• Follow NativePlanet
Share
» »ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

Posted By:

ಭಾರತ ದೇಶವು ದಕ್ಷಿಣ ಭಾಗದ ಆಂಧ್ರ ಪ್ರದೇಶದಲ್ಲಿನ ಖಮ್ಮಂ ಜಿಲ್ಲೆಯಲ್ಲಿನ ಭದ್ರಾಚಲಂ ಒಂದು ಚಿಕ್ಕದಾದ ಗ್ರಾಮವಾಗಿದೆ. ಈ ಪಟ್ಟಣವು ಹೈದ್ರಾಬಾದ್ ನಗರಕ್ಕೆ ಸುಮಾರು 309 ಕಿ.ಮೀ ದೂರದಲ್ಲಿದೆ. ಭಾರತ ದೇಶದ ಈಶಾನ್ಯ ಭಾಗ ಮತ್ತು ಗೋದಾವರಿ ನದಿ ತೀರದಲ್ಲಿದೆ. ಈ ಪ್ರದೇಶವು ಶ್ರೀರಾಮ ಮತ್ತು ಆತನ ಪತ್ನಿ ಸೀತಾ ದೇವಿ ವಾಸ ಮಾಡಿದ ಪ್ರದೇಶವಾಗಿ ದೇಶ ವ್ಯಾಪಕವಾಗಿ ಪ್ರಸಿದ್ಧಿ ಹೊಂದಿದೆ. ಇದು ಶ್ರೀ ರಾಮನು ನಿವಾಸ ಮಾಡಿದ ಪ್ರದೇಶವಾಗಿರುವುದರಿಂದ ಹಿಂದೂ ಯಾತ್ರಿಕರು ಇದನ್ನು ಅತ್ಯಂತ ಪವಿತ್ರವಾದ ಸ್ಥಳವೆಂದು ಭಾವಿಸುತ್ತಾರೆ. ರಾಮನ ಹೆಸರು ಕೇಳಿದರೆ ಎಲ್ಲರಿಗೂ ಭದ್ರಾಚಲ ಗುರುತಿಗೆ ಬರುತ್ತದೆ. ಈ ಪಟ್ಟಣಕ್ಕೆ ಭದ್ರಚಲ ಎಂಬ ಹೆಸರು ಭದ್ರಗಿರಿ ಎಂಬುದರಿಂದ ಬಂದಿತು. ಭದ್ರಾಚಲದ ಬಗ್ಗೆ ಇತಿಹಾಸ ಕಥೆಗಳು ಅನೇಕವಿದೆ.

1.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

1.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ರಾಮನು ತನ್ನ ವನವಾಸದ ಸಮಯದಲ್ಲಿ ಸೀತಾ ಮತ್ತು ಲಕ್ಷ್ಮಣರ ಜೊತೆ ಇಲ್ಲಿ ಕೆಲವು ಕಾಲಗಳು ವಾಸವಿದ್ದನು. ಅವರು ನಿವಾಸಿಸಿದ್ದ ಪ್ರದೇಶವೇ ಪ್ರಸ್ತುತ ದೇವಾಲಯದಿಂದ ಸುಮಾರು 32 ಕಿ.ಮೀ ದೂರದಲ್ಲಿದೆ. ಶ್ರೀರಾಮನು ಇಲ್ಲಿ ತನ್ನ ಕುಟುಂಬ ಸಮೇತನಾಗಿ ವಾಸವಿರಲು ಒಂದು ಗುಡಿಸಲನ್ನು ನಿರ್ಮಾಣ ಮಾಡುತ್ತಾನೆ. ಇಲ್ಲಿಯೇ ಸೀತಾ ಮಾತೆಯನ್ನು ರಾವಣನು ಅಪಹರಿಸಿಕೊಂಡು ಹೋದನು ಎಂದು ಹೇಳುತ್ತಾರೆ.

2.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

2.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಮತ್ತೊಂದು ಕಥೆಯಾಗಿ ವಿಷ್ಣು ಭಕ್ತನಾದ ಭದ್ರನು ಒಬ್ಬ ಋಷಿ. ರಾಮನು ಲಂಕಕ್ಕೆ ತೆರಳುವ ಸಮಯದಲ್ಲಿ ಈ ಋಷಿಯನ್ನು ಭೇಟಿ ಮಾಡಿ ಅತಿಥ್ಯ ಹೊಂದಿದನು ಎಂದೂ, ಹಾಗೆಯೇ ಸೀತೆಯ ಜೊತೆ ಮತ್ತೆ ಮರಳುವೆ ಎಂದು ಹೇಳುತ್ತಾನೆ. ಆದರೆ ಶ್ರೀ ರಾಮ ಬಾರದೇ ಇದ್ದ ಕಾರಣದಿಂದ ಭದ್ರ ಎಂಬ ಋಷಿಯು ಎಷ್ಟೋ ಕಾಲ ಕಾಯುತ್ತಾನೆ.

3.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

3.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ತನ್ನ ಭಕ್ತನಾದ ಭದ್ರನ ಕಾಯುವಿಕೆಯನ್ನು ತಿಳಿದುಕೊಂಡ ಶ್ರೀ ಮಹಾವಿಷ್ಣುವು, ತಾನೇ ರಾಮನ ಅವತಾರದಲ್ಲಿ ಸೀತಾ ಹಾಗು ಲಕ್ಷ್ಮಣ ಸಮೇತವಾಗಿ ದರ್ಶನವನ್ನು ನೀಡುತ್ತಾನೆ. ಈ ಘಟನೆ ರಾಮ ರಾಜ್ಯದ ಮುಗಿದ ಅನೇಕ ಕಾಲದ ನಂತರ ನಡೆಯುತ್ತದೆ. ರಾಮನ ಭಕ್ತನಾದ ಭದ್ರನ ಹೆಸರಿನ ಮೇಲೆ ಪಟ್ಟಣವಾಗಿ ಭದ್ರಾಚಲ ಎಂದು ಕರೆಯಲಾಗುತ್ತಿದೆ.

4.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

4.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಮತ್ತೊಂದು ಕಥೆಯ ಪ್ರಕಾರ ಶ್ರೀ ರಾಮನು ಒಂದು ಮಹಿಳೆಯ ಕನಸ್ಸಿನಲ್ಲಿ ಕಾಣಿಸಿಕೊಂಡು, ಭದ್ರಗಿರಿ ಬೆಟ್ಟಗಳ ಮೇಲೆ ವಿಗ್ರಹಗಳು ಇವೆ ಎಂದು ಹೇಳುತ್ತಾನೆ. ಮರುದಿನ ಆಕೆಯು ಆ ಬೆಟ್ಟದ ಮೇಲೆ ಕೆಲವು ವಿಗ್ರಹಗಳು ನೋಡಿದಳು ಎಂದೂ, ಅವುಗಳಿಗೆ ಒಂದು ಚಿಕ್ಕದಾದ ದೇವಾಲಯವನ್ನು ಏರ್ಪಾಟು ಮಾಡಿ ಆ ವಿಗ್ರಹಗಳನ್ನು ಪೂಜಿಸಿದಳು ಎಂದೂ, ನಂತರದ ಕಾಲದಲ್ಲಿ ಅದು ಭದ್ರಾಚಲವಾಗಿ ಕರೆಯಲಾಯಿತು. ಈ ಸ್ವಾಮಿಯನ್ನು ಪೂಜೆ ಮಾಡಿದರೆ ಪಾಪಗಳೆಲ್ಲಾವೂ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ.

5.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

5.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಪ್ರಕೃತಿ ದ್ರಶ್ಯಗಳ ಮಧುರವಾದ ಅನುಭೂತಿಯು ಭದ್ರಾಚಲದ ಪ್ರವಾಸಿಗರಿಗೆ ಎಷ್ಟೋ ಸುಂದರವಾದ ದೃಶ್ಯಗಳ ಅನುಭೂತಿಯನ್ನು ಉಂಟು ಮಾಡುತ್ತದೆ. ಪ್ರಧಾನವಾಗಿ, ಇಲ್ಲಿ ಜಟಾಯು, ಪರ್ಣಶಾಲ, ದುಮ್ಮಗೂಡ, ಗುಣದಲಗಳಿವೆ. 2 ಖ್ಯಾತಿ ಪಡೆದಿರುವ ದೇವಾಲಯಗಳು ಎಂದರೆ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯ ಮತ್ತು ಭದ್ರಾಚಲನ ದೇವಾಲಯಗಳು. ಪ್ರತಿ ವರ್ಷ ಸಾವಿರಾರು ಮಂದಿ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ರಸ್ತೆ ಅಥವಾ ರೈಲ್ವೆ ಮಾರ್ಗದ ಮೂಲಕ ಸುಲಭವಾಗಿ ಭದ್ರಾಚಲಕ್ಕೆ ಸೇರಿಕೊಳ್ಳಬಹುದು.

6.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

6.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಪ್ರಪಂಚದಲ್ಲಿ ಯಾವುದೇ ರಾಮಾಲಯದಲ್ಲಿಯೂ ಇಲ್ಲದ ವಿಧವಾಗಿ ಭದ್ರಾಚಲದಲ್ಲಿ ಶ್ರೀ ರಾಮಚಂದ್ರನ ದಿವ್ಯಮೂರ್ತಿಯನ್ನು ಕಾಣಬಹುದು. ಭದ್ರಾದ್ರಿಯಲ್ಲಿ ಭಕ್ತರು ಸ್ವಾಮಿಯನ್ನು ದರ್ಶಿಸಿದ ಆನಂದದಲ್ಲಿ ಒಂದು ವಿಷಯವು ನೆನೆಪಿಸಿಕೊಳ್ಳುತ್ತಾರೆ. ಅದೆನೆಂದರೆ ತ್ರೇತಾಯುಗದಲ್ಲಿ ಶ್ರೀರಾಮನು ಅರಣ್ಯವಾಸ ಮಾಡಿದಾಗ ಪರ್ಣಶಾಲೆಯಲ್ಲಿರುತ್ತಾನೆ.

7.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

7.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಅಲ್ಲಿ ಶ್ರೀ ರಾವಣಾಸುರನು ಸೀತಾ ದೇವಿಯನ್ನು ಅಪಹರಿಸುತ್ತಾನೆ. ಆ ಸಮಯದಲ್ಲಿ ಭದ್ರ ಎಂಬ ಮಹರ್ಷಿಯು ಆ ಬೆಟ್ಟದ ಮೇಲೆ ತಪಸ್ಸು ಮಾಡುತ್ತಾ ಇರುತ್ತಾನೆ. ಆಗ ಭದ್ರನು ಶ್ರೀ ರಾಮನ ಚಂದ್ರನಿಗೆ ಭದ್ರಾದ್ರಿ ಬೆಟ್ಟದ ಮೇಲೆ ನೆಲೆಸು ಎಂದು ಕೋರಿಕೊಳ್ಳುತ್ತಾನೆ. ಶ್ರೀ ರಾಮನು ಸೀತಾ ಮಾತೆಯನ್ನು ಹುಡುಕಿದ ನಂತರ ನಿನ್ನ ಕೋರಿಕೆಯನ್ನು ತೀರಿಸುತ್ತೇನೆ ಎಂದು ಅಭಯವನ್ನು ನೀಡುತ್ತಾನೆ.

8.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

8.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಆದರೆ ಸೀತಾದೇವಿಯನ್ನು ರಾವಣನಿಂದ ವಿಮುಕ್ತಿಗೊಳಿಸಿದ ನಂತರ ರಾಜ್ಯ ಪಾಲನೆಗಾಗಿ ಅಯೋದ್ಯಕ್ಕೆ ಹೋಗುತ್ತಾನೆ. ತದನಂತರ ರಾಮಾವತಾರವನ್ನು ಬಿಟ್ಟು ವೈಕುಂಠಕ್ಕೆ ಹೋಗುತ್ತಾನೆ. ಆಗ ಭದ್ರನು ಸ್ವಾಮಿಯ ಅನುಗ್ರಹಕ್ಕಾಗಿ ಘೋರವಾದ ತಪ್ಪಸ್ಸು ಮಾಡುತ್ತಾನೆ.

9.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

9.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಆಗ ಶ್ರೀರಾಮನು ವೈಕುಂಠದಲ್ಲಿ ವಿಷ್ಣುಮೂರ್ತಿಯಾಗಿದ್ದ ಸಮಯದಲ್ಲಿ ಕೊಟ್ಟ ಮಾತು ನೆನಪಿಗೆ ಬರುತ್ತದೆ. ತದನಂತರ ರಾಮನ ಅವತಾರದಲ್ಲಿ ಸೀತಾಲಕ್ಷ್ಮಣ ಸಮೇತವಾಗಿ ಭದ್ರಾದಿ ಬೆಟ್ಟದ ಮೇಲೆ ಕೊಂದಡರಾಮನಾಗಿ, ಕಲ್ಯಾಣ ರಾಮನಾಗಿ, ವೈಕುಂಠಮುನಿಯಾಗಿ ಭಕ್ತರ ಕೋರಿಕೆಗಳನ್ನು ತೀರಿಸುತ್ತಾನೆ.

10.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

10.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಆಗ ಸ್ವಾಮಿಯು ರಾಮಾವತಾರದ ಜೊತೆ ಜೊತೆಗ ಬಿಲ್ಲು, ಬಾಣದ ಜೊತೆ ಜೊತೆಗೆ ವಿಷ್ಣುವಿನ ಅವತಾರವಾದ ಶಂಕ ಚಕ್ರಗಳನ್ನು ಕೂಡ ತೆಗೆದುಕೊಂಡು ಬರುತ್ತಾನೆ. ಹಾಗಾಗಿಯೇ ಈ ದೇವಾಲಯದಲ್ಲಿ ಶ್ರೀರಾಮ ಚಂದ್ರನಿಗೆ 4 ಕೈಗಳಿವೆ. ಯಾವಾಗಲೂ ಬಲಭಾಗದಲ್ಲಿ ಇರುವ ಲಕ್ಷ್ಮಣನು ಎಡಭಾಗದಲ್ಲಿ ಇರುತ್ತಾನೆ.

11.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

11.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಶ್ರೀ ರಾಮನ ಬಲಭಾಗದಲ್ಲಿ ಬಾಣ, ಶಂಖ, ಎಡಕೈಯಲ್ಲಿ ಬಿಲ್ಲು, ಚಕ್ರಗಳು ಇವೆ. ಇನ್ನು ಭದ್ರಾಚಲದಲ್ಲಿ ನಡೆಯುವ ಶ್ರೀರಾಮನವಮಿಯ ದಿನ ನಡೆಯುವ ಕಳ್ಯಾಣತ್ಸೋವವನ್ನು ವಿಜೃಂಬಣೆಯಿಂದ ಆಚರಿಸುತ್ತಾರೆ.

12.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

12.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ರಾಮನ ಕಲ್ಯಾಣದಲ್ಲಿ ಮುತ್ತಿನ ಅಕ್ಷತೆಯನ್ನು ಸಮರ್ಪಿಸುವ ಆಚಾರವು ಹೇಗೆ ಪ್ರಾರಂಭವಾಗಿಯಿತು ಎಂದರೆ ಭಕ್ತ ರಾಮದಾಸುವಿನಿಂದ. ಅಂದರೆ ಶ್ರೀ ರಾಮನ ಮಹಿಮೆಯನ್ನು ತಿಳಿದುಕೊಂಡ ಒಬ್ಬ ವ್ಯಕ್ತಿ. ಈತನಿಗೆ ಶ್ರೀ ರಾಮನು ಕನಸ್ಸಿನಲ್ಲಿ ದರ್ಶನವನ್ನು ನೀಡುತ್ತಾನೆ.

13.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

13.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಹಾಗಾಗಿಯೇ ಅಕ್ಷತೆಯ ರೂಪದಲ್ಲಿ ಶ್ರೀ ರಾಮನಿಗೆ ಮುತ್ತಿನ ಮಣಿಗಳನ್ನು ಸ್ವಾಮಿಗೆ ಅರ್ಪಿಸುವ ಆಚಾರ ಮುಂದುವರೆಸಿಕೊಂಡು ಬಂದಿದೆ. ರಾಮನ ಕಳ್ಯಾಣೋತ್ಸವ ದಿನದಂದೇ ಮಂಗಳಸೂತ್ರವನ್ನು ಸುಮಾರು 16 ನೇ ಶತಮಾನದಲ್ಲಿಯೇ ಭಕ್ತರಾಮದಾಸು ಮಾಡಿಸಿದನು.

14.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

14.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಆಗ ಭಕ್ತ ರಾಮದಾಸುವು ಮಾಡಿಸಿದ ಮಂಗಳಸೂತ್ರವನ್ನು ಇತರ ಅಭರಣಗಳನ್ನು ಇಂದಿಗೂ ಸೀತಾ ಮಾತೆಗೆ ಹಾಗು ಶ್ರೀ ರಾಮನಿಗೆ ಅಲಂಕರಿಸುತ್ತಾರೆ. ಇನ್ನು ಪ್ರಪಂಚದಲ್ಲಿ ಯಾವ ದೇವಾಲಯದಲ್ಲಿಯಾದರೂ ಭಕ್ತರಿಂದ ಕೈಯಿಂದ ನಿರ್ಮಾಣ ಮಾಡಲ್ಪಟ್ಟು, ಭಕ್ತರೇ ಸಮರ್ಪಿಸುತ್ತಾರೆ. ಆದರೆ ಭದ್ರಾದ್ರಿಯಲ್ಲಿ ಮಾತ್ರಾ ಶ್ರೀರಾಮಚಂದ್ರ ಮೂರ್ತಿಯೇ ಹಣವನ್ನು ಪಾವತಿಸುತ್ತಾರೆ.

15.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

15.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ರಾಮದಾಸು ರಾಜ್ಯದ ಖಜಾನೆಯ ಹಣದಿಂದ ಸ್ವಾಮಿಗೆ ಆಭರಣವನ್ನು ಮಾಡಿಸಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಾನೆ. ಭಕ್ತನಾದ ಶ್ರೀ ರಾಮದಾಸನನ್ನು ಬಂಧನದಿಂದ ವಿಮುಕ್ತಿ ಹೊಂದುವ ಸಲುವಾಗಿ ಶ್ರೀ ರಾಮಚಂದ್ರ ಮೂರ್ತಿಯು ಮಾರು ವೇಷದಲ್ಲಿ ಬಂದು ಆ ಕಾಲದಲ್ಲಿನ ಬಂಗಾರು ನಾಣ್ಯಗಳನ್ನು ಎಂದರೆ 6 ಲಕ್ಷ ರೂಪಾಯಿಗಳನ್ನು ನೀಡುತ್ತಾರೆ.

16.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

16.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಹಾಗಾಗಿಯೇ ಈ ದೇವಾಲಯದ ನಿರ್ಮಾಣ ಮತ್ತು ಅಭರಣಗಳು ಸ್ವಾಮಿಯವರೇ ಮಾಡಿಸಿಕೊಂಡ ಹಾಗೆ ಆಗುತ್ತದೆ. ಇಂದಿಗೂ ಆ ಕಾಲದ ನಾಣ್ಯಗಳು ದೇವಾಲಯದ ಒಂದು ಮ್ಯೂಸಿಯಂನಲ್ಲಿದೆ. ರಾಮನ ಗರ್ಭಗುಡಿಯ ಮೇಲೆ ಇರುವ ಚಕ್ರವನ್ನು ಯಾರು ಕೂಡ ತಯಾರು ಮಾಡಲಿಲ್ಲವಂತೆ.

17.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

17.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ಆ ದೇವಾಲಯವನ್ನು ನಿರ್ಮಾಣ ಮಾಡುತ್ತಿದ್ದ ಸಮಯದಲ್ಲಿ ಭಕ್ತ ರಾಮದಾಸುವು ಗೋದಾವರಿಯಲ್ಲಿ ಸ್ನಾನವನ್ನು ಆಚರಿಸಿ ನದಿ ಪ್ರವಾಹದಲ್ಲಿ ಸ್ವಾಮಿಯ ಚಕ್ರ ದೊರೆಯಿತಂತೆ. ಅದನ್ನು ಶ್ರೀ ರಾಮನೇ ಪ್ರಸಾದಿಸಿದರು ಎಂದು ಭಾವಿಸಿ ಆ ಚಕ್ರವನ್ನು ಗರ್ಭಗುಡಿಯ ಗೋಪುರದ ಮೇಲೆ ಪ್ರತಿಷ್ಟಾಪನೆ ಮಾಡಿದರಂತೆ.

18.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

18.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ದೇವಾಲಯದ ಶಿಖರವನ್ನು ಏಕ ಶಿಲೆಯ ಮೇಲೆ ಕೆತ್ತನೆ ಮಾಡಿದ್ದಾರೆ. ಅದು ಸುಮಾರು 36 ಟನ್ನಗಳಷ್ಟು ಭಾರವಿರುತ್ತದೆ. ಅಷ್ಟು ಭಾರವಾದ ಕಲ್ಲನ್ನು ಯಾವುದೇ ಟೆಕ್ನಾಲಜಿ ಇಲ್ಲದ ಆ ಕಾಲದಲ್ಲಿ ಹೇಗೆ ಗುಡಿ ಗೋಪುರದ ಮೇಲೆ ಇಟ್ಟರು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

19.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

19.ಭದ್ರಾಚಲದ ಬಗ್ಗೆ ನಂಬಲಾಗದ ನಿಜಗಳು!

ರಾಮದಾಸುವಿ ಪ್ರಸ್ತುತವಿರುವ ದೇವಾಲಯವನ್ನು ನಿರ್ಮಾಣ ಮಾಡುವುದಕ್ಕಿಂತ ಮುಂಚೆಯೇ ಶ್ರೀ ರಾಮಚಂದ್ರನ ಮೂರ್ತಿಯನ್ನು ಆರಾಧಿಸುತ್ತಿದ್ದನು. ಆದಿ ಶಂಕರಾಚಾರ್ಯರ ಕಾಲದಲ್ಲಿ ದೇವಾಲಯವನ್ನು ದರ್ಶಿಸಿದ ಶಂಕರಾಚಾರ್ಯರು ಸಾಕ್ಷಾತ್ತು ಆ ವೈಕುಂಠದಲ್ಲಿನ ವಿಷ್ಣುಮೂರ್ತಿಯನ್ನು ದರ್ಶಿಸಿದ ಅಲೌಕಿಕ ಆನಂದವನ್ನು ಹೊಂದಿದನು ಎಂದು ಹೇಳುತ್ತಾನೆ. ಹಾಗಾಗಿಯೇ ಆತನು ಭದ್ರಾದಿ ರಾಮನನ್ನು ವೈಕುಂಠಮುನಿಯಾಗಿ ಬಣ್ಣಿಸಿದನು.

20.ಹೇಗೆ ತೆರಳಬೇಕು?

20.ಹೇಗೆ ತೆರಳಬೇಕು?

ಭದ್ರಾಚಲಕ್ಕೆ ತೆರಳುಲು ರಸ್ತೆ, ರೈಲು ಹಾಗು ವಿಮಾನ ಮಾರ್ಗದ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು. ರೈಲ್ವೆ ಮಾರ್ಗದ ಮೂಲಕ ತೆರಳಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಭದ್ರಾಚಲವೇ ಆಗಿದೆ. ಇಲ್ಲಿಂದ ಸುಮಾರು 40 ಕಿ.ಮೀ ದೂರದಲ್ಲಿದೆ ಶ್ರೀ ರಾಮನ ಪುಣ್ಯಕ್ಷೇತ್ರ.

21.ವಿಮಾನ ಮಾರ್ಗದ ಮೂಲಕ: ಭದ್ರಾಚಲಕ್ಕೆ ವಿಮಾನ ನಿಲ್ದಾಣವಿಲ್ಲ. ಸಮೀಪದಲ್ಲಿನ ರಾಜಮಂಡ್ರಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. ಇದು ಹೈದ್ರಾಬಾದ್‍ನಿಂದ ಸುಮಾರು 300 ಕಿ.ಮೀ ದೂರದಲ್ಲಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೂಡ ಅಷ್ಟೇ ದೂರದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ