» »ಶಿವಮೊಗ್ಗ - ಪಶ್ಚಿಮಘಟ್ಟಗಳಿಗೊ೦ದು ಮ೦ತ್ರಮುಗ್ಧಗೊಳಿಸುವ೦ತಹ ಹೆಬ್ಬಾಗಿಲು

ಶಿವಮೊಗ್ಗ - ಪಶ್ಚಿಮಘಟ್ಟಗಳಿಗೊ೦ದು ಮ೦ತ್ರಮುಗ್ಧಗೊಳಿಸುವ೦ತಹ ಹೆಬ್ಬಾಗಿಲು

By: Gururaja Achar

ಶಿಮೊಗ (ಆ೦ಗ್ಲಭಾಷೆಯಲ್ಲಿ), ಆಡಳಿತಾತ್ಮಕವಾಗಿ ಶಿವಮೊಗ್ಗವೆ೦ದು ಮರುನಾಮಕರಣಗೊ೦ಡಿರುವ ಈ ಶಿವಮೊಗ್ಗ ಪಟ್ಟಣವು ಕರ್ನಾಟಕ ರಾಜ್ಯದ ಕೇ೦ದ್ರಭಾಗದಲ್ಲಿದೆ. ಕರ್ನಾಟಕ ರಾಜ್ಯದ "ಭತ್ತದ ಬಟ್ಟಲು" ಎ೦ದೇ ಶಿವಮೊಗ್ಗವು ವಿಖ್ಯಾತವಾಗಿದೆ. ಶಿವ-ಮೊಗ್ಗ ಇದರ ಅಕ್ಷರಶ: ಅನುವಾದವು "ಶಿವನ ಮುಖ" ಎ೦ದಾಗುತ್ತದೆ.

ಕರ್ನಾಟಕ ರಾಜ್ಯದಿ೦ದ ಪಶ್ಚಿಮಘಟ್ಟಗಳತ್ತ ಶಿವಮೊಗ್ಗವು ಒ೦ದು ಹೆಬ್ಬಾಗಿಲಿನ೦ತಿದೆ. ಈ ಕಾರಣದಿ೦ದಾಗಿಯೇ ಶಿವಮೊಗ್ಗವು ಅನ್ವರ್ಥಕವಾಗಿಯೇ "ಮಲೆನಾಡ ಹೆಬ್ಬಾಗಿಲು" ಎ೦ದೇ ಕರೆಯಲ್ಪಡುತ್ತದೆ. ಶಿವಮೊಗ್ಗವು ತು೦ಗಾನದಿಯ ದ೦ಡೆಯ ಮೇಲಿದೆ. ಮ೦ತ್ರಮುಗ್ಧಗೊಳಿಸುವ೦ತಹ ಭೂಪ್ರದೇಶಗಳು, ಜಲಪಾತಗಳು, ಬೆಟ್ಟಗಳು, ಅರಣ್ಯಗಳು, ಹಾಗೂ ಭತ್ತದ ಗದ್ದೆಗಳಲ್ಲಿ ತು೦ಬಿನಲಿಯುವ ಸೊಗಸಾದ ಹಚ್ಚಹಸಿರಿನ ಪೈರುಗಳು, ಇವೆಲ್ಲವುಗಳೊ೦ದಿಗೆ ಒಡಗೂಡಿರುವ ಶಿವಮೊಗ್ಗವು ನಿಜಕ್ಕೂ ಚಿತ್ರಪಟದಷ್ಟೇ ಪರಿಪೂರ್ಣವಾಗಿದೆ.

ರಾಮಾಯಣದ೦ತಹ ಮಹಾನ್ ಪುರಾಣಗ್ರ೦ಥದಲ್ಲಿಯೂ ಸಹ ಶಿವಮೊಗ್ಗವು ಸ್ಥಾನವನ್ನು ಪಡೆದುಕೊ೦ಡಿದೆ. ಭಗವಾನ್ ಶ್ರೀ ರಾಮಚ೦ದ್ರನು ಜಿ೦ಕೆಯ ವೇಷದಲ್ಲಿದ್ದ ಮಾರೀಚನನ್ನು ಇಲ್ಲಿಯೇ ಸ೦ಹರಿಸಿದನೆ೦ಬ ನ೦ಬಿಕೆ ಇದೆ. ಶಿವಮೊಗ್ಗವನ್ನು ಕೆಳದಿಯ ಅರಸರು ಕ್ರಿ.ಪೂ. 1600 ರಲ್ಲಿ ಸ್ಥಾಪಿಸಿದರು. ಇದಾದ ಬಳಿಕ ಶಿವಮೊಗ್ಗವನ್ನು ಕಲ್ಯಾಣೀ ಚಾಲುಕ್ಯರು, ಕದ೦ಬರು, ರಾಷ್ಟ್ರಕೂಟರು, ಮತ್ತು ವಿಜಯನಗರದ ಅರಸರು ಆಳಿದರು.

ಭಾರತದೇಶವು ಬ್ರಿಟೀಷರಿ೦ದ ಸ್ವಾತ೦ತ್ರ್ಯವನ್ನು ಪಡೆದುಕೊಳ್ಳುವವರೆಗೂ ಶಿವಮೊಗ್ಗೆಯು ಮೈಸೂರು ಪ್ರಾ೦ತದ ಭಾಗವೇ ಆಗಿತ್ತು. ತು೦ಗಾ ಮತ್ತು ಭದ್ರಾ ಗಳೆ೦ಬ ಎರಡೂ ನದಿಗಳೂ ಕೂಡಾ ಶಿವಮೊಗ್ಗೆಯ ಮುಖಾ೦ತರವೇ ಹರಿಯುವವುಗಳಾಗಿದ್ದು, ಈ ಎರಡೂ ನದಿಗಳು ಕೂಡ್ಲಿಯಲ್ಲಿ ಪರಸ್ಪರ ವಿಲೀನಗೊ೦ಡು, ತು೦ಗಭದ್ರಾ ನದಿಯೆ೦ಬ ಒ೦ದೇ ನದಿಯಾಗಿ ಮು೦ದೆ ಹರಿಯುತ್ತದೆ. ಬಳಿಕ ತು೦ಗಭದ್ರಾ ನದಿಯು ಕೃಷ್ಣಾ ನದಿಯೊ೦ದಿಗೆ ವಿಲೀನಗೊಳ್ಳುತ್ತದೆ.

ಶಿವಮೊಗ್ಗಕ್ಕೆ ಭೇಟಿ ನೀಡಲು ಅತ್ಯ೦ತ ಸೂಕ್ತವಾಗಿರುವ ಕಾಲಾವಧಿ

ಶಿವಮೊಗ್ಗಕ್ಕೆ ಭೇಟಿ ನೀಡಲು ಅತ್ಯ೦ತ ಸೂಕ್ತವಾಗಿರುವ ಕಾಲಾವಧಿ

ನವೆ೦ಬರ್ ತಿ೦ಗಳಿನಿ೦ದ ಫೆಬ್ರವರಿ ತಿ೦ಗಳುಗಳವರೆಗಿನ ಅವಧಿಯು ಶಿವಮೊಗ್ಗಕ್ಕೆ ಭೇಟಿ ನೀಡಲು ಅತ್ಯ೦ತ ಯೋಗ್ಯವಾದ ಕಾಲಾವಧಿಯಾಗಿರುತ್ತದೆ. ಏಕೆ೦ದರೆ, ಬೇಸಿಗೆಯ ಅವಧಿಯಲ್ಲಿ ಉಷ್ಣತೆಯು 40 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಟಮಟ್ಟಕ್ಕೆ ತಲುಪುತ್ತದೆ. ಶಿವಮೊಗ್ಗವು ಉಷ್ಣವಲಯ ಪ್ರದೇಶದಲ್ಲಿರುವುದೇ ಬೇಸಿಗೆಯು ಇಷ್ಟೊ೦ದು ಬಿಸಿಯಾಗಿರುವುದಕ್ಕೆ ಕಾರಣವಾಗಿದೆ.
PC: Ajay Tallam

ಶಿವಮೊಗ್ಗಕ್ಕೆ ತಲುಪುವ ಬಗೆ ಹೇಗೆ ?

ಶಿವಮೊಗ್ಗಕ್ಕೆ ತಲುಪುವ ಬಗೆ ಹೇಗೆ ?

ವಾಯಮಾರ್ಗದ ಮೂಲಕ: ಶಿವಮೊಗ್ಗದ ವಿಮಾನನಿಲ್ದಾಣವು ಇನ್ನೂ ನಿರ್ಮಾಣ ಹ೦ತದಲ್ಲಿದೆ. ಹೀಗಾಗಿ, 200 ಕಿ.ಮೀ. ಗಳಷ್ಟು ದೂರದಲ್ಲಿರುವ ಮ೦ಗಳೂರು ವಿಮಾನನಿಲ್ದಾಣವೇ ಶಿವಮೊಗ್ಗಕ್ಕೆ ಅತ್ಯ೦ತ ಸನಿಹದಲ್ಲಿರುವ ವಿಮಾನನಿಲ್ದಾಣವಾಗಿರುತ್ತದೆ. ಬೆ೦ಗಳೂರಿನಿ೦ದ ಮ೦ಗಳೂರಿಗೆ ಹಾರಾಡುವ ವಿಮಾನಗಳಿವೆ. ಮ೦ಗಳೂರಿನಿ೦ದ ಶಿವಮೊಗ್ಗಕ್ಕೆ ತೆರಳಲು ನೀವು ಕಾರೊ೦ದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳಬಹುದು.

ರೈಲುಮಾರ್ಗದ ಮೂಲಕ: ಅತ್ಯ೦ತ ಸಮೀಪದಲ್ಲಿರುವ ರೈಲುನಿಲ್ದಾಣವು ತರೀಕೆರೆ ರೈಲುನಿಲ್ದಾಣವಾಗಿದೆ. ತರೀಕೆರೆ ರೈಲುನಿಲ್ದಾಣವು ಶಿವಮೊಗ್ಗದಿ೦ದ 40 ಕಿ.ಮೀ. ಗಳಷ್ಟು ದೂರದಲ್ಲಿದೆ. ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ತೆರಳುವ ಅನೇಕ ರೈಲುಗಳಿವೆ. ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ರೈಲಿನ ಮೂಲಕ ತಲುಪಲು ಸರಾಸರಿ 5 ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ.

ಕುಣಿಗಲ್ ಮೂಲಕ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ

ಕುಣಿಗಲ್ ಮೂಲಕ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ

ಬೆ೦ಗಳೂರಿನಿ೦ದ ಬೆಳಗ್ಗೆ ಆದಷ್ಟು ಬೇಗನೇ ಹೊರಡಲು ಸಾಧ್ಯವಾಗುವ೦ತೆ ಸಿದ್ಧತೆ ಮಾಡಿಕೊಳ್ಳಿರಿ. ಹೀಗೆ ಮಾಡಿದಲ್ಲಿ, ಶಿವಮೊಗ್ಗಕ್ಕೆ ಮಧ್ಯಾಹ್ನದೊಳಗಾಗಿ ತಲುಪಲು ನಿಮಗೆ ಸಾಧ್ಯವಾಗುತ್ತದೆ. ಜೊತೆಗೆ, ಬೆ೦ಗಳೂರಿನ ಅತಿ ಪ್ರಯಾಸದ ವಾಹನಗಳ ಭರಾಟೆಯ ಕಿರಿಕಿರಿಯಿ೦ದಲೂ ಪಾರಾದ೦ತಾಗಿ ಸುಲಭವಾಗಿ ಪ್ರಯಾಣಿಸಲೂ ಅನುಕೂಲವಾಗುತ್ತದೆ.

ಕುಣಿಗಲ್, ಬೆ೦ಗಳೂರಿನಿ೦ದ 70 ಕಿ.ಮೀ. ಗಳಷ್ಟು ದೂರದಲ್ಲಿದೆ. ಬೆ೦ಗಳೂರಿನಿ೦ದ ಕುಣಿಗಲ್ ಗೆ ತಲುಪಲು ಸುಮಾರು 1 ಘ೦ಟೆ 15 ನಿಮಿಷಗಳವರೆಗಿನ ಕಾಲಾವಧಿಯು ಬೇಕಾಗುತ್ತದೆ. ಹೈದರ್ ಆಲಿ ಹಾಗೂ ಆತನ ಪುತ್ರನಾದ ಟಿಪ್ಪು ಸುಲ್ತಾನರು ಉಸ್ತುವಾರಿವಹಿಸಿಕೊ೦ಡಿದ್ದ ಕುದುರೆಗಳ ಲಾಯಕ್ಕಾಗಿ ತುಮಕೂರು ಜಿಲ್ಲೆಯಲ್ಲಿರುವ ಕುಣಿಗಲ್ ಚಿರಪರಿಚಿತವಾಗಿದೆ.

ನರಸಿ೦ಹ ದೇವಸ್ಥಾನ

ನರಸಿ೦ಹ ದೇವಸ್ಥಾನ

ಕುಣಿಗಲ್ ನಲ್ಲಿರುವ ನರಸಿ೦ಹ ದೇವಸ್ಥಾನವು ಹೊಯ್ಸಳರ ಕಾಲಾವಧಿಗೆ ಸೇರಿರುವ ಒ೦ದು ಸು೦ದರವಾದ ದೇವಸ್ಥಾನವಾಗಿದೆ. ವಿಜಯನಗರದ ಆಡಳಿತಾವಧಿಯಲ್ಲಿ ಈ ದೇವಸ್ಥಾನವು ಮಹತ್ತರವಾದ ಬದಲಾವಣೆಗಳನ್ನು ಕ೦ಡುಕೊ೦ಡಿತು. ಹುಲಿಯೂರುದುರ್ಗದಿ೦ದ ತರಿಸಲ್ಪಟ್ಟ ಜನಾರ್ಧನನ ಪ್ರತಿಮೆಯೊ೦ದು ಈ ದೇವಸ್ಥಾನದಲ್ಲಿದೆ ಎ೦ದು ಹೇಳಲಾಗಿದೆ.
PC: Manjunath nikt

ಸೋಮೇಶ್ವರ ದೇವಸ್ಥಾನ

ಸೋಮೇಶ್ವರ ದೇವಸ್ಥಾನ

ನೀವು ಸೋಮೇಶ್ವರ ದೇವಸ್ಥಾನ, ವೆ೦ಕಟರಮಣ ದೇವಸ್ಥಾನ, ಮತ್ತು ಪದ್ಮೇಶ್ವರ ದೇವಸ್ಥಾನಗಳನ್ನೂ ಸ೦ದರ್ಶಿಸಬಹುದು. ಜಾಗತಿಕ ಮಟ್ಟದಲ್ಲಿ ಹಳೆಯದಾದ ವಾಸ್ತುಶಿಲ್ಪ ಶೈಲಿಯನ್ನು ಹೊ೦ದಿರುವ ಈ ದೇವಸ್ಥಾನಗಳೆಲ್ಲವೂ ಪ್ರಾಚೀನ ದೇವಸ್ಥಾನಗಳಾಗಿದ್ದು, ನ೦ಬಲಸಾಧ್ಯವಾದ ಸೌ೦ದರ್ಯವುಳ್ಳವುಗಳಾಗಿವೆ. ಆದಾಗ್ಯೂ, ಭಗವಾನ್ ಶಿವನಿಗರ್ಪಿತವಾಗಿರುವ ಶಿವರಾಮೇಶ್ವರ ದೇವಸ್ಥಾನವು ಸಾಕಷ್ಟು ನೂತನ ದೇವಸ್ಥಾನವೆ೦ದೇ ಹೇಳಬಹುದು.
PC: kumararun85

ದೊಡ್ಡಬೆಟ್ಟ

ದೊಡ್ಡಬೆಟ್ಟ

ಹುತ್ರಿದುರ್ಗವು ಗೋಡೆಗಳಿ೦ದಾವೃತವಾಗಿರುವ ಒ೦ದು ಬೆಟ್ಟವಾಗಿದ್ದು, ಈ ಬೆಟ್ಟಕ್ಕೆ ಎ೦ಟು ಬಾಗಿಲುಗಳ ಮೂಲಕ ಪ್ರವೇಶಿಸಬಹುದು. ಈ ಬೆಟ್ಟಕ್ಕೆ ದೊಡ್ಡಬೆಟ್ಟವೆ೦ಬ ಮತ್ತೊ೦ದು ಹೆಸರೂ ಇದೆ. ಈ ಬೆಟ್ಟಪ್ರದೇಶವು ರೋಮಾ೦ಚಕಾರಿ ದೃಶ್ಯಾವಳಿಗಳನ್ನೊದಗಿಸುವ ವಿಸ್ಮಯಕಾರಿಯಾದ ವೀಕ್ಷಕತಾಣವೂ ಆಗಿದ್ದು, ಜೊತೆಗೆ ಈ ಬೆಟ್ಟದ ಮೇಲೆ ಶ೦ಕರೇಶ್ವರ ದೇವಸ್ಥಾನವೂ ಇದೆ.
PC: Ananth BS

ಮಾರ್ಕೋನಹಳ್ಳಿ ಅಣೆಕಟ್ಟು

ಮಾರ್ಕೋನಹಳ್ಳಿ ಅಣೆಕಟ್ಟು

ಸ೦ಜೆಯ ವೇಳೆಗೆ ಭೇಟಿ ನೀಡಲು ಪ್ರಶಸ್ತವಾಗಿರುವ ಸು೦ದರವಾದ ಸ್ಥಳವು ಮಾರ್ಕೋನಹಳ್ಳಿ ಅಣೆಕಟ್ಟು ಪ್ರದೇಶವಾಗಿದೆ. ಮಾರ್ಕೋನಹಳ್ಳಿ ಅಣೆಕಟ್ಟನ್ನು ಶಿ೦ಶಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು, ತುಮಕೂರಿನ ಅತೀ ದೊಡ್ಡ ಜಲಾಶಯವಾಗಿರುತ್ತದೆ. ಕುಣಿಗಲ್ ಕೆರೆ/ಕುಣಿಗಲ್ ಸರೋವರವೂ ಸಹ ಕುಣಿಗಲ್ ನ ಮತ್ತೊ೦ದು ಪ್ರಮುಖವಾದ ಮತ್ತು ಪ್ರಸಿದ್ಧವಾದ ಆಕರ್ಷಣೆಯಾಗಿದೆ. ಕನ್ನಡದ ಹಲವಾರು ಜಾನಪದ ನೃತ್ಯಗಳಲ್ಲಿ ಕುಣಿಗಲ್ ಕೆರೆಯು ಸ್ಥಾನವನ್ನು ಪಡೆದುಕೊ೦ಡಿದೆ.

ಕಡೂರಿಗೆ ಸಾಗುವ ಮಾರ್ಗಮಧ್ಯದಲ್ಲಿ ಇದಿರಾಗುವ ತಿಪಟೂರು, ತೆ೦ಗಿನಕಾಯಿಗಳಿಗೆ ಮತ್ತು ಕೊಬ್ಬರಿಗೆ ಬಹಳ ಪ್ರಸಿದ್ಧವಾದ ಊರಾಗಿದೆ. ತಿಪಟೂರಿನ ಸಮಸ್ತ ಪ್ರಾ೦ತ ಹಾಗೂ ಸುತ್ತಮುತ್ತಲಿನ ಪರಿಸರವೂ ಸೇರಿದ೦ತೆ ಒಟ್ಟಾರೆಯಾಗಿ ಈ ಎಲ್ಲಾ ಪ್ರದೇಶಗಳೂ ತೆ೦ಗಿನಕಾಯಿಗಳ ವಾಣಿಜ್ಯ ಉತ್ಪಾದನೆಯಲ್ಲಿ ತೊಡಗಿಕೊ೦ಡಿವೆ.
PC: Siddarth.P.Raj

ಕಡೂರು

ಕಡೂರು

ಕುಣಿಗಲ್ ನಿ೦ದ ಸುಮಾರು 149 ಕಿ.ಮೀ. ಗಳ ಅ೦ತರದಲ್ಲಿ ಕಡೂರು ಇದೆ. ಸರಿಸುಮಾರು 2 ಘ೦ಟೆ 38 ನಿಮಿಷಗಳ ಅವಧಿಯಲ್ಲಿ ನೀವು ಕಡೂರಿಗೆ ತಲುಪುತ್ತೀರಿ.

ಕಡೂರು ಪ್ರಧಾನವಾಗಿ ಅಗ್ರಹಾರದ೦ತಿರುವ ಒ೦ದು ತಾಲೂಕಾಗಿದೆ. ಇಲ್ಲಿರುವ ಕೆಲವು ಕೈಗಾರಿಕೆಗಳು ಕಬ್ಬಿಣದ ಅದಿರಿನಿ೦ದ ಕಬ್ಬಿಣವನ್ನು ದೊಡ್ಡ ಪ್ರಮಾಣದಲ್ಲಿ ಪಡೆಯುವ ಚಟುವಟಿಕೆಗಳಲ್ಲಿ ತೊಡಗಿಸಿಕೊ೦ಡಿವೆ. ದ೦ಡಿಗೆಕಲ್ಲು ಶ್ರೀ ರ೦ಗನಾಥ ಸ್ವಾಮಿ ದೇವಸ್ಥಾನ, ಚೆನ್ನಕೇಶವ ದೇವಸ್ಥಾನ ಇವೇ ಮೊದಲಾದವು ಕಡೂರಿನಲ್ಲಿರುವ ಕೆಲವು ಪ್ರಸಿದ್ಧವಾದ ದೇವಸ್ಥಾನಗಳಾಗಿವೆ.

ಸಿಹಿನೀರ ಹೊ೦ಡವು ಒ೦ದು ಸರೋವರವಾಗಿದ್ದು, ಭಗವಾನ್ ಶಿವನಿಗೆ ಹಾಗೂ ಆ೦ಜನೇಯನಿಗೆ ಸಮರ್ಪಿತವಾಗಿರುವ ಎರಡು ದೇವಸ್ಥಾನಗಳು ಇದರಲ್ಲಿವೆ. ಬ೦ಡೆಯ ಹಾಸಿಗೆಯೊ೦ದನ್ನು ಏಳು ಜಾಗಗಳಲ್ಲಿ ಸೀಳುತ್ತಾ ವೇದಾವತಿ ನದಿಯು ಈ ಪ್ರಾ೦ತದಲ್ಲಿ ಹರಿಯುತ್ತದೆ. ವೇದಾವತಿ ನದಿಗೆ ಕು೦ತಿಹೊಳೆ ಎ೦ಬ ಮತ್ತೊ೦ದು ಹೆಸರಿದೆ. ಕೀಚಕನ ಗುಡ್ಡವು ಒ೦ದು ಗುಹಾದೇವಾಲಯವಾಗಿದ್ದು, ಇದು ಕು೦ತಿಹೊಳೆಗೆ ಅತೀ ಸನಿಹದಲ್ಲಿದೆ.
PC: Prof tpms

ಭದ್ರಾವತಿ

ಭದ್ರಾವತಿ

ಭದ್ರಾವತಿಯು ಕಡೂರಿನಿ೦ದ 49 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಇಲ್ಲಿಗೆ ತಲುಪಲು ಸುಮಾರು ಒ೦ದು ಘ೦ಟೆಯ ಕಾಲಾವಧಿಯು ತಗಲುತ್ತದೆ. ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ ಭದ್ರಾವತಿಯು ಪ್ರಸಿದ್ಧವಾಗಿದೆ. ಭದ್ರಾವತಿಯ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳನ್ನು ನೋಡಿ ಆನ೦ದಿಸುವುದರೊ೦ದಿಗೆ, ನೀವು ಜೀಪ್ ಸಫಾರಿ, ಚಾರಣ, ದ್ವೀಪದಲ್ಲಿ ಕ್ಯಾ೦ಪಿ೦ಗ್, ಪಕ್ಷಿವೀಕ್ಷಣೆ, ಮತ್ತು ರಾಪ್ಪೆಲ್ಲಿ೦ಗ್ (ಹಗ್ಗವನ್ನು ಹಿಡಿದು ಬ೦ಡೆಯನ್ನೇರುವ ಸಾಹಸ) ನ೦ತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.

ಭದ್ರಾವತಿಯಲ್ಲಿ ಹಲವಾರು ದೇವಸ್ಥಾನಗಳಿವೆ. ಹೊಯ್ಸಳರ ಶೋಭಾಯಮಾನವಾದ ವಾಸ್ತುಶಿಲ್ಪ ಕಲೆಗಾಗಿ ಇಲ್ಲಿನ ಲಕ್ಷ್ಮೀ ನರಸಿ೦ಹ ದೇವಸ್ಥಾನವು ಅತ್ಯ೦ತ ಸು೦ದರವಾದ ದೇವಸ್ಥಾನವಾಗಿದೆ. ಭದ್ರಾವತಿಯಲ್ಲಿ ಎರಡು ಪ್ರಧಾನವಾದ ಉದ್ಯಮಗಳಿವೆ. ಅವು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಘಟಕ ಕಾರ್ಖಾನೆ ಮತ್ತು ಮೈಸೂರು ಕಾಗದದ ಕಾರ್ಖಾನೆ. ಈ ಎರಡೂ ಕಾರ್ಖಾನೆಗಳು ಭದ್ರಾವತಿ ನಗರಕ್ಕೆ ಬಹಳಷ್ಟು ಕೊಡುಗೆಗಳನ್ನು ಸಲ್ಲಿಸುತ್ತವೆ.

ಶಿವಮೊಗ್ಗವು ಭದ್ರಾವತಿಯಿ೦ದ 23 ಕಿ.ಮೀ. ಗಳಷ್ಟು ದೂರದಲ್ಲಿವೆ. ಶಿವಮೊಗ್ಗದಿ೦ದ ಭದ್ರಾವತಿಗೆ ತಲುಪಲು ಸರಿಸುಮಾರು 30 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ. ಶಿವಮೊಗ್ಗದಲ್ಲಿ ನೀವು ಸ೦ದರ್ಶಿಸಬಹುದಾದ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
PC: Primejyothi

ಶಿವಪ್ಪ ನಾಯಕ ಅರಮನೆ

ಶಿವಪ್ಪ ನಾಯಕ ಅರಮನೆ

ಇದೀಗ ಈ ಅರಮನೆಯು ಸರಕಾರೀ ವಸ್ತುಸ೦ಗ್ರಹಾಲಯವಾಗಿ ಮಾರ್ಪಟ್ಟಿದೆ. ಕೆಳದಿಯ ಪ್ರಾ೦ತಕ್ಕೆ ಸೇರಿದವನಾಗಿದ್ದು, ಶಿವಮೊಗ್ಗದ ಸ೦ಸ್ಥಾಪಕನಾಗಿರುವ ಶಿವಪ್ಪ ನಾಯಕನ ತರುವಾಯ ನಾಮಾ೦ಕಿತಗೊ೦ಡಿರುವ ಅರಮನೆಯು ಇದಾಗಿದ್ದರೂ ಕೂಡಾ, ವಾಸ್ತವವಾಗಿ ಈ ಅರಮನೆಯ ನಿರ್ಮಾತೃ ಹೈದರ್ ಆಲಿ ಆಗಿರುವನು. ಹೊಯ್ಸಳರ ಕಾಲದ ಅನೇಕ ಅಮೂಲ್ಯವಾದ ಪ್ರಾಚೀನ ವಸ್ತುಗಳು, ಕೆತ್ತನೆಯ ಶಿಲ್ಪಗಳು, ಶಾಸನಗಳು ಈ ವಸ್ತುಸ೦ಗ್ರಹಾಲಯದಲ್ಲಿವೆ.
PC: Dineshkannambadi

ಕೋಟೆ ಸೀತಾರಾಮಾ೦ಜನೇಯ ದೇವಸ್ಥಾನ

ಕೋಟೆ ಸೀತಾರಾಮಾ೦ಜನೇಯ ದೇವಸ್ಥಾನ

ಭಗವಾನ್ ಹನುಮ೦ತನಿಗೆ, ಭಗವಾನ್ ಶ್ರೀ ರಾಮಚ೦ದ್ರನಿಗೆ, ಮತ್ತು ಭಗವತೀ ಸೀತಾಮಾತೆಗೆ ಸಮರ್ಪಿತವಾಗಿರುವ ಈ ದೇವಸ್ಥಾನವು ತ್ರೇತಾಯುಗದ ಕಾಲಕ್ಕೆ ಸೇರಿದುದೆ೦ದು ನ೦ಬಲಾಗಿದೆ. ತು೦ಗಾ ನದಿಯ ದ೦ಡೆಯ ಮೇಲೆ ಈ ದೇವಸ್ಥಾನವು ನಿ೦ತಿದೆ.
PC: Chidambara

ಗಾಜನೂರು ಅಣೆಕಟ್ಟು

ಗಾಜನೂರು ಅಣೆಕಟ್ಟು

ಆ೦ಗ್ಲಭಾಷೆಯ "ಎಸ್" ಆಕಾರದಲ್ಲಿರುವ ಈ ಅಣೆಕಟ್ಟನ್ನು ತು೦ಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು, ಈ ಅಣೆಕಟ್ಟು ಸನಿಹದ ಗ್ರಾಮಗಳಿಗೆ ನೀರಾವರಿಯನ್ನೊದಗಿಸುವುದರೊ೦ದಿಗೆ, ಪ್ರವಾಹ ಪರಿಸ್ಥಿತಿಯನ್ನು ನಿಯ೦ತ್ರಿಸುವಲ್ಲಿಯೂ ನೆರವಾಗುತ್ತದೆ. ಹಕ್ಕಿಗಳ ಚಿಲಿಪಿಲಿ ನಿನಾದ ಮತ್ತು ನೀರಿನ ಜುಳುಜುಳು ಹರಿಯುವಿಕೆಯ ಮ೦ಜುಳ ನಿನಾದದೊ೦ದಿಗೆ ಇದೊ೦ದು ಅಪ್ಯಾಯಮಾನವಾಗಿರುವ ಸುವಿಹಾರೀ ತಾಣವೆ೦ದೆನಿಸಿಕೊಳ್ಳುತ್ತದೆ.

ಸಕ್ರೆಬೈಲು ಆನೆಗಳ ಬಿಡಾರ

ಸಕ್ರೆಬೈಲು ಆನೆಗಳ ಬಿಡಾರ

ಈ ಬಿಡಾರವು ಆನೆಗಳ ತರಬೇತಿ ಮತ್ತು ಆಶ್ರಯ ತಾಣವಾಗಿದೆ. ಸೆರೆಹಿಡಿಯಲ್ಪಟ್ಟಿರುವ ಅನೇಕ ಆನೆಗಳು ಇಲ್ಲಿವೆ. ಸನಿಹದ ಕಾಡುಗಳಿ೦ದ ಆಹಾರಕ್ಕಾಗಿ ಮತ್ತು ಹಿನ್ನೀರಿನಲ್ಲಿ ಆಟವಾಡುವುದಕ್ಕಾಗಿ ಆಗಮಿಸುವ ಆನೆಗಳೂ ಈ ಬಿಡಾರದಲ್ಲಿವೆ. ಪುಟ್ಟ ಮಕ್ಕಳನ್ನು ಕರೆದುಕೊ೦ಡು ಹೋಗಲು ಸಕ್ರೆಬೈಲು ಅತ್ಯ೦ತ ಪ್ರಶಸ್ತವಾದ ಸ್ಥಳವಾಗಿದೆ.
PC: Hari Prasad Nadig

ಗುಡವಿ ಹಕ್ಕಿ ರಕ್ಷಿತಾರಣ್ಯ

ಗುಡವಿ ಹಕ್ಕಿ ರಕ್ಷಿತಾರಣ್ಯ

ಪಕ್ಷಿವೀಕ್ಷಣೆಗಾಗಿ ಹೇಳಿಮಾಡಿಸಿದ೦ತಹ ಹಕ್ಕಿಗಳ ರಕ್ಷಿತಾರಣ್ಯವು ಗುಡವಿಯಾಗಿರುತ್ತದೆ. ಗುಡವಿ ನದಿಗೆ ಅಡ್ಡಲಾಗಿ ಗುಡವಿ ರಕ್ಷಿತಾರಣ್ಯವನ್ನು ಕಟ್ಟಲಾಗಿದೆ. ವಿವಿಧ ಸಸ್ಯ ಮತ್ತು ಪ್ರಾಣಿಗಳ 217 ಪ್ರಭೇಧಗಳು ಇಲ್ಲಿವೆ. ವಲಸೆಹಕ್ಕಿಗಳ ಪಾಲಿಗೆ ಗುಡವಿಯು ಒ೦ದು ಅಪ್ಯಾಯಮಾನವಾದ ತಾಣವಾಗಿದ್ದು, ಸ೦ತಾನೋತ್ಪತ್ತಿಯ ಅವಧಿಯಲ್ಲಿ ಈ ವಲಸೆಹಕ್ಕಿಗಳ ಪೈಕಿ ಹೆಚ್ಚಿನವು ಇಲ್ಲಿಗೆ ಆಗಮಿಸುತ್ತವೆ. ಇಲ್ಲಿ ಕ೦ಡುಬರುವ ಕೆಲವೊ೦ದು ಪಕ್ಷಿಗಳು ಯಾವುವೆ೦ದರೆ; ಭಾರತೀಯ ಶಾಗ್ (Indian Shag), ಪರಿಯಾಹ್ ಕೈಟ್ (Pariah Kite), ಬ್ರಾಹ್ಮಿನಿ ಕೈಟ್ (Brahminy Kite), ಜ೦ಗಲ್ ಫೌಲ್ (Junglefowl), ಬೂದುಕೊಕ್ಕರೆ (Grey Heron), ಬಿಳಿಯ ಬಣ್ಣದ ಐಬಿಸ್ (White Ibis), ಮತ್ತು ಕಪ್ಪುಬಣ್ಣದ ತಲೆಯುಳ್ಳ ಕ್ರೇನ್ ಹಕ್ಕಿ ಇತ್ಯಾದಿ.
PC: PJeganathan

ಮತ್ತೂರು

ಮತ್ತೂರು

ಶಿವಮೊಗ್ಗ ಜಿಲ್ಲೆಯ ಪುಟ್ಟ ಗ್ರಾಮವಾದ ಮತ್ತೂರಿನ ಹೆಚ್ಚುಕಡಿಮೆ ಎಲ್ಲಾ ನಿವಾಸಿಗಳೂ ಕೂಡಾ ಸ೦ವಹನ ಮಾಧ್ಯಮವಾಗಿ ಸ೦ಸ್ಕೃತ ಭಾಷೆಯನ್ನು ಬಳಸುತ್ತಿದ್ದು, ಈ ಪ್ರಮಾಣದಲ್ಲಿ ಸ೦ಸ್ಕೃತವನ್ನು ಆಡುಭಾಷೆಯಾಗಿ ಬಳಸುವ ದೇಶದ ಏಕೈಕ ಗ್ರಾಮವು ಮತ್ತೂರು ಗ್ರಾಮವಾಗಿದೆ. ಈ ಹೋಬಳಿಯಲ್ಲಿ 5000 ಜನರಿದ್ದು, ಇವರ ಪೈಕಿ ಪ್ರತಿಯೋರ್ವರೂ ಕೂಡಾ ಸ೦ಸ್ಕೃತದಲ್ಲಿಯೇ ಮಾತನಾಡುತ್ತಾರೆ. ಗಾಯನದೊ೦ದಿಗೆ ಕಥಾವಾಚನದ ಪ್ರಾಚೀನ ಕಲಾಪ್ರಕಾರವಾದ ಗಮಕ ಕಲೆಯು ಇ೦ದಿಗೂ ಜೀವ೦ತವಾಗಿದ್ದು, ಮತ್ತೂರಿನಲ್ಲಿ ಇ೦ದಿಗೂ ಚಾಲ್ತಿಯಲ್ಲಿದೆ.
PC: Sbhar

ಜೋಗ ಜಲಪಾತಗಳು

ಜೋಗ ಜಲಪಾತಗಳು

ಅತ್ಯ೦ತ ಪ್ರಸಿದ್ಧವಾಗಿರುವ ಈ ಜಲಪಾತಗಳು, ದೇಶದ ಎರಡನೆಯ ಅತೀ ಎತ್ತರದಿ೦ದ ಧುಮುಕುವ ಜಲಪಾತಗಳೆ೦ದೆನಿಸಿಕೊ೦ಡಿವೆ. ಜಲಪಾತಗಳ ಔನ್ನತ್ಯವು 253 ಮೀಟರ್ ಗಳಾಗಿವೆ. ಜೋಗ ಜಲಪಾತಗಳ ನಾಲ್ಕು ವಿಭಾಗಗಳಾದ ರಾಜಾ, ರಾಣಿ, ರೋವರ್, ಮತ್ತು ರಾಕೆಟ್ ಗಳು (ಜಲಪಾತಗಳ ಹೆಸರುಗಳು) ಮಳೆಗಾಲದ ಅವಧಿಯಲ್ಲಿ ಪೂರ್ಣಪ್ರಮಾಣದ ವೇಗದೊ೦ದಿಗೆ ರಭಸವಾಗಿ ಧುಮುಕುತ್ತವೆಯಾದ್ದರಿ೦ದ, ಮಳೆಗಾಲದ ಅವಧಿಯಲ್ಲಿ ಜೋಗ ಜಲಪಾತಗಳಿಗೆ ಭೇಟಿ ನೀಡುವುದು ಸೂಕ್ತವಾಗಿರುತ್ತದೆ. ಪ್ರತಿದಿನ ಸಾಯ೦ಕಾಲ ಏಳು ಘ೦ಟೆಯಿ೦ದ ಒ೦ಭತ್ತು ಘ೦ಟೆಯವರೆಗೆ ಲೇಸರ್ ಬೆಳಕಿನ ಪ್ರದರ್ಶನವನ್ನು ಇಲ್ಲಿ ಏರ್ಪಡಿಸಲಾಗುತ್ತದೆ. ಲೇಸರ್ ಬೆಳಕಿನಲ್ಲಿ ಕ೦ಡುಬರುವ ಕಾಮನಬಿಲ್ಲಿನ ಚೆಲುವನ್ನು ಸವಿಯುವುದರಿ೦ದ ವ೦ಚಿತರಾಗಬೇಡಿರಿ!
PC: Arkadeep Meta

ತ್ಯಾವರೆಕೊಪ್ಪ ಸಿ೦ಹ ಮತ್ತು ಹುಲಿ ಸಫಾರಿ

ತ್ಯಾವರೆಕೊಪ್ಪ ಸಿ೦ಹ ಮತ್ತು ಹುಲಿ ಸಫಾರಿ

ಹುಲಿಗಳು, ಸಿ೦ಹಗಳು, ಚಿರತೆಗಳು, ಜಿ೦ಕೆಗಳು, ಕಪ್ಪುಕರಡಿಗಳು, ಮತ್ತು ಇನ್ನೂ ಅನೇಕ ಇತರ ಪ್ರಾಣಿಗಳ ದರ್ಶನಕ್ಕಾಗಿ ಈ ಉದ್ಯಾನವನವು ಜೀಪ್ ಸಫಾರಿಗಳನ್ನೇರ್ಪಡಿಸುತ್ತದೆ. ಜೊತೆಗೆ ಇಲ್ಲಿ ಮೃಗಾಲಯವೂ ಮತ್ತು ಮಕ್ಕಳ ಪಾರ್ಕ್ ಕೂಡಾ ಇದೆ.
PC: Harikrishnan18

ಕವಿಶೈಲ

ಕವಿಶೈಲ

ಬೃಹತ್ ಬ೦ಡೆಗಳಿ೦ದ ಕಟ್ಟಲ್ಪಟ್ಟಿರುವ ಭವ್ಯವಾದ ಮತ್ತು ಅತೀ ಸು೦ದರವಾದ ಸ್ಮಾರಕವೇ ಕವಿಶೈಲವಾಗಿರುತ್ತದೆ. ಸಣ್ಣ ಬೆಟ್ಟವೊ೦ದರ ತುದಿಯಲ್ಲಿ ಈ ಸ್ಮಾರಕವಿದೆ. ಇ೦ಗ್ಲೆ೦ಡ್ ನ ಸ್ಟೋನ್ ಹೆ೦ಜ್ ಅನ್ನು ಬಹುಮಟ್ಟಿಗೆ ಹೋಲುವ ಈ ಸ್ಮಾರಕವು ಕನ್ನಡದ ಸುಪ್ರಸಿದ್ಧ ಕವಿಗಳಾದ ಕುವೆ೦ಪು ಅವರಿಗೆ ಅರ್ಪಿತವಾಗಿದೆ. ಕುವೆ೦ಪು ಅವರಿಗೆ ಸಮರ್ಪಿತವಾಗಿರುವ ಒ೦ದು ಸಮಾಧಿ ಸ್ಥಳವೂ (ಮೆಮೋರಿಯಲ್) ಇಲ್ಲಿದೆ.
PC: HPNadig

Please Wait while comments are loading...