Search
  • Follow NativePlanet
Share
» »ವರ್ಷವಿಡೀ ಚಂದನದ ಲೇಪದಲ್ಲೇ ಮುಳುಗಿರುತ್ತೆ ಈ ಮೂರ್ತಿ..ವರ್ಷದಲ್ಲೊಮ್ಮೆ ಸಿಗುತ್ತೆ ದರ್ಶನ

ವರ್ಷವಿಡೀ ಚಂದನದ ಲೇಪದಲ್ಲೇ ಮುಳುಗಿರುತ್ತೆ ಈ ಮೂರ್ತಿ..ವರ್ಷದಲ್ಲೊಮ್ಮೆ ಸಿಗುತ್ತೆ ದರ್ಶನ

Simhachalam temple

ಹಿರಣ್ಯಕಶಿಪು ಮಗನಾದ ಪ್ರಹ್ಲಾದನಿಗೆ ವಿಷ್ಣುಭಕ್ತನಾದ ಕಾರಣ ಹಿಂಸೆ ನೀಡುತ್ತಿದ್ದನು. ಆತನನ್ನು ಸುಡಲೂ ಪ್ರಯತ್ನಪಟ್ಟರು. ಪ್ರಹ್ಲಾದನನ್ನು ಹಿರಣ್ಯಕಶಿಪುವಿನಿಂದ ರಕ್ಷಿಸಲು ವಿಷ್ಣು ನರಸಿಂಹನ ಅವತಾರ ತಾಳಿರೋ ಕಥೆ ನಿಮಗೆಲ್ಲರಿಗೂ ತಿಳಿದೇ ಇದೆ. ಭಾರತದಲ್ಲಿ ನರಂಸಿಂಹ ಸ್ವಾಮಿ ಮಂದಿರ ಅನೇಕ ಇದೆ. ಆದರೆ ವಿಶಾಖಪಟ್ಟಣದಲ್ಲಿನ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ಮಂದಿರ ಸಿಂಹಾಚಲವನ್ನು ನರಸಿಂಹನ ಮನೆ ಎಂದೇ ಹೇಳಲಾಗುತ್ತದೆ.

ಇಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ... ಬರೀ ಉರಿಯುತ್ತೆ ನೀಲಿ ಜ್ವಾಲೆ !ಇಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ... ಬರೀ ಉರಿಯುತ್ತೆ ನೀಲಿ ಜ್ವಾಲೆ !

ಲಕ್ಷ್ಮೀ ದೇವಿ ಜೊತೆ ನರಸಿಂಹ

ಲಕ್ಷ್ಮೀ ದೇವಿ ಜೊತೆ ನರಸಿಂಹ

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 16ಕಿ.ಮೀ ದೂರದಲ್ಲಿ ಸಿಂಹಾಚಲ ಪರ್ವತ ಇದೆ. ಈ ದೇವಾಲಯವನ್ನು ಸಿಂಹಾಚಲ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ಮಂದಿರದ ವಿಶೇಷತೆ ಎಂದರೆ ಇಲ್ಲಿ ನರಸಿಂಹ ಲಕ್ಷ್ಮೀ ದೇವಿಯ ಜೊತೆಗಿದ್ದಾನೆ.

ವರ್ಷವಿಡೀ ಚಂದನ ಲೇಪನ

ವರ್ಷವಿಡೀ ಚಂದನ ಲೇಪನ

ನರಸಿಂಹನ ಮೂರ್ತಿಗೆ ಯಾವಾಗಲೂ ಚಂದನವನ್ನು ಲೇಪಿಸಲಾಗಿರುತ್ತದೆ. ಹಿಂದಿನಿಂದಲೂ ಇದೇ ರೀತಿ ಪೂಜೆ ಮಾಡುವುದು ಸಂಪ್ರದಾಯವಾಗಿಬಿಟ್ಟಿದೆ. ಪ್ರತಿದಿನ ಚಂದನ ಲೇಪಿತ ನರಸಿಂಹನ ಮೂರ್ತಿಗೆ ಪೂಜೆ ಮಾಡಲಾಗುತ್ತದೆ. ವರ್ಷವಿಡೀ ಹೀಗೆ ಇರುತ್ತದೆ.

ಅಕ್ಷಯ ತೃತೀಯದಂದು ದರ್ಶನ

ಅಕ್ಷಯ ತೃತೀಯದಂದು ದರ್ಶನ

ಕೇವಲ ಅಕ್ಷಯ ತೃತೀಯದಂದು ಮಾತ್ರ ಈ ಲೇಪವನ್ನು ಮೂರ್ತಿಯಿಂದ ತೆಗೆಯಲಾಗುತ್ತದೆ. ಈ ಬಾರಿ ಎಪ್ರಿಲ್ ೧೮ರಂದು ಅಕ್ಷಯ ತೃತೀಯ. ಅದೇ ದಿನ ಜನರು ನರಸಿಂಹನ ಮೂರ್ತಿಯ ದರ್ಶನ ಪಡೆಯಬಹುದಾಗಿದೆ.

ಪ್ರಹ್ಲಾದ ಕಟ್ಟಿಸಿದ ಮಂದಿರ

ಪ್ರಹ್ಲಾದ ಕಟ್ಟಿಸಿದ ಮಂದಿರ

ಈ ಮಂದಿರವನ್ನು ವಿಷ್ಣು ಭಕ್ತ ಪ್ರಹ್ಲಾದ ಕಟ್ಟಿಸಿದ ಎನ್ನಲಾಗುತ್ತದೆ. ನರಸಿಂಹನ ಕೈಯಿಂದ ಹಿರಣ್ಯಕಶಿಪುವಿನ ಸಾವಿನ ನಂತರ ಪ್ರಹ್ಲಾದ ಕಟ್ಟಿಸಿದ ಎನ್ನಲಾಗುತ್ತದೆ. ಆದರೆ ನಂತರ ಅದು ನೆಲಸಮಾಧಿಯಾಗಿತ್ತು.

ನರಸಿಂಹನ ಅವತಾರವೆತ್ತ ವಿಷ್ಣು

ನರಸಿಂಹನ ಅವತಾರವೆತ್ತ ವಿಷ್ಣು

ಪ್ರಹ್ಲಾದನ ತಂದೆ ತನ್ನನ್ನು ಯಾವುದೇ ಮನುಷ್ಯ, ಪ್ರಾಣಿ ಸಂಹರಿಸಬಾರದು. ತಾನು ಆಕಾಶ ಅಥವಾ ಭೂಮಿಯ ಮೇಲಾಗಲಿ ಸಾಯಬಾರದು ಎಂದು ವರ ಪಡೆದಿದ್ದನಂತೆ. ಹಾಗಾಗಿ ವಿಷ್ಣು ತನ್ನನ್ನು ತಾನು ಅರ್ಧ ಮನುಷ್ಯ ಮತ್ತು ಅರ್ಧ ಸಿಂಹವಾಗಿ ಪರಿವರ್ತಿಸಿಕೊಂಡು, ಪ್ರಹ್ಲಾದನ ತಂದೆಯನ್ನು ತನ್ನ ತೊಡೆಯ ಮೇಲೆ ಇಟ್ಟು ಕೊಂಡು, ಆತನ ಕರುಳನ್ನು ಬಗೆದು ಸಂಹರಿಸಿದನು.

13ನೇ ಶತಮಾನದಲ್ಲಿ ಜೀರ್ಣೋದ್ದಾರ

13ನೇ ಶತಮಾನದಲ್ಲಿ ಜೀರ್ಣೋದ್ದಾರ

ಸಿಂಹಾಚಲ ದೇವಸ್ಥಾನದ ಅಧೀಕೃತ ವೆಬ್‌ಸೈಟ್ ಪ್ರಕಾರ ಈ ಮಂದಿರವನ್ನು ಪ್ರಹ್ಲಾದ ನಿರ್ಮಿಸಿದ ಬಳಿಕ ಪುರುರವ ಎನ್ನುವ ರಾಜನೊಬ್ಬ ಇದನ್ನು ಮರು ನಿರ್ಮಾಣ ಮಾಡಿದನು ಎನ್ನಲಾಗುತ್ತದೆ. ಮಣ್ಣಿನಲ್ಲಿ ಹುದುಗಿಹೋಗಿದ್ದ ನರಸಿಂಹನ ಮೂರ್ತಿಯನ್ನು ತೆಗೆದು ಇಲ್ಲಿ ಮತ್ತೆ ಪ್ರತಿಷ್ಠಾಪಿಸಲಾಯಿತು. ನಂತರ ಚಂದನದ ಲೇಪವನ್ನು ಹಚ್ಚಲಾಯಿತು. ವರ್ಷದಲ್ಲಿ ಕೇವಲ ವೈಶಾಖ ತಿಂಗಳ ಮೂರನೇ ದಿನ ಅಂದರೆ ಅಕ್ಷಯ ತೃತೀಯದ ದಿನ ಈ ಮೂರ್ತಿಯಿಂದ ಲೇಪ ತೆಗೆಯಲಾಗುತ್ತದೆ. ೧೩ನೇ ಶತಮಾನದಲ್ಲಿ ಈ ಮಂದಿರದ ಜೀರ್ಣೋದ್ದಾರವನ್ನು ಇಲ್ಲಿನ ರಾಜರು ಮಾಡಿಸಿದ್ದರು.

ಒರಿಸ್ಸಾ ಮತ್ತು ದ್ರಾವಿಡ ಶೈಲಿ

ಒರಿಸ್ಸಾ ಮತ್ತು ದ್ರಾವಿಡ ಶೈಲಿ

ಈ ದೇವಾಲಯದ ವಾಸ್ತು ಶಿಲ್ಪವು ಸುಂದರವಾಗಿದ್ದು, ಒರಿಸ್ಸಾ ಮತ್ತು ದ್ರಾವಿಡ ಶೈಲಿಯ ಮಿಶ್ರಣವನ್ನು ಒಳಗೊಂಡಿದೆ.

 ಶ್ರೀಮಂತ ದೇವಾಲಯಗಳಲ್ಲಿ ಒಂದು

ಶ್ರೀಮಂತ ದೇವಾಲಯಗಳಲ್ಲಿ ಒಂದು

ವಿಶಾಖಪಟ್ಟಣದಲ್ಲಿರುವ ಸಿಂಹಾಚಲ ದೇವಾಲಯವು ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ನರಸಿಂಹನಿಗೆ ಸಮರ್ಪಿಸಲಾಗಿರುವ ಹದಿನೆಂಟು ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ದರ್ಶನದ ಸಮಯ

ದರ್ಶನದ ಸಮಯ

ಬೆಳಗ್ಗೆ 4 ಗಂಟೆ ಮಂಗಳಾರತಿಯಿಂದ ದರ್ಶನ ಆರಂಭವಾಗುತ್ತದೆ. ಬೆಳಗ್ಗೆ 11.30-12 ಹಾಗೂ ಮಧ್ಯಾಹ್ನ 2.30ರಿಂದ 3 ಗಂಟೆ ವರೆಗೆ ಅರ್ಧಗಂಟೆ ದರ್ಶನವಿರುವುದಿಲ್ಲ. ರಾತ್ರಿ 9 ಗಂಟೆಗೆ ಮಂದಿರ ಮುಚ್ಚಲಾಗುತ್ತದೆ.

Read more about: simhachalam temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X