Search
  • Follow NativePlanet
Share
» »ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಕ್ರಿ.ಶ 629 ರಲ್ಲಿ ನಿರ್ಮಾಣ ಮಾಡಿದ ಜಮಾ ಮಸೀದಿ ಭಾರತ ದೇಶದಲ್ಲಿನ ಅತ್ಯಂತ ಪುರಾತನವಾದ ಮಸೀದಿಯಾಗಿದೆ. ಇದು ಕೊಂಡಗಲ್ಲೂರಿನಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿರುವ ಧಾರ್ಮಿಕ ಕೇಂದ್ರವೇ ಆಗಿದೆ. ಇದನ್ನು ಮಾಲಿಕ್ ಬಿನ್ ದಿನಾರ್ ನಿರ್ಮಾಣ ಮಾಡಿದರು.

ಕ್ರಿ.ಶ 629 ರಲ್ಲಿ ನಿರ್ಮಾಣ ಮಾಡಿದ ಜಮಾ ಮಸೀದಿ ಭಾರತ ದೇಶದಲ್ಲಿನ ಅತ್ಯಂತ ಪುರಾತನವಾದ ಮಸೀದಿಯಾಗಿದೆ. ಇದು ಕೊಂಡಗಲ್ಲೂರಿನಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿರುವ ಧಾರ್ಮಿಕ ಕೇಂದ್ರವೇ ಆಗಿದೆ. ಇದನ್ನು ಮಾಲಿಕ್ ಬಿನ್ ದಿನಾರ್ ನಿರ್ಮಾಣ ಮಾಡಿದರು. ಈತನು ಮೊಹಮದ್‍ನ ಅನುಯಾಯಿಯಾಗಿದ್ದನು. ಭಾರತಕ್ಕೆ ಬಂದ ಮೊದಲ ಧಾರ್ಮಿಕ ಪ್ರಚಾರಕರ.

ಸಿರಾಮಾನ್ ಮಸೀದಿ, ಭಾರತ ದೇಶದಲ್ಲಿನ ಮೊಟ್ಟಮೊದಲ ಮಸೀದಿಯಾಗಿದೆ. ಇದನ್ನು ಚೆರಾಮನ್ ಜುಮಾ ಮಸೀದಿ ಎಂದು ಕೂಡ ಕರೆಯುತ್ತಾರೆ. ಈ ಪ್ರಾರ್ಥನ ಸ್ಥಳವು ಕೇರಳ ರಾಜ್ಯದಲ್ಲಿನ ತ್ರಿಸ್ಸೂರ್ ಜಿಲ್ಲೆಯಲ್ಲಿನ ಚಿಕ್ಕದಾದ ಪಟ್ಟಣವಾದ ಕೊಡುಂಗಲ್ಲೂರಿನಲ್ಲಿದೆ. ಈ ಕೊಡುಂಗಲೂರು ಮಲಬಾರ್ ತೀರದಲ್ಲಿದೆ. ಸಿರಾಮಾನ್ ಮಸೀದಿಗೆ "ಪ್ರಪಂಚದಲ್ಲಿನ 2 ನೇ ಅತಿ ಪ್ರಾಚೀನವಾದ ಮಸೀದಿ" ಎಂದು ಗುರುತಿಸಲಾಗಿದೆ.

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಮಾಲಿಕ್ ಬಿನ್ ದಿನಾರ್ ಸಮಾಧಿ
ಮಾಲಿಕ್ ಬಿನ್ ದಿನಾರ್ ಕ್ರಿ.ಶ 8 ನೇ ಶತಮಾನದ ಆರಂಭದಲ್ಲಿ ಮರಣಿಸಿದರು. ಆತನು ಕೇರಳದ ಕಾಸರ್ಗೋಡದಲ್ಲಿನ ತಲಂಗರದಲ್ಲಿ ಕೊನೆ ಉಸಿರು ಎಳೆದರು ಎಂದು ತಿಳಿದು ಬರುತ್ತದೆ. ಆತನ ಸಮಾಧಿ ಅಲ್ಲಿಯೇ ಇರುವ ಮಾಲಿಕ್ ದಿನಾರ್ ಗ್ರಾಂಡ್ ಜಮಾ ಮಸೀದಿಯಲ್ಲಿ ದರ್ಶಿಸಿಕೊಳ್ಳಬಹುದು. ಕಾಸರ್ಗೋಡ್ ಊರಿನ ಮಧ್ಯೆದಲ್ಲಿ ಮತ್ತೊಂದು ಮಸೀದಿ ಗೂ ಕೂಡ ಭೇಟಿ ನೀಡಬಹುದಾಗಿದೆ. ಇಲ್ಲಿನ ತಲಂಗಾರ ಬೀಚ್ ಪ್ರವಾಸಿಗರಿಗೆ ಆಕರ್ಷಿಸುತ್ತದೆ.

PC::Sidheeq

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಉರ್ಸು ಮಾಲಿಕ್ ಬಿನ್ ದಿನಾರ್
ಉರ್ಸು ಭಾರತೀಯ ಮುಸ್ಲಿಂಗಳು ಒಂದು ಹಬ್ಬದಂತೆ ಆಚರಿಸುತ್ತಾರೆ. ಕೇರಳ ರಾಜ್ಯದಲ್ಲಿ ಮುಸ್ಲಿಂ ಪ್ರಜೆಗಳೆಲ್ಲರೂ ಈ ಉರುಸು ಕಾರ್ಯಕ್ರಮಕ್ಕೆ ಭಕ್ತಿಶ್ರದ್ಧೆಗಳಿಂದ ಪಾಲ್ಗೊಳ್ಳುತ್ತಾರೆ. ಈ ಉರುಸು ಸಾಧಾರಣವಾಗಿ ಮೊಹರಾಂ ತಿಂಗಳಿನಲ್ಲಿ ನಡೆಯುತ್ತದೆ. ಪಟಾಕಿಗಳನ್ನು ಸಿಡಿಸುವುದು, ಧ್ವಜವನ್ನು ಹಾರಿಸುವುದು ಮತ್ತು ಅನ್ನದಾನದ ಕಾರ್ಯಕ್ರಮಗಳನ್ನು ಮಾಡುವುದು ಇನ್ನು ಅನೇಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿರುತ್ತವೆ.


PC::Ashrafnlkn

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಸಿರಾಮಾನ್ ಜಮಾ ಮಸೀದಿ ಮಲಿ ಚರಿತ್ರೆ
ಚರಿತ್ರಾನುಸಾರವಾಗಿ ಕ್ರಿ.ಶ 13411 ರಲ್ಲಿ ಆದ ಪ್ರವಾಹದಿಂದಾಗಿ ಈ ಮಸೀದಿಯು ಅನೇಕ ಭಾಗಗಳಲ್ಲಿ ಧ್ವಂಸಕ್ಕೆ ಗುರಿಯಾಯಿತು. ಇಂದು ನಾವು ನೋಡುತ್ತಿರುವ ಸಿರಾಮಾನ್ ಜಮಾ ಮಸೀದಿ ಹೊಸದಾಗಿ ನಿರ್ಮಾಣ ಮಾಡಲ್ಪಟ್ಟಿದ್ದು.


PC::Challiyan

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ನಿರ್ಮಾಣ ಸೌಂದರ್ಯ
ಹಿಂದೂ ದೇವಾಲಯದ ಶೈಲಿ, ಆಕೃತಿಯನ್ನು ಅನುಸರಿಸಿದೆ. ಮಸೀದಿ ಮಧ್ಯದಲ್ಲಿ ಒಂದು ದೀಪವು ಬೆಳಗುತ್ತಾ ಇರುತ್ತದೆ. ಮಂಗಳಪ್ರದವಾದ ದಿನಗಳಲ್ಲಿ ಯಾವುದೇ ಕುಲ, ಜಾತಿ, ಧರ್ಮ ಎಂಬ ಭೇದ-ಭಾವವಿಲ್ಲದೇ ಪ್ರಜೆಗಳೆಲ್ಲಾ ಇಲ್ಲಿನ ದೀಪವನ್ನು ಬೆಳಗಿಸುತ್ತಾರೆ. ಮಸೀದಿಯಲ್ಲಿ ಇಡಲಾದ ದೀಪವು ಮಸೀದಿಯ ಸೌಂದರ್ಯವನ್ನು ಮತ್ತಷ್ಟು ಹಿಮ್ಮಡಿಗೊಳಿಸುತ್ತದೆ.

PC:Sherenk

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಮಕ್ಕಾ ಅಮೃತಶಿಲೆ
ಅದ್ಭುತವಾದ ಕೆತ್ತನೆಗಳು, ರೋಜ್ ವುಡ್ ಆಕರ್ಷಣೆಯುತವಾಗಿ ಕಾಣುತ್ತದೆ. ಇವುಗಳನ್ನು ಮಕ್ಕಾದಿಂದ ತರಿಸಿದ್ದು ಎಂದು ನಂಬಲಾಗಿದೆ, ಏಕೆಂದರೆ ಇದೇ ಬಗೆಯ ಅಮೃತಶಿಲೆಯು ಮಕ್ಕಾ ಮಸೀದಿಯಲ್ಲಿಯೂ ಕೂಡ ಇದೆ. ಸಿರಾಮಾನ್ ಜಮಾ ಮಸೀದಿ ಭಾರತ ದೇಶದಲ್ಲಿನ ಮೊಹಮ್ಮದಿಯ ಚರಿತ್ರೆಯಲ್ಲಿ ಪ್ರಮುಖವಾಗಿದೆ ಎಂದೇ ಹೇಳಬಹುದು. ಕೊಡಂಗಲ್ಲೂರಿಗೆ ಹೋದ ಯಾತ್ರಿಕರು ತಪ್ಪದೇ ಇಲ್ಲಿಗೆ ಭೇಟಿ ನೀಡುತ್ತಾರೆ.

PC:Shahinmusthafa

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭೇಟಿ ನೀಡಿದವರು
ದೇಶ-ವಿದೇಶಗಳಿಂದ ಅನೇಕ ಪ್ರವಾಸಿಗರು ಈ ಮಸೀದಿಗೆ ಭೇಟಿ ನೀಡುತ್ತಿರುತ್ತಾರೆ. ಭಾರತದ ಮಾಜಿ ರಾಷ್ಟ್ರಪತಿಯಾದ ಎ.ಪಿ.ಜೆ ಅಬ್ದುಲ್ ಕಲಾಂ ಕೂಡ ಭೇಟಿ ನೀಡಿದ್ದಾರೆ.

PC: Fotokannan

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಸಿರಾಮಾನ್ ಮಸೀದಿಯ ಸಮೀಪದಲ್ಲಿರುವ ಪ್ರವಾಸಿ ತಾಣಗಳು
ಯಾವುದೇ ಧರ್ಮ, ಕುಲ ಎಂಬ ಭೇದ-ಭಾವವಿಲ್ಲದೇ ಈ ಪ್ರದೇಶವನ್ನು ದರ್ಶಿಸಿಕೊಳ್ಳಬಹುದು. ಕ್ರಿ.ಶ 52 ರಲ್ಲಿ ಸೆಯಂಟ್ ಥಾಮಸ್ ಕಾಲಿಟ್ಟ ಸ್ಥಳವನ್ನು ಹಾಗು 2 ಕಿ.ಮೀ ದೂರದಲ್ಲಿರುವ ಭಗವತಿ ದೇವಾಲಯವನ್ನು ಕೂಡ ಕಾಣಬಹುದು. ಇಲ್ಲಿ ಮಹಾದೇವ ದೇವಾಲಯ, ಪ್ರಾಚೀನವಾದ ಪ್ಯಾಲೆಸ್ ಕೂಡ ವೀಕ್ಷಿಸಬಹುದು.

PC:Aruna Radhakrishnan


ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿನ ಮೊದಲ ಮಸೀದಿ ಎಲ್ಲಿದೆ ಗೊತ್ತ?

ವಸತಿ
ಕೊಡುಂಗಲ್ಲೂರಿನಲ್ಲಿ ವಸತಿ ವ್ಯವಸ್ಥೆಗಳು ಅನುಕೂಲಕರವಾಗಿದೆ. ಬಾಡಿಗೆಗೆ ಕೊಠಡಿಗಳು ಲಭ್ಯವಿವೆ. ಭಾಷೆ ಬರುವುದಿಲ್ಲವಲ್ಲ ಎಂದು ಗಾಬರಿಗೊಳ್ಳುವ ಅಗತ್ಯವಿಲ್ಲ ಇಲ್ಲಿನ ಜನರು ಇಂಗ್ಲಿಷ್‍ನಲ್ಲಿ ಕೂಡ ಮಾತನಾಡುತ್ತಾರೆ.

PC:Rajeev Nair

ಕೊಡುಂಗಲ್ಲೂರಿಗೆ ಹೇಗೆ ಸೇರಿಕೊಳ್ಳಬೇಕು?

ಕೊಡುಂಗಲ್ಲೂರಿಗೆ ಹೇಗೆ ಸೇರಿಕೊಳ್ಳಬೇಕು?

ವಿಮಾನ ಮಾರ್ಗದ ಮೂಲಕ
ಕೊಡುಂಗಲ್ಲೂರಿಗೆ ಭೇಟಿ ನೀಡುವ ಪ್ರವಾಸಿಗರು ಕೊಚ್ಚಿ ಎಲ್ಲಾ ವಿಧಗಳಿಂದಲೂ ಅನುಕೂಲಕರವಾದ ಪ್ರದೇಶವೇ ಆಗಿದೆ. ಕೊಚ್ಚಿ ವಿಮಾನ ನಿಲ್ದಾಣದಿಂದ ಕೇವಲ 27 ಕಿ.ಮೀ ದೂರದಲ್ಲಿಯೇ ಇದೆ. ವಿಮಾನ ನಿಲ್ದಾಣದಿಂದ ಕ್ಯಾಬ್ ಅಥವಾ ಟ್ಯಾಕ್ಸಿಯ ಮೂಲಕ ಸುಲಭವಾಗಿ ಕೊಡುಂಗಲ್ಲೂರಿಗೆ ಸೇರಿಕೊಳ್ಳಬಹುದು. 122 ಕಿ.ಮೀ ದೂರದಲ್ಲಿ ಕಾಲಿಕಟ್ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣವಿದೆ.

ಕೊಡುಂಗಲ್ಲೂರಿಗೆ ಹೇಗೆ ಸೇರಿಕೊಳ್ಳಬೇಕು?

ಕೊಡುಂಗಲ್ಲೂರಿಗೆ ಹೇಗೆ ಸೇರಿಕೊಳ್ಳಬೇಕು?

ರೈಲು ಮಾರ್ಗದ ಮೂಲಕ
ರೈಲು ಮಾರ್ಗದ ಮೂಲಕ ಭೇಟಿ ನೀಡುವ ಪ್ರಯಾಣಿಕರು ಇರಿಂಜಲಕೂಡ (14 ಕಿ.ಮೀ) ಅಥವಾ ಚಲಕುಡಿ (17 ಕಿ.ಮೀ) ರೈಲ್ವೆ ನಿಲ್ದಾಣದಲ್ಲಿ ಇಳಿದು ಸರ್ಕಾರಿ ಅಥವಾ ಖಾಸಗಿ ವಾಹನಗಳ ಮೂಲಕ ಕೊಡುಂಗಲ್ಲೂರಿಗೆ ಸೇರಿಕೊಳ್ಳಬಹುದು.

ಕೊಡುಂಗಲ್ಲೂರಿಗೆ ಹೇಗೆ ಸೇರಿಕೊಳ್ಳಬೇಕು?

ಕೊಡುಂಗಲ್ಲೂರಿಗೆ ಹೇಗೆ ಸೇರಿಕೊಳ್ಳಬೇಕು?

ರಸ್ತೆ ಮಾರ್ಗದ ಮೂಲಕ
ತ್ರಿಸ್ಸೂರ್, ಕೊಚ್ಚಿ, ಚಲಕುಡಿ, ಪಾತಾನಂ ತಿಟ್ಟ ಇನ್ನಿತರ ಪ್ರದೇಶಗಳಿಂದ ಬರುವ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳು ಕೊಡಂಗಲ್ಲೂರಿಗೆ ತೆರಳುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X