Search
  • Follow NativePlanet
Share
» »ಅಸ್ಸಾಂನ ಸಿಲ್ಚರ್‌ನ ಸುಂದರ ತಾಣಗಳಿವು

ಅಸ್ಸಾಂನ ಸಿಲ್ಚರ್‌ನ ಸುಂದರ ತಾಣಗಳಿವು

ಭೌಗೋಳಿಕವಾಗಿ ಸಿಲ್ಚರ್ ಮಣಿಪುರ ಮತ್ತು ಮಿಜ಼ೋರಾಂಗೆ ಸಂಪರ್ಕದಲ್ಲಿದ್ದು ಇಲ್ಲಿಂದ ದೇಶದ ಇತರೆ ಭಾಗಗಳಿಗೆ ಸಂಪರ್ಕ ಹೊಂದಿದೆ.

ಸಿಲ್ಚರ್ ದಕ್ಷಿಣ ಅಸ್ಸಾಂನಲ್ಲಿರುವ ಕಚಾರ್ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಸಣ್ಣದಾದರೂ ಸುಂದರವಾದ ನಗರ ಸಿಲ್ಚರ್ ವಿಭಿನ್ನವಾಗಿ ಆಕರ್ಷಕವಾಗಿದೆ. ಬರಾಕ್ ನದಿಯು ಈ ನಗರವನ್ನು ಆವರಿಸಿದೆ ಮತ್ತು ನಗರದ ಸೌಂದರ್ಯವನ್ನು ದುಪ್ಪಟ್ಟಾಗಿಸಿದೆ. ಸಿಲ್ಚರ್ ಹಾಗೂ ಸುತ್ತಮುತ್ತಲಿನ ನಗರಗಳ ಸುತ್ತ ಬರಾಕ್ ನದಿಯು ಹಾದು ಹೋಗುವ ಕಾರಣ ಇವುಗಳನ್ನು ಬರಾಕ್ ನದಿಯ ಕಣಿವೆ ಪ್ರದೇಶಗಳು ಎಂದು ಕರೆಯಲಾಗುತ್ತದೆ.

ಕೃಷಿ ಉತ್ಪನ್ನ ಸಂಸ್ಕರಣಾ ಕೇಂದ್ರ

ಕೃಷಿ ಉತ್ಪನ್ನ ಸಂಸ್ಕರಣಾ ಕೇಂದ್ರ

PC: PP Yoonus
ಭೌಗೋಳಿಕವಾಗಿ ಸಿಲ್ಚರ್ ಮಣಿಪುರ ಮತ್ತು ಮಿಜ಼ೋರಾಂಗೆ ಸಂಪರ್ಕದಲ್ಲಿದ್ದು ಇಲ್ಲಿಂದ ದೇಶದ ಇತರೆ ಭಾಗಗಳಿಗೆ ಸಂಪರ್ಕ ಹೊಂದಿದೆ. ಈ ಕಾರಣದಿಂದಾಗಿ ಇದು ಆರ್ಥಿಕವಾಗಿ ಯಾವಾಗಲೂ ಹೆಚ್ಚು ಚಾಲ್ತಿಯಲ್ಲಿರುತ್ತದೆ. ಇದರ ಜೊತೆಗೆ ಇಲ್ಲಿನ ಚಹಾದ ಎಸ್ಟೇಟ್ ಗಳು ಇಲ್ಲಿನ ಆರ್ಥಿಕತೆಗೆ ಹೆಚ್ಚಿನ ಮಹತ್ವ ತಂದಿದೆ. ಇದು ಭತ್ತ, ಚಹಾ ಮತ್ತು ಇತರ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಕೇಂದ್ರ ಸ್ಥಳವೂ ಆಗಿದೆ.

ಸಿಲ್ಚರ್ ಪ್ರವಾಸೋದ್ಯಮ

ಸಿಲ್ಚರ್ ಪ್ರವಾಸೋದ್ಯಮ

PC: Awhitecicada
ಸಿಲ್ಚರ್ ಸುತ್ತಮುತ್ತಲಿನ ಸ್ಥಳಗಳಲ್ಲಿ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿವೆ. ನಗರದ ಸಾಮಾನ್ಯ ನೋಟ ನಿಮ್ಮನ್ನು ಬೇಸರಗೊಳಿಸಿದರೂ ಬೆಟ್ಟದ ಮೇಲಿನ ದೇವಾಲಯಗಳು ಅಲ್ಲಿಗೆ ಸಾಗಿ ಹೋಗುವ ದಾರಿ ನಿಮ್ಮನ್ನು ರಂಜಿಸದೇ ಇರದು. ಸಿಲ್ಚರ್ ಪ್ರವಾಸೋದ್ಯಮದ ಪ್ರಮುಖ ಸ್ಥಳ ಕಾಂಚಾ ಕಾಂತಿ ದೇವಿ ದೇವಾಲಯವಾಗಿದೆ. ಇದು ನಗರದಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗಳಿಬ್ಬರಿಂದಲೂ ಬಹಳವೇ ಪ್ರಶಂಸೆಗೆ ಪಾತ್ರವಾದ ದೇವಾಲಯವಾಗಿದೆ.

ಸಿಲ್ಚರ್ ವಾಯುಗುಣ

ಸಿಲ್ಚರ್ ವಾಯುಗುಣ

PC: Abymac
ಇತರೆ ಸ್ಥಳಗಳೆಂದರೆ ಭುವನ್ ಮಹಾದೇವ್ ದೇವಾಲಯ, ಹುತಾತ್ಮರ ಸಮಾಧಿ ಮತ್ತು ಖಾಸ್ ಪುರ್. ಸಿಲ್ಚರ್ ವಾಯುಗುಣದ ಪ್ರಮುಖ ಅಂಶಗಳೆಂದರೆ ಹೆಚ್ಚಾದ ಮಳೆ, ಶುಷ್ಕ ಬೇಸಗೆ ಮತ್ತು ಆಹ್ಲಾದಕರವಾದ ಚಳಿಗಾಲ.

ಸಿಲ್ಚರ್ ತಲುಪುವುದು ಹೇಗೆ?

ಸಿಲ್ಚರ್ ತಲುಪುವುದು ಹೇಗೆ?

PC: Mahasish
ದಕ್ಷಿಣ ಅಸ್ಸಾಂ ನಲ್ಲಿರುವ ಈ ನಗರದಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ನಗರದ ಮೂಲಕ ಹಾದು ಹೋಗುವ ರಾಷ್ಟೀಯ ಹೆದ್ದಾರಿ ಇದ್ದು ನಗರವನ್ನು ದೇಶದ ನಾನಾ ಭಾಗಗಳಿಗೆ ಸಂಪರ್ಕಿಸುತ್ತದೆ. ಇಲ್ಲಿನ ವಿಮಾನ ನಿಲ್ದಾಣದಿಂದ ಕೋಲ್ಕತ್ತಾ ಮತ್ತು ಗುವಾಹಟಿಗೆ ಪ್ರತಿದಿನ ವಿಮಾನ ಸಂಚಾರವಿದ್ದು ಸಿಲ್ಚರ್ ನಿಂದ ಗುವಾಹಟಿಯನ್ನು ಸಂಪರ್ಕಿಸುವ ರಾ.ಹೆ. 44 ಅಷ್ಟೊಂದು ಸುಸ್ಥಿತಿಯಲ್ಲಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X