Search
  • Follow NativePlanet
Share
» » ಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿ

ಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿ

ಜಮ್ಮುವಿನಲ್ಲಿರುವ ವೈಷ್ಣೋದೇವಿಯ ದರ್ಶನ ಮಾಡಬೇಕೆಂಬುದು ಹೆಚ್ಚಿನವರಿಗೆ ಮನಸ್ಸಿರುತ್ತದೆ. ಆದರೆ ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗೋದಿಲ್ಲ. ಅಂತವರಿಗಾಗಿ ಗುಲ್ಬರ್ಗಾದಲ್ಲಿ ಒಂದು ಹೊಸ ವೈಷ್ಣೋದೇವಿ ಮಂದಿರವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನವು ಜಮ್ಮುವಿನ ವೈಷ್ಣೊದೇವಿಯ ದೇವಸ್ಥಾನವನ್ನೇ ಹೋಲುತ್ತದೆ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC: youtube

ಕಲಬುರ್ಗಿಯ ಹೊರವಲಯದಲ್ಲಿನ ಸೈಯ್ಯದ್‌ ಚಿಂಚೋಳಿ ಬಳಿಯ ರಿಂಗ್‌ ರಸ್ತೆಯಲ್ಲಿದೆ ವೈಷ್ಣೋದೇವಿ ದೇವಸ್ಥಾನ. ಇಲ್ಲಿ ಗುಹೆಯನ್ನು ನಿರ್ಮಿಸಲಾಗಿದೆ. ಇದರೊಳಗೆ ಹೋದರೆ ವೈಷ್ಣೋದೇವಿಯ ದರ್ಶನವಾಗುತ್ತದೆ. ಪ್ರತಿದಿನ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು<br /> ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು

ಗಬರಾದಿ ರಿಲಿಜಿಯಸ್‌ ಟ್ರಸ್ಟ್‌

ಗಬರಾದಿ ರಿಲಿಜಿಯಸ್‌ ಟ್ರಸ್ಟ್‌

PC: youtube

ಈ ದೇವಸ್ಥಾನದ ಕಟ್ಟಡವು ನೋಡಲು ಸುಂದರವಾಗಿದ್ದು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ. ಗಬರಾದಿ ರಿಲಿಜಿಯಸ್‌ ಟ್ರಸ್ಟ್‌ ವತಿಯಿಂದ ನಿರ್ಮಾಣವಾಗಿರುವ ದೇವಸ್ಥಾನ ಇದಾಗಿದೆ.

 ವೈಷ್ಣೋದೇವಿ ದೇವಸ್ಥಾನ

ವೈಷ್ಣೋದೇವಿ ದೇವಸ್ಥಾನ

PC: youtube

ಈ ದೇವಸ್ಥಾನವು ಜಮ್ಮುವಿನ ವೈಷ್ಣೋದೇವಿ ದೇವಸ್ಥಾನವನ್ನೇ ಹೋಲುತ್ತದೆ. ಜಮ್ಮುವಿನದು ನೈಸರ್ಗಿಕ ದೇವಾಲಯವಾಗಿದೆ. ಆದರೆ ಇದು ಮಾನವ ನಿರ್ಮಿತ ದೇವಾಲಯವಾಗಿದೆ. ಇದೊಂದು ಗುಹಾ ದೇವಾಲಯ.

ಶಬರಿಮಲೆ ಪ್ರಸಾದದಿಂದ ಈಗ್ಲೇ 35 ಕೋಟಿ ರೂ. ಆದಾಯ ಬರುತ್ತಂತೆ, ಇನ್ನು ಎಷ್ಟು ಬರುತ್ತೋ !ಶಬರಿಮಲೆ ಪ್ರಸಾದದಿಂದ ಈಗ್ಲೇ 35 ಕೋಟಿ ರೂ. ಆದಾಯ ಬರುತ್ತಂತೆ, ಇನ್ನು ಎಷ್ಟು ಬರುತ್ತೋ !

108 ಅಡಿ ಎತ್ತರ

108 ಅಡಿ ಎತ್ತರ

PC: youtube

ವೈಷ್ಣೋದೇವಿ ದೇವಸ್ಥಾನ 108 ಅಡಿ ಎತ್ತರದವರೆಗೆ ನಿರ್ಮಿಸಲಾಗಿದೆ. ಜಮ್ಮು ಕಾಶ್ಮೀರದ ಮಾದರಿಯಲ್ಲಿಯೇ ನಿರ್ಮಿಸಿರುವುದರಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಗುಲ್ಬರ್ಗಾದಲ್ಲಿನ ಬೃಹತ್ ದೇವಾಲಯ

ಗುಲ್ಬರ್ಗಾದಲ್ಲಿನ ಬೃಹತ್ ದೇವಾಲಯ

PC: youtube

ಜಮ್ಮುವಿಗೆ ಹೋಗಿ ವೈಷ್ಣೋದೇವಿಯ ದರ್ಶನ ಪಡೆಯಲು ಸಾಧ್ಯವಾಗದ ಜನರಿಗೆ ಈ ದೇವಸ್ಥಾನದ ಮೂಲಕ ಗುಲ್ಬರ್ಗಾದಲ್ಲೇ ವೈಷ್ಣೋ ದೇವಿಯ ದರ್ಶನವಾಗಲಿದೆ. ಸುಮಾರು 1 ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ. ಗುಲ್ಬರ್ಗಾದಲ್ಲಿನ ಬೃಹತ್ ದೇವಾಲಯ ಇದು ಎನ್ನಬಹುದು.

4ವರ್ಷದಲ್ಲಿ ಮಂದಿರ ನಿರ್ಮಾಣ

4ವರ್ಷದಲ್ಲಿ ಮಂದಿರ ನಿರ್ಮಾಣ

PC: youtube

ಸುಮಾರು 4 ವರ್ಷಗಳಿಂದ ಈ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನೂ ಕೆಲವು ನಿರ್ಮಾಣ ಕಾರ್ಯಗಳು ಬಾಕಿ ಇವೆ. ಬಿಹಾರ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರದ ಕೆಲಸಗಾರರು ಈ ದೇವಸ್ಥಾನದ ನಿರ್ಮಾಣದಲ್ಲಿ ತೊಡಗಿದ್ದಾರೆ.

ಹೀಗೆ ಮಾಡಿದ್ರೆ ಕೆಲವೇ ನಿಮಿಷದಲ್ಲಿ ತತ್ಕಾಲ್ ಟಿಕೇಟ್ ಕನ್ಫಮ್ ಆಗೋಗುತ್ತೆಹೀಗೆ ಮಾಡಿದ್ರೆ ಕೆಲವೇ ನಿಮಿಷದಲ್ಲಿ ತತ್ಕಾಲ್ ಟಿಕೇಟ್ ಕನ್ಫಮ್ ಆಗೋಗುತ್ತೆ

ಅಮರನಾಥ ಗುಹೆ

ಅಮರನಾಥ ಗುಹೆ

PC: youtube

ಈ ದೇವಸ್ಥಾನವನ್ನು ಇನ್ನೂ ಅಭಿವೃದ್ದಿಪಡಿಸಲಾಗುತ್ತಿದೆ. ಅಮರನಾಥ ಗುಹೆಯನ್ನೂ ಈ ದೇವಸ್ಥಾನದೊಳಗೆ ಸೃಷ್ಠಿಸುವ ಕಾರ್ಯವನ್ನು ಈ ದೇವಸ್ಥಾನದ ಸಮಿತಿಯು ನಡೆಸುತ್ತಿದೆ.

ಯಾವ್ಯಾವ ದೇವರಿದ್ದಾರೆ

ಯಾವ್ಯಾವ ದೇವರಿದ್ದಾರೆ

PC: youtube

ಕಲಬುರ್ಗಿಯಲ್ಲಿ ಹೊಸತಾಗಿ ನಿರ್ಮಿಸಲಾಗಿರುವ ದೇವಸ್ಥಾನ ಇದಾಗಿದೆ. ಇಲ್ಲಿ ಕೇವಲ ವೈಷ್ಣೋದೇವಿ ಮಾತ್ರವಲ್ಲ ಗಣೇಶ, ಬಾಲಾಜಿ, ಆಂಜನೇಯ. ಕಾಲಬೈರವ, ಮಹಾಕಾಳಿಯ ದರ್ಶನವೂ ಆಗುತ್ತದೆ.

ಲವ-ಕುಶರು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದು ಇಲ್ಲೇಲವ-ಕುಶರು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದು ಇಲ್ಲೇ

ಭೇಟಿ ನೀಡಿ

ಭೇಟಿ ನೀಡಿ

PC: youtube

ಜಮ್ಮುವಿನ ವೈಷ್ಣೋದೇವಿಯನ್ನು ಗುಲ್ಬರ್ಗಾದಲ್ಲೇ ನೋಡಬಹುದು ಎನ್ನುವುದು ಜನರ ಅಭಿಪ್ರಾಯವಾಗಿದೆ. ನೀವು ಗುಲ್ಬರ್ಗಾಕ್ಕೆ ಭೇಟಿ ನೀಡಿದಾಗ ಇಲ್ಲಿನ ವೈಷ್ಣೋದೇವಿ ದೇವಸ್ಥಾನದ ದರ್ಶನ ಪಡೆಯಲೇ ಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X