Search
  • Follow NativePlanet
Share
» »ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!

ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!

ಇದಕ್ಕಾಗಿ ಕೆಲವು ಪ್ರಯಾಣ ಸಲಹೆಗಳು

ವಿಶ್ವದ ಮೂಲೆ ಮೂಲೆಗಳನ್ನು ಪ್ರಯಾಣಿಸುವುದು ಅತ್ಯಂತ ಕುತೂಹಲಕಾರಿ ಮತ್ತು ವಿಶ್ರಂತಿದಾಯಕ ಎನಿಸಬಹುದು ಆದರೆ ಅಸ್ತಮಾ ರೋಗಿಗಳಿಗೆ ಇದೊಂದು ಸವಾಲಾಗಬಹುದು. ಅದೃಷ್ಟಾವಶತ್ ನಿಮ್ಮ ಪ್ರಯಾಣವನ್ನು ನೀವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲವು ವಿಧಾನಗಳ ಮೂಲಕ ಸುಲಭಗೊಳಿಸಬಹುದಾಗಿದೆ.

ಅಸ್ತಮಾ ರೋಗಿಗಳ ವಿಷಯಕ್ಕೆ ಬಂದಾಗ ಅವರು ತಮ್ಮೊಂದಿಗೆ ಕೆಲವು ಅಗತ್ಯದ ಸಾಮಾನುಗಳ ಬ್ಯಾಗುಗಳನ್ನು ತಮ್ಮೊಂದಿಗೆ ಒಯ್ಯುವುದು ಸುರಕ್ಷತೆಯ ಹಾಗೂ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದ್ದು ನಿಮ್ಮ ಪ್ರವಾಸವನ್ನು ಸುಲಭ ರೀತಿಯಲ್ಲಿ ಮುಂದುವರೆಸಲು ಅನುಕೂಲವಾಗುತ್ತದೆ.

ಅಸ್ತಮಾ ರೋಗವಿರುವ ಪ್ರಯಾಣಿಕರಿಗಾಗಿ ಬೇಕಾಗುವ ಕೆಲವು ಸಲಹೆಗಳು ಇಲ್ಲಿವೆ

ಎಲ್ಲಕ್ಕಿಂತ ಮೊದಲನೆಯದಾಗಿ ಪ್ರಯಾಣಿಸುವ ಮೊದಲು ನೀವು ತಪಾಸಣೆಗೆ ಒಳಗಾಗಿ ಅಗತ್ಯವಿರುವ ಔಷಧಗಳನ್ನು ಪಡೆದುಕೊಳ್ಳಬೇಕು

ನೀವು ಮನೆಯಿಂದ ಹೊರಡುವ ಮೊದಲು ಅಸ್ತಮಾದ ಲಕ್ಷಣಗಳನ್ನು ತಿಳಿದುಕೊಳ್ಳಿ. ನಿಮಗೆ ಆಸ್ತಮಾ ಇದ್ದರೆ, ನಿಮ್ಮ ವೈದ್ಯರು ನಿಮಗೆ ರಜೆಯ ಮೇಲೆ ಹೋಗಲು ಹಸಿರು ನಿಶಾನೆ ಅಥವಾ ಅನುಮತಿ ನೀಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಪ್ರವಾಸದಲ್ಲಿರುವಾಗ ಇನ್ನೊಂದು ಪ್ರಯಾಣಿಕರನ್ನು ನೋಡುವ ಸಲುವಾಗಿ ಓಡಬಾರದು ನಿಮ್ಮ ದೇಹವನ್ನು ಸರಿಹೊಂದಿಸಲು ಸಮಯವನ್ನು ನೀಡಿ ಮತ್ತು ನಿಧಾನವಾಗಿ ಪ್ರಾರಂಭಿಸಿ ಯಾವಾಗಲೂ ಕಡಿಮೆ ಒತ್ತಡದಲ್ಲಿರಿ. ನೀವು ಪ್ರವಾಸಕ್ಕೆ ಹೊರಡುವಾಗ ನಿಮ್ಮ ತುರ್ತು ಸಮಯಕ್ಕೆ ಸಹಾಯವಾಗುವಂತೆ ನಿಮಗೆ ಹತ್ತಿರದವರು ಕುಟುಂಬ/ಸ್ನೇಹಿತರ ಸಂಪರ್ಕಿಸಬಹುದಾದ ವಿವರಗಳ ಪಟ್ಟಿಯನ್ನು ಜೊತೆಯಲ್ಲಿರಿಸಿಕೊಳ್ಳಿ .

ಅಂತಿಮವಾಗಿ, ಆಸ್ತಮಾ ರೋಗಿಗಳಿಗೆ ಅವರು ಹೋದಲ್ಲೆಲ್ಲಾ ತಮ್ಮ ಇನ್ಹೇಲರ್‌ಗಳನ್ನು ಕೊಂಡೊಯ್ಯುವುದು ಮಾತ್ರವಲ್ಲದೆ ಅವರ ಪರಿಸ್ಥಿತಿಗಳಿಗೆ ಅಗತ್ಯವಾದ ಯಾವುದೇ ತುರ್ತು ಔಷಧಿಗಳನ್ನು ಕೊಂಡೊಯ್ಯುವುದು ಮುಖ್ಯವಾಗಿದೆ.

ಅಸ್ತಮಾ ಇರುವ ಪ್ರಯಾಣಿಕರಿಗೆ ಹೆಚ್ಚು ಅಪಾಯಕಾರಿ ಸ್ಥಳವೆಂದರೆ ಅತ್ಯಂತ ಎತ್ತರ ಪ್ರದೇಶಗಳು ಮತ್ತು ನಗರಗಳು. ಈ ಸ್ಥಳಗಳಲ್ಲಿ ಗಾಳಿಯ ಒತ್ತಡ ಕಡಿಮೆ ಇದ್ದು ಇದು ಸಮುದ್ರ ಮಟ್ಟಕ್ಕಿಂತ ಅರ್ಧದಷ್ಟಿರುತ್ತದೆ ಆದ್ದರಿಂದ ನೀವು ಅಸ್ತಮಾದಿಂದ ಬಳಲುತ್ತಿದ್ದು, ಯಾವುದೇ ಔಷಧಗಳನ್ನೂ ತೆಗೆದುಕೊಳ್ಳುತ್ತಿಲ್ಲವಾದಲ್ಲಿ, ಇಲ್ಲಿ ನಿಮಗೆ ಉಸಿರಾಡುವುದು ಹೆಚ್ಚು ಕಷ್ಟವಾಗಬಹುದು. ಇದಕ್ಕೆ ಪೂರಕವೆಂಬಂತೆ ನೀವು ಸಮುದ್ರ ಮಟ್ಟಕ್ಕಿಂತ ಎತ್ತರದ ಪ್ರದೇಶಕ್ಕೆ ಹೋದ ಹಾಗೆ ಗಾಳಿಯು ತೆಳುವಾಗುತ್ತಾ ಹೋಗುತ್ತದೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಮತ್ತು ಪ್ರವಾಸದಲ್ಲಿ ನಿಮಗೆ ತೊಂದರೆಯಾಗಬಹುದು.

ಭಾರತದಲ್ಲಿ ಕೆಲವು ಜಾಗಗಳು ಅಸ್ತಮ ಇರುವವರಿಗೆ ಸ್ವಲ್ಪ ಮಟ್ಟದಲ್ಲಿ ಅಪಾಯಕಾರಿ ಆಗಬಹುದು ಅಂತಹ ಸ್ಥಳಗಳ ಪಟ್ಟಿ ಈ ಕೆಳಗಿದೆ

ಲಡಾಖ್

ಲಡಾಖ್

ಲಡಾಖ್ ಹಿಮಾಲಯದಲ್ಲಿದ್ದು, ಹಿಮಾಲಯವು ಎತ್ತರ ಮತ್ತು ತಣ್ಣಗಿನ ಹವಾಮಾನ ದೊಡ್ಡ ಶ್ರೇಣಿಯನ್ನು ಹೊಂದಿದೆ. ಅದಕ್ಕಾಗಿಯೇ ಅಸ್ತಮಾದಿಂದ ಬಳಲುತ್ತಿರುವ ಜನರು ಈ ಸ್ಥಳಗಳಿಗೆ ಪ್ರಯಾಣಿಸುವಾಗ ಅಪಾಯಕ್ಕೆ ಒಳಗಾಗಬಹುದು. ಕೆಂಪಗಿನ ರಸ್ತೆಗಳು, ಹೆಚ್ಚಿನ ಎತ್ತರದ ಜೊತೆಗೆ ಲಡಾಖ್‌ನ ತಣ್ಣನೆಯ ಹವಾಮಾನವು ಅಸ್ತಮಾ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತದೆ. ನೀವು ಆಸ್ತಮಾ ಅಥವಾ ಇತರ ಯಾವುದೇ ಉಸಿರಾಟದ ಸಮಸ್ಯೆಯನ್ನು ಹೊಂದಿದ್ದರೆ, ನೀವು ಲಡಾಖ್‌ಗೆ ಪ್ರಯಾಣಿಸುವುದನ್ನು ತಡೆಯಲು ಶಿಫಾರಸು ಮಾಡಲಾಗಿದೆ ಏಕೆಂದರೆ ಇದು ಎತ್ತರದಲ್ಲಿರುವುದರಿಂದ ಇಲ್ಲಿ ತೆಳುವಾದ ಗಾಳಿಯ ಬೀಸುವ ಕಾರಣದಿಂದಾಗಿ ನಿಮ್ಮರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.

 ಸಿಕ್ಕಿಂ

ಸಿಕ್ಕಿಂ

ಸಿಕ್ಕಿಂ ನ ಉತ್ತರ ಭಾಗವು ಖಂಡಿತವಾಗಿಯೂ ಅಸ್ತಮ ಇರುವ ಪ್ರವಾಸಿಗರಿಗೆ ಸೂಕ್ತವಾದ ಸ್ಥಳವಲ್ಲ. ಯಾವುದೇ ಆಸ್ಪತ್ರೆಗಳು ಅಥವಾ ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲದ ಭಾರತದ ಇದು ಅತ್ಯುನ್ನತ ಮತ್ತು ದೂರದ ಸ್ಥಳಗಳಲ್ಲಿ ಒಂದಾಗಿದೆ, ಆದ್ದರಿಂದ ನಿಮ್ಮ ಆರೋಗ್ಯಕ್ಕೆ ಯೊಗ್ಯವೆಂದುಈ ಸ್ಥಳವನ್ನು ಶಿಫಾರಸು ಮಾಡುವುದಿಲ್ಲ. ಸಿಕ್ಕಿಂ ರಾಜ್ಯದಾದ್ಯಂತ ಸಮ್ಮೋಹನಗೊಳಿಸುವ ಸೌಂದರ್ಯವನ್ನು ನೀಡುವುದರಿಂದ ನೀವು ಕಡಿಮೆ ಕಷ್ಟದಲ್ಲಿ ಪ್ರಯಾಣಿಸಬಹುದಾದ ಅನೇಕ ಇತರ ಸ್ಥಳಗಳನ್ನು ಹೊಂದಿದೆ ಆದ್ದರಿಂದ ಕಷ್ಟಕರ ಎನಿಸುವಂತಹ ಸ್ಥಳಗಳಿಗೆ ಭೇಟಿ ಕೊಡದೇ ಇರುವುದು ಸೂಕ್ತ.

ಸ್ಪಿತಿ ಕಣಿವೆ

ಸ್ಪಿತಿ ಕಣಿವೆ

ಸ್ಪಿತಿ ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 2745 ಮೀಟರ್ ಎತ್ತರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಕಣಿವೆಯು ತನ್ನ ನೈಸರ್ಗಿಕ ಸೌಂದರ್ಯತೆಗೆ ಹೆಸರುವಾಸಿಯಾಗಿದೆ ಆದುದರಿಂಡ ಈ ಸ್ಥಳವು ಭಾರತದ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಆದರೂ ಇಲ್ಲಿ ಭೇಟಿ ನೀಡುವ ಮೊದಲು ಅಸ್ತಮಾ ರೋಗಿಗಳು ಪರಿಗಣನೆಗೆ ತೆಗೆದುಕೊಳ್ಳಬೇಕಾದ ಕೆಲವು ಅಂಶಗಳಿವೆ. ನಿಮ್ಮ ವೈದ್ಯರ ಸಲಹೆಯನ್ನು ತೆಗೆದುಕೊಂಡ ನಂತರ, ನೀವು ಸರಿಯಾಗಿ ತಯಾರಾಗದಿದ್ದರೆ ಶೀತದ ಪ್ರಭಾವವು ನಿಮ್ಮ ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನೀವು ಆಸ್ತಮಾ ಅಥವಾ ಇತರ ಉಸಿರಾಟದ ಪರಿಸ್ಥಿತಿಗಳನ್ನು ಹೊಂದಿದ್ದರೆ ನೀವು ಪದರಗಳಿರುವ ಬಟ್ಟೆಗಳನ್ನು ಧರಿಸಬೇಕು ಮತ್ತು ನಿಮ್ಮೊಂದಿಗೆ ಇನ್ಹೇಲರ್ ಅನ್ನು ತರಲು ಮರೆಯಬಾರದು.

 ಡಾರ್ಜಿಲಿಂಗ್

ಡಾರ್ಜಿಲಿಂಗ್

ಡಾರ್ಜಿಲಿಂಗ್, ಇನ್ನೊಂದು ಕಡೆಯಿಂದ ಅತೀ ಎತ್ತರದ ತಾಣವಾಗಿದ್ದು ಇಲ್ಲಿಗೂ ಕೂಡಾ ಅಸ್ತಮವಿರುವ ಪ್ರಯಾಣಿಕರು ಪ್ರಯಾಣಿಸುವುದು ಅಷ್ಟು ಹಿತಕರವಲ್ಲ. ಜಗತ್ತಿನ ಮೂರನೇ ಅತಿ ದೊಡ್ಡ ಪರ್ವತವಾದ ಕಾಂಚನಜುಂಗಕ್ಕೆ ಡಾರ್ಜಿಲಿಂಗ್ ನೆಲೆಯಾಗಿದೆ. ನೀವು ಅಥವಾ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಯಾರಾದರೂ ಉಸಿರಾಟದ ಸಮಸ್ಯೆಗಳನ್ನು ಹೊಂದಿದ್ದರೆ ಕಾಂಚನಜುಂಗಾ ಬೇಸ್ ಕ್ಯಾಂಪ್ ಟ್ರೆಕ್ ಹೋಗುವುದನ್ನು ಮರುಪರಿಶೀಲಿಸಬೇಕು ಮತ್ತು ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಪಹಲ್ಗಾಮ್

ಪಹಲ್ಗಾಮ್

ಕಾಶ್ಮೀರದ ಅತ್ಯಂತ ಪ್ರಸಿದ್ದ ಗಿರಿಧಾಮಗಳಲ್ಲಿ ಪಹಲ್ಗಾಮ್ ಕೂಡ ಒಂದಾಗಿದ್ದು, ಇದು ಮನಮೋಹಕ ನೋಟ ಮತ್ತು ಎಲ್ಲಾ ಕಡೆಯಲ್ಲೂ ಸೌಂದರ್ಯತೆಯಿಂದ ಕೂಡಿದೆ. ಪಹಲ್ಗಾಮ್ 2740 ಮೀ ಎತ್ತರವನ್ನು ಹೊಂದಿದ್ದು, ಆಸ್ತಮಾ ಪ್ರಯಾಣಿಕರಿಗೆ ಈ ತಾಣವನ್ನು ಸುಲಭವಾಗಿ ಭೇಟಿ ಮಾಡಲು ಸ್ವಲ್ಪ ಕಷ್ಟವೆನ್ನಬಹುದು. ಇದು ಅಮರನಾಥ ಯಾತ್ರಾ ಯಾತ್ರೆಯ ಆರಂಭದ ಹಂತವೂ ಹೌದು. ನಿಮ್ಮ ಆಸ್ತಮಾ ಪರಿಸ್ಥಿತಿಗಳು ಅಂತಹ ಎತ್ತರಕ್ಕೆ ಪ್ರಯಾಣಿಸುವುದಕ್ಕೆ ಬೆಂಬಲಿಸದೇ ಇರಬಹುದು ಆದುದರಿಂದ ಇಲ್ಲಿ ಪ್ರಯಾಣಿಸುವ ಮೊದಲು ಇಲ್ಲಿ ಅಪಾಯವಾಗಬಹುದೇ? ಎಂದು ಯಾವಾಗಲೂ ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.

ಅಂತಿಮವಾಗಿ ಹೇಳಬೇಕೆಂದರೆ ನಾವು ಎಲ್ಲರೂ ಒಬ್ಬ ಪ್ರಯಾಣಿಕರಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಪ್ರಯಾಣಿಸುವುದು ತಪ್ಪಲ್ಲ ಆದರೆ ನಿಮ್ಮ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕನುಗುಣವಾಗಿ ಉತ್ತಮ ಸ್ಥಳವನ್ನು ಆಯ್ಕೆ ಮಾಡಿ ಭಾರತದ ಈ ಮೇಲಿನ ಐದು ಸ್ಥಳಗಳ ಹೊರತಾಗಿಯೂ ಇಲ್ಲಿ ಸಮುದ್ರ ಮಟ್ಟಕ್ಕಿಂತ ಅತ್ಯಂತ ಎತ್ತರದಲ್ಲಿರುವ ಹಲವಾರು ಸ್ಥಳಗಳಿದ್ದು ಇಲ್ಲಿಯೂ ಸಹ ಗಾಳಿಯು ತೆಳುವಾಗಿದ್ದು ಇವುಗಳು ಅಸ್ತಮ ರೋಗಿಗಳಿಗೆ ಅನುಕೂಲಕರವಲ್ಲದ ಸ್ಥಳಗಳಾಗಿರುತ್ತವೆ. ನೀವು ಎತ್ತರಕ್ಕೆ ಏರಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ನೀವು ಪ್ರಯಾಣವನ್ನು ಅಥವಾ ಪ್ರವಾಸವನ್ನು ನಿಲ್ಲಿಸಬೇಕು ಎಂದು ಇದರ ಅರ್ಥವಲ್ಲ. ಸಹಜವಾಗಿ, ನೀವು ಪ್ರವಾಸ ಮಾಡಬಹುದು, ಪ್ರಯಾಣವು ಇನ್ನೂ ಹೆಚ್ಚಿನ ಮಟ್ಟದಲ್ಲಿಚಾಲ್ತಿಯಲ್ಲಿರುವ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯ ಎನ್ನಬಹುದು. ಆದ್ದರಿಂದ ನಿಮ್ಮ ಶ್ವಾಸಕೋಶಕ್ಕೆ ಸ್ನೇಹಿಯಾಗಿರುವ ಸ್ಥಳಗಳನ್ನು ಹುಡುಕಿ ಮತ್ತು ಜಗತ್ತನ್ನು ಅನ್ವೇಷಿಸಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X