Search
  • Follow NativePlanet
Share
» »ಇಲ್ಲಿ ಸೂರ್ಯನ ಕಿರಣಗಳು ಮಹಾಲಕ್ಷ್ಮೀ ಪೂಜೆ ಮಾಡುತ್ತವಂತೆ!

ಇಲ್ಲಿ ಸೂರ್ಯನ ಕಿರಣಗಳು ಮಹಾಲಕ್ಷ್ಮೀ ಪೂಜೆ ಮಾಡುತ್ತವಂತೆ!

ಮುಂಬೈಯಿಂದ ಸುಮಾರು 400ಕಿ.ಮೀ ದೂರದಲ್ಲಿರುವ ಕೋಲ್ಹಾಪುರವು ಮಹಾರಾಷ್ಟ್ರದ ಒಂದು ಜಿಲ್ಲೆಯಾಗಿದೆ. ಇದು ಕೋಲ್ಹಾಪುರ ಲಕ್ಷ್ಮೀ ಮಂದಿರಕ್ಕೆ ಪ್ರಸಿದ್ದಿಯಾಗಿದೆ. ಇಲ್ಲಿ ದೇವಿ ಲಕ್ಷ್ಮೀಯನ್ನು ಅಂಬಾಜಿಯ ಹೆಸರಲ್ಲಿ ಪೂಜಿಸಲಾಗುತ್ತದೆ. ಕೋಲ್ಹಾಪುರದ ಇತಿಹಾಸವು ಧರ್ಮಕ್ಕೆ ಸಂಬಂಧಿಸಿದ್ದಾಗಿದೆ. ಇದೇ ಕಾರಣದಿಂದ ಈ ದೇವಸ್ಥಾನವು ಬಹಳ ಮಹತ್ವಪೂರ್ಣವಾಗಿದೆ. ಈ ಮಂದಿರದ ವಿಶೇಷತೆ ಎಂದರೆ ಇಲ್ಲಿ ದೇವಿಯ ಆರಾಧನೆಯನ್ನು ಸೂರ್ಯನ ಕಿರಣಗಳು ಮಾಡುತ್ತವೆ.

ಮಂದಿರ ಇತಿಹಾಸ

ಮಂದಿರ ಇತಿಹಾಸ

PC: wikipedia

ಈ ಮಹಾಲಕ್ಷ್ಮೀ ಮಂದಿರದ ನಿರ್ಮಾಣವನ್ನು ಪ್ರಾಚೀನ ಕಾಲದ ಚಾಲುಕ್ಯ ರಾಜರಿಂದ ಮಾಡಲಾಗಿದ್ದು ಎನ್ನಲಾಗುತ್ತದೆ. 7ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ನಂತರ ಯಾದವರು 9ನೇ ಶತಮಾನದಲ್ಲಿ ಇದನ್ನು ಮುಂದುವರಿಸಿದರು. ಮಂದಿರದ ಮುಖ್ಯ ಗರ್ಭಗೃಹದಲ್ಲಿ ಮಹಾಲಕ್ಷ್ಮೀಯ ಸುಮಾರು 40ಕೆ.ಜಿಯ ಪ್ರತಿಮೆಗಳಿವೆ. ಇದರ ಉದ್ದ ಸುಮಾರು 4 ಫೀಟ್ ಇದೆ. ಈ ಮಂದಿರವು 27000 ವರ್ಗಫೀಟ್‌ನಲ್ಲಿ ವಿಸ್ತರಿಸಿದೆ. ಇದು 35ರಿಂದ 45 ಫೀಟ್ ಎತ್ತರವಿದೆ. ಇಲ್ಲಿನ ಪ್ರತಿಮೆಯು 7000 ವರ್ಷ ಹಳೆಯದು ಎನ್ನಲಾಗುತ್ತದೆ.

ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಹೆರಿಗೆ ಸುಸೂತ್ರವಾಗಿ ನಡೆಯುತ್ತಂತೆ !ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಹೆರಿಗೆ ಸುಸೂತ್ರವಾಗಿ ನಡೆಯುತ್ತಂತೆ !

 ಸೂರ್ಯನ ಕಿರಣದಿಂದ ಲಕ್ಷ್ಮೀಯ ಆರಾಧನೆ

ಸೂರ್ಯನ ಕಿರಣದಿಂದ ಲಕ್ಷ್ಮೀಯ ಆರಾಧನೆ

PC: Dharmadhyaksha

ಈ ಮಂದಿರವು ತನ್ನ ಸೌಂದರ್ಯದ ಜೊತೆಗೆ ವಿಶೇಷ ಪರಂಪರೆಗೂ ಹೆಸರುವಾಸಿಯಾಗಿದೆ. ಇಲ್ಲಿ ದೇವಿಯ ಮೂರ್ತಿಯ ಮೇಲೆ ಸೂರ್ಯನ ಕಿರಣ ಬೀಳುತ್ತದೆ. ಇದನ್ನು ಕಿರಣ ಉತ್ಸವ ಅಥವಾ ಕಿರಣಗಳ ಹಬ್ಬ ಎನ್ನಲಾಗುತ್ತದೆ. ಇದು ಬಹಳ ವಿಶೇಷವಾದದ್ದು ಸೂರ್ಯನ ಕಿರಣಗಳು ದೇವಿಯ ಚರಣದಿಂದ ಇಡೀ ದೇಹವನ್ನು ಸ್ಪರ್ಶಿಸುತ್ತದೆ.

ಕಿಟಕಿ ಮೂಲಕ ಬೀಳುವ ಸೂರ್ಯರಶ್ಮಿ

ಕಿಟಕಿ ಮೂಲಕ ಬೀಳುವ ಸೂರ್ಯರಶ್ಮಿ

ಸಾಮಾನ್ಯವಾಗಿ ದೇವರ ಎಲ್ಲಾ ವಿಗ್ರಹಗಳು ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖಮಾಡಿರುತ್ತದೆ. ಆದರೆ ಇಲ್ಲಿನ ಮೂರ್ತಿಯು ಪಶ್ಚಿಮಕ್ಕೆ ಎದುರಾಗಿದೆ. ತೆರೆದ ಪಶ್ಚಿಮ ಗೋಡೆಯ ಮೇಲೆ ಒಂದು ಸಣ್ಣ ಕಿಟಕಿ ಇದೆ. ವರ್ಷಕ್ಕೊಮ್ಮೆ, ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಕಿರಣಗಳು ಈ ಕಿಟಕಿಯ ಮೂಲಕ ಮೂರ್ತಿಯ ಮುಖದ ಮೇಲೆ ಬೀಳುತ್ತವೆ. ಈ ಅವಧಿಯು ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮೂರು ದಿನಗಳವರೆಗೆ ಇರುತ್ತದೆ. ಈ ಅವಧಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಸೂರ್ಯನ ಸುವರ್ಣ ಕಿರಣಗಳಲ್ಲಿ ದೇವಿಯ ಸುಂದರ ನೋಟವನ್ನು ನೋಡಲು ಮೂರು ದಿನಗಳು ಸಂಜೆಯ ಸಮಯದಲ್ಲಿ ದೇವಸ್ಥಾನದಲ್ಲಿ ಭಕ್ತರು ನೆರೆದಿರುತ್ತಾರೆ.

ನಾಲ್ಕು ಕೈಗಳ ಮಹಾಲಕ್ಷ್ಮೀ

ನಾಲ್ಕು ಕೈಗಳ ಮಹಾಲಕ್ಷ್ಮೀ

PC:Tanmaykelkar

ಶ್ರೀ ಲಕ್ಷ್ಮೀ ಮತ್ತು ಶ್ರೀ ವಿಷ್ಣು ಇಬ್ಬರೂ ಕರ್ವೀರ್ ಪ್ರದೇಶದಲ್ಲಿ ಶಾಶ್ವತವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಪ್ರದೇಶವನ್ನು ಅವಿಮುಕ್ತಕ್ಷೆತ್ರ ಎಂದೂ ಕರೆಯಲಾಗುತ್ತದೆ. ದೇವತೆ ಮಹಾಲಕ್ಷ್ಮಿಯ ದೇವತೆಯನ್ನು ರತ್ನದಿಂದ ಅಲಂಕರಿಸಲ್ಪಟ್ಟಿದೆ. ಈ ವಿಗ್ರಹವನ್ನು ಸುಮಾರು 5000 ರಿಂದ 6000 ವರ್ಷಗಳಷ್ಟು ಹಳೆಯದು ಎಂದು ಪರಿಗಣಿಸಲಾಗಿದೆ. ಇದು ಸುಮಾರು 40 ಕೆ.ಜಿ ತೂಗುತ್ತದೆ. ದೇವತೆಯನ್ನು ಅಲಂಕರಿಸುವ ಅಮೂಲ್ಯ ಕಲ್ಲುಗಳು ದೇವತೆಯ ಪ್ರಾಚೀನತೆಯನ್ನು ಸೂಚಿಸುತ್ತವೆ. ಮಹಾಲಕ್ಷ್ಮಿಯ ಮೂರ್ತಿಯು ನಾಲ್ಕು ಕೈಗಳನ್ನು ಹೊಂದಿದ್ದಾಳೆ.

ಟ್ಯಾಕ್ಸ್‌ ಫ್ರೀ ಡ್ರಿಂಕ್ಸ್, ಬೀಚ್‌ನ್ನು ಹೊರತುಪಡಿಸಿ ಇನ್ನೇನೆಲ್ಲಾ ಇದೆ ಗೋವಾದಲ್ಲಿ ಟ್ಯಾಕ್ಸ್‌ ಫ್ರೀ ಡ್ರಿಂಕ್ಸ್, ಬೀಚ್‌ನ್ನು ಹೊರತುಪಡಿಸಿ ಇನ್ನೇನೆಲ್ಲಾ ಇದೆ ಗೋವಾದಲ್ಲಿ

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Dharmadhyaksha

ಬಸ್ಸುಗಳು
ವೇಗ ಮತ್ತು ವಿಸ್ತಾರವಾದ ರಸ್ತೆ ಜಾಲದ ದೆಸೆಯಿಂದ ಬಸ್ಸುಗಳು ಜನಪ್ರಿಯ ಸಂಚಾರಮಾದ್ಯಮಗಳಾಗಿವೆ. ವಾತಾನುಕೂಲಿತ ಮತ್ತು ಸ್ಲೀಪರ್ ಕೋಚುಗಳನ್ನೊಳಗೊಂಡ ಆರಾಮದಾಯಕ ಖಾಸಗೀ ಬಸ್ಸುಗಳು ಸರಕಾರೀ ಬಸ್ಸುಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ. ನಗರದ ಅನೇಕ ಕಡೆಗಳಲ್ಲಿ ಇತರೆ ರಾಜ್ಯಗಳ ಬಸ್ ನಿಲ್ದಾಣಗಳಿವೆ. ಇಲ್ಲಿಂದಮಹಾರಾಷ್ಟ್ರದ ಇತರ ಎಡೆಗಳಿಗೆ ಅಷ್ಟೇ ಅಲ್ಲದೆ ,ಕರ್ನಾಟಕ,ಗೋವಾಮತ್ತು ಕೆಲವುಆಂಧ್ರ ಪ್ರದೇಶಮತ್ತುತಮಿಳು ನಾಡುರಾಜ್ಯಗಳ ಪ್ರದೇಶಗಳಿಗೂ ನೇರ ಸಂಪರ್ಕವಿದೆ.
ವಿಮಾನ
ನಗರದಿಂದ 13 ಕಿ.ಮೀ ದೂರದಲ್ಲಿರುವ ಉಜಲೈವಾಡಿ ಎಂಬಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿಂದ ಮುಂಬಯಿಗೆ ಏರ್ ಡೆಕ್ಕನಿನ ವಿಮಾನ ನೌಕರ್ಯವಿದೆ . ಒಂದು ಘಂಟೆಯಲ್ಲಿ ನೀವು ತಲುಪಬಹುದು.

ರೈಲು ಮೂಲಕ

ರೈಲು ಮೂಲಕ


ಕೊಲ್ಲಾಪುರ ರೈಲ್ವೇ ನಿಲ್ದಾಣದ ಹೆಸರಿ ಛತ್ರಪತಿ ಶಾಹು ಮಹಾರಾಜ ರೈಲು ನಿಲ್ದಾಣ. 2003ರಲ್ಲಿ ಇದನ್ನು ದಕ್ಷಿಣ ಮಧ್ಯ ರೈಲ್ವೆಯಿಂದ ಮಧ್ಯ ರೈಲ್ವೆಗೆ ವರ್ಗಾವಣೆ ಮಾಡಲಾಯಿತು. ಇಲ್ಲಿಂದ ದಿನಂಪ್ರತಿಮುಂಬಯಿ,ತಿರುಪತಿ,ಪುಣೆ,ಬೆಂಗಳೂರುಮತ್ತುಅಹಮದಾಬಾದುಗಳಿಗೆ ರೈಲುಗಳು ಓಡುತ್ತವೆ. ಕೊಲ್ಲಾಪುರ ಮತ್ತುಮೀರಜ್ನಡುವೆ ಓಡುನ ಇಂಟರ್ ಸಿಟಿ ಶಟಲ್ ಸರ್ವೀಸ್ ಸಹಾ ಇಲ್ಲಿದೆ. ನಿಜಾಮುದ್ದೀನ್ ಎಕ್ಸ್ ಪ್ರೆಸ್ ವಾರಕ್ಕೊಮ್ಮೆ ಇಲ್ಲಿಂದೆದೆಹಲಿಗೆ ಸಂಚರಿಸುತ್ತದೆ.

Read more about: india travel temple maharashtra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X