Search
  • Follow NativePlanet
Share
» »ಈ ದೇವಸ್ಥಾನದ ಬಾವಿಗೆ ಕಲ್ಲೆಸೆದರೆ ಮನೋಕಾಮನೆ ಈಡೇರುತ್ತಂತೆ

ಈ ದೇವಸ್ಥಾನದ ಬಾವಿಗೆ ಕಲ್ಲೆಸೆದರೆ ಮನೋಕಾಮನೆ ಈಡೇರುತ್ತಂತೆ

ಶೇವರೋಯಾನ್ ದೇವಸ್ಥಾನವು ಒಂದು ಗುಹಾ ದೇವಾಲಯವಾಗಿದೆ. ಶೇವರಾಯ್ ದೇವಸ್ಥಾನದ ಮುಖ್ಯ ದೇವತೆ ಶೇವರೋಯಾನ್

5326 ಅಡಿ ಎತ್ತರದಲ್ಲಿರುವ ಈ ದೇವಾಲಯದಲ್ಲಿರುವ ಬಾವಿಯ ಮಹಿಮೆ ಗೊತ್ತಾ? ತಮ್ಮ ಆಸೆ ಈಡೇರಬೇಕಾದರೆ ಈ ಬಾವಿಗೆ ಕಲ್ಲು ಎಸೆಯ ಬೇಕಂತೆ. ಕೇಳುವಾಗ ವಿಚಿತ್ರ ಅನಿಸುತ್ತದೆ ಅಲ್ವಾ? ಹಾಗಾದ್ರೆ ಬನ್ನಿ ಈ ದೇವಸ್ಥಾನ ಯಾವುದು ಅಲ್ಲಿನ ವಿಶೇಷತೆ ಏನು ಎಂಬುವುದನ್ನು ತಿಳಿಯೋಣ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC: Parvathisri
ಯೆರ್ಕಾಡ್ ಬಸ್ ನಿಲ್ದಾಣದಿಂದ 7 ಕಿ.ಮೀ ದೂರದಲ್ಲಿರುವ ಶೆವರೋಯಾನ್ ದೇವಸ್ಥಾನವು ತಮಿಳುನಾಡಿನ ಯೆರ್ಕಾಡ್ ಪಟ್ಟಣದಲ್ಲಿರುವ ಶೇವರೋಯಾನ್ ಬೆಟ್ಟದ ಮೇಲೆ ನೆಲೆಗೊಂಡಿದೆ. 5326 ಅಡಿ ಎತ್ತರದಲ್ಲಿದೆ, ಇದು ಯೆರ್ಕಾಡ್ ಬೆಟ್ಟಗಳಲ್ಲಿನ ಅತಿ ಎತ್ತರದ ಸ್ಥಳವಾಗಿದೆ.

ಗುಹಾ ದೇವಾಲಯ

ಗುಹಾ ದೇವಾಲಯ

PC: youtube
ಶೇವರೋಯಾನ್ ದೇವಸ್ಥಾನವು ಒಂದು ಗುಹಾ ದೇವಾಲಯವಾಗಿದೆ. ಶೇವರಾಯ್ ದೇವಸ್ಥಾನದ ಮುಖ್ಯ ದೇವತೆ ಶೇವರೋಯಾನ್. ಈ ಪ್ರದೇಶದ ಬುಡಕಟ್ಟು ಜನರಿಂದ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಕಿರಿದಾದ ಮತ್ತು ಗಾಢವಾದ ಗುಹೆಗಳೆಂದು ವಿವರಿಸಬಹುದು. ಇದು ದೇವತೆ ಕಾವೇರಿ ಮತ್ತು ಶೇವರೋಯಾನ್ ವಿಗ್ರಹಗಳಿಂದ ಅಲಂಕರಿಸಲ್ಪಟ್ಟಿದೆ.

2000 ವರ್ಷ ಹಳೆಯ ದೇವಾಲಯ

2000 ವರ್ಷ ಹಳೆಯ ದೇವಾಲಯ

PC:RAJUKHAN SR RAJESH
ಪುರುಷ ದೇವತೆ ಶೇವರೋಯಾನ್‌ನನ್ನು ಬೆಟ್ಟಗಳ ದೇವರು ಎಂದು ನಂಬಲಾಗಿದೆ. ಆದರೆ ಸ್ತ್ರೀ ದೇವಿಯನ್ನು ಕಾವೇರಿ ನದಿಯ ದೇವತೆ ಎಂದು ಪರಿಗಣಿಸಲಾಗಿದೆ. ಕಾವೇರಿ ದೇವಿಯು ಯೆರ್ಕಾಡ್ ಸುತ್ತಲಿನ 67 ಹಳ್ಳಿಗಳ ರಕ್ಷಕ ದೇವತೆ ಎಂದು ನಂಬಲಾಗಿದೆ ಎಂಬ ನಂಬಿಕೆ ಇದೆ. ಈ ಗುಹೆಯ ದೇವಸ್ಥಾನವು ಸ್ಥಳೀಯರ ಪ್ರಕಾರ 2000 ವರ್ಷಗಳಷ್ಟು ಹಳೆಯದಾಗಿದೆ ಎಂದು ನಂಬಲಾಗಿದೆ. ಈ ಗುಹೆಯು ದೇವಾಲಯದ ಆಚೆಗೆ ವಿಸ್ತರಿಸಿದೆ. ಇದು ಕರ್ನಾಟಕದ ಕಾವೇರಿ ನದಿಗೆ 480 ಕಿ.ಮೀ ದೂರದಲ್ಲಿದೆ.

 ಬೇಡಿಕೆ ಈಡೇರಿಸುವ ಬಾವಿ

ಬೇಡಿಕೆ ಈಡೇರಿಸುವ ಬಾವಿ

PC:youtube
ಟಿಪ್ಪು ಸುಲ್ತಾನ್ ಯುದ್ಧದ ಸಮಯದಲ್ಲಿ ಈ ಗುಹೆಯಲ್ಲಿ ಅಡಗಿದ್ದ ಎನ್ನಲಾಗುತ್ತದೆ. ಈ ದೇವಸ್ಥಾನದ ಸಮೀಪ ಒಂದು ಬಾವಿ ಇದೆ. ಭಕ್ತರು ಈ ದೇವಾಲಯದಿಂದ ಮೂರು ಕಲ್ಲನ್ನು ತೆಗೆದುಕೊಂಡು ಈ ಬಾವಿಗೆ ಬೆನ್ನು ಹಾಕಿ ಬಾವಿಯೊಳಗೆ ಎಸೆಯಬೇಕು. ಆ ಮೂರು ಕಲ್ಲಲ್ಲಿ ಒಂದು ಕಲ್ಲಾದರೂ ಬಾವಿಯೊಳಗೆ ಬಿದ್ದರೆ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದಂತೆ ಎಂಬ ನಂಬಿಕೆ ಜನರದ್ದು.

ಮೇ ತಿಂಗಳಲ್ಲಿ ವಾರ್ಷಿಕ ಉತ್ಸವ

ಮೇ ತಿಂಗಳಲ್ಲಿ ವಾರ್ಷಿಕ ಉತ್ಸವ

PC:Parvathisri

ಸ್ಥಳೀಯ ಬುಡಕಟ್ಟು ಜನಾಂಗದವರು ನೂರಾರು ವರ್ಷಗಳಿಂದ ಪ್ರತಿವರ್ಷ ಮೇ ತಿಂಗಳಿನಲ್ಲಿ ಈ ದೇವಸ್ಥಾನದ ಆವರಣದಲ್ಲಿ ಉತ್ಸವವನ್ನು ಆಚರಿಸುತ್ತಾರೆ. ದೇವಸ್ಥಾನದಿಂದ, ಸುತ್ತಲಿನ ಬೆಟ್ಟಗಳ ಸುಂದರವಾದ ಸೌಂದರ್ಯ ಮತ್ತು ಸುಂದರವಾದ ಯೆರ್ಕಾಡ್ ಪಟ್ಟಣವನ್ನು ಆನಂದಿಸಬಹುದು. ಯೆರ್ಕಾಡ್ ಪಟ್ಟಣ ಮತ್ತು ನಾಗಲೂರಿನ ಉತ್ತಮ ನೋಟವನ್ನು ಈ ಬೆಟ್ಟದಿಂದ ಪಡೆಯಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Parvathisri
ಬಸ್ ಮೂಲಕ
ಸಾಕಷ್ಟು ಕೆಎಸ್ಆರ್‌ಟಿಸಿ ಬಸ್‌ಗಳು ಯೆರ್ಕಾಡ್‌ಗೆ ಹೋಗುತ್ತವೆ. ವಿವಿಧ ರೀತಿಯ ಬಜೆಟ್ ಸ್ನೇಹಿ ಬಸ್‌ಗಳು ಕೂಡಾ ಲಭ್ಯವಿದೆ. ಇಲ್ಲವಾದಲ್ಲಿ ನೀವು ಸೇಲಂಗೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ಶೇವರೋಯಾನ್‌ತಲುಪಬಹುದು.

ರೈಲು ಮೂಲಕ
ಯೆರ್ಕಾಡ್‌ನಲ್ಲಿ ರೈಲು ನಿಲ್ದಾಣವಿಲ್ಲದಿರುವುದರಿಂದ ಪ್ರಯಾಣಿಕರು ಸೇಲಂ ರೈಲ್ವೇ ನಿಲ್ದಾಣದಲ್ಲಿ ಇಳಿಯಬಹುದು, ಅಲ್ಲಿಂದ ಬರೀ 15 ಕಿ.ಮೀ. ದೂರದಲ್ಲಿರುವ ಯೆರ್ಕಾಡ್‌ಗೆ ಟ್ಯಾಕ್ಸಿಯ ಮೂಲಕ ಸುಲಭವಾಗಿ ತಲುಪಬಹುದು.

ವಿಮಾನದ ಮೂಲಕ
ಯೆರ್ಕಾಡ್ ವಿಮಾನ ನಿಲ್ದಾಣದ ಅನುಪಸ್ಥಿತಿಯಿಂದಾಗಿ ಯೆರ್ಕಾಡ್‌ಗೆ ನೇರವಾಗಿ ವಿಮಾನ ಇಲ್ಲ. ಆದಾಗ್ಯೂ, ಸುಮಾರು 163 ಕಿ.ಮೀ ದೂರದಲ್ಲಿರುವ ತಿರುಚಿರಾಪಲ್ಲಿ ವಿಮಾನ ನಿಲ್ದಾಣವು ಸಮೀಪದ ವಿಮಾನ ನಿಲ್ದಾಣವಾಗಿದ್ದು, ಕೆಲವು ಹಾರಾಟವನ್ನು ನಡೆಸುತ್ತದೆ. ಇಲ್ಲಿಂದ ಯೆರ್ಕಾಡ್ ತಲುಪಲು ಟ್ಯಾಕ್ಸಿ ಸೇವೆಗಳನ್ನು ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X