Search
  • Follow NativePlanet
Share
» »ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಬೆಂಗಳೂರಿನಲ್ಲಿರುವವರು ಶಿವಗಂಗೆಯ ಬಗ್ಗೆ ಗೊತ್ತೇ ಇರಬಹುದು. ಇದೊಂದು ಧಾರ್ಮಿಕ ತಾಣದ ಜೊತೆಗೆ ಪ್ರವಾಸಿ ತಾಣವೂ ಆಗಿದೆ. ಶಿವಗಂಗೆಯಲ್ಲಿ ಹಿಂದೆ ಋಷಿಮುನಿಗಳು ತಪಸ್ಸು ಮಾಡುತ್ತಿದ್ದರು ಎನ್ನಲಾಗುತ್ತದೆ. ಈಗ ಇಲ್ಲಿ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಸ್ಥಾನವಿದೆ. ಇಲ್ಲಿನ ವಿಶೇಷ ಏನು ಅನ್ನೋದು ನಿಮಗೆ ಗೊತ್ತಾ?

ಗಂಗಾಧರೇಶ್ವರ ದೇವಾಲಯ

ಗಂಗಾಧರೇಶ್ವರ ದೇವಾಲಯ

PC:Dineshkannambadi

ಬೆಂಗಳೂರು ಗ್ರಾಮಾಂತರದಲ್ಲಿ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ದಾಬಸ್ ಪೇಟೆಯಿಂದ 6 ಕಿ.ಮೀ ದೂರದಲ್ಲಿ ಶಿವಗಂಗೆ ಬೆಟ್ಟ ಕಾಣಿಸುತ್ತದೆ. ಈ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯವಿದೆ.

ಗಂಗೆಯಲ್ಲಿ ಉದ್ಭವಿಸಿದ ಶಿವಲಿಂಗ

ಗಂಗೆಯಲ್ಲಿ ಉದ್ಭವಿಸಿದ ಶಿವಲಿಂಗ

PC:Raj.shimoga

ಇಲ್ಲಿನ ಶಿವಲಿಂಗದ ವಿಶೇಷತೆ ಏನೆಂದರೆ ಇದು ಯಾವಾಗಲೂ ನೀರಿನ ಮೇಲೆ ಇದೆ. ಗಂಗೆಯಲ್ಲಿ ಉದ್ಭವಿಸಿದ ಶಿವಲಿಂಗ ಇದಾಗಿದ್ದು ಇದನ್ನು ಗಂಗಾಧರೇಶ್ವರ ಎಂದು ಕರೆಯಲಾಗತ್ತದೆ. ಹಾಗಾಗಿ ಈ ಬೆಟ್ಟವನ್ನು ಶಿವಗಂಗೆ ಎಂದು ಕರೆಯುತ್ತಾರೆ.

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ತುಪ್ಪ ಬೆಣ್ಣೆಯಾಗುತ್ತದೆ

ತುಪ್ಪ ಬೆಣ್ಣೆಯಾಗುತ್ತದೆ

PC:Dayanandashetty beloor

ಇಲ್ಲಿನ ಶಿವಲಿಂಗದ ಮೇಲೆ ತುಪ್ಪ ಸವರಿದ್ರೆ ಬೆಣ್ಣೆಯಾಗುತ್ತದಂತೆ. ಇಲ್ಲಿ ಉತ್ಪತ್ತಿಯಾದ ಬೆಣ್ಣೆಯನ್ನು ಸೇವಿಸಿದ್ರೆ ಸರ್ವ ರೋಗ ಗುಣಮುಖವಾಗುತ್ತದಂತೆ. ತುಪ್ಪ ಕಣ್ಣಿಗೆ ಹಚ್ಚಿದ್ರೆ ಕಣ್ಣಿನ ದೋಷ ನಿವಾರಣೆಯಾಗುತ್ತಂತೆ. ಹಾಗಾಗಿ ಸಾಕಷ್ಟು ಜನರು ಇಲ್ಲಿಗೆ ಬಂದು ಈ ಅದ್ಭುತವನ್ನು ನೋಡಲು ಆಗಮಿಸುತ್ತಾರೆ.

ಹೊನ್ನಾದೇವಿ ದೇವಸ್ಥಾನ

ಹೊನ್ನಾದೇವಿ ದೇವಸ್ಥಾನ

ಇಲ್ಲಿ ಅನೇಕ ದೇವಾಲಯಗಳಿವೆ ಅವುಗಳಲ್ಲಿ ಹೊನ್ನಾದೇವಿ ದೇವಸ್ಥಾನವೂ ಒಂದು. ಹೊನ್ನಾದೇವಿ ದೇವಸ್ಥಾನದ ಹಿಂದೆ ಪಾತಾಳ ಗಂಗೆ ಇದೆ. ಬೇಸಿಗೆ ಗಾಲದಲ್ಲಿ ನೀರು ಮೇಲಕ್ಕೆ ಬರುತ್ತದೆ. ಮಳೆಗಾಲದಲ್ಲಿ ನೀರು ಒಳಕ್ಕೆ ಹೋಗುತ್ತಂತೆ.

ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?

ಪುರಾಣಕಥೆ

ಪುರಾಣಕಥೆ

PC: Manjeshpv

ರಕ್ತ ಬೀಜಾಸುರ ಅಸುರನನ್ನು ಸಂಹರಿಸಿದ ನಂತರ ದೇವಿಗೆ ಬಾಯಾರಿಕೆಯಿಂದ ತಾಯಿ ಬಂಡೆಯನ್ನು ತ್ರಿಶೂಲದಿಂದ ಹೊಡೆಯುತ್ತಾಳೆ. ಆಗ ನೀರು ಚಿಮ್ಮುತ್ತದೆ. ಹಾಗಾಗಿ ಇದನ್ನು ಪಾತಾಳ ಗಂಗೆ ಎಂದು ಕರೆಯಲಾಗುತ್ತದೆ.

ಬೆಟ್ಟದಲ್ಲಿ ನೆಲೆಯೂರಿದ ಗಂಗೆ

ಬೆಟ್ಟದಲ್ಲಿ ನೆಲೆಯೂರಿದ ಗಂಗೆ

PC:Christian Lederer

ನೀರು ಕುಡಿದು ದೇವಿ ಹೊರಡುವಾಗ ಗಂಗೆಯೂ ಹಿಂದೆಯೇ ಬರಳುತ್ತಾಳಂತೆ. ಆಗ ದೇವಿಯು ಗಂಗೆಗೆ ಹಿಂದೆ ಬರಬೇಡ ಬೆಟ್ಟ ಹತ್ತಿ ಬಂದವರಿಗೆ ನೀರು ಒದಗಿಸಲು ಇಲ್ಲೇ ಇರು ಎಂದು ಹೇಳಿದಳಂತೆ. ಹಾಗಾಗಿ ಗಂಗೆ ಅಲ್ಲೇ ನೆಲೆಯೂರಿದ್ದಾಳೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X