Search
  • Follow NativePlanet
Share
» »ಸೌತಡ್ಕ ಗಣಪತಿ ; ಇಲ್ಲಿನ ಗಂಟೆಯ ಮಹಿಮೆ ಏನು ಗೊತ್ತಾ?

ಸೌತಡ್ಕ ಗಣಪತಿ ; ಇಲ್ಲಿನ ಗಂಟೆಯ ಮಹಿಮೆ ಏನು ಗೊತ್ತಾ?

ನಮ್ಮ ದೇಶದಲ್ಲಿ ಸಾಕಷ್ಟು ಗಣೇಶನ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಗಣೇಶನ ದೇವಾಲಯವೂ ಒಂದು. ಇದು ಬಹಳ ಪ್ರಭಾವಶಾಲಿ ಹಾಗೂ ಮಹಿಮಾನ್ವಿತ ದೇವಾಲಯವಾಗಿದೆ. ಅದುವೇ ಸೌತಡ್ಕ ಮಹಾಗಣಪತಿ ದೇವಸ್ಥಾನ. ಇದೊಂದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿತಾಣವೂ ಆಗಿದೆ.

ಸೌತಡ್ಕ ಕ್ಷೇತ್ರ

ಸೌತಡ್ಕ ಕ್ಷೇತ್ರ

PC: youtube

ಗೋಪಾಲಕರಿಗೆ ಕಾಡಿನಲ್ಲಿ ಒಂದು ಕಲ್ಲಿನ ಗಣಪತಿ ವಿಗ್ರಹ ಸಿಗುತ್ತದೆ. ಆ ಗಣಪತಿಯನ್ನು ಗೋಪಾಲಕರು ಒಂದು ಸ್ಥಳದಲ್ಲಿ ಕಟ್ಟೆಯ ಮೇಲೆ ಪ್ರತಿಷ್ಠಾಪಿಸುತ್ತಾರೆ. ಆ ಸ್ಥಳವೇ ಇಂದು ಸೌತಡ್ಕ ಕ್ಷೇತ್ರ ಎಂದೆನಿಸಿದೆ.

ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆ

ಸೌತಡ್ಕ ಹೆಸರು ಬಂದಿದ್ದು ಹೇಗೆ?

ಸೌತಡ್ಕ ಹೆಸರು ಬಂದಿದ್ದು ಹೇಗೆ?

PC: youtube

ಗೋಪಾಲಕರು ಸೌತೆಕಾಯಿಯನ್ನು ಸಮರ್ಪಿಸಿದ್ದರಿಂದ ಸೌತಡ್ಕ ಎನ್ನುವ ಹೆಸರು ಬಂದಿತು. ಇಂದಿಗೂ ಕೆಲವರು ಇಲ್ಲಿನ ಗಣೇಶನಿಗೆ ಸೌತೆಕಾಯಿಯನ್ನು ಅರ್ಪಿಸುವ ಆಚರಣೆಯನ್ನು ಕಾಣಬಹುದು.

ಗರ್ಭಗುಡಿ ಇಲ್ಲ

ಗರ್ಭಗುಡಿ ಇಲ್ಲ

PC: youtube

ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ.

ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತ ಇಲ್ಲಿದೆ ನೋಡಿ<br /> ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತ ಇಲ್ಲಿದೆ ನೋಡಿ

ಗಂಟೆಯ ಹರಕೆ

ಗಂಟೆಯ ಹರಕೆ

PC: youtube

ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ ೨ ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು.

ಹರಕೆ ಈಡೇರುತ್ತದೆ

ಹರಕೆ ಈಡೇರುತ್ತದೆ

PC: youtube

ವಿದ್ಯೆ ಕರುಣಿಸಿ ಹೋದವರಿಗೆ ವಿದ್ಯೆ ಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆ ಇದ್ದರೆ ಅದೂ ದೂರವಾಗುತ್ತಂತೆ. ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುತ್ತದೆ ಎನ್ನಲಾಗುತ್ತದೆ. ಮಕ್ಕಳನ್ನು ಅನ್ನಪ್ರಾಶನಕ್ಕೂ ಇಲ್ಲಿಗೆ ಕರೆತರುತ್ತಾರೆ.

ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರುಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು

ಪ್ರಮುಖ ಸೇವೆಗಳು

ಪ್ರಮುಖ ಸೇವೆಗಳು

PC: youtube

ಅಪ್ಪ ಕಜ್ಜಾಯ, ಪಂಚಕಜ್ಜಾಯ, ರಂಗಪೂಜೆ, ಮೂಡಪ್ಪ ಸೇವೆ ಈ ಕ್ಷೇತ್ರದಲ್ಲಿ ನಡೆಯುವು ಸೇವೆಗಳಾಗಿವೆ. ಗೋ ಶಾಲೆಗಳೂ ಇವೆ. ೧೫೦ ರಿಂದ ೨೦೦ ಗೋವುಗಳೂ ಇಲ್ಲಿವೆ. ಯಾವುದೇ ಬೆಲ್ಲ ಅವಲಕ್ಕಿ ಇಲ್ಲಿನ ದೇವರಿಗೆ ನೈವೇದ್ಯ. ದಿನದ ೨೪ ಗಂಟೆಯೂ ತೆರೆದಿರುತ್ತದೆ ಈ ಕ್ಷೇತ್ರ.

 ಚೌತಿ, ಸಂಕಷ್ಟಿ

ಚೌತಿ, ಸಂಕಷ್ಟಿ

PC: youtube

ಸಂಕಷ್ಟಿ ದಿನ ಹಾಗೂ ಚೌತಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿಯ ಗಣೇಶನಿಗೆ ಬಹಳ ಕಾರಣಿಕವಿದ್ದು, ಭಕ್ತರಿಗೆಲ್ಲರಿಗೂ ಒಳ್ಳೆಯದ್ದೇ ಆಗಿದೆ ಎನ್ನುವುದು ಇಲ್ಲಿನ ಭಕ್ತರ ಅನಿಸಿಕೆ.

ಇಲ್ಲಿಗೆ ಹೋದ್ರೆನೇ ಗೊತ್ತಾಗೋದು ಇಲ್ಲಿನ ದಸರಾದ ವೈಭವ<br /> ಇಲ್ಲಿಗೆ ಹೋದ್ರೆನೇ ಗೊತ್ತಾಗೋದು ಇಲ್ಲಿನ ದಸರಾದ ವೈಭವ

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube

ಧರ್ಮಸ್ಥಳದಿಂದ ೧೬ ಕಿ.ಮೀ ದೂರದಲ್ಲಿದೆ ಸೌತಡ್ಕ. ಧರ್ಮಸ್ಥಳಕ್ಕೆ ಹೋಗೋ ಬಸ್‌ಗಳು ಸೌತಡ್ಕಕ್ಕೆ ಹೋಗುತ್ತದೆ. ಸುಬ್ರಹ್ಮಣ್ಯದಿಂದ 45 ಕಿ.ಮೀ, ಮಂಗಳೂರಿನಿಂದ 82 ಕಿ.ಮೀ ಮತ್ತು ಕೊಕ್ಕಡದಿಂದ 2 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ, ಸೌತಡ್ಕವನ್ನು ನೆಲ್ಯಾಡಿ ಮತ್ತು ಧರ್ಮಸ್ಥಳದ ನಡುವೆ ರಸ್ತೆಯ ಮೂಲಕ ಪ್ರವೇಶಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X