Search
  • Follow NativePlanet
Share
» »ಬೆಂಗಳೂರಿನ ಬಳಿ ಇದೆ ಟ್ರೆಕ್ಕಿಂಗ್ ಮಾಡುಲು ಸೂಕ್ತವಾದ ಸ್ಥಳ

ಬೆಂಗಳೂರಿನ ಬಳಿ ಇದೆ ಟ್ರೆಕ್ಕಿಂಗ್ ಮಾಡುಲು ಸೂಕ್ತವಾದ ಸ್ಥಳ

ನಮ್ಮ ಕರ್ನಾಟಕದಲ್ಲಿನ ಯುವಜನತೆಗೆ ಹೆಚ್ಚಾಗಿ ಟ್ರೆಕ್ಕಿಂಗ್ ಮಾಡಲು ಬಯಸುತ್ತಾರೆ. ಅದರಲ್ಲೂ ಕೆಲವು ಒತ್ತಡಗಳಿಂದ ಹೊರಬಂದು, ಸ್ನೇಹಿತರೊಂದಿಗೆ ಕಾಲ ಕಳೆಯಬೇಕು ಎಂದು ಕೊಳ್ಳುವವರಿಗೆ ಈ ಸ್ಥಳವು ಸೂಕ್ತವಾದುದು. ಈ ಸುಂದರವಾದ ಸ್ಥಳವು ಬೆಂಗಳೂರಿನಿಂದ

ನಮ್ಮ ಕರ್ನಾಟಕದಲ್ಲಿನ ಯುವಜನತೆಗೆ ಹೆಚ್ಚಾಗಿ ಟ್ರೆಕ್ಕಿಂಗ್ ಮಾಡಲು ಬಯಸುತ್ತಾರೆ. ಅದರಲ್ಲೂ ಕೆಲವು ಒತ್ತಡಗಳಿಂದ ಹೊರಬಂದು, ಸ್ನೇಹಿತರೊಂದಿಗೆ ಕಾಲ ಕಳೆಯಬೇಕು ಎಂದು ಕೊಳ್ಳುವವರಿಗೆ ಈ ಸ್ಥಳವು ಸೂಕ್ತವಾದುದು. ಈ ಸುಂದರವಾದ ಸ್ಥಳವು ಬೆಂಗಳೂರಿನಿಂದ ಸಮೀಪವಾದುದು ಎಂದೇ ಹೇಳಬಹುದಾಗಿದೆ. ಅದು ಯಾವುದೆಂದರೆ ಕಲವಾರ ದುರ್ಗಾ, ಇದು ಅತ್ಯಂತ ಸುಂದರವಾದ ಸೊಬಗನ್ನು ಹೊಂದಿದೆ.

ಬೆಂಗಳೂರಿನಿಂದ ಸಮೀಪದಲ್ಲಿರುವ ಈ ಪ್ರವಾಸಿ ತಾಣಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ಸುಂದರವಾದ ಸ್ಥಳಕ್ಕೆ ಸ್ಕಂದಗಿರಿ ಎಂದೂ ಸಹ ಕರೆಯುತ್ತಾರೆ. ಇಲ್ಲಿ ನೀವು ಶಿಥಿಲಾವಸ್ಥೆಯಲ್ಲಿರುವ ಕೋಟೆಯನ್ನು ಕಾಣಬಹುದಾಗಿದೆ. ಇದನ್ನು ಟಿಪ್ಪು ಸುಲ್ತಾನನು ಕೂಡ ಬಳಸಿದ್ದನಂತೆ.

ಇಷೇ ಅಲ್ಲ ಟ್ರೆಕ್ಕಿಂಗ್ ಪ್ರೇಮಿಗಳಿಗೆ ಈ ಸ್ಥಳವು ಹೇಳಿ ಮಾಡಿದ ಸ್ಥಳವಾಗಿರುತ್ತದೆ. ಈ ಸ್ಕಂದಗಿರಿಯು ರಾತ್ರಿಯ ಟ್ರೆಕ್ಕಿಂಗ್‍ಗೆ ಹೆಚ್ಚು ಪ್ರಸಿದ್ಧವಾಗಿದೆ. ಈ ಸುಂದರವಾದ ಸ್ಥಳವು ಬೆಂಗಳೂರಿನ ಸಿಟಿ ಜಂಕ್ಷನ್‍ನಿಂದ 61 ಕಿ.ಮೀ ಮತ್ತು ಚಿಕ್ಕಬಳ್ಳಾಪುರದಿಂದ ಕೇವಲ 5 ಕಿ.ಮೀಗಳಷ್ಟು ದೂರದಲ್ಲಿದೆ.

ಪ್ರಸ್ತುತ ಲೇಖನದಲ್ಲಿ ಈ ಪಾಕೃತಿಕ ಸೊಬಗಿನ ಜೊತೆ ಜೊತೆಗೆ ಪುರಾತನವಾದ ಕೋಟೆಯ ಬಗ್ಗೆ ಕೂಡ ಮಾಹಿತಿಯನ್ನು ಪಡೆಯೋಣ.

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಈ ಸ್ಕಂದಗಿರಿ ಪುರಾತವಾದ ಪರ್ವತ ಕೋಟೆಯನ್ನು ಹೊಂದಿದೆ. ಇದು ಸುಮಾರು ಸಮುದ್ರ ಮಟ್ಟದಿಂದ ಸುಮಾರು 1350 ಮೀಟರ್ ಎತ್ತರದಲ್ಲಿದೆ. ಇದು ಚಿಕ್ಕಬಳ್ಳಾಪುರದಿಂದ ಕೇವಲ 5 ಕಿ.ಮೀ ಇರುವುದರಿಂದ ನಂದಿ ಬೆಟ್ಟಕ್ಕೆ ಸಮೀಪದಲ್ಲಿಯೇ ಇದೆ. ಇಲ್ಲಿನ ಪ್ರಾಕೃತಿಕ ದೃಶ್ಯವನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.


Sankara Subramanian

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಈ ಅದ್ಭುತವಾದ ಸ್ಥಳಕ್ಕೆ ಪ್ರವಾಸಿಗರು ಹೆಚ್ಚಾಗಿ ಪ್ರವಾಸ, ಕ್ಯಾಪಿಂಗ್ ಮತ್ತು ಪಕ್ಷಿ ವೀಕ್ಷಣೆಗಾಗಿ ಭೇಟಿ ನೀಡುತ್ತಿರುತ್ತಾರೆ. ಈ ಸ್ಥಳವು ಟ್ರೆಕ್ಕಿಂಕ್ ಮಾಡಲು ಸೂಕ್ತವಾದ ಸ್ಥಳ ಕೂಡ ಆಗಿದೆ. ಇಲ್ಲಿ ಪುರಾತನವಾದ ಒಂದು ಶಿಥಿಲವಾದ ಕೋಟೆಯನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಆ ನಂತರದ ಕಾಲದಲ್ಲಿ ಟಿಪ್ಪು ಸುಲ್ತಾನನು ಇದನ್ನು ಬಳಸಿಕೊಂಡನು. ಟಿಪ್ಪುವಿನ ಅವನತಿಯ ನಂತರ ಆ ಕೋಟೆಯು ಶಿಥಿಲವಾಸ್ಥೆಗೆ ಬಂದಿತು ಎಂದು ಹೇಳಲಾಗಿದೆ.


Kamaljith K V

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಸ್ಕಂದಗಿರಿಯಲ್ಲಿ ಟ್ರೆಕ್ಕಿಂಗ್ ಮಾಡುವುದು ಅಷ್ಟು ಸುಲಭವು ಅಲ್ಲ, ಅಷ್ಟು ಕಷ್ಟವು ಅಲ್ಲ. ಈ ಸುಂದರವಾದ ಸ್ಥಳದಲ್ಲಿ ಬೆಟ್ಟದ ಕೆಳಗೆ 2 ಮಾರ್ಗಗಳು ಇವೆ. ಒಂದು ಚಿಕ್ಕಬಳ್ಳಾಪುರ ಪಟ್ಟಣಕ್ಕೆ ಮತ್ತೊಂದು ನಂದಿಬೆಟ್ಟದ ಮಾರ್ಗಗಳಿವೆ. ಇಲ್ಲಿನ ಟ್ರೆಕ್ಕಿಂಗ್ ಅನುಭವ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭುತಿಯನ್ನು ಉಂಟು ಮಾಡುತ್ತದೆ. ದಟ್ಟವಾದ ಪೊದೆಗಳ ನಡುವೆ ಕಡಿದಾದ ಮಾರ್ಗದ ಮಧ್ಯೆ ಒಂದು ಆಸಕ್ತಿದಾಯಕವಾದ ಟ್ರೆಕ್ಕಿಂಗ್ ಆರಂಭವಾಗುತ್ತದೆ.


Kalyan Kanuri

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಬೆಟ್ಟದ ಮೇಲೆ ಒಂದು ಪ್ರಾಚೀನವಾದ ದೇವಾಲಯವನ್ನು ಕೂಡ ನೀವು ದರ್ಶನ ಭಾಗ್ಯ ಪಡೆಯಬಹುದು. ಈ ಸುಂದರವಾದ ಸ್ಥಳಕ್ಕೆ ಪ್ರವಾಸಿಗರು ರಾತ್ರಿಯ ಸಮಯದಲ್ಲಿ ಟ್ರೆಕ್ಕಿಂಗ್ ಮಾಡಲು ಬಯಸುತ್ತಾರೆ. ಹಾಗೆಯೇ ರಾತ್ರಿ ಟ್ರೆಕ್ಕಿಂಗ್‍ಗೆ ಈ ಸ್ಥಳವು ಪ್ರಸಿದ್ಧವಾಗಿಯೂ ಇದೆ. ಈ ರಮಣೀಯವಾದ ಪ್ರದೇಶದಲ್ಲಿ ಸೂರ್ಯೋದಯವನ್ನು ವೀಕ್ಷಿಸಲು ವಾರಾಂತ್ಯವಾದ ಶನಿವಾರ ಹಾಗು ಭಾನುವಾರದ ದಿನದಂದು ನೂರಾರು ಜನರು ವಿಕ್ಷೀಸುತ್ತಾರೆ.


Kalyan Kanuri

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳ

ಇಲ್ಲಿನ ಟ್ರೆಕ್ಕಿಂಗ್ ಸುಮಾರು 8 ಕಿ.ಮೀ ಇದೆ. ಸುಮಾರು 4 ರಿಂದ 5 ಗಂಟೆಗಳ ಕಾಲ ತೆಗೆದುಕೊಳ್ಳುವ ಈ ಟ್ರೆಕ್ಕಿಂಗ್ ಮರೆಯಲಾಗದ ಅನುಭವವನ್ನು ನೀಡುತ್ತದೆ. ಇಷ್ಟು ಸೊಬಗನ್ನು ಹೊಂದಿರುವ ಸ್ಥಳಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿ ಎಂದರೆ ಅದು ಮೇ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ. ಬೆಂಗಳೂರಿನಿಂದ ಕೇವಲ 61 ಕಿ.ಮೀ ಅಂತರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X