Search
  • Follow NativePlanet
Share
» »ಮಲಗಿರುವ ಹನುಮನಿಗೆ ಕುಂಕುಮದ ಲೇಪ ಹಚ್ಚಿದ್ರೆ ಇಷ್ಟ ಈಡೇರುತ್ತಂತೆ!

ಮಲಗಿರುವ ಹನುಮನಿಗೆ ಕುಂಕುಮದ ಲೇಪ ಹಚ್ಚಿದ್ರೆ ಇಷ್ಟ ಈಡೇರುತ್ತಂತೆ!

ಹನುಮಾನ್‍ನನ್ನು ಕಲಿಯುಗದ ಜೀವಂತ ದೇವರು ಎನ್ನಲಾಗುತ್ತದೆ. ಭಾರತದಾದ್ಯಂತ ಅನೇಕ ಹನುಮಂತನ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ಮಂದಿರಗಳಿಗೆ ಅವುಗಳದ್ದೇ ಆದ ವಿಶೇಷತೆಗಳಿವೆ. ಹನುಮಂತನ ದರ್ಶನ ಪಡೆಯಲು ಸಾವಿರಾರು ಭಕ್ತರು ಹನುಮಂತನ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಇಲ್ಲಿ ಗಂಗಾ, ಯಮುನಾ , ಸರಸ್ವತಿ ಈ ಮೂರು ನದಿಗಳು ಕೂಡುವ ಸ್ಥಳವಿದೆ.ಹಾಗಾಗಿ ಇದನ್ನು ತ್ರಿವೇಣಿ ಸಂಗಮ ಎಂದು ಕರೆಯುತ್ತಾರೆ. ಈ ನದಿಯಲ್ಲಿ ಸ್ನಾನ ಮಾಡಿದರೆ ನಿಮ್ಮ ಪಾಪಗಳೆಲ್ಲಾ ತೊಳೆದುಹೋಗುತ್ತದೆ ಎನ್ನಲಾಗುತ್ತದೆ.

ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...

ಎಲ್ಲಿದೆ ಈ ದೇವಸ್ಥಾನ ?

ಎಲ್ಲಿದೆ ಈ ದೇವಸ್ಥಾನ ?

PC: youtube

ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಹನುಮಂತನ ದೇವಸ್ಥಾನವಿದೆ. ಇದನ್ನು ಬಡೇ ಹನುಮಾನ್ ಎನ್ನುತ್ತಾರೆ. ಈ ಹನುಮಾನ್ ಮಂದಿರವು ಹಿಂದೂಗಳ ಒಂದು ಪುಣ್ಯಕ್ಷೇತ್ರವಾಗಿದೆ. ಸಾಕಷ್ಟು ಭಕ್ತರು ಇಲ್ಲಿ ಬಂದು ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತಾರೆ.

ಮಲಗಿರುವ ಹನುಮನ್ ಮಂದಿರ

ಮಲಗಿರುವ ಹನುಮನ್ ಮಂದಿರ

PC: youtube

ಇಲ್ಲಿನ ಹನುಮಂತನ ಮೂರ್ತಿಯು ಮಲಗಿರುವ ರೀತಿಯಲ್ಲಿದೆ. ಇಡೀ ಭಾರತದಲ್ಲಿ ಬೇರೆಲ್ಲೂ ಹನುಮಂತನ ಮಲಗಿರುವ ಮೂರ್ತಿ ಇಲ್ಲ. ಈ ಮೂರ್ತಿಯು ಸುಮಾರು 20 ಫೀಟ್ ಉದ್ದವಿದೆ. ಗಂಗೆಯ ನೀರು ಹನುಮಾನ್‍ನ ಪಾದವನ್ನು ಮುಟ್ಟುವಷ್ಟು ಮೇಲಕ್ಕೆ ನೀರು ಬರುತ್ತದೆ.

ಇಲ್ಲಿಯ ಹನುಮ ಮಲಗಿರುವುದೇಕೆ?

ಇಲ್ಲಿಯ ಹನುಮ ಮಲಗಿರುವುದೇಕೆ?

PC: youtube

ಧಾರ್ಮಿಕ ಪುರಾಣದ ಪ್ರಕಾರ ರಾವಣನ ಜೊತೆಗಿನ ಲಂಕಾ ಯುದ್ಧದಲ್ಲಿ ಹನುಮಂತ ಸುಸ್ತಾಗಿದ್ದನಂತೆ. ಯುದ್ಧ ಮುಗಿದ ನಂತರ ಶ್ರೀರಾಮನ ಜೊತೆ ಮರಳಿ ಬಂದ ಹನುಮ ಇಲ್ಲಿ ಬಂದು ಮಲಗಿದನಂತೆ.

ಕುಂಕುಮದ ಲೇಪ

ಕುಂಕುಮದ ಲೇಪ

PC: youtube

ಹನುಮನನ್ನು ಇಷ್ಟೊಂದು ನಿಶ್ಯಕ್ತವಾಗಿರುವುದನ್ನು ನೋಡಿದ ಸೀತೆ ಕುಂಕುಮದ ಲೇಪ ಮಾಡಿ ಹನುಮಾನಿಗೆ ಹಚ್ಚಿದಳಂತೆ. ಅಂದಿನಿಂದ ಈ ದೇವಸ್ಥಾನದಲ್ಲಿ ಯಾರೇ ಬಂದು ಹನುಮನಿಗೆ ಕುಂಕುಮದ ಲೇಪ ಹಾಕಿದರೆ ಅವರ ಮನೋಕಾಮನೆಗಳೆಲ್ಲಾ ಈಡೇರುವುದು ಎಂದು ನಂಬಲಾಗಿದೆ.

ಭೇಟಿಗೆ ಉತ್ತಮ ಸಮಯ

ಭೇಟಿಗೆ ಉತ್ತಮ ಸಮಯ

ಗಂಗಾ, ಯಮುನಾ ಸರಸ್ವತಿ ನದಿಯು ಅಲಹಾಬಾದ್‍ನ್ನು ಒಂದು ಪ್ರಮುಖ ಪ್ರವಾಸಿ ತಾಣವಾಗಿಸಿದೆ. ಅಕ್ಟೋಬರ್‍ನಿಂದ ಫೆಬ್ರವರಿ ಅಲಹಬಾದ್‍ಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಇಲ್ಲಿನ ಮಲಗಿರುವ ಹನುಮಾನ್ ಮಂದಿರವು ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X