Search
  • Follow NativePlanet
Share
» »ಭಾರತದ ಕೆಲವು ಅದ್ಭುತ ನದಿ ಸಂಗಮ ಕ್ಷೇತ್ರಗಳು

ಭಾರತದ ಕೆಲವು ಅದ್ಭುತ ನದಿ ಸಂಗಮ ಕ್ಷೇತ್ರಗಳು

By Vijay

ಹಿಂದು ನಂಬಿಕೆಯಂತೆ ಸಂಗಮ ಸ್ಥಳಗಳು ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿರುವ ಸ್ಥಳಗಳಾಗಿವೆ. ಎರಡು ಅಥವಾ ದಕ್ಕಿಂತ ಹೆಚ್ಚು ನದಿಗಳು ಒಂದೆ ಸ್ಥಳದಲ್ಲಿ ಕೂಡುವ ಸ್ಥಳವನ್ನೆ ಸಂಗಮ ಎಂದು ಹೇಳಲಾಗುತ್ತದೆ ಹಾಗೂ ಹಿಂದುಗಳು ನದಿಗಳನ್ನು ಪೂಜಿಸುವುದರಿಂದ ಈ ಸಂಗಮ ಸ್ಥಳಗಳು ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತವೆ.

ಅಂದವಾಗಿ ಹರಿಯುವ ಕರ್ನಾಟಕದ ಸುಂದರ ನದಿಗಳು

ಭಾರತದಲ್ಲಿ ಹಲವು ಸಂಗಮ ಸ್ಥಳಗಳಿದ್ದು ಅವುಗಳಲ್ಲಿ ಸ್ನಾನ ಮಾಡಿದರೆ, ಮಿಂದರೆ ಎಲ್ಲ ಪಾಪ ಕರ್ಮಗಳು ನಶಿಸಿ, ಮುಕ್ತಿಗೆ ಕಾರಣವಾಗುತ್ತದೆ ಎಂಬ ಅಚಲವಾದ ನಂಬಿಕೆಯಿದ್ದು ಸಾಕಷ್ಟು ಜನರು ಇಂತಹ ಸಂಗಮ ಸ್ಥಳಗಳಿಗೆ ಪ್ರತಿ ವರ್ಷ ಹೋಗುತ್ತಾರೆ. ಹೀಗಾಗಿ ಧಾರ್ಮಿಕ ಪ್ರವಾಸೋದ್ಯಮದ ಪ್ರಮುಖ ಅಂಗವಾಗಿದೆ ಸಂಗಮ ಸ್ಥಳಗಳು.

ಪ್ರಸ್ತುತ ಲೇಖನದಲ್ಲಿ ಧಾರ್ಮಿಕ ಆಕರ್ಷಣೆಯುಳ್ಳ ಕೆಲವು ಪವಿತ್ರ ನದಿಗಳ ಸಂಗಮ ಸ್ಥಳಗಳ ಕುರಿತು ತಿಳಿಸಲಾಗಿದೆ. ಈ ಸಂಗಮಗಳಿಗೆ ಸಾಕಷ್ಟು ಭಕ್ತಾದಿಗಳು, ಪ್ರವಾಸಿಗರು ಭೇಟಿ ನೀಡುತ್ತಾರೆ. ನಿಮಗೂ ಅವಕಾಶ ಲಭಿಸಿದರೆ ಖಂಡಿತವಾಗಿಯೂ ಭೇಟಿ ನೀಡಿ.

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಜಮ್ಮು ಮತ್ತು ಕಾಶ್ಮೀರದ ಲಡಾಖ್ ನಲ್ಲಿರುವ ನಿಮ್ಮು ಎಂಬ ಸ್ಥಳದ ಬಳಿ ಝನ್ಸ್ಕಾರ್ ಹಾಗೂ ಇಂಡಸ್ (ಸಿಂಧು) ನದಿಗಳು ಒಂದಕ್ಕೊಂದು ಸಂಗಮಹೊಂದಿ ಮುಂದೆ ಹರಿಯುತ್ತವೆ. ಎಡದಲ್ಲಿರುವ ಹಸಿರು ಬಣ್ಣದ ನೀರಿನ ನದಿ ಸಿಂಧು ಹಾಗೂ ಬಲಗಡೆಯಿರುವ ನದಿ ಝನ್ಸ್ಕಾರ್ ನದಿ.

ಚಿತ್ರಕೃಪೆ: Russavia

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ತ್ರಿವೇಣಿ ಸಂಗಮ : ಇದು ಭಾರತದಲ್ಲೆ ಹಿಂದುಗಳು ಭೇಟಿ ನೀಡುವ ಪ್ರಮುಖ ಸಂಗಮ ಸ್ಥಳವಾಗಿದೆ. ಈ ಸ್ಥಳದಲ್ಲಿ ಮೂರು ಪವಿತ್ರ ನದಿಗಳು ಸಂಗಮ ಹೊಂದಿರುವ ಕಾರಣವಾಗಿ ಇದನ್ನು ತ್ರಿವೇಣಿ ಸಂಗಮ ಅಥವಾ ಪ್ರಯಾಗ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: Partha Sarathi Sahana

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಇದು ಉತ್ತರ ಪ್ರದೇಶದ ಅಲಹಾಬಾದ್ ಎಂಬಲ್ಲಿದೆ. ಭೌತಿಕವಾಗಿ ಇಲ್ಲಿ ಎರಡು ನದಿಗಳಾದ ಗಂಗಾ ಮತ್ತು ಯಮುನಾಗಳನ್ನು ಕಾಣಬಹುದಾಗಿದ್ದು ಗುಪ್ತರೂಪದಲ್ಲಿ ಸರಸ್ವತಿ ನದಿಯೂ ಇಲ್ಲಿ ಸೇರ್ಪಡೆಗೊಳ್ಳುತ್ತದೆ ಎಂದು ನಂಬಲಾಗಿರುವ ಕಾರಣ ಇದಕ್ಕೆ ತ್ರಿವೇಣಿ ಸಂಗಮ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: ptwo

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳನ್ನು ಹಿಂದುಗಳು ದೇವಿಯ ರೂಪದಲ್ಲಿ ಆರಾಧಿಸುವುದರಿಂದ ಈ ಸಂಗಮವು ಹೆಚ್ಚಿನ ಮಹತ್ವವನ್ನು ಪಡೆದಿದೆ.

ಚಿತ್ರಕೃಪೆ: ptwo

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ವಿಶೇಷವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಪ್ರಪಂಚದ ಅತಿ ದೊಡ್ಡ ಧಾರ್ಮಿಕ ಆಚರಣೆ ಎಂದೆ ಹೇಳಲಾಗುವ ಮಹಾಕುಂಭ ಮೇಳಕ್ಕೆ ಪ್ರಯಾಗ್ ಅಥವಾ ತ್ರಿವೇಣಿ ಸಂಗಮವು ಅತ್ಯಂತ ಪ್ರಖ್ಯಾತವಾಗಿದೆ. ಈ ಸಂದರ್ಭದಲ್ಲಿ ಕೋಟ್ಯಾನುಗಟ್ಟಲೆ ಭಕ್ತರು ಈ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡುತ್ತಾರೆ.

ಚಿತ್ರಕೃಪೆ: Seba Della y Sole Bossio

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಈ ಸಂಗಮ ಸ್ಥಳದಲ್ಲಿ ಸ್ನಾನ ಮಾಡುವುದರಿಂದ ಮನುಷ್ಯನು ತನ್ನ ಪಾಪ ಕರ್ಮಗಳಿಂದ ಮುಕ್ತಿ ಪಡೆಯುವುದಲ್ಲದೆ ಜನನ-ಮರಣಗಳ ಚಕ್ರದಿಂದ ಶಾಶ್ವತವಾಗಿ ಬಿಡುಗಡೆ ಹೊಂದಿ ಪರಮಾತ್ಮನಲ್ಲಿ ಐಕ್ಯನಾಗುತ್ತಾನೆಂದು ನಂಬಲಾಗಿದೆ.

ಚಿತ್ರಕೃಪೆ: Fionn Kidney

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಇಲ್ಲಿ ಗಂಗೆಯು ಸ್ಪಷ್ಟವಾಗಿದ್ದು ಹೆಚ್ಚು ಆಳವನ್ನು ಹೊಂದಿಲ್ಲವಾದರೂ ರಭಸವಾಗಿ ಹರಿಯುತ್ತಾಳೆ. ಆದರೆ ಯಮುನೆಯಿ 40 ಅಡಿಗಳಷ್ಟು ಆಳಹೊಂದಿದ್ದು ಸೌಮ್ಯದಿಂದ ಗಮ್ಗೆಯನ್ನು ಕೂಡುತ್ತಾಳೆ. ಸರಸ್ವತಿ ಕಾಣುವುದಿಲ್ಲವಾದರೂ ನೀರಿನೊಳಗೆ ಆಕೆಯ ಉಪಸ್ಥಿತಿಯನ್ನು ಅನುಭವಿಸಬಹುದೆಂಬುದು ಭಕ್ತರ ಅಭಿಪ್ರಾಯ.

ಚಿತ್ರಕೃಪೆ: Arunawasthi

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಮಳೆಗಾಲದ ಸಮಯದಲ್ಲಿ ಈ ಸಂಗಮಸ್ಥಳದಲ್ಲಿ ಸ್ನಾನ ಮಾಡುವುದು ತುಸು ಕಷ್ಟ ಏಕೆಂದರೆ ನದಿಯ ರಭಸವು ಹೆಚ್ಚಿರುತ್ತದೆ. ಅಲ್ಲದೆ ಈ ಸಂಗಮ ಸ್ಥಳವು ನೀರಿನಲ್ಲಿ ಕೆಲ ಗಜಗಳಷ್ಟು ದೂರವಿರುವುದರಿಂದ ದೋಣಿಗಳ ಮೂಲಕ ಪ್ರವಾಸಿಗರನ್ನು, ಭಕ್ತಾದಿಗಳನ್ನು ಆ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಇಲ್ಲಿ ಭಕ್ತರಿಗೆ ಅನುಕೂಲವಾಗಲೆಂದು ವೇದಿಕೆಯನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Puffino

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಪಂಚ ಪ್ರಯಾಗಗಳು, ಅಲಕನಂದಾ ನದಿಯು ಐದು ವಿವಿಧ ನದಿಗಳೊಂದಿಗೆ ನಿರ್ದಿಷ್ಟ ಸ್ಥಳಗಳಲ್ಲಿ ಸಂಗಮ ಹೊಂದುವ ಸ್ಥಳಗಳಾಗಿವೆ. ಮೊದಲನೇಯದಾಗಿ ವಿಷ್ಣು ಪ್ರಯಾಗ್. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ವಿಷ್ಣುಪ್ರಯಾಗ್ ಕ್ಷೇತ್ರವಿದೆ. ಇಲ್ಲಿ ಅಲಕನಂದಾ ನದಿಯು ಧೌಲಿಗಂಗಾ ನದಿಯೊಂದಿಗೆ ಸಂಗಮ ಹೊಂದಿ ಮುಂದೆ ಸಾಗುತ್ತದೆ. ಈ ಒಂದು ನಿರ್ದಿಷ್ಟ ಹರಿವನ್ನು ವಿಷ್ಣುಗಂಗಾ ಎಂದು ಕರೆಯಲಾಗುತ್ತದೆ ಹಾಗೂ ಪ್ರತೀತಿಯಂತೆ ನಾರದ ಮಹಾಮುನಿಗಳು ಈ ಸಂಗಮ ಸ್ಥಳದಲ್ಲೆ ವಿಷ್ಣು ಕುರಿತು ತಪಸ್ಸು ಮಾಡಿದ್ದರು.

ಚಿತ್ರಕೃಪೆ: Fowler&fowler

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲೆ ನಂದಪ್ರಯಾಗ್ ಎಂಬ ಸ್ಥಳದ ಬಳಿ ಅಲಕನಂದಾ ನದಿಯು ನಂದಾಕಿನಿ ನದಿಯೊಂದಿಗೆ ಸಂಗಮ ಹೊಂದುತ್ತದೆ ಹಾಗೂ ಈ ನಂದಪ್ರಯಾಗವು ಪಂಚ ಪ್ರಯಾಗಗಳಲ್ಲೊಂದಾಗಿದೆ. ಬಂಗಲಿ ಎಂಬ ಗ್ರಾಮದ ಬಳಿ ಈ ಸಮ್ಗಮ ಸ್ಥಳ ಸ್ಥಿತವಿದೆ.

ಚಿತ್ರಕೃಪೆ: Fowler&fowler

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಕರ್ಣಪ್ರಯಾಗ್ ಚಮೋಲಿ ಜಿಲ್ಲೆಯಲ್ಲಿರುವ ಒಂದು ಪವಿತ್ರ ಕ್ಷೇತ್ರ ಹಾಗೂ ಪಟ್ಟಣ. ಇಲ್ಲಿ ಪಿಂಡರ ಹಿಮನದಿಯಿಂದ ಉಗಮಗೊಳ್ಳುವ ಪಿಂಡರ್ ಅಥವಾ ಪಿಂಡರಿ ನದಿಯು ಅಲಕನಂದಾ ನದಿಯೊಂದಿಗೆ ಸಂಗಮ ಹೊಂದುತ್ತದೆ ಹಾಗೂ ಇದು ಪಂಚಪ್ರಯಾಗಗಳಲ್ಲೊಂದಾಗಿದೆ.

ಚಿತ್ರಕೃಪೆ: Mkeranat

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಪ್ರತೀತಿಯಂತೆ ಈ ಸ್ಥಳದಲ್ಲಿಯೆ ಕರ್ಣನು ಸೂರ್ಯನ ಕುರಿತು ತಪಗೈದಿದ್ದ ಹಾಗೂ ಸೂರ್ಯಕವಚ ಪಡೆದಿದ್ದ. ಅಲ್ಲದೆ ಕೃಷ್ಣನಿಂದ ಈ ಒಂದು ಸ್ಥಳದಲ್ಲಿಯೆ ಕರ್ಣನ ಅಂತ್ಯಕ್ರಿಯೆ ವಿಧಿ ವಿಧಾನಗಳು ನಡೆದವು ಎನ್ನಲಾಗುತ್ತದೆ.

ಚಿತ್ರಕೃಪೆ: Fowler&fowler

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ರುದ್ರಪ್ರಯಾಗ್ ಕ್ಷೇತ್ರ ಪಂಚ ಪ್ರಯಾಗಗಳಲ್ಲೊಂದಾಗಿದೆ. ಇಲ್ಲಿ ಅಲಕನಂದಾ ನದಿಯು ಮಂದಾಕಿನಿ ನದಿಯೊಂದಿಗೆ ಸಂಗಮ ಹೊಂದುತ್ತದೆ. ಪ್ರಸಿದ್ಧ ಕೇದಾರನಾಥ ಧಾಮವು ಇಲ್ಲಿಂದ 86 ಕಿ.ಮೀ ಗಳಷ್ಟು ದೂರವಿದೆ.

ಚಿತ್ರಕೃಪೆ: Mukerjee

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಸ್ಥಳ ಪುರಾಣದಂತೆ ಹಿಂದೆ ಇಲ್ಲಿ ನಾರದರು ಸಂಗೀತ ಕಲಿಯುವ ಇಚ್ಛೆಯಿಂದ ಈ ಸ್ಥಳದಲ್ಲಿ ತಪಗೈದು ಅದರಿಂದ ಶಿವನು ಪ್ರಸನ್ನನಾಗಿ ರುದ್ರನ ರೂಪದಲ್ಲಿ ಪ್ರಕಟವಾಗಿ ನಾರದರಿಗೆ ಸಂಗೀತ ಜ್ಞಾನ ಕರುಣಿಸಿದ್ದನಂತೆ. ಹೀಗಾಗಿ ಇದಕ್ಕೆ ರುದ್ರಪ್ರಯಾಗ್ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Fowler&fowler

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಪಂಚಪ್ರಯಾಗಗಳ ಪೈಕಿ ಕೊನೆಯದಾಗಿ ದೇವಪ್ರಯಾಗ್ ಒಂದು ಪವಿತ್ರ ಸಂಗಮವಿರುವ ಸ್ಥಳವಾಗಿದ್ದು ಇಲ್ಲಿ ಅಲಕನಂದಾ ನದಿಯು ಭಾಗೀರತಿ ನದಿಯೊಂದಿಗೆ ಸಂಗಮ ಹೊಂದುತ್ತದೆ. ವಿಶೇಷವೆಂದರೆ ಈ ಸ್ಥಳದಿಂದ ಮುಂದೆ ಈ ನದಿಯೆ ಪವಿತ್ರ ಗಂಗಾ ನದಿಯಾಗಿ ಹೆಸರು ಪಡೆದು ಹರಿಯುತ್ತದೆ. ಹೀಗಾಗಿ ಗಂಗೆಗೆ ಗಂಗಾ ಎಂಬ ಹೆಸರು ದೇವಪ್ರಯಾಗದಿಂದಲೆ ದೊರಕುತ್ತದೆ.

ಚಿತ್ರಕೃಪೆ: Vvnataraj

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಸ್ಥಳ ಪುರಾಣದಂತೆ ದೇವಶರ್ಮಾ ಮುನಿಯು ತಮ್ಮ ತಪೋಜೀವನವನ್ನು ಈ ಸ್ಥಳದಲ್ಲಿ ನಡೆಸಿದ್ದರು. ಹೀಗಾಗಿ ಇದಕ್ಕೆ ದೇವಪ್ರಯಾಗ್ ಎಂಬ ಹೆಸರು ಬಂದಿದೆ. ಅಲ್ಲದೆ ಎರಡು ಪವಿತ್ರ ನದಿಗಳಾದ ಅಲಕನಂದಾ ಹಾಗೂ ಭಾಗೀರತಿಗಳು ಇಲ್ಲಿಯೆ ಭಾರತದ ಅತಿ ಉದ್ದ ಹಾಗೂ ಪವಿತ್ರ ನದಿಯಾದ ಗಂಗೆಗೆ ಜನ್ಮ ನೀಡುವುದರಿಂದ ದೇವಪ್ರಯಾಗ್ ಒಂದು ಪವಿತ್ರ ಸಂಗಮ ಕ್ಷೇತ್ರವಾಗಿ ಆಕರ್ಷಿಸುತ್ತದೆ.

ಚಿತ್ರಕೃಪೆ: wikipedia

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಕೂಡ್ಲಿ : ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಕೂಡ್ಲಿಯು ಒಂದು ಸಂಗಮ ಸ್ಥಳವಾಗಿದ್ದು ಇಲ್ಲಿ ತುಂಗಾ ಹಾಗೂ ಭದ್ರಾ ನದಿಗಳು ಸಂಗಮಗೊಳ್ಳುತ್ತವೆ. ಸಂಗಮ ಹೊಂದುವ ಸ್ಥಳದಲ್ಲಿ ತಟದ ಮೇಲೆ ಪುರಾತನ ರಾಮೇಶ್ವರ ದೇವಸ್ಥಾನವಿದ್ದು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಇಲ್ಲಿಂದ ಸಂಗಮಗೊಂಡ ನದಿಗಳು ಮುಂದೆ ತುಂಗಭದ್ರಾ ನದಿಯಾಗಿ ಹರಿಯುತ್ತದೆ.

ಚಿತ್ರಕೃಪೆ: PP Yoonus

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮವು ತೀರ್ಥ ಕ್ಷೇತ್ರವಾಗಿದ್ದು, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಐಕ್ಯಗೊಂಡ ಪುಣ್ಯ ಸ್ಥಳವಾಗಿದೆ. ಪ್ರವಾಸಿ ಪ್ರಖ್ಯಾತಿಯ ತಾಣವಾದ ಆಲಮಟ್ಟಿ ಆಣೆಕಟ್ಟಿನಿಂದ ಸುಮಾರು 15 ಕಿ.ಮೀ ಗಳಷ್ಟು ದೂರವಿರುವ ಕೂಡಲಸಂಗಮವು ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದ ಸ್ಥಳವಾಗಿದೆ. ನಂತರದಲ್ಲಿ ಈ ಸಂಗಮದ ನದಿಯು ಮುಂದೆ ಆಂಧ್ರದ ಪುಣ್ಯ ಕ್ಷೇತ್ರವಾದ ಶ್ರೀಶೈಲಂ ಕಡೆಗೆ ಹರಿಯುತ್ತದೆ.

ಚಿತ್ರಕೃಪೆ: Mankalmadhu

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಸಂಗಮ : ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ವಂಗರ ಮಂಡಲದಲ್ಲಿರುವ ಈ ಸಂಗಮವು ತ್ರಿವೇಣಿ ಸಮ್ಗಮವಾಗಿದೆ. ಇಲ್ಲಿ ನಾಗವಲಿ, ಸ್ವರ್ಣಮುಖಿ ಹಾಗೂ ವೇಗವತಿ ನದಿಗಳು ಸಂಗಮ ಹೊಂದಿವೆ. ಸಂಗಮೇಶ್ವರನ ಐದು ಪವಿತ್ರ ಶಿವಲಿಂಗಗಳ ಪೈಕಿ ಒಂದಾದ ಶಿವಲಿಂಗವನ್ನು ಇಲ್ಲಿ ಕಾಣಬಹುದು. ನಾಗವಲಿ ನದಿ.

ಚಿತ್ರಕೃಪೆ: Rajasekhar1961

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಸಂಗಮವು ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಆಕರ್ಷಣೆಯಾಗಿದೆ. ಮೈಸೂರಿಗೆ ಬಲು ಹತ್ತಿರವಿದ್ದು ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಶ್ರೀರಂಗಪಟ್ಟಣ ದೊರೆಯುತ್ತದೆ. ಇಲ್ಲಿ ಕಾವೇರಿ, ಕಬಿನಿ ಹಾಗೂ ಹೇಮಾವತಿ ನದಿಗಳು ಸಂಗಮ ಹೊಂದಿದ್ದು ತ್ರಿವೇಣಿ ಸಂಗಮ ಎನಿಸಿಕೊಂಡಿದೆ.

ಚಿತ್ರಕೃಪೆ: Philanthropist 1

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ಇಲ್ಲಿ ಕಾವೇರಿ, ಕಬಿನಿ (ಕಪಿಲಾ) ಹಾಗೂ ಸ್ಫಟಿಕ ಸರೋವರ (ಗುಪ್ತಗಾಮಿನಿ) ಒಂದಕ್ಕೊಂದು ಸಂಗಮಗೊಂಡು ಈ ಕ್ಷೇತ್ರವನ್ನು ಪವಿತ್ರವನ್ನಾಗಿಸಿದೆ. ಇಲ್ಲಿ ಗುಪ್ತಗಾಮಿನಿಯು ರಹಸ್ಯಮಯವಾಗಿದ್ದು ಕಣ್ಣಿಗೆ ಗೋಚರಿಸುವುದಿಲ್ಲ. ಕರ್ನಾಟಕದ ಈ ಒಂದು ಸ್ಥಳದಲ್ಲಿ ಮಾತ್ರವೇ ಈ ರೀತಿಯ ಸಂಗಮವಿದ್ದು ಈ ಕ್ಷೇತ್ರವು ಧಾರ್ಮಿಕವಾಗಿ ಹೆಚ್ಚು ಮಹತ್ವ ಪಡೆದಿದೆ.

ಚಿತ್ರಕೃಪೆ: romana klee

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಬೆಂಗಳೂರಿಗೆ ಹತ್ತಿರದಲ್ಲಿರುವ ಮತ್ತೊಂದು ಸ್ಥಳ ಸಂಗಮ. ಇದು ಪ್ರಸಿದ್ಧ ಪಿಕ್ನಿ ಸ್ಥಳವಾದ ಮೇಕೆದಾಟುವಿನ ಬಳಿಯಿದೆ. ಈ ಸಮ್ಗಮವು ಕಾವೇರಿ ಹಾಗೂ ಅರ್ಕಾವತಿ ನದಿಗಳ ಸಂಗಮವಾಗಿದ್ದು ಆಕರ್ಷಕ ಪ್ರವಾಸಿ ತಾಣವಾಗಿ ಜನರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: ArunCyriac

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಪ್ರೀತಿ ಸಂಗಮ : ಈ ರೀತಿಯ ನದಿಗಳ ಸಂಗಮ ಪ್ರಪಂಚದಲ್ಲೆ ಏಕೈಕವಾಗಿದೆ ಇಲ್ಲಿ ಕೃಷ್ಣಾ ಹಾಗೂ ಕೊಯ್ನಾ ನದಿಗಳು ಆಂಗ್ಲದ "T" ಆಕಾರ ರೂಪಿಸುವಂತೆ ಸಂಗಮಗೊಂಡಿವೆ. ಈ ಆಕಾರದ ವಿಶೇಷವಾಗಿದ್ದು ಎಲ್ಲಿಯೂ ಕಂಡುಬರದು. ಹೀಗಾಗಿ ಇದನ್ನು ಪ್ರೀತಿಯ ಸಂಗಮ ಎಂದು ಕರೆಯುತ್ತಾರೆ. ಇದಿರುವುದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾಡ್ ಎಂಬ ಪಟ್ಟಣದಲ್ಲಿ.

ಚಿತ್ರಕೃಪೆ: Manojvij73

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಭವಾನಿ ಸಂಗಮಂ : ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿರುವ ಭವಾನಿ ಗ್ರಾಮವು ಗುಪ್ತಗಾಮಿನಿಯಾದ ಅಮೃತಾ ನದಿ, ಕಾವೇರಿ ಹಾಗೂ ಭವಾನಿ ನದಿಗಳ ಸಮ್ಗಮ ಸ್ಥಳವಾಗಿದ್ದು ಸಾಕಷ್ಟು ಪ್ರಸಿದ್ಧತೆಯನ್ನುಗಳಿಸಿದೆ. ಇದರ ತಟದಲ್ಲಿ ಸಂಗಮೇಶ್ವರ ಶಿವ ದೇವಾಲಯವಿದ್ದು ಭಕ್ತಾದಿಗಳು ತಮ್ಮವರ ಕೊನೆಯ ವಿಧೊಇ ವಿಧಾನಗಳನ್ನು ಪೂರೈಸಲು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Rsrikanth05

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಭುಂತರ್ ಪಟ್ಟಣವು ಒಂದು ಸಂಗಮ ಸ್ಥಳವಾಗಿದ್ದು ಇಲ್ಲಿ ಬಿಯಾಸ್ ನದಿ ಹಾಗೂ ಪಾರ್ವತಿ ನದಿಗಳು ಸಂಗಮಗೊಳ್ಳುತ್ತವೆ.

ಚಿತ್ರಕೃಪೆ: Biswarup Ganguly

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಭಾರತ-ನೇಪಾಳ ಪ್ರತ್ಯೇಕಿಸುವ ಮಹಾಕಾಳಿ (ಶಾರದಾ ಎಂದೂ ಕರೆಯಲ್ಪಡುತ್ತದೆ) ಹಾಗೂ ಕರ್ನಾಲಿ ನದಿಗಳು ಉತ್ತರ ಪ್ರದೇಶ ರಾಜ್ಯದ ಬಹರಾಯಿಚ್ ಜಿಲ್ಲೆಯಲ್ಲಿ ಸಂಗಮಹೊಂದಿ ಸರಯು ನದಿಯಾಗಿ ಮುಂದೆ ಹರಿಯುತ್ತದೆ. ರಾಮಜನ್ಮ ಭೂಮಿ ಇದೆ ನದಿ ತಟದಲ್ಲಿ ಹಿರಿದಿರುವುದರಿಂದ ಈ ನದಿ ರುಪಗೊಳ್ಳುವ ಸಂಗಮ ಸ್ಥಳಕ್ಕೆ ಹೆಚ್ಚಿನ ಮಹತ್ವವಿದೆ.

ಚಿತ್ರಕೃಪೆ: Raama

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ತುಲಾಪುರ ಐತಿಹಾಸಿಕ ಮಹತ್ವವುಳ್ಳ ಸ್ಥಳವಾಗಿದ್ದು ಭೀಮಾ ಹಾಗೂ ಇಂದ್ರಯಾಣಿ ನದಿಗಳ ಸಂಗಮ ಸ್ಥಳವಾಗಿದೆ.

ಚಿತ್ರಕೃಪೆ: Shrads1984

ಭಾತರದ ಪವಿತ್ರ ಸಂಗಮಗಳು:

ಭಾತರದ ಪವಿತ್ರ ಸಂಗಮಗಳು:

ಮುತ್ತಾರ್ ಸಂಗಮ : ಅಲ್ಲೆಪ್ಪಿ ಅಥವಾ ಅಲಪುಳಾ ಜಿಲ್ಲೆಯ ತಿರುವಲ್ಲಾ ಬಳಿಯ ಮುತ್ತಾರ್ ಎಂಬ ಸ್ಥಳದಲ್ಲಿ ಮನಿಮಲ ನದಿಯು ಪ್ರಸಿದ್ಧ ಪಂಬಾ ನದಿಯೊಂದಿಗೆ ಸಂಗಮಹೊಂದುತ್ತದೆ.ಮನಿಮಲ ನದಿ.

ಚಿತ್ರಕೃಪೆ: Praveenp

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X