Search
  • Follow NativePlanet
Share
» »ಮಹಾಬಲಿಪುರಂನ ಶೋರ್ ದೇವಸ್ಥಾನದ ಸೌಂದರ್ಯ ನೋಡಿದ್ದೀರಾ?

ಮಹಾಬಲಿಪುರಂನ ಶೋರ್ ದೇವಸ್ಥಾನದ ಸೌಂದರ್ಯ ನೋಡಿದ್ದೀರಾ?

ಮಹಾಬಲಿಪುರಂನ ಹಳೆಯ ಶೋರ್ ದೇವಾಲಯಗಳು ಇತಿಹಾಸ ಕಳೆದುಕೊಂಡಿರುವ ದೇವಾಲಯಗಳ ಸರಣಿಗಳಲ್ಲಿ ಸೇರಿಕೊಂಡಿವೆ.

ಮಹಾಬಲಿಪುರಂ ತಮಿಳುನಾಡಿನ ಕಾಂಚೀಪುರಂ ಸಮೀಪದಲ್ಲಿರುವ ಒಂದು ಪ್ರಮುಖ ದೇವಾಲಯವಾಗಿದ್ದು, ಅದರ ಇತಿಹಾಸ ಮತ್ತು ಅದರ ವಾಸ್ತುಶಿಲ್ಪದ ಅದ್ಭುತತೆಗಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಪ್ರಾಚೀನ ದೇವಾಲಯಗಳು ಮತ್ತು ಅವುಗಳ ಪ್ರಾಮುಖ್ಯತೆಗಳು ವಿಶ್ವದ ವಿವಿಧ ಮೂಲೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿನ ಕಟ್ಟಡಗಳು ಮತ್ತು ಹಳೆಯ ಸ್ಮಾರಕಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪರಿಗಣಿಸಲಾಗಿದೆ.

ಶೋರ್ ದೇವಾಲಯ

ಶೋರ್ ದೇವಾಲಯ

PC:Sakthibalan
ಮಹಾಬಲಿಪುರಂನ ಹಳೆಯ ಶೋರ್ ದೇವಾಲಯಗಳು ಇತಿಹಾಸ ಕಳೆದುಕೊಂಡಿರುವ ದೇವಾಲಯಗಳ ಸರಣಿಗಳಲ್ಲಿ ಸೇರಿಕೊಂಡಿವೆ. ಪಲ್ಲವ ರಾಜವಂಶದ ಕುರುಹುಗಳು ಸ್ಮಾರಕಗಳು ಈ ದೇವಾಲಯಗಳಲ್ಲಿ ಕಂಡುಬರುತ್ತವೆ. ಶೋರ್ ದೇವಸ್ಥಾನಗಳು ಮುಖ್ಯವಾಗಿ ಬಂಡೆಯನ್ನು ಕಡಿದು ನಿರ್ಮಿಸಲಾಗಿರುವಂತವು, ಇದು ಏಕಶಿಲೆಯವು. ದೇವಸ್ಥಾನಗಳ ಪ್ರಸ್ತುತ ಸ್ಥಿತಿಯು ಅದರ ವಯಸ್ಸು ಮತ್ತು ಯುಗವನ್ನು ತೋರಿಸುತ್ತದೆ. ಶೋರ್ ದೇವಾಲಯಗಳು ಗುಹಾ ದೇವಾಲಯಗಳು, ರಥ ದೇವಾಲಯಗಳು ಮತ್ತು ರಚನಾತ್ಮಕ ಶಿಲ್ಪಗಳನ್ನು ಹೊಂದಿರುವ ದೇವಾಲಯಗಳಾಗಿವೆ.

ಹಳೆಯ ವಾಸ್ತುಶಿಲ್ಪಗಳು

ಹಳೆಯ ವಾಸ್ತುಶಿಲ್ಪಗಳು

PC:Balasubramanian S
ರಥಗಳು ಮಹಾಬಲಿಪುರಂನ ಹಳೆಯ ವಾಸ್ತುಶಿಲ್ಪಗಳಾಗಿವೆ. ರಥಗಳ ಈಶಾನ್ಯಕ್ಕೆ ಮಹಾಬಲಿಪುರಂನ ಶೋರ್ ದೇವಾಲಯವಿದೆ. ಪಲ್ಲವ ರಾಜ ರಾಜಸಿಂಹ ಆಳ್ವಿಕೆಯಲ್ಲಿ ಈ ಯಾತ್ರಾ ಕೇಂದ್ರವನ್ನು ನಿರ್ಮಿಸಲಾಯಿತು. 'ರಾಜಸಿಂಹ'ವನ್ನು ರಾಜ ಸಿಂಹ ದೇವರೆಂದು ಹೆಸರಿಸಲಾಗಿದೆ. ಚೆನ್ನಾಗಿ ಬಾಗಿದ ಕಂಬಗಳು ಮತ್ತು ವಾಸ್ತುಶಿಲ್ಪವು ವಿಶ್ವದ ವಿವಿಧ ಮೂಲೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಶಿವನ ದೇವಸ್ಥಾನವು ಹಿಂದೂ ಪುರಾಣಗಳನ್ನು ತೋರಿಸುವ ನಂದಿಗಳ ರಚನೆಯನ್ನು ಹೊಂದಿದೆ.

ದೇವಸ್ಥಾನದ ಗೋಪುರ

ದೇವಸ್ಥಾನದ ಗೋಪುರ

PC:Pratapy9
ಗರ್ಭಾಗೃಹದಲ್ಲಿ ಶಿವಲಿಂಗವಿದೆ, ಹಾಗೆಯೇ ಇನ್ನೊಂದು ಗುಡಿಯಲ್ಲಿ ಮಲಗಿರುವ ಸ್ಥಿತಿಯಲ್ಲಿ ವಿಷ್ಣುವಿನ ಮೂರ್ತಿಯಿದೆ. ಪೂರ್ವವನ್ನು ಪವಿತ್ರ ಭಾಗವೆಂದು ಪರಿಗಣಿಸಲಾಗುತ್ತದೆ. ಶೋರ್ ದೇವಸ್ಥಾನದ ಗೋಪುರದ ಸುಂದರವಾದ ಶಿಲ್ಪವು ಗುಪ್ತರ ಸಾಮ್ರಾಜ್ಯ ಮತ್ತು ಸಂಸ್ಕೃತಿಯ ಗೌರವಾರ್ಥದ ಪ್ರತೀಕವಾಗಿದೆ. ಕಾಂಚೀಪುರಂನಲ್ಲಿರುವ ಕೈಲಾಶನಾಥ ದೇವಸ್ಥಾನವು ಪುರಾತನ ಶಿಲ್ಪ ಮತ್ತು ವಾಸ್ತುಶಿಲ್ಪದ ಮತ್ತೊಂದು ಉದಾಹರಣೆಯಾಗಿದೆ. ಮಹಾಬಲಿಪುರಂಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಶೋರ್ ದೇವಾಲಯಕ್ಕೊಮ್ಮೆ ಭೇಟಿ ಮಾಡಲೇ ಬೇಕು.

 ಸುನಾಮಿಯಿಂದ ನಾಶವಾಯಿತು

ಸುನಾಮಿಯಿಂದ ನಾಶವಾಯಿತು

PC:Ravichandar84
ಡಿಸೆಂಬರ್ 2004 ರ ಸುನಾಮಿಯು ಕೊರೊಮಾಂಡಲ್‌ನ ಕರಾವಳಿಯನ್ನು ಹೊಡೆದು ಗ್ರಾನೈಟ್‌ ಕಲ್ಲುಗಳಿಂದ ನಿರ್ಮಿಸಲಾಗಿದ್ದ ಹಳೆಯ ದೇವಾಲಯಗಳನ್ನೆಲ್ಲಾ ಜಲಸಮಾಧಿ ಮಾಡಿತು. ಯುರೋಪಿಯನ್ನರ ಕಾಲದಲ್ಲಿ ವಿವರಿಸಲಾದ ಏಳು ಪಗೋಡಗಳ ಪೈಕಿ ಮಹಾಬಲೇಪುರಂ ಒಂದು ಭಾಗವಾಗಿದೆ. ಅದರಲ್ಲಿ ಆರು ದೇವಾಲಯಗಳು ಸಮುದ್ರದಲ್ಲಿ ಮುಳುಗಿ ಹೋದವು, ಜೊತೆಗೆ 7 ನೇ ಮತ್ತು 8 ನೇ ಶತಮಾನಗಳಲ್ಲಿ ಪಲ್ಲವ ಕಾಲದಲ್ಲಿ ಗೋಡೆಗಳು ಮತ್ತು ದೇವಸ್ಥಾನಗಳನ್ನು ಅಲಂಕರಿಸಲು ಬಳಸುವ ಸಿಂಹಗಳು, ಆನೆಗಳು ಮತ್ತು ನವಿಲುಗಳ ಕೆಲವು ಪ್ರಾಚೀನ ಶಿಲ್ಪಕಲೆಗಳನ್ನು ಸಹ ಸುನಾಮಿ ಕೊಚ್ಚಿಕೊಂಡು ಹೋಯಿತು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Namrta Rai
ಮಹಾಬಲಿಪುರಂನ ಶೋರ್ ದೇವಸ್ಥಾನಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳುಗಳು. ದೇವಸ್ಥಾನಕ್ಕೆ ಭೇಟಿ ನೀಡಲು ಬೆಳಿಗ್ಗೆ ಅಥಬಾ ಸಂಜೆಯ ಸಮಯ ಸಾಮಾನ್ಯವಾಗಿ ಸೂಕ್ತವಾಗಿದೆ. ಅಲ್ಲದೆ, ಜನವರಿ, ಫೆಬ್ರುವರಿಯಲ್ಲಿ ಮಹಾಬಲಿಪುರಂ ನೃತ್ಯ ಉತ್ಸವ ನಡೆಯುತ್ತದೆ ಹಾಗಾಗಿ ಈ ಸಮಯವೂ ಪರಿಪೂರ್ಣವಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತವು ದೇವಸ್ಥಾನಕ್ಕೆ ಸುಂದರವಾದ ಮೋಡಿಯನ್ನು ಮಾಡುತ್ತವೆ . ಆದ್ದರಿಂದ ಅದನ್ನು ನೋಡಲು ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಭೇಟಿ ಮಾಡಬೇಕು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Tushraa
ಸಾರಿಗೆಯ ಎಲ್ಲಾ ಮಾರ್ಗಗಳ ಮೂಲಕ ಮುಖ್ಯ ನಗರಕ್ಕೆ ಸಂಪರ್ಕವಿದೆ. ಕಾಂಚೀಪುರಂ, ಪಾಂಡಿಚೇರಿ ಮತ್ತು ಇತರ ಹತ್ತಿರದ ಪ್ರವಾಸಿ ಪ್ರದೇಶಗಳಿಂದ ನೀವು ಮಹಾಬಲಿಪುರಕ್ಕೆ ಬಸ್ ಮೂಲಕ ತಲುಪಬಹುದು. ಒಮ್ಮೆ ನೀವು ಮಹಾಬಲಿಪುರವನ್ನು ತಲುಪಿದರೆ, ಸಣ್ಣ ಪಟ್ಟಣದಿಂದ ನೀವು ಸುಲಭವಾಗಿ ನಡೆದುಕೊಂಡು ಹೋಗಬಹುದು ಅಥವಾ ಸೈಕಲ್ ಮಾಡಬಹುದು. ತಮಿಳುನಾಡಿನಲ್ಲಿ ಎಲ್ಲಿಂದಲಾದರೂ ನಿಯಮಿತವಾದ ಬಸ್ಸುಗಳು ಮತ್ತು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X