Search
  • Follow NativePlanet
Share
» »ಈ ಸುರಂಗದಲ್ಲಿ ಹೋದವರು ಮತ್ತೆ ಎಂದಿಗೂ ಹಿಂದಿರುಗಿಲ್ಲ.....

ಈ ಸುರಂಗದಲ್ಲಿ ಹೋದವರು ಮತ್ತೆ ಎಂದಿಗೂ ಹಿಂದಿರುಗಿಲ್ಲ.....

ಸುರಂಗ ಮಾರ್ಗಗಳು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲವಿರುತ್ತದೆ. ಅಲ್ಲಿ ಏನಿರುತ್ತದೆ? ಆ ಸುರಂಗ ಎಲ್ಲಿಗೆ ತಲುಪುತ್ತದೆ ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಾ ಇರುತೇವೆ. ಇತಿಹಾಸವನ್ನು ಹೊಂದಿರುವ ಕೋಟೆಗಳಲ್ಲಿ, ದೇವಾಲಯಗಳಲ್ಲಿ, ಗುಹೆಗಳಲ್ಲಿ ಇ

ಸುರಂಗ ಮಾರ್ಗಗಳು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲವಿರುತ್ತದೆ. ಅಲ್ಲಿ ಏನಿರುತ್ತದೆ? ಆ ಸುರಂಗ ಎಲ್ಲಿಗೆ ತಲುಪುತ್ತದೆ ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಾ ಇರುತೇವೆ. ಇತಿಹಾಸವನ್ನು ಹೊಂದಿರುವ ಕೋಟೆಗಳಲ್ಲಿ, ದೇವಾಲಯಗಳಲ್ಲಿ, ಗುಹೆಗಳಲ್ಲಿ ಇಂಥಹ ಸುರಂಗಗಳನ್ನು ಕಾಣಬಹುದು. ಹಾಗಾದರೆ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ಗುಹಾ ದೇವಾಲಯದಿಂದ ಅಮರನಾಥ ದೇವಾಲಯಕ್ಕೆ ಸುರಂಗ ಮಾರ್ಗ ಇದೆಯಂತೆ, ಆದರೆ ನಿಷೇಧಿಸಿದ್ದಾರೆ. ಇಷ್ಟೇ ಅಲ್ಲ ಈ ಗುಹಾ ದೇವಾಲಯದಲ್ಲಿ 2 ಪಾರಿವಾಳ ಕೂಡ ಇವೆ. ಅವು ಪುಣ್ಯ ಮಾಡಿರುವವರಿಗೆ ಮಾತ್ರ ಕಾಣಿಸುತ್ತದೆ ಎಂತೆ.

ಅಷ್ಟಕ್ಕೂ ಆ ದೇವಾಲಯದಲ್ಲಿ ಹಲವಾರು ಅದ್ಭುತಗಳು ನಡೆಯುತ್ತವೆ. ಆ ಸುರಂಗ ಮಾರ್ಗದ ಮೂಲಕ ತೆರಳಿದವರು ಏಕೆ ಹಿಂದಿರುಗುವುದಿಲ್ಲ? ಎಂಬ ಹಲವಾರು ನಿಗೂಢವಾದ ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಯೋಣ.

ಎಲ್ಲಿದೆ ಆ ದೇವಾಲಯ?

ಎಲ್ಲಿದೆ ಆ ದೇವಾಲಯ?

ಆ ದೇವಾಲಯದ ಹೆಸರು ಶಿವಕೋಹ್ರಿ. ಈ ದೇವಾಲಯವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಯಾಸಿ ಜಿಲ್ಲೆಯಲ್ಲಿರುವ ಒಂದು ಹಿಂದೂ ದೇವಾಲಯವಾಗಿದೆ. ಇಲ್ಲಿ ಮಹಾಶಿವನು ನೆಲೆಸಿದ್ದಾನೆ. ಈ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಪಡೆದ ತೀರ್ಥಕ್ಷೇತ್ರವಾಗಿದ್ದು ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.


Sahuajeet

ಗುಹಾಲಯ

ಗುಹಾಲಯ

ಕೋಹ್ರಿ ಎಂದರೆ ಗುಹೆ ಮತ್ತು ಶಿವ ಎಂದರೆ ಆ ಪರಮಶಿವ. ಹಾಗಾಗಿ ಈ ಗುಹಾ ದೇವಾಲಯವನ್ನು ಶಿವನ ಗುಹೆ ಎಂದು ಕರೆಯುತ್ತಾರೆ. ಈ ನೈಸರ್ಗಿಕವಾದ ಗುಹೆಯು ಸುಮಾರು 200 ಮೀಟರ್ ಉದ್ದವಾಗಿದೆ. ಹಾಗೆಯೇ ಒಂದು ಮೀಟರ್ ವಿಶಾಲ ಮತ್ತು 2 ಮೀಟರ್ ಎತ್ತರವಿದೆ. ಇಲ್ಲಿ ಸ್ವಯಂ ನಿರ್ಮಿತ ಶಿವಲಿಂಗವಿದೆ.

Sahuajeet

ಪ್ರವೇಶ

ಪ್ರವೇಶ

ಈ ಗುಹಾ ದೇವಾಲಯ ಎಷ್ಟು ದೊಡ್ಡದಾಗಿದೆ ಎಂದರೆ 300 ಭಕ್ತರು ಒಮ್ಮೆಲೆ ಗರ್ಭಗುಡಿಯ ಪ್ರಾಂಗಣದಲ್ಲಿ ಶಿವನನ್ನು ದರ್ಶನ ಮಾಡಿಕೊಳ್ಳಬಹುದು. ಇದರ ಗುಮ್ಮಟ್ವು ಹೆಚ್ಚಿನ ಸಂಖ್ಯೆ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸುವಷ್ಟು ವಿಶಾಲವಾಗಿದೆ. ಗುಹೆಯ ಒಳ ಕೋಣೆ ಚಿಕ್ಕದಾಗಿದೆ.

Devika Robin Singh

ಸುರಂಗ ಮಾರ್ಗ

ಸುರಂಗ ಮಾರ್ಗ

ಆಶ್ಚರ್ಯ ಏನಪ್ಪ ಎಂದರೆ ಮಂಜಿನಿಂದ ನೈಸರ್ಗಿಕವಾಗಿ ಉದ್ಭವಿಸುವ ಶಿವಲಿಂಗ ಅಮರನಾಥ ಗುಹಾ ದೇವಾಲಯಕ್ಕೆ ಈ ಶಿವಕೋಹ್ರಿ ಗುಹೆಯು ಸಂಪರ್ಕ ಸಾಧಿಸುತ್ತದೆ ಎಂತೆ. ಆ ಸಂಪರ್ಕವು ವಿಶೇಷವಾಗಿ ಸುರಂಗ ಮಾರ್ಗವಾಗಿದೆ. ಶಿವನನ್ನು ಆರಾಧಿಸುವ ಸಾಧುಗಳು ಹೆಚ್ಚಾಗಿ ಈ ಗುಹಾ ದೇವಾಲಯಕ್ಕೆ ತೆರಳುತ್ತಿದ್ದರಂತೆ.


Itzseoprasoon

ಸಾಧುಗಳು

ಸಾಧುಗಳು

ಆ ಸಾಧುಗಳು ಈ ಶಿವಕೋಹ್ರಿ ಗುಹಾ ದೇವಾಲಯದಿಂದ ಅಮರನಾಥ ದೇವಾಲಯಕ್ಕೆ ತೆರಳಲು ಸುರಂಗ ಮಾರ್ಗವಿದೆ. ಆ ಸುರಂಗದ ಮೂಲಕ ತೆರಳಿದ ಸಾಧುಗಳು ಎಂದು ಹಿಂದಿರುಗಿಲ್ಲವಂತೆ. ಹಾಗಾಗಿಯೇ ಆ ಸುರಂಗ ಮಾರ್ಗಗಳು ಪ್ರಸ್ತುತದಲ್ಲಿ ಮುಚ್ಚಲಾಗಿದೆ.

ಸ್ವಾಭಾವಿಕ

ಸ್ವಾಭಾವಿಕ

ಸ್ವಾಭಾವಿಕವಾಗಿ ಉದ್ಭವಿಸಿದ ಶಿವನನ್ನೇ ಅಲ್ಲದೇ ಇತರ ದೇವತೆಗಳನ್ನು ಕೂಡ ದರ್ಶನ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಪಾರ್ವತಿ, ಗಣೇಶ ಮತ್ತು ನಂದಿ ದೇವತೆಗಳ ಹೋಲಿಕೆ ಹೊಂದಿರುವ ನೈಸರ್ಗಿಕವಾದ ಮೂರ್ತಿಗಳನ್ನು ಕೂಡ ಕಾಣಬಹುದು.

Sahuajeet

ಹಾವಿನ ರಚನೆ

ಹಾವಿನ ರಚನೆ

ಗುಹೆಯ ಛಾವಣಿಯನ್ನು ಹಾವಿನ ರಚನೆಗಳಿಂದ ಕೆತ್ತಲಾಗಿದೆ. ಇದು ಕೂಡ ಸ್ವಾಭಾವಿಕವೇ ಹೊರತು ಮಾನವ ನಿರ್ಮಿತವಾದ ಕೆತ್ತನೆಗಳಲ್ಲ. ಆಶ್ಚರ್ಯ ಏನಪ್ಪ ಎಂದರೆ ಗುಹೆಯ ಮೇಲ್ಛಾವಣಿಯಿಂದ ಪ್ರತಿ ನಿತ್ಯ ಶಿವನ ಮೇಲೆ ನೀರು ಬೀಳುತ್ತಿರುತ್ತದೆ. ಇದರಿಂದ ಶಿವನಿಗೆ ನಿತ್ಯವು ಅಭಿಷೇಕವನ್ನು ಮಾಡುತ್ತಾ ಇರುತ್ತದೆ.

Shail112

ಪಾರಿವಾಳ

ಪಾರಿವಾಳ

ಇಲ್ಲಿನ ಮತ್ತೊಂದು ವಿಶೇಷವೆನೆಂದರೆ ಪಾರಿವಾಳಗಳು. ಅಮರನಾಥದಲ್ಲಿರುವ ಪಾರಿವಾಳಗಳಂತೆ ಇಲ್ಲಿಯೂ ಕೂಡ 2 ಪಾರಿವಾಳಗಳನ್ನು ಕಾಣಬಹುದು. ಆ ಪಾರಿವಾಳಗಳು ಪುಣ್ಯ ಮಾಡಿದವರಿಗೆ ಮಾತ್ರ ದರ್ಶನ ನೀಡುತ್ತದೆ ಎಂತೆ.


Alan D. Wilson, www.naturespicsonline.com

ಸೃಷ್ಟಿ ನಿಯಮ

ಸೃಷ್ಟಿ ನಿಯಮ

ಪಾರಿವಾಳದ ಬಗ್ಗೆ ತಿಳಿಯಬೇಕಾದರೆ ಈ ಪುರಾಣದ ಒಂದು ಕಥೆಯನ್ನು ನೀವು ತಿಳಿದುಕೊಳ್ಳಲೇ ಬೇಕು. ಅದೆನೆಂದರೆ ಪಾರ್ವತಿ ದೇವಿಯು ಒಮ್ಮೆ ಶಿವನಿಗೆ ಸೃಷ್ಟಿ ನಿಯಮಗಳನ್ನು ತಿಳಿಸು ಎಂದು ಕೇಳಿಕೊಳ್ಳುತ್ತಾಳೆ. ಹಾಗಾಗಿ ಮಹಾಶಿವನು ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ.

Rohin.koul

ಸಕಲ ಜೀವಿಗಳನ್ನು ನಾಶ

ಸಕಲ ಜೀವಿಗಳನ್ನು ನಾಶ

ಆ ಸ್ಥಳವೇ ಪ್ರಸ್ತುತವಿರುವ ಅಮರನಾಥ ದೇವಾಲಯ. ಪಾರ್ವತಿ ದೇವಿಗೆ ಆ ಸೃಷ್ಟಿ ರಹಸ್ಯ ತಿಳಿಸುವ ಸಮಯದಲ್ಲಿ ಯಾವ ಒಂದು ಜೀವಿಯು ಇರಬಾರದು ಎಂದು ಅಗ್ನಿಯನ್ನು ಉತ್ಪತ್ತಿ ಮಾಡಿ ಅಲ್ಲಿನ ಸಕಲ ಜೀವಿಗಳನ್ನು ನಾಶ ಮಾಡುತ್ತಾನೆ.

Bhargavinf

2 ಪಾರಿವಾಳಗಳು

2 ಪಾರಿವಾಳಗಳು

ಆದರೆ ಅಲ್ಲಿಯೇ ಇದ್ದ 2 ಪಾರಿವಾಳಗಳು ಮಾತ್ರ ಇನ್ನು ಬದುಕಿರುತ್ತವೆ. ಈ ವಿಷಯ ತಿಳಿಯದ ಮಹಾಶಿವನು ಪಾರ್ವತಿ ದೇವಿಗೆ ಸೃಷ್ಟಿ ರಹಸ್ಯದ ಬಗ್ಗೆ ಹೇಳುವ ಸಮಯದಲ್ಲಿ ಆ 2 ಪಾರಿವಾಳಗಳು ಕದ್ದು ಶಿವನ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತವೆ.


Pankaj goutam

ಅಮರನಾಥ ದೇವಾಲಯ

ಅಮರನಾಥ ದೇವಾಲಯ

ಆ ಪಾರಿವಾಳಗಳೇ ಅಮರನಾಥ ದೇವಾಲಯದಲ್ಲಿರುವುದು ಎಂದು ನಂಬಲಾಗುತ್ತದೆ. ಆ ಪವಿತ್ರವಾದ ಪಾರಿವಾಳಗಳನ್ನು ಶಿವಕೋಹ್ರಿ ಗುಹಾ ದೇವಾಲಯದಲ್ಲಿಯೂ ಕೂಡ ಕಾಣಬಹುದಾಗಿದೆ. ಆ ಪಾರಿವಾಳವನ್ನು ದರ್ಶನ ಮಾಡುವುದು ಅಷ್ಟು ಸುಲಭವಾದುದಲ್ಲ. ಬದಲಾಗಿ ಜೀವನದಲ್ಲಿ ಹಲವಾರು ಪುಣ್ಯಗಳನ್ನು ತನ್ನಲ್ಲಿ ಹೊಂದಿದ್ದರೆ ಮಾತ್ರ ಆ ಪಾರಿವಾಳಗಳು ಕಾಣಿಸುತ್ತದೆ.

Niharika Krishna

ಶಿವಕೋಹ್ರಿ

ಶಿವಕೋಹ್ರಿ

ಸುಮಾರು 40 ರಿಂದ 50 ವರ್ಷಗಳ ಹಿಂದೆ ಮಾತ್ರ ಕೆಲವೇ ಕೆಲವು ಜನರಿಗೆ ಶಿವಕೋಹ್ರಿ ದೇವಾಲಯದ ಬಗ್ಗೆ ತಿಳಿದಿತ್ತು. ಆದರೆ ದಶಕಗಳಲ್ಲಿಯೇ ಇದು ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆಯಿತು. ಏಕೆಂದರೆ ಹಿಂದಿನ ಕಾಲದಲ್ಲಿ ಯಾತ್ರೆಗಳ ಸಂಖ್ಯೆ ಕೇವಲ ಸಾವಿರದಲ್ಲಿ ಮಾತ್ರವಿತ್ತು.

Sahuajeet

ಮಹಾಶಿವರಾತ್ರಿ

ಮಹಾಶಿವರಾತ್ರಿ

ಮಹಾಶಿವರಾತ್ರಿಯ ಸಮಯದಲ್ಲಿ ಶಿವಕೋಹ್ರಿ ದೇವಾಲಯದಲ್ಲಿ ಸತತ 3 ದಿನಗಳ ಕಾಲ ಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ ಆಚರಣೆ ಮಾಡುತ್ತಾರೆ. ಆ ಸಮಯದಲ್ಲಿ ಸಾವಿರಾರು ಭಕ್ತರು ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರಸ್ತೆ ಮಾರ್ಗವಾಗಿ
ಕತ್ರಾದಿಂದ ಕೇವಲ 70 ಕಿ.ಮೀ ದೂರದಲ್ಲಿ ಈ ಮಹಿಮಾನ್ವಿತವಾದ ಶಿವನ ದೇವಾಲಯವಿದೆ. ಇಲ್ಲಿಂದ ಹಲವಾರು ಸರ್ಕಾರಿ ಬಸ್ಸುಗಳ ಅಥವಾ ಖಾಸಗಿ ಬಸ್ಸುಗಳ ಸೌಲಭ್ಯ ಕೂಡ ಇದೆ. ಇಲ್ಲಿಂದ ಸುಲಭವಾಗಿ ಶಿವಕೋಹ್ರಿ ದೇವಾಲಯಕ್ಕೆ ತೆರಳಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲು ಮಾರ್ಗವಾಗಿ
ಈ ದೇವಾಲಯಕ್ಕೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಜಮ್ಮುವಿನ ತಾವಿ ರೈಲ್ವೆ ನಿಲ್ದಾಣ. ಇದು ಜಮ್ಮು ಕಾಶ್ಮೀರದ ಹಲವಾರು ನಗರಗಳ ಸಂಪರ್ಕವನ್ನು ಸಾಧಿಸುತ್ತದೆ. ಈ ರೈಲ್ವೆ ನಿಲ್ದಾಣದಿಂದ ಶಿವಕೋಹ್ರಿ ದೇವಾಲಯಕ್ಕೆ ಸುಮಾರು 107 ಕಿ.ಮೀ ದೂರದಲ್ಲಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗವಾಗಿ
ಈ ಶಿವಕೋಹ್ರಿ ದೇವಾಲಯಕ್ಕೆ ತೆರಳಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಜಮ್ಮು ವಿಮಾನ ನಿಲ್ದಾಣ. ಇಲ್ಲಿಂದ ದೇವಾಲಯಕ್ಕೆ ಸುಮಾರು 130 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಖಾಸಗಿ ಬಸ್ಸುಗಳ ಮೂಲಕ ಅಥವಾ ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...

ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X