Search
  • Follow NativePlanet
Share
» »ಪಕ್ಷಿಗಳಂತೆ ಹಾರಾಡುವ ಆಸೆಯಿದೆಯೇ? ಹಾಗಾದ್ರೆ ಇಲ್ಲಿವೆ ಭಾರತದ ಅತ್ಯುತ್ತಮ ಸ್ಕೈಡೈವಿಂಗ್ ತಾಣಗಳು

ಪಕ್ಷಿಗಳಂತೆ ಹಾರಾಡುವ ಆಸೆಯಿದೆಯೇ? ಹಾಗಾದ್ರೆ ಇಲ್ಲಿವೆ ಭಾರತದ ಅತ್ಯುತ್ತಮ ಸ್ಕೈಡೈವಿಂಗ್ ತಾಣಗಳು

ಸ್ಕೈಡೈವಿಂಗ್ ಅನುಭವವು ಖಂಡಿತವಾಗಿಯೂ ದುರ್ಬಲ ಹೃದಯದವರಿಗೆ ಅಲ್ಲ. ಇದು ಧೈರ್ಯವುಳ್ಳವರು ಮಾಡಬಹುದಾದ ಸಾಹಸ ಕ್ರಿಯೆಯಾಗಿದ್ದು ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ಆದ್ದರಿಂದ, ನೀವು ನಿಜವಾಗಿಯೂ ಈ ಸಾಹಸ ಕ್ರಿಯೆಯನ್ನು ಪ್ರಯತ್ನಿಸಲು ಬಯಸಿದರೆ, ಈ ವಾಯು-ಸಾಹಸ ಚಟುವಟಿಕೆಯ ಮೂಲಕ ಆಕಾಶದಿಂದ ಸ್ವರ್ಗದ ಸ್ಥಳಗಳನ್ನು ಅನ್ವೇಷಿಸಿಬಹುದು. ಈ ಸಾಹಸ ಕ್ರಿಯೆಯನ್ನು ಅನುಭವಿಸಲು ಎಲ್ಲಿಗೆ ಹೋಗಬೇಕೆಂದು ಯೋಚಿಸುತ್ತಿದ್ದೀರಾ? ಈ ಲೇಖನದಲ್ಲಿ ಸ್ಕೈಡೈವ್ ಮಾಡಲು ಭಾರತದಲ್ಲಿ ಇರುವ ಉತ್ತಮ ಸ್ಥಳಗಳ ಪಟ್ಟಿ ಮಾಡಿದ್ದೇವೆ ನೋಡಿ.

1. ಪುದುಚೇರಿ

1. ಪುದುಚೇರಿ

PC: Laura Hadden

ನೀವು ಸಾಹಸಪ್ರಿಯರಾಗಿದ್ದರೆ ಈಗಲೇ ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಪುದುಚೇರಿಗೆ ಹೋರಾಡಿ. ಈ ಕೇಂದ್ರಾಡಳಿತ ಪ್ರದೇಶವು ಬೆರಗುಗೊಳಿಸುವ ಸಮುದ್ರ ಕಡಲತೀರಗಳನ್ನು ಹೊಂದಿರುವುದು ಮಾತ್ರವಲ್ಲದೆ ಸ್ಕೈಡೈವಿಂಗ್‌ಗೆ ನೆಲೆಯಾಗಿದೆ, ಇದು ಸ್ಥಿರ ರೇಖೆ ಮತ್ತು ಟಂಡೆಮ್ ಜಂಪ್ ರೂಪಗಳಲ್ಲಿ ಲಭ್ಯವಿದೆ. ವಿಶಾಲ ಸಾಗರದ ಜೊತೆಗೆ ಪಾಂಡಿಚೆರಿಯ ಅದ್ಭುತ ಭೂದೃಶ್ಯದ ನೋಟವನ್ನು ಇದು ನಿಮಗೆ ನೀಡುತ್ತದೆ.

2. ಧನಾ

2. ಧನಾ

PC: ryan harvey

ಸಾಹಸ ಪ್ರಿಯರಿಗಾಗಿ ಧನಾ ಅನೇಕ ಸ್ಕೈಡೈವಿಂಗ್ ಶಿಬಿರಗಳನ್ನು ಆಯೋಜಿಸುತ್ತದೆ. ಫ್ರೀಫಾಲ್ ಸಮಯ ಇಲ್ಲಿ ಕಡಿಮೆ, ಆದಾಗ್ಯೂ, ಈ ಪ್ರದೇಶದಲ್ಲಿ ಭೂದೃಶ್ಯದ ವಿಸ್ತಾರವನ್ನು ಆನಂದಿಸಬಹುದು. 4000 ಅಡಿಗಳ ಜಿಗಿತವು ನಿಮಗೆ ಹೆಚ್ಚಿನ ಫ್ರೀಫಾಲ್ ಸಮಯವನ್ನು ನೀಡದಿರಬಹುದು, ಆದರೆ ಭೂದೃಶ್ಯದ ವಿಶಾಲವಾದ ಸೌಂದರ್ಯವನ್ನು ನೋಡುವ ಅನುಭವವು ಕೆಲವು ನಿಮಿಷಗಳ ಹಾರಾಟಕ್ಕೆ ಯೋಗ್ಯವಾಗಿದೆ. ಇಲ್ಲಿಗೆ ಬರುವ ಪ್ರಯಾಣಿಕರು ಈ ಸಾಹಸ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಈ ಅಪರಿಚಿತ ಪಟ್ಟಣವನ್ನು ಸಹ ಅನ್ವೇಷಿಸುತ್ತಾರೆ.

3. ದೀಸಾ

3. ದೀಸಾ

PC: Joe Baz

ಗುಜರಾತ್ ರಾಜ್ಯದಲ್ಲಿ ದೀಸಾ ನೋಡಲೇಬೇಕಾದ ಸ್ಥಳವಾಗಿದ್ದು, ಇದು ಸಾಹಸಪ್ರಿಯರಿಗೆ ಮತ್ತು ಮೊದಲ ಬಾರಿಗೆ ಸ್ಕೈಡೈವಿಂಗ್ ಅನುಭವಗಳನ್ನು ಪಡೆಯಲು ಬರುವವರಿಗೆ ಉತ್ತಮ ಸ್ಥಳವಾಗಿದೆ. ಇಲ್ಲಿ ಮೊದಲ ಬಾರಿಗೆ ಸ್ಕೈಡೈವಿಂಗ್ ಅನುಭವವನ್ನು ಪಡೆಯಲು ಬರುವವರು ಟಂಡೆಮ್ ಜಂಪ್ ಅನ್ನು ಆರಿಸಿಕೊಳ್ಳಬಹುದು. ಸ್ಟ್ಯಾಟಿಕ್ ಜಂಪ್ ಸಹ ಇದೆ, ಇದನ್ನು ಅನುಭವಿಸಲು ಸ್ಕೈಡೈವರ್ 1.5 ದಿನಗಳವರೆಗೆ ತರಬೇತಿ ಪಡೆಯಬೇಕಾಗುತ್ತದೆ.

4. ಅಂಬಿ ವ್ಯಾಲಿ

4. ಅಂಬಿ ವ್ಯಾಲಿ

PC: Joe Baz

ಅಂಬಿ ವ್ಯಾಲಿ 10,000 ಎಕರೆ ಪ್ರದೇಶದಲ್ಲಿ ಅತ್ಯಂತ ಐಷಾರಾಮಿ ಸೌಕರ್ಯಗಳನ್ನು ಮತ್ತು ಒಳಾಂಗಣ ಹಾಗು ಹೊರಾಂಗಣದಲ್ಲಿ ಮೋಜಿನ ಚಟುವಟಿಕೆಗಳನ್ನು ಹೊಂದಿರುವ ತಾಣವಾಗಿದೆ. ಯಾವುದೇ ಸಾಹಸ ಪ್ರಿಯರು ಮತ್ತು ಪ್ರವಾಸಿಗರು ದೀರ್ಘಕಾಲ ನೆನಪಿಟ್ಟುಕೊಳ್ಳವಂತ ಅನುಭವವನ್ನು ಈ ವ್ಯಾಲಿ ನಿಮಗೆ ನೀಡುತ್ತದೆ.

5. ಮೈಸೂರು

5. ಮೈಸೂರು

PC: Joe Baz

ಭಾರತದಲ್ಲಿ ಸ್ಕೈಡೈವಿಂಗ್ ಚಟುವಟಿಕೆಯನ್ನು ಹೊಂದಿರುವ ಅತ್ಯುತ್ತಮ ಸ್ಥಳಗಳಲ್ಲಿ ಮೈಸೂರು ಕೂಡ ಒಂದು. ನೀವು ಮೇಲೆ ಹಾರುತ್ತಿರುವಾಗ ಮೇಲಿನಿಂದ ಕಾಣುವ ಕೆಳಗಿನ ದೃಶ್ಯಗಳು ನಿಮ್ಮನ್ನು ನಿಜಕ್ಕೂ ಮೈನವಿರೇಳಿಸುತ್ತವೆ. ಇಲ್ಲಿಗೆ ಬರುವ ಪ್ರವಾಸಿಗರು ಅನೇಕ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದು ಮತ್ತು ಈ ಕ್ರೀಡೆಯು ನೀಡುವ ಅದ್ಬುತ ರೋಮಾಂಚನವನ್ನು ಆನಂದಿಸಬಹುದು. ಆದಾಗ್ಯೂ, ನೀವು ಪರಿಪೂರ್ಣವಾಗಿ ಒಬ್ಬರೇ ಆಕಾಶಕ್ಕೆ ಜಿಗಿಯುವ ಮುನ್ನ ಒಂದು ಪೂರ್ಣ ದಿನದ ತರಬೇತಿಯ ಅಗತ್ಯವಿದೆ.

Read more about: india ಭಾರತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X