Search
  • Follow NativePlanet
Share
» »ಕೇರಳ ಗುಡ್ಡಗಳಿಂದ ಕಾಣುವ ಅದ್ಭುತ ನೋಟಗಳು!

ಕೇರಳ ಗುಡ್ಡಗಳಿಂದ ಕಾಣುವ ಅದ್ಭುತ ನೋಟಗಳು!

ಕೇರಳ ರಾಜ್ಯದಲ್ಲಿ ಆವರಿಸಿರುವ ಪಶ್ಚಿಮಘಟ್ಟಗಳಲ್ಲಿರುವ ಹಲವಾರು ಪ್ರವಾಸಿ ಬೆಟ್ಟಗಳು ತಾವು ಒದಗಿಸುವ ಅದ್ಭುತ ಭೂದೃಶ್ಯಾವಳಿಗಳಿಂದಾಗಿ ಪ್ರವಾಸಿಗರ ನೆಚ್ಚಿನ ತಾಣಗಳಾಗಿ ಹೆಸರುವಾಸಿಯಾಗಿವೆ

By Vijay

ದಕ್ಷಿಣ ಭಾರತದ ಚಿಕ್ಕ ಹಾಗೂ ಸುಂದರ ರಾಜ್ಯವಾದ ಕೇರಳದ ಬಹುತೇಕ ಭಾಗವು ದಟ್ಟವಾದ ಹಸಿರಿನ ವನಸಿರಿಯಿಂದ ತುಂಬಿರುವ ಬೆಟ್ಟ-ಗುಡ್ಡ ಹಾಗೂ ಪ್ರಪಾತಗಳಿಂದ ಆವರಿಸಿರುವುದನ್ನು ಕಾಣಬಹುದು. ಅದರಿಂದಾಗಿಯೆ ಪ್ರಾಕೃತಿಕ ಸೊಬಗು ಇಲ್ಲಿನ ಇಂಚಿಂಚೂ ಪ್ರದೇಶಗಳಲ್ಲಿಯೂ ಎದ್ದು ಕಾಣುತ್ತದೆ. ಈ ರೀತಿಯ ಅಗಾಧ ಸೃಷ್ಟಿ ಸೌಂದರ್ಯಕ್ಕೆ ಮುಖ್ಯ ಕಾರಣ ಎಲ್ಲೆಡೆ ಆವರಿಸಿರುವ ಪಶ್ಚಿಮ ಘಟ್ಟಗಳು.

ಪಶ್ಚಿಮ ಘಟ್ಟಗಳು ಇಡಿ ಭಾರತದಲ್ಲೆ ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುವ ಕಾಡುಗಳಿಂದ ತುಂಬಿದ ಪರ್ವತ ಶ್ರೇಣಿ. ಅನನ್ಯವಾದ ಜೀವ ಸಂಕುಲಕ್ಕೆ ಆಶ್ರಯ ತಾಣ. ಈ ಭಾಗದಲ್ಲಿ ನೂರಾರು ಅದ್ಭುತ ಬೆಟ್ಟ ಗುಡ್ಡಗಳಿದ್ದು ಬಹುತೇಕ ಗುಡ್ಡಗಳು ಚಾರಣ ಯೋಗ್ಯ ಪ್ರವಾಸಿ ಕೇಂದ್ರಗಳಾಗಿ ಹೆಸರುವಾಸಿಯಾಗಿವೆ.

ಕೇರಳದ ಗಮನಸೆಳೆವ ದಟ್ಟ ಕಾಡುಗಳು!

ಅದರಂತೆ ಕೇರಳದಲ್ಲಿರುವ ಪಶ್ಚಿಮ ಘಟ್ಟಗಳ ಕೆಲವು ಬೆಟ್ಟಗಳು ಅತ್ಯದ್ಭುತ ಅನುಭವ ನೀಡುವ ಆಕರ್ಷಣೆಗಳಾಗಿವೆ. ಈ ಬೆಟ್ಟಗಳು ಮುಖ್ಯವಾಗಿ ತನ್ನ ಮೇಲ್ಮೈನಿಂದ ಒದಗಿಸುವ ಸುತ್ತಮುತ್ತಲಿನ ಪರಿಸರದ ಅಗಾಧ ಸೌಂದರ್ಯ ರಾಶಿ ನೋಡುಗರಿಗೆ ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಸಂಶಯವೆ ಇಲ್ಲ.

ನಮ್ಮ ಪ್ರಕೃತಿ ಇಷ್ಟು ಸುಂದರವಾಗಿದೆಯೆ? ಇದನ್ನು ಕಣ್ಣಾರೆಯಾಗಿ ನೋಡಿದ ನಾನೆ ಧನ್ಯ...ಇಷ್ಟೊಂದು ಹುರುಪು ನೀಡುವ ದೃಶ್ಯಗಳನ್ನು ಬಿಟ್ಟು ನಾವೇಕೆ ದಿನನಿತ್ಯದ ಜಂಜಾಟಗಳಲ್ಲಿ ಒದ್ದಾಡುತ್ತಿದ್ದೇವೆ? ಸಮಯ ಸಿಕ್ಕಾಗಲೆಲ್ಲ ಇಂತಹ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು...ಎಂಬೆಲ್ಲ ಭಾವನೆಗಳು ನಿಮ್ಮ ಮನದಲ್ಲಿ ಮೂಡಿದರೆ ತಪ್ಪಿಲ್ಲ. ಹಾಗಾದರೆ ಕೇರಳದ ಕೆಲವು ಬೆಟ್ಟಗಳ ಮೇಲಿನಿಂದ ಕಂಡುಬರುವ ಅಮೋಘ ದೃಶ್ಯಾವಳಿಗಳು ಹೇಗಿರುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

ಚೆಂಬ್ರಾ ಪೀಕ್

ಚೆಂಬ್ರಾ ಪೀಕ್

ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಚೆಂಬ್ರಾ ಶಿಖರ ಶೃಂಗವನ್ನು ಏರಿದಾಗ ಕಂಡುಬರುವ ಅದ್ಭುತ ದೃಶ್ಯ.

ಚಿತ್ರಕೃಪೆ: Karkiabhijeet

ಎಂಟು ಕಿ.ಮೀ

ಎಂಟು ಕಿ.ಮೀ

ವಯನಾಡಿನ ಕಲ್ಪೆಟ್ಟಾದಿಂದ ಎಂಟು ಕಿ.ಮೀ ದೂರದಲ್ಲಿರುವ ಚೆಂಬ್ರಾ ಶಿಖರವು ಅದ್ಭುತವಾದ ಚಾರಣ ಮಾರ್ಗವಾಗಿದ್ದು ತನ್ನ ಸುತ್ತಲಿರುವ ತಮಿಳುನಾಡಿನ ನೀಲ್ಗಿರಿ ಬೆಟ್ಟಗಳ ವಿಹಂಗಮ ನೋಟವನ್ನೂ ಸಹ ಒದಗಿಸುತ್ತದೆ.

ಚಿತ್ರಕೃಪೆ: Karkiabhijeet

ಮೆಪ್ಪಾಡಿ

ಮೆಪ್ಪಾಡಿ

ಚೆಂಬ್ರಾ ಶಿಖರದ ಬಳಿಯಿರುವ ಮೆಪ್ಪಾಡಿ ಪಟ್ಟಣದಲ್ಲಿರುವ ಅರಣ್ಯ ಇಲಾಖೆಯಿಂದ ಚೆಂಬ್ರಾ ಶಿಖರಕ್ಕೆ ಚಾರಣ ಮಾಡಲು ಅನುಮತಿಯನ್ನು ಪಡೆಯಬೇಕಾಗಿರುವುದು ಅವಶ್ಯಕವಾಗಿದೆ. ಚಹಾ ತೋಟಗಳ ನೋಟವೂ ಸಹ ಅದ್ಭುತವಾಗಿ ಈ ಶಿಖರದಿಂದ ಕಂಡುಬರುತ್ತದೆ.

ಚಿತ್ರಕೃಪೆ: Tanuja R Y

ಹಾರ್ಟ್ ಲೇಕ್

ಹಾರ್ಟ್ ಲೇಕ್

ಇನ್ನೂ ಚೆಂಬ್ರಾ ಪರ್ವತ ಏರುವಾಗ ಒಂದು ಹಂತದಲ್ಲಿ ಭವ್ಯವಾದ ಕೊಳವೊಂದನ್ನು ಕಾಣಬಹುದು. ಇದು ಪ್ರವಾಸಿಗರ ಬಲು ನೆಚ್ಚಿನ ಆಕರ್ಷಣೆ. ಇದರ ವಿಶೇಷತೆ ಎಂದರೆ ಈ ಪುಟ್ಟ ಸರೋವರ ಬದಾಮಾಕಾರದಲ್ಲಿದ್ದು ಆಂಗ್ಲದಲ್ಲಿ ಹಾರ್ಟ್ ಲೇಕ್ ಎಂದೆ ಪ್ರಸಿದ್ಧವಾಗಿದೆ. ಇನ್ನೊಂದು ವಿಶೇಷವೆಂದರೆ ಇದು ಎಂದಿಗೂ ಬತ್ತುವುದಿಲ್ಲವಂತೆ!

ಚಿತ್ರಕೃಪೆ: Tanuja R Y

ಇಡುಕ್ಕಿ

ಇಡುಕ್ಕಿ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಪರುತುಂಪಾರಾ ಎಂಬ ಹಳ್ಳಿಯ ಬಳಿಯಿರುವ ಈಗಲ್ ರಾಕ್ ಬೆಟ್ಟದಿಂದ ಕಂಡುಬರುವ ಅದ್ಭುತ ನೋಟ.

ಚಿತ್ರಕೃಪೆ: Manu Mathew Keerampanal

ಮುನ್ನಾರ್

ಮುನ್ನಾರ್

ಇಡುಕ್ಕಿ ಜಿಲ್ಲೆಯ ಪ್ರಖ್ಯಾತ ಗಿರಿಧಾಮ ಮುನ್ನಾರ್ ಬಳಿಯಿರುವ ಟಾಪ್ ಸ್ಟೇಷನ್ ಬೆಟ್ಟದಿಂದ ಕಂಡುಬರುವ ಆಕರ್ಷಕ ನೋಟ.

ಚಿತ್ರಕೃಪೆ: Varkey Parakkal

ಇಡುಕ್ಕಿ

ಇಡುಕ್ಕಿ

ಇಡುಕ್ಕಿ ಜಿಲ್ಲೆಯಲ್ಲಿರುವ ಆದರೆ ಬಹು ಜನರಿಗೆ ತಿಳಿಯದ ಒಂದು ಸುಂದರ ಗಿರಿ ಪ್ರದೇಶ ರಾಮಕ್ಕಲ್ಮೇಡು. ಆ ಗಿರಿಯ ತುದಿಯಿಂದ ಕಂಡುಬರುವ ಸುಂದರ ನೋಟ.

ಚಿತ್ರಕೃಪೆ: Balachand

ಎರ್ನಾಕುಲಂ

ಎರ್ನಾಕುಲಂ

ಎರ್ನಾಕುಲಂ ಜಿಲ್ಲೆಯಲ್ಲಿರುವ ಕೊಡನಾಡು ಒಂದು ಆಕರ್ಷಕ ಪ್ರವಾಸಿ ಕೇಂದ್ರವಾಗಿದೆ. ಇದು ಮುಖ್ಯವಾಗಿ ತನ್ನಲ್ಲಿರುವ ಆನೆ ತರಬೇತಿ ಕೇಂದ್ರ ಹಾಗೂ ಬೆಟ್ಟದ ಮೇಲಿನ ವೀಕ್ಷಣಾ ಕೇಂದ್ರದಿಂದಾಗಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Hari Prasad Sridhar

ಕೊಟ್ಟಾಯಂ

ಕೊಟ್ಟಾಯಂ

ಕೊಟ್ಟಾಯಂ ಜಿಲ್ಲೆಯ ಕೊಟ್ಟಾಯಂ-ಇಡುಕ್ಕಿ ಜಿಲ್ಲೆಗಳ ಗಡಿಗಳ ಬಳಿ ಸ್ಥಿತವಿರುವ ವಗಮೋನ್ ಒಂದು ಸುಂದರ ಪ್ರವಾಸಿ ಸ್ಥಳ. ಹಸಿರು ಹುಲ್ಲುಗಾವಲಿನಿಂದ ಕೂಡಿರುವ ಈ ಅದ್ಭುತ ಬೆಟ್ಟವು ಚಳಿಗಾಲದಲ್ಲಿ ಭೇಟಿ ನೀಡಲು ಯೋಗ್ಯವಾದ ತಾಣವಾಗಿದೆ.

ಚಿತ್ರಕೃಪೆ: Prasanths

ಪ್ರವಾಸಿಧಾಮ

ಪ್ರವಾಸಿಧಾಮ

ಕೊಟ್ಟಾಯಂ ಜಿಲ್ಲೆಯಲ್ಲಿರುವ ಇಲ್ಲಿಕಲ್ ಕಲ್ಲು ಒಂದು ಆಕರ್ಷಣೀಯ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿನ ಬೆಟ್ಟದ ಮೇಲಿಂದ ರಸ್ತೆಯ ನೋಟವು ರೋಮಾಂಚನಗೊಳಿಸದೆ ಇರಲಾರದು.

ಚಿತ್ರಕೃಪೆ: Activedogs

ತ್ರಿಶ್ಶೂರ್

ತ್ರಿಶ್ಶೂರ್

ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಕನಕಮಲ ಹಳ್ಳಿಯು ತನ್ನಲ್ಲಿರುವ ಕನಕಮಲ ಬೆಟ್ಟಕ್ಕಾಗಿ ಹೆಸರುವಾಸಿಯಾಗಿದೆ. ಚಾಲಕುಡಿ ಪಟ್ಟಣದ ಬಳಿಯಿರುವ ಈ ಹಳ್ಳಿಯನ್ನು ಸುಲಭವಾಗಿ ತಲುಪಬಹುದಾಗಿದ್ದು ಅಲ್ಲಿಂದ ಕನಕಮಲ ಬೆಟ್ಟವನ್ನು ಏರಬಹುದು.

ಚಿತ್ರಕೃಪೆ: Anoopdesigns

ಆನಮುಡಿ

ಆನಮುಡಿ

ಪಶ್ಚಿಮಘಟ್ಟಗಳಲ್ಲೆ ಅತಿ ಎತ್ತರವಾಗಿರುವ ಬೆಟ್ಟ ಆನಮುಡಿ. ಇಡುಕ್ಕಿ ಜಿಲ್ಲೆಯಲ್ಲಿ ಭಾಗಶಃ ಇರುವ ಈ ಬೆಟ್ಟ ತಮಿಳುನಾಡು ಹಾಗೂ ಕೇರಳದಲ್ಲಿ ಹರಡಿದೆ. ಇಲ್ಲಿಂದ ಕಂಡುಬರುವ ನೋಟ ಅದ್ಭುತವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಚಿತ್ರಕೃಪೆ: VikiUNITED

ಪಶ್ಚಿಮಘಟ್ಟಗಳು

ಪಶ್ಚಿಮಘಟ್ಟಗಳು

ಇಡುಕ್ಕಿ ಜಿಲ್ಲೆಯಲ್ಲಿರುವ ಕಂತಲ್ಲೂರು ಎಂಬ ಗ್ರಾಮವು ತನ್ನ ಅದ್ಭುತ ಬೆಟ್ಟದಿಂದಾಗಿ ಪ್ರವಾಸಿಗರ ಗಮನಸೆಳೆಯುತ್ತದೆ.

ಚಿತ್ರಕೃಪೆ: Rameshng

ವೀಕ್ಷಣಾ ಕೇಂದ್ರ

ವೀಕ್ಷಣಾ ಕೇಂದ್ರ

ಹಿತಕರವಾದ ವಾತಾವರಣ, ಸುಂದರ ಭೂದೃಶ್ಯಾವಳಿಗಳಿಂದ ಇಂದು ಕಂತಲ್ಲೂರು ಒಂದು ಆಕರ್ಷಕ ಪ್ರವಾಸಿ ತಾಣವಾಗಿದ್ದು ಇಲ್ಲಿ ವೀಕ್ಷಣಾ ಕೇಂದ್ರವು ನಯನಮನೋಹರ ನೋಟಗಳನ್ನು ಒದಗಿಸುತ್ತದೆ.

ಚಿತ್ರಕೃಪೆ: Rameshng

ಪಾಲಕ್ಕಾಡ್

ಪಾಲಕ್ಕಾಡ್

ಪಾಲಕ್ಕಾಡ್ ನಿಂದ 60 ಕಿ.ಮೀ ಗಳಷ್ಟು ದೂರದಲ್ಲಿರುವ ನೆಲ್ಲಿಯಾಂಪತಿ ಒಂದು ಸುಂದರ ಗಿರಿಧಾಮ ಪ್ರದೇಶ. ಇಲ್ಲಿರುವ ಸೀತಾರ ಕುಂಡು ವೀಕ್ಷಣಾ ಕೇಂದ್ರವು ಬಹಳವೆ ಆಕರ್ಷಕವಾಗಿದ್ದು ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ.

ಚಿತ್ರಕೃಪೆ: Kjrajesh

ಚಿತ್ತೂರು

ಚಿತ್ತೂರು

ಚಿತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನೆಲ್ಲಿಯಾಮ್ಪತಿ ಗ್ರಾಮವು ಚಹಾ ಹಾಗೂ ಕಾಫಿ ತೋಟಗಳಿಂದ ಸುತ್ತುವರೆದಿದೆ ಹಾಗೂ ಮಲಯಾಳಂನ ಕೆಲವು ಪ್ರಸಿದ್ಧ ಚಿತ್ರಗಳ ಚಿತ್ರೀಕರಣಗಳೂ ಸಹ ಇಲ್ಲಿ ನಡೆದಿವೆ.

ಚಿತ್ರಕೃಪೆ: Zuhairali

ಪೊನ್ಮುಡಿ

ಪೊನ್ಮುಡಿ

ಮಲಯಾಳಂನಲ್ಲಿ ಪೊನ್ನು ಎಂದರೆ ಬಂಗಾರ ಎಂಬರ್ಥವಿದೆ. ಈ ಆಕರ್ಷಕ ಗಿರಿಧಾಮ ಶೃಂಗವು ಬಂಗಾರದಂತೆ ಮಿಣ ಮಿಣ ಮಿಂಚುವುದರಿಂದ ಇದಕ್ಕೆ ಪೊನ್ಮುಡಿ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Arunelectra

ತಿರುವನಂತಪುರಂ

ತಿರುವನಂತಪುರಂ

ಕೇರಳದ ರಾಜಧಾನಿ ತಿರುವನಂತಪುರಂನಿಂದ 56 ಕಿ.ಮೀ ಗಳಷ್ಟು ದೂರವಿರುವ ಪೊನ್ಮುಡಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಅಪಾರ ಜನಪ್ರೀಯತೆಗಳಿಸಿರುವ ಈ ಗಿರಿಧಾಮ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ತಾಣ.

ಚಿತ್ರಕೃಪೆ: Darshika28

ಸೌಂದರ್ಯರಾಶಿ

ಸೌಂದರ್ಯರಾಶಿ

ಪೊನ್ಮುಡಿಯು ವಿಶೇಷವಾಗಿ ಕಣಿವೆಗಳು ಹಾಗೂ ಬೆಟ್ಟ-ಗುಡ್ಡಗಳಿಂದ ಸುತ್ತುವರೆದಿದ್ದು ಅದ್ಭುತವಾದ ಭೂದೃಶ್ಯಾವಳಿಗಳನ್ನು ನೋಡುಗರಿಗೆ ಕರುಣಿಸುತ್ತದೆ.

ಚಿತ್ರಕೃಪೆ: Kannanz

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X