವ ಬೀಚ್ ಆಗಿದೆ. ಕುಟುಂಬದವರೊಡನೆ ಪಿಕ್ನಿಕ್ ಗಾಗಿ ಬರುವ ಜನರಿಂದ ಹಿಡಿದು ವಾಕ್ ಗೆಂದು ಬರುವ ಜನರವರೆಗೆ ಈ ಬೀಚ್ ನಲ್ಲಿ ಕಾಣಬಹುದಾಗಿದೆ.

ಈ ಬೀಚ್ ತನ್ನಲ್ಲಿ ಭೇಟಿ ಕೊಡುವ ಸಂದರ್ಶಕರಿಗೆ ಬೇಕಾಗುವ ಎಲ್ಲವನ್ನೂ ತನ್ನೊಳಗೆ ಹೊಂದಿದೆ. ಪ್ರೋಮೆನೇಡ್ ಬೀಚ್ ಪುದುಚೇರಿಯ ಪೂರ್ವ ಹೊರಭಾಗದಲ್ಲಿರುವ ಸಾಮಾನ್ಯವಾದ ಒಂದು ರಾಕ್ ಬೀಚ್ ಆಗಿದ್ದು ಇದು ಅನೇಕ ಸಣ್ಣ ತೋಟಗಳು, ಬಂದರುಗಳು, ಕೆಫೆಗಳು ಮತ್ತು ಐಸ್ ಕ್ರೀಂ ಅಂಗಡಿಗಳನ್ನು ಹೊಂದಿದೆ.

ಆದುದರಿಂದ ಇಲ್ಲಿ ಹರಡಿರುವ ಸುಂದರವಾದ ಕಡಲು, ಯೋಗ್ಯವಾದ ವಾತಾವರಣ ಮತ್ತು ನೈಸರ್ಗಿಕ ಸೌಂದರ್ಯತೆಯ ನಡುವೆ ನೀವು ನಿಮ್ಮ ಕುಟುಂಬದವರ ಜೊತೆ ಏಕೆ ಸಮಯ ಕಳೆಯಬಾರದು?

4) ರಾಧಾನಗರ ಬೀಚ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

4) ರಾಧಾನಗರ ಬೀಚ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

PC- Joseph Jayanth

ಇತ್ತೀಚೆಗೆ ಈ ರಾಧಾನಗರ್ ಕಡಲತೀರವನ್ನು ಏಷ್ಯಾದ ಅತ್ಯುತ್ತಮ ಬೀಚ್ ಎಂದು ಘೋಷಿಸಲ್ಪಟ್ಟಿದೆ. ಈ ಕಡಲ ತೀರವು ಅಂಡಮಾನ್ ಮತ್ತುನಿಕೋಬಾರ್ ದ್ವೀಪಗಳಲ್ಲಿನ ಹೆಚ್ಚು ಸಂದರ್ಶಿತ ಪ್ರವಾಸೀ ತಾಣವಾಗಿದೆ. ಅಂಡಮಾನಿನ ಅತೀವಾಸ್ತವಿಕ ಸ್ಥಳದಲ್ಲಿರುವ ಈ ಕಡಲತೀರವು ಒಂದು ಪರಿಪೂರ್ಣವಾದ ಕುಟುಂಬದ ಜೊತೆ ಭೇಟಿ ನೀಡಬಹುದಾದ ಸ್ಥಳವಾಗಿದ್ದು ಈ ಕಡಲತೀರವು ತನ್ನ ಅತೀಅದ್ಬುತವಾದುದನ್ನು ಪ್ರದರ್ಶಿಸುತ್ತದೆ.

ಇಂದು ಹಾವ್ಲಾಕ್ ದ್ವೀಪದಲ್ಲಿರುವ ರಾಧಾನಗರ್ ಬೀಚ ಒಂದು ಪ್ರಮುಖ ಬೀಚ್ ಆಗಿದ್ದು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಿಮ್ಮ ಕುಟುಂಬದವರ ಜೊತೆ ಇಲ್ಲಿಯ ಬಿಳಿ ಮರಳಿನ ನೀರಿನಲ್ಲಿ ಜಲಕ್ರೀಡೆಗಳಲ್ಲಿ ಪಾಲ್ಗೊಂಡು ಮತ್ತು ಇಲ್ಲಿಯ ಹೊಳೆವ ಸೌಮ್ಯವಾದ ನೀರಿನಲ್ಲಿ ಮತ್ತು ಕಡಲ ತೀರಗಳಲ್ಲಿ ಏಕೆ ಸಮಯ ಕಳೆಯಬಾರದು?

5) ಮರೀನಾ ಬೀಚ್, ತಮಿಳುನಾಡು

5) ಮರೀನಾ ಬೀಚ್, ತಮಿಳುನಾಡು

PC- Sakena

ನೀವು ದಟ್ಟ ಜನಸಂದಣಿ ಮತ್ತು ಮಾರಾಟಗಾರರಿರುವ ಸ್ಥಳವನ್ನು ಇಷ್ಟ ಪಡುವವರಾಗಿದ್ದಲ್ಲಿ ಮರೀನಾ ಬೀಚ್ ನಿಮಗೆ ಸೂಕ್ತವಾದ ಸ್ಥಳವಾಗಿದೆ. ಇದು ಭಾರತದ ಜನಭರಿತ ಕಡಲತೀರಗಳಲ್ಲೊಂದಾಗಿದೆ ಮತ್ತು ವಿಶ್ವದಲ್ಲೇ ಅತ್ಯಂತ ಉದ್ದವಾದ ನೈಸರ್ಗಿಕ ಹಾಗೂ ನಗರವನ್ನು ಹೊಂದಿರುವ ಕಡಲ ತೀರಗಳಲ್ಲಿ ಒಂದಾಗಿದೆ.

ಮರೀನ ಬೀಚ್ ವಿನೋದ ಮತ್ತು ವಿಸ್ಮಯವನ್ನು ಬಯಸುವ ಸಾವಿರಾರು ಜನರನ್ನು ಪ್ರತೀದಿನ ಆಕರ್ಷಿಸುತ್ತದೆ. ನೀವು ಜನರ ಗದ್ದಲಗಳನ್ನು ಇಷ್ಟ ಪಡದಿದ್ದಲ್ಲಿ ಮತ್ತು ನಿಮ್ಮ ಕುಟುಂಬದವರ ಜೊತೆ ಏಕಾಂತವಾಗಿ ಆರಾಮವಾಗಿ ಕಾಲಕಳೆಯ ಬೇಕೆಂದಿದ್ದಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ವಾರದ ದಿನಗಳಲ್ಲಿ ಈ ಮರಳಿನ ಬೀಚ್ ಗೆ ಭೇಟಿ ನೀಡಲು ಸೂಕ್ತ ಸಮಯ.

6) ವರ್ಕಲಾ ಬೀಚ್, ಕೇರಳ

6) ವರ್ಕಲಾ ಬೀಚ್, ಕೇರಳ

PC- Thejas Panarkandy

ವರ್ಕಲಾ ಬೀಚ್ ಕೇರಳದ ಅತೀ ಸುಂದರ ಮತ್ತು ಸ್ವಚ್ಚವಾದ ಬೀಚ್ ಗಳಲ್ಲೊಂದಾಗಿದೆ. ಈ ಬೀಚ್ ಕಡಲು ಪ್ರಿಯರು ಮತ್ತು ಪ್ರಯಾಣಿಕರಲ್ಲಿ ಅನೇಕ ಕಾಲಗಳಿಂದಲೂ ಸಾಮಾನ್ಯವಾಗಿ ಕೇಳಿ ಬರುವ ಹೆಸರಾಗಿದೆ. ಇಲ್ಲಿ ಅರೇಬಿ ಸಮುದ್ರದ ಪಕ್ಕಕ್ಕೆ ಇರುವ ಬಂಡೆಗಳನ್ನು ಕಾಣಬಹುದಾಗಿದೆ. ಇಲ್ಲಿಯ ಅನುಕೂಲಕರ ವಾತಾವರಣ ಮತ್ತು ಹಾನಿಗೊಳಗಾಗದ ಸೌಂದರ್ಯತೆಗಳಿಂದಾಗಿ ಇದು ಕುಟುಂಬಗಳ ಜೊತೆ ಬರುವವರಲ್ಲೂ ಪ್ರಸಿದ್ದಿಯನ್ನು ಪಡೆದಿದೆ.

ವರ್ಕಲಾ ಬೀಚ್ ನ ದಕ್ಷಿಣ ಭಾಗದಲ್ಲಿರುವ ಪಾಪನಾಶಂ ಬೀಚ್ ನಲ್ಲಿ ಒಮ್ಮೆ ನಿಮ್ಮ ಕುಟುಂಬದವರ ಜೊತೆ ಸ್ನಾನ ಮಾಡಿ ನಿಮ್ಮ ಪಾಪ ಪರಿಹಾರ ಮಾಡಿಕೊಂಡರೆ ಹೇಗಿರಬಹುದು? ಸರಿ, ನೀವು ನಿಮ್ಮ ಸಮಯವನ್ನು ಶಾಂತಿಯುತವಾದ ನೀರಿನ ಮಧ್ಯೆ ಸುಂದರವಾದ ಸಂಭಾಷಣೆಯೊಂದಿಗೆ ನಿಮ್ಮ ಕುಟುಂಬದವರೊಡನೆ ಕಳೆಯಬೇಕೆಂದಿದ್ದಲ್ಲಿ ವರ್ಕಲಾ ಬೀಚ್ ನಿಮ್ಮ ಸೂಕ್ತವಾದ ಸ್ಥಳವಾಗಿರುವುದು.

7) ಮಹಾಬಲಿಪುರಂ ಬೀಚ್ ತಮಿಳುನಾಡು

7) ಮಹಾಬಲಿಪುರಂ ಬೀಚ್ ತಮಿಳುನಾಡು

PC- Aravindan Ganesan

ಶೋರ್ ದೇವಾಲಯ ಸಂಕೀರ್ಣವು ಇದರ ಪರಿಸರದಲ್ಲಿರುವುದರಿಂದ ಮಹಾಬಲಿಪುರಂ ಬೀಚ್ ಒಂದು ಪವಿತ್ರವಾದ ಬೀಚ್ ಎಂದು ಪರಿಗಣಿಸಲಾಗಿದೆ.ಮಹಾಬಲಿಪುರಂ ನ ಕಡಲತೀರದ ಗಾಳಿಯಲ್ಲಿ ತೇಲಿ ಬರುವ ಹಿಂದುಗಳ ಭಕ್ತಿ ಮತ್ತು ಆಧ್ಯಾತ್ಮಿಕತೆಗಳ ಜೊತೆಯ ಅನುಭವವನ್ನು ಪಡೆಯುವುದು ಹೇಗಿರಬಹುದು? ಇಲ್ಲಿಯ ನೀರಿನಲ್ಲಿ ಹಿತವಾದ ಅನುಭವವನ್ನು ಪಡೆಯುವುದರ ಹೊರತಾಗಿ ಮಹಾಬಲಿಪುರಂ ನ ಬೀಚ್ ನ ಸುತ್ತಮುತ್ತ ಇರುವ ಪ್ರಾಚೀನ ದೇವಾಲಯಗಳನ್ನು ಅನ್ವೇಷಿಸುವ ಅವಕಾಶ ದೊರೆಯುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X