Search
  • Follow NativePlanet
Share
» »ಬ್ರಹ್ಮಚಾರಿಗಳಿಂದ ತುಂಬಿರುವ ಊರು, ಇಲ್ಲಿ ಹೆಣ್ಮಕ್ಕಳಿಗೆ ಸಖತ್ ಡಿಮ್ಯಾಂಡ್

ಬ್ರಹ್ಮಚಾರಿಗಳಿಂದ ತುಂಬಿರುವ ಊರು, ಇಲ್ಲಿ ಹೆಣ್ಮಕ್ಕಳಿಗೆ ಸಖತ್ ಡಿಮ್ಯಾಂಡ್

ಹೆಣ್ಣು ಮಕ್ಕಳಿಲ್ಲದಿದ್ದರೆ ಪುರುಷರ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಈ ಹಳ್ಳಿಯನ್ನು ನೋಡಿ ಕಲಿಯಬೇಕು. ಇದೊಂದು ಗುಜರಾತ್‌ನಲ್ಲಿರುವ ಪುಟ್ಟ ಹಳ್ಳಿ. ಇಲ್ಲಿ ಪುರುಷರ ಸಂಖ್ಯೆಯೇ ಅಧಿಕ. ಹಾಗಾಗಿ ಇಲ್ಲಿನ ಬಹುತೇಕ ಪುರುಷರು ಬ್ರಹ್ಮಚಾರಿಗಳಾಗಿಯೇ ಇದ್ದಾರೆ. ಯಾಕೆಂದರೆ ಮದುವೆಯಾಗಲು ಹೆಣ್ಣು ದೊರೆಯುತ್ತಿಲ್ಲ.

ಯಾವುದೀ ಹಳ್ಳಿ

ಯಾವುದೀ ಹಳ್ಳಿ

ಗುಜರಾತ್‌ನ ಸಿಯಾನಿ ಎನ್ನುವ ಹಳ್ಳಿಯಲ್ಲಿ 35 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 350 ಪುರುಷರು ಮದುವೆಯಾಗದೆ ಬ್ರಹ್ಮಚಾರಿಗಳಾಗಿಯೇ ಇದ್ದಾರೆ. ಮಹಿಳೆಯರು ಮಾಡಬೇಕಾದಂತಹ ಕೆಲಸಗಳನ್ನು ತಾವೇ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಡುಗೆ ಮಾಡುವುದು, ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಎಲ್ಲವೂ ಪುರುಷರೇ ಮಾಡಿಕೊಂಡಿದ್ದಾರೆ.

ಮೊದಲೇ ಮದುವೆಯಾಗಿದ್ದಕ್ಕೆ ಸಂತಸ ಪಡುವ ಹಿರಿಯರು

ಮೊದಲೇ ಮದುವೆಯಾಗಿದ್ದಕ್ಕೆ ಸಂತಸ ಪಡುವ ಹಿರಿಯರು

ತಾವು 20 ವರ್ಷಗಳ ಹಿಂದೆಯೇ ಮದುವೆಯಾಗಿದ್ದೇವೆ. ಈವಾಗೇನಾದರೂ ನಾವು ಯುವಕನಾಗಿದ್ದರೆ ಮದುವೆಯೇ ಆಗುತ್ತಿರಲಿಲ್ಲ . ವಯಸ್ಸು ಮೀರಿ ಹೋಗುತ್ತಿತ್ತು ಎನ್ನುತ್ತಾರೆ ಮದುವೆಯಾಗಿರುವ ಹಿರಿಯರು. ಆದರೆ ಈಗಿನ ಯುವಕರಿಗೆ ಮದುವೆಯಾಗುತ್ತಿಲ್ಲ.

ವಧು ದಕ್ಷಿಣೆ ನೀಡಬೇಕು

ವಧು ದಕ್ಷಿಣೆ ನೀಡಬೇಕು

ಆ ಊರಿನ ಜನರು ಅನಕ್ಷರಸ್ಥರು ಹಾಗು ಬಡವರಾಗಿದ್ದಾರೆ. ಆ ಊರಿನಲ್ಲಿರುವ ಕೆಲವೇ ಮಹಿಳೆಯರು ಉತ್ತಮ ಜೀವನವನ್ನು ಬಯಸುತ್ತಿದ್ದಾರೆ. ಅವರನ್ನು ವಿವಾಹವಾಗಬೇಕಾದರೆ ವರದಕ್ಷಿಣೆ ರೀತಿ ಈ ಊರಿನಲ್ಲಿ ಮದುವೆಗೆ ಮಹಿಳೆಯರು ಸಿಗಬೇಕಾದರೆ ವಧು ದಕ್ಷಿಣೆಯನ್ನು ನೀಡಬೇಕು. ವಧುವಿನ ಹೆತ್ತವರು ವಧುದಕ್ಷಿಣೆಯನ್ನು ಡಿಮ್ಯಾಂಡ್ ಮಾಡುತ್ತಾರೆ.

ಬ್ರಹ್ಮಚಾರಿ ಜೀವನ

ಬ್ರಹ್ಮಚಾರಿ ಜೀವನ

ಆದರೆ ಈ ಊರಿನಲ್ಲಿರುವ ಪುರುಷರು ಬಡವರಾಗಿದ್ದು, ಅವರಲ್ಲಿ ಅಷ್ಟೊಂದು ಹಣವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪುರುಷರು ಮದುವೆಯಿಲ್ಲದೆ ಬ್ರಹ್ಮಚಾರಿಗಳ ಜೀವನ ನಡೆಸುತ್ತಿದ್ದಾರೆ.

ಇದಕ್ಕೆ ಕಾರಣವೇನು?

ಇದಕ್ಕೆ ಕಾರಣವೇನು?

ಈ ಊರಿನಲ್ಲಿ ಹೆಣ್ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಕಾರಣ ಹೆಣ್ಣು ಭ್ರೂಣ ಹತ್ಯೆ. ಎಲ್ಲರಿಗೂ ಗಂಡುಮ್ಕಕಳೇ ಬೇಕು. ಹಾಗಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಈಗೀನ ಯುವಕರು ಮದುವೆ ಇಲ್ಲದೆ ಬ್ರಹ್ಮಚಾರಿ ಜೀವನ ನಡೆಸುವಂತಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X