Search
  • Follow NativePlanet
Share
» »ಸೊಗಸಾದ ಶಿವಮೊಗ್ಗದ ಸುಂದರ ಸ್ಥಳಗಳು

ಸೊಗಸಾದ ಶಿವಮೊಗ್ಗದ ಸುಂದರ ಸ್ಥಳಗಳು

By Vijay

ಮಲೆನಾಡ ಸುಂದರಿ ಶಿವಮೊಗ್ಗ ಜಿಲ್ಲೆಯು ಪ್ರವಾಸಿಗರಿಗೆ ಸಂತಸಮಯ ಆಕರ್ಷಣೆಗಳನ್ನು ಒದಗಿಸುತ್ತದೆ. ಪವಿತ್ರ ಕ್ಷೇತ್ರಗಳಾದ ಶೃಂಗೇರಿ, ತೀರ್ಥಹಳ್ಳಿಗಳಿರಲಿ ಇಲ್ಲವೆ ಐತಿಹಾಸಿಕ ಶ್ರೀಮಂತಿಕೆಯ ಸುಂದರ ಸಾಗರವಿರಲಿ, ಇಲ್ಲವೆ ಭೋರ್ಗೆರೆಯುತ್ತ ಧುಮುಕುವ ಕಣ್ಣಿಗೆ ಮನೋಹರವಾಗಿ ಗೋಚರಿಸುವ ಜೋಗ ಜಲಪಾತವಿರಲಿ ಎಲ್ಲವೂ ಈ ಜಿಲ್ಲೆಯಲ್ಲಿ ಕಾಣಸಿಗುತ್ತವೆ.

ವಿಶೇಷ ಲೇಖನ : ಭದ್ರಾ ಜಲಾಶಯ ಕಾಡಿನ ಸೊಬಗು

ಐದು ನದಿಗಳ ಹರಿವನ್ನು ಹೊಂದಿರುವ ಶಿವಮೊಗ್ಗ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು ಕರ್ನಾಟಕದ ಆಹಾರ ತೊಟ್ಟಿಲು ಮತ್ತು ಕರ್ನಾಟಕದ ಅಕ್ಕಿಯ ಕಣಜ ಎಂಬ ಹಿರಿಮೆಯನ್ನು ಪಡೆದಿದೆ. ಸಹ್ಯಾದ್ರಿ ಬೆಟ್ಟಗಳ ಸಾಲಿನಿಂದಾಗಿ ಶಿವಮೊಗ್ಗೆಯಲ್ಲಿ ಹರಿಯುವ ನದಿಗಳು ವರ್ಷಪೂರ್ತಿ ಮಳೆಯನ್ನು ಕಂಡು ತುಂಬಿ ಹರಿಯುತ್ತವೆ. ಸ್ಥಳೀಯರು ಶಿವಮೊಗ್ಗವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ.

ವಿಶೇಷ ಲೇಖನ : ಸಾಗರದ ಸುಂದರ ಆಕರ್ಷಣೆಗಳು

ಶಿವಮೊಗ್ಗ ಕರ್ನಾಟಕದ ಪ್ರಸಿದ್ದ ಪ್ರವಾಸಿ ಸ್ಥಳಗಳಿಗೆ ಹತ್ತಿರದಲ್ಲಿರುವ ಕಾರಣ ಬಹುತೇಕ ಪ್ರವಾಸಿಗರು ರಾಜ್ಯದ ಮಲೆನಾಡು ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮುಂಚೆ ಶಿವಮೊಗ್ಗೆಗೆ ಬರುತ್ತಾರೆ. ಶಿವಮೊಗ್ಗದಿಂದ 90 ಕಿಲೋ ಮೀಟರ್ ದೂರದಲ್ಲಿ ಜಿಲ್ಲೆಯ ಗಡಿಭಾಗದಲ್ಲಿರುವ ಆಗುಂಬೆ ತನ್ನ ಸೂರ್ಯಾಸ್ತದ ಸೌಂದರ್ಯಕ್ಕಂತೂ ಸುಪ್ರಸಿದ್ದವಾಗಿದೆ. ಅಲ್ಲದೆ ಇದೊಂದು ಮಳೆನೆರಳಿನ ಕಾಡು ಪ್ರದೇಶವಾಗಿದ್ದು ಸ್ಥಳೀಯವಾಗಿ ಕಂಡುಬರುವ ಕಿಂಗ್ ಕೊಬ್ರಾ ಸರ್ಪಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ.

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಪ್ರಸ್ತುತ ಲೇಖನದ ಮೂಲಕ ಶಿವಮೊಗ್ಗದಲ್ಲಿ ಹಾಗೂ ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯುವುದಲ್ಲದೆ ಯಾವ ರೀತಿಯಾಗಿ ಪ್ರಯಾಣ ಮಾಡುತ್ತ ಗರಿಷ್ಠ ಆಕರ್ಷಣೆಗಳನ್ನು ಆಸ್ವಾದಿಸುತ್ತ ಒಟ್ಟಾರೆ ಪ್ರವಾಸವನ್ನು ಎಂದೂ ಮರೆಯದ ಅನುಭವದ ಹಾಗೆ ಮಾಡಬಹುದೆಂಬುದರ ಕುರಿತು ತಿಳಿಯೋಣ. ಇನ್ನೂ ಶಿವಮೊಗ್ಗ ಬೆಂಗಳೂರಿನಿಂದ 275 ಕಿ.ಮೀ ಗಳಷ್ಟು ದೂರದಲ್ಲಿದ್ದು ಇಲ್ಲಿಗೆ ತೆರಳಲು ಬಸ್ಸು ಹಾಗೂ ರೈಲುಗಳೆರಡೂ ದೊರೆಯುತ್ತವೆ. ಅಲ್ಲದೆ ಕರ್ನಾಟಕದ ಪ್ರಮುಖ ನಗರಗಳಿಂದ ಶಿವಮೊಗ್ಗಕ್ಕೆ ಬಸ್ಸುಗಳ ಸೇವೆ ಲಭ್ಯವಿದೆ.

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಕೋಟೆ ಆಂಜನೇಯ ಸ್ವಾಮಿ ದೇವಾಲಯ : ನಗರದ ಹೃದಯ ಭಾಗದಲ್ಲಿ ನೆಲೆಸಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವು ನಗರದ ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿದೆ. ಹನುಮನಿಗೆ ಮುಡಿಪಾಗಿರುವ ಈ ದೇವಸ್ಥಾನವು ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವೂ ಸಹ ಆಗಿದೆ.

ಚಿತ್ರಕೃಪೆ: Chidambara

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಕೂಡ್ಲಿ : ಶಿವಮೊಗ್ಗದಿಂದ ಈಶಾನ್ಯ ದಿಕ್ಕಿಗೆ ತುಂಗಾ ನದಿಯ ಜೊತೆ ಜೊತೆಗೆ ಪಿಲ್ಲಣಗಿರಿಯ ಮೂಲಕ 17 ಕಿ.ಮೀ ಕ್ರಮಿಸಿ ಕೂಡ್ಲಿಯನ್ನು ತಲುಪಬೇಕು. ಇದೊಂದು ಪವಿತ್ರ ಕ್ಷೇತ್ರವಾಗಿದ್ದು ಇಲ್ಲಿಯೆ ತುಂಗಾ ನದಿಯು ಭದ್ರಾ ನದಿಯೊಂದಿಗೆ ಸಂಗಮ ಹೊಂದಿ ಮುಂದೆ ತುಂಗಭದ್ರಾ ನದಿಯಾಗಿ ಹರಿಯುತ್ತದೆ. ಎರಡು ನದಿಗಳು ಸಂಗಮ ಹೊಂದುವ ಸ್ಥಳದಲ್ಲಿ ನಿರ್ಮಿಸಲಾದ ಚಿಕ್ಕ ಹರಿಹರ ದೇಗುಲ ಸನ್ನಿಧಿ.

ಚಿತ್ರಕೃಪೆ: HPN

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಕೂಡ್ಲಿಯಲ್ಲಿ ದ್ವೈತ ಹಾಗೂ ಅದ್ವೈತ ತತ್ವಗಳನ್ನು ಪ್ರತಿನಿಧಿಸುವ ಶಂಕರ ಮಠ ಹಾಗೂ ಅಕ್ಷೋಭ್ಯ ಮಠಗಳನ್ನು ಕಾಣಬಹುದು. ಅಲ್ಲದೆ ಈ ಸ್ಥಳವು ತನ್ನಲ್ಲಿರುವ 12 ನೆಯ ಶತಮಾನದ ರಾಮೇಶ್ವರ ದೇವಾಲಯದಿಂದಾಗಿಯೂ ಸಹ ಪ್ರಸಿದ್ಧವಾಗಿದೆ. ರಾಮೇಶ್ವರ ದೇಗುಲ.

ಚಿತ್ರಕೃಪೆ: Dineshkannambadi

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಕೂಡ್ಲಿಯಿಂದ ಮತ್ತೆ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಮತ್ತೂರಿನೆಡೆ ಪ್ರಯಾಣಿಸಬೇಕು. ಶಿವಮೊಗ್ಗದಿಂದ ಕೇವಲ 8 ಕಿ.ಮೀ ದೂರವಿರುವ ಮತ್ತೂರು ಅತಿ ಕುತೂಹಲ ಮೂಡಿಸುವ ಹಳ್ಳಿಯಾಗಿದೆ. ಹೌದು, ಇಂದಿಗೂ ಈ ಒಂದು ಹಳ್ಳಿಯಲ್ಲಿ ಸಂಸ್ಕೃತ ಭಾಷೆಯು ಆಡು ಭಾಷೆಯಾಗಿ ಚಾಲ್ತಿಯಲ್ಲಿದೆ. ಇಲ್ಲಿ ಬ್ರಾಹ್ಮಣ ಕುಟುಂಬಗಳು ಹೆಚ್ಚಾಗಿದ್ದು ಸಂಸ್ಕೃತ ಪಾಠಶಾಲೆಯಿದೆ. ಅಲ್ಲದೆ ಇದರ ಪಕ್ಕದಲ್ಲಿರುವ ಹೊಸಹಳ್ಳಿಯಲ್ಲೂ ಸಹ ಸಂಸ್ಕೃತ ಭಷೆಯು ಹೆಚ್ಚು ಬಳಸಲ್ಪಡುತ್ತದೆ. ಜಗತ್ತಿನಲ್ಲೆ ಈ ಎರಡು ಹಾಳ್ಳಿಗಳಲ್ಲಿ ಮಾತ್ರವೆ ಸಂಸ್ಕೃತ ಭಾಷೆಯು ಆಡು ಭಾಷೆಯಾಗಿ ಚಾಲ್ತಿಯಲ್ಲಿರುವುದು ವಿಶೇಷ. ಮತ್ತೂರಿನಲ್ಲಿ ಹರಿದಿರುವ ತುಂಗಾ ನದಿ.

ಚಿತ್ರಕೃಪೆ: Ashwatham

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಇಷ್ಟವಿದ್ದಲ್ಲಿ ಮತ್ತೂರಿನಿಂದ ಮೂರು ಕಿ.ಮೀ ದೂರವಿರುವ ಗುಡ್ಡೆ ಮರ್ಡಿಗೆ ಭೇಟಿ ನೀಡಬಹುದು. ಇದು ಬೆಟ್ಟದ ಮೇಲಿನ ಈಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Ramajois

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಮತ್ತೂರಿನಿಂದ ರಾಜ್ಯ ಹೆದ್ದಾರಿ 57 ರ ಮೂಲಕ 28 ಕಿ.ಮೀ ಕ್ರಮಿಸಿ ಭದ್ರಾವತಿ ತಾಲೂಕಿನ ಲಕ್ಕವಳ್ಳಿಗೆ ಭೇಟಿ ನೀಡಬಹುದು. ಲಕ್ಕವಳ್ಳಿ ಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಭದ್ರಾ ಆಣೆಕಟ್ಟೆಗೆ ಹೆಸರುವಾಸಿಯಾಗಿದೆ. ಸುತ್ತಲೂ ಹಸಿರಿನಿಂದ ಆವರಿಸಿರುವ ಭದ್ರಾ ನದಿಯ ನೋಟವು ಇಲ್ಲಿಂದ ಸುಂದರವಾಗಿ ಗೋಚರಿಸುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಈ ಪ್ರಯಾಣವು ಮತ್ತೂರಿನಿಂದ ಮುಂದೆ ಸಾಗುವುದರಿಂದ ಲಕ್ಕವಳ್ಳಿಯ ಭೇಟಿ ನಿಮ್ಮಿಷ್ಟದ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಇಲ್ಲಿಂದ ಮತ್ತೆ ಮತ್ತೂರಿನೆಡೆ ತೆರಳಿ ಪ್ರಯಾಣ ಮುಂದುವರೆಸಬೇಕು.

ಚಿತ್ರಕೃಪೆ: Amarrg

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಒಂದೊಮ್ಮೆ ಲಕ್ಕವಳ್ಳಿ ಆಣೆಕಟ್ಟು ನೋಡಿ ಮತ್ತೂರಿಗೆ ಬಂದೆರೆಂದರೆ ಅಲ್ಲಿಂದ ನೇರವಾಗಿ ಸಕ್ಕರೆಬಯಲುವಿಗೆ ತೆರಳಬಹುದು. ಸಕ್ಕರೆಬಯಲು (ಸಕ್ಕರೆಬೈಲು) ಮತ್ತೂರಿನಿಂದ 19 ಕಿ.ಮೀ ಗಳಷ್ಟು ದೂರದಲ್ಲಿದೆ. ಸಕ್ಕರೆಬೈಲು ಪ್ರಮುಖವಾಗಿ ಆನೆ ತರಬೇತಿ ಶಿಬಿರಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Hari Prasad Nadig

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಸಕ್ಕರೆಬೈಲಿನ ನಂತರ ರಾಷ್ಟ್ರೀಯ ಹೆದ್ದಾರಿ 13 ರ ಮೂಲಕ ಗಾಜನೂರು ಜಲಾಶಯ ಮಾರ್ಗವಾಗಿ ಸುಮಾರು 17 ಕಿ.ಮೀ ಕ್ರಮಿಸಿ ಮಂಡಗದ್ದೆಯನ್ನು ತಲುಪಬೇಕು. ಮಂಡಗದ್ದೆಯು ಒಂದು ಪಕ್ಷಿಧಾಮವಾಗಿದ್ದು ಅಕ್ಟೋಬರ್ ದಿಂದ ಡಿಸೆಂಬರ್ ವರೆಗೆ ಇಲ್ಲಿ ಅಪರೂಪದ ಹಕ್ಕಿಗಳು ವಲಸೆ ಬರುತ್ತವೆ. ಇವುಗಳಲ್ಲಿ ಪ್ರಮುಖವಾಗಿ ಮೆಡಿಯನ್ ಎಗ್ರೆಟ್, ಡಾರ್ಟರ್ ಹಾಗೂ ಚಿಕ್ಕ ಕೊರ್ಮೊರಂಟ್ ಹಕ್ಕಿಗಳನ್ನು ಕಾಣಬಹುದು.

ಚಿತ್ರಕೃಪೆ: Karunakar Rayker

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಮಂಡಗದ್ದೆಯಿಂದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ 32 ಕಿ.ಮೀ ಗಳಷ್ಟು ಕ್ರಮಿಸಿದಾಗ ಸಿಗುವ ಒಂದು ಸುಂದರ ಕ್ಷೇತ್ರವೆ ತೀರ್ಥಹಳ್ಳಿ. ತುಂಗಾ ನದಿ ದಂಡೆಯ ಮೇಲೆ ನೆಲೆಸಿರುವ ಪವಿತ್ರ ತಾಣ ತೀರ್ಥಹಳ್ಳಿಯು ಭೇಟಿ ನೀಡಲು ಯೋಗ್ಯವಾದ ಸಾಕಷ್ಟು ಸ್ಥಳಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ನೀವು ತೀರ್ಥಹಳ್ಳಿಯ ಕೆಲ ಆಕರ್ಷಣೆಗಳಿಗೆ ಭೇಟಿ ನೀಡಲು ಉತ್ಸುಕರಾಗಿದ್ದರೆ ಈ ಮುಂದಿನ ಸೈಡುಗಳಲ್ಲಿ ತಿಳಿಯಿರಿ.

ಚಿತ್ರಕೃಪೆ: Hari Prasad Nadig

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ತೀರ್ಥಹಳ್ಳಿಯ ಪ್ರಮುಖ ಗುರುತರವಾದ ದೇವಾಲಯ ರಾಮೇಶ್ವರ ದೇವಾಲಯ. ತುಂಗಾ ನದಿಯ ತಟದ ಮೇಲಿರುವ ಈ ದೇವಾಲಯಕ್ಕೆ ಸಾಕಷ್ಟು ಜನ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Manjeshpv

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ತುಂಗಾ ನದಿ ಬಳಿಯಿರುವ ರಾಮಮಂಟಪದ ಬಳಿಯಲ್ಲೆ ತುಂಗಾ ನದಿಗೆ ಸಾಂಪ್ರದಾಯಿಕವಾಗಿ ನಿರ್ಮಿಸಲಾಗಿರುವ ಸುಂದರ ಈಜು ಕೊಳ.

ಚಿತ್ರಕೃಪೆ: Manjeshpv

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ತೀರ್ಥಹಳ್ಳಿಯ ಗುರುತರ ಪ್ರವಾಸಿ ಆಕರ್ಷಣೆಯಾದ ಸಿದ್ಧರ ಅಥವಾ ಸಿದ್ಧೇಶ್ವರ ಗುಡ್ಡ.

ಚಿತ್ರಕೃಪೆ: Manjeshpv

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಐತಿಹಾಸಿಕವಾಗಿಯೂ ಮಹತ್ವಪಡೆದಿರುವ ತೀರ್ಥಹಳ್ಳಿಯಲ್ಲಿ ಕವಳೆದುರ್ಗ ಎಂಬ ಕೋಟೆಯ ತಾಣವನ್ನೂ ಸಹ ಕಾಣಬಹುದು. ಕವಳೆದುರ್ಗಕ್ಕೆ ಕೊಂಡೊಯ್ಯುವ ಪಾದಚಾರಿ ಮಾರ್ಗ ಗಿಡ ಮರಗಳಿಂದ ಸಂಪದ್ಭರಿತವಾಗಿದ್ದು ನಿಸರ್ಗ ಸೌಂದರ್ಯದ ಅನನ್ಯ ಅನುಭವವನ್ನು ಒದಗಿಸುತ್ತದೆ.

ಚಿತ್ರಕೃಪೆ: Manjeshpv

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ತೀರ್ಥಹಳ್ಳಿಯನ್ನೊಮ್ಮೆ ಮನಃಪೂರ್ವಕವಾಗಿ ದರ್ಶಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ 13 ರ ಮೂಲಕ ಕುಪ್ಪಳಿ ಮಾರ್ಗವಾಗಿ ಕೊಪ್ಪದೆಡೆ ಪ್ರಯಾಣ ಬೆಳೆಸಿ ಕೊಪ್ಪಕ್ಕಿಂತ ಮುಂಚೆಯೆ ಅಮ್ಮಾಡಿ ಎಸ್ಟೇಟ್ ದಾಟಿದ ನಂತರ ಮುಂದೆ ಬಲ ತಿರುವು ಪಡೆದು ನೇರವಾಗಿ ಶೃಂಗೇರಿ ತಲುಪಬೇಕು. ಶೃಂಗೇರಿಯು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರುತ್ತದಾದರೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಕೇವಲ 53 ಕಿ.ಮೀ ದೂರದಲ್ಲಿರುವ ಭವ್ಯ ಧಾರ್ಮಿಕ ಪ್ರವಾಸಿ ಕ್ಷೇತ್ರವಾಗಿದೆ.

ಚಿತ್ರಕೃಪೆ: Ashok Prabhakaran

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಶೃಂಗೇರಿಯಲ್ಲಿ ಹಲವಾರು ದೇವಸ್ಥಾನಗಳನ್ನು ಕಾಣಬಹುದಾಗಿದ್ದು ಅವುಗಳಲ್ಲಿ ಪ್ರಮುಖವಾದುದು ವಿದ್ಯಾಶಂಕರ ದೇವಸ್ಥಾನ. ಈ ದೇವಾಲಯವನ್ನು 14 ನೇಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರೆನ್ನಲಾಗುವ ಹಕ್ಕ-ಬುಕ್ಕರ ಗುರುಗಳಾಗಿದ್ದ ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದ್ದಾರೆ. ವಿದ್ಯಾಶಂಕರ ದೇವಾಲಯದಲ್ಲಿ ರಾಶಿ ಸೂಚಕ ಕಂಬಗಳಿರುವುದನ್ನು ಕಾಣಬಹುದು. ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ನಿರ್ದಿಷ್ಟ ರಾಶಿ ಸೂಚಕ ಕಂಬದ ಮೇಲೆ ಸೂರ್ಯನ ಮೊದಲ ಕಿರಣಗಳು ಬೀಳುತ್ತವೆ.

ಚಿತ್ರಕೃಪೆ: Calvinkrishy

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ವಿದ್ಯಾಶಂಕರ ದೇವಸ್ಥಾನವಲ್ಲದೆ ಆವರಣದಲ್ಲಿರುವ ಮತ್ತೊಂದು ಪ್ರಮುಖ ದೇವಾಲಯ ಶಾರದಾಂಬೆಯ ಪೀಠ. ಆದಿ ಶಂಕರರು ಸ್ಥಾಪಿಸಿದ ನಾಲ್ಕು ಮಹಾ ಪೀಠಗಳಲ್ಲಿ ಶೃಂಗೇರಿ ಶಾರದಾಂಬೆಯ ಪೀಠವು ಮೊದಲನೇಯದಾಗಿದೆ.

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಶೃಂಗೇರಿಯನ್ನು ದರ್ಶಿಸಿದ ಬಳಿಕ ಅಲ್ಲಿಂದ ರಾಜ್ಯ ಹೆದ್ದಾರಿ ಸಂಖ್ಯೆ 27 ಅನ್ನು ಹಿಡಿದು ಸುಮಾರು 27 ಕಿ.ಮೀ ಕ್ರಮಿಸಿ ನೇರವಾಗಿ ಆಗುಂಬೆಯನ್ನು ತಲುಪಬೇಕು. ಇಲ್ಲಿಂದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡುತ್ತಿದ್ದರೆ ಒಂದು ಕ್ಷಣ ಮನದೆಲ್ಲ ಒತ್ತಡವು ಹವೆಯಂತೆ ಆವಿಯಾಗಿ ಹೋಗುತ್ತದೆ. ಆ ಸೂರ್ಯಾಸ್ತದ ದೃಶ್ಯಕ್ಕಾಗಿಯೆ ಈ ಜಾಗ ಬಹು ಪ್ರಸಿದ್ಧವಾಗಿದೆ. ಅಲ್ಲದೆ ಈ ಊರಿನಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುತ್ತದೆ. ತನ್ನ ನಯನ ಮನೋಹರ ಪ್ರಾಕೃತಿಕ ಸೊಬಗಿಗೆ ಇದು ಹೆಸರುವಾಸಿ.

ಚಿತ್ರಕೃಪೆ: Magiceye

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಆಗುಂಬೆಯಲ್ಲಿ ಕಾಣಸಿಗುವ ಪ್ರಾಣಿ ಮತ್ತು ಸಸ್ಯಸಂಕುಲಗಳಿಗಾಗಿ ನಾವು ಮಲೆನಾಡಿಗೆ ವಿಶೇಷ ಧನ್ಯವಾದವನ್ನು ಅರ್ಪಿಸಬೇಕು. ಹಾಗಾಗಿಯೇ ಆಗುಂಬೆಯು ಭಾರತದ ಮಲೆನಾಡು ಸಂಶೋಧನಾ ಕೇಂದ್ರವಾಗಿದೆ. ಅಲ್ಲದೆ ಆಗುಂಬೆಯು ಆಯುರ್ವೇದ ಗಿಡಮೂಲಿಕೆಗಳ ಸಂರಕ್ಷಿತ ಪ್ರದೇಶವಾಗಿರುವುದರಿಂದ ಪ್ರವಾಸಿಗರು ವಿವಿಧೆಡೆಗಳಿಂದ ಸ್ವಾಸ್ಥ್ಯವನ್ನು ಸುಧಾರಿಸಿಕೊಳ್ಳಲು ಆಗುಂಬೆಗೆ ಆಗಮಿಸುತ್ತಾರೆ.

ಚಿತ್ರಕೃಪೆ: Harsha K R

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಆಗುಂಬೆ ಒಂದು ಮಳೆನೆರಳಿನ ಕಾಡಿನ ಪ್ರದೇಶವಾಗಿದ್ದು ವಿಶಿಷ್ಟವಾದ ಬೇರೆ ಹಾವುಗಳನ್ನೆ ತಿಂದು ಬದುಕುವ ಕಿಂಗ್ ಕೋಬ್ರಾ ಹಾವುಗಳು ಇಲ್ಲಿ ಕಂಡುಬರುತ್ತವೆ. ಇಲ್ಲಿ ಮಳೆನಾಡು ಸಂಶೋಧನಾ ಕೇಂದ್ರವೂ ಸಹ ಇದೆ.

ಚಿತ್ರಕೃಪೆ: Michael Allen Smith

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಆಗುಂಬೆಯಲ್ಲಿನ ಸೂರ್ಯಾಸ್ತದ ರಮಣೀಯ ನೋಟವನ್ನು ಸವೆದ ನಂತರ ಅಲ್ಲಿಯೆ ತಂಗಿ ಮರುದಿನ ಪ್ರಯಾಣ ಮುಂದುವರೆಸಬೇಕು. ಆಗುಂಬೆಯಲ್ಲಿ ಹೋಟೆಲುಗಳು ದೊರೆಯುತ್ತವೆ. ಮರುದಿನ ಬೆಳಿಗ್ಗೆ ತಿಂಡಿಯ ಬಳಿಕ ರಾಜ್ಯ ಹೆದ್ದಾರಿ ಸಂಖ್ಯೆ 1 ಹಾಗೂ 27, ಎರಡನ್ನೂ ಕ್ರಮವಾಗಿ ಬಳಸಿ ಮುಳುಬಾಗಿಲು ತಲುಪಿ ಅಲ್ಲಿಂದ ನಗರವನ್ನು ತಲುಪಬೇಕು. ಆಗುಂಬೆಯಿಂದ ನಗರವು 63 ಕಿ.ಮೀ ದೂರವಿದೆ. ನಗರವು ಇತಿಹಾಸ ಪ್ರಸಿದ್ಧ ತಾಣವಗಿದ್ದು ಇಲ್ಲಿ ಶಿವಪ್ಪನಾಯಕನ ಕೋಟೆಯನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Aravind Nagaraj

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಶಿವಪ್ಪನಾಯಕನ ಕೋಟೆಯನ್ನು ನೋಡಿದ ಬಳಿಕ ನೇರವಾಗಿ ಲಿಂಗನಮಕ್ಕಿ ಜಲಾಶಯದ ಬಳಿ ತೆರಳಬೇಕು. ಜಲಾಶಯ ಭೇಟಿಗೆ ಪೂರ್ವಾನುಮತಿ ಬೇಕಾಗುತ್ತದೆ. ನಗರ ದಿಂದ ಲಿಂಗನಮಕ್ಕಿಯು 62 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ಪ್ರಯಾಣದ ಬಹು ಭಾಗವು ಎಡದಲ್ಲಿ ಮೂಕಾಂಬಿಕಾ ಅಭಯಾರಣ್ಯ ಪ್ರದೇಶ ಹಾಗೂ ಬಲದಲ್ಲಿ ಶರಾವತಿ ಕಣಿವೆ ಅಭಯಾರಣ್ಯದ ಮೂಲಕ ಹಾದು ಹೋಗುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Sankara Subramanian

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಲಿಂಗನಮಕ್ಕಿ ಆಣೆಕ್ಜಟ್ಟು. ಸಾಗರ ತಾಳುಕಿನಲ್ಲಿರುವ ಈ ಆಣೆಕಟ್ಟನ್ನು ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಅಣೆಕಟ್ಟು 2.4 ಕಿ.ಮೀ ಗಳಷ್ಟು ಉದ್ದವಿದ್ದು, 1819 ಅಡಿಗಳಷ್ಟು ಎತ್ತರವಿದೆ. 4368 ಘನ ಮೀ ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಈ ಜಲಾಶಯ ಹೊಂದಿದೆ.

ಚಿತ್ರಕೃಪೆ: ಜಿ.ಎಸ್. ಜಯಕೃಷ್ಣ ತಲವಾಟ

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಲಿಂಗನಮಕ್ಕಿಯ ಭೇಟಿಯ ನಂತರ ಅಲ್ಲಿಂದ ನೇರವಾಗಿ ಸಾಗರಕ್ಕೆ ತೆರಳಬೇಕು. ಸಾಗರವು ಲಿಂಗನಮಕ್ಕಿ ತಾಣದಿಂದ 36 ಕಿ.ಮೀ ಗಳಷ್ಟು ದೂರದಲ್ಲಿದೆ. ಸಾಗರವು ಒಂದು ಚಿಕ್ಕ ಹಾಗೂ ಚೊಕ್ಕದಾದ ಪಟ್ಟಣವಾಗಿದ್ದು ಆಕರ್ಷಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. [ಸಾಗರದ ಆಕರ್ಷಕ ಆಕರ್ಷಣೆಗಳು]

ಚಿತ್ರಕೃಪೆ: Vmjmalali

ಶಿವಮೊಗ್ಗ ಆಕರ್ಷಣೆಗಳು:

ಶಿವಮೊಗ್ಗ ಆಕರ್ಷಣೆಗಳು:

ಕೊನೆಯದಾಗಿ ಸಾಗರದಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 206 ರ ಮೂಲಕ ಸುಮಾರು 70 ಕಿ.ಮೀ ಕ್ರಮಿಸಿ ಮತ್ತೆ ಶಿವಮೊಗ್ಗ ಪಟ್ಟಣಕ್ಕೆ ಮರಳಬೇಕು. ಈ ರೀತಿಯಾಗಿ ನೀವು ಸಮಯವಿದ್ದಾಗ ಶಿವಮೊಗ್ಗಕ್ಕೆನಾದರೂ ಭೇಟಿ ನೀಡಿದರೆ ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಈ ರೀತಿಯ ಪ್ರವಾಸವು ಮನಸ್ಸಿಗೆ ಶಾಂತಿ, ಹುಮ್ಮಸ್ಸು ಹಾಗೂ ಉತ್ಸಾಹಗಳನ್ನು ಕರುಣಿಸುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Irrigator

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X