Search
  • Follow NativePlanet
Share
» »ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!

ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!

By Vijay

ಏನಾಶ್ಚರ್ಯ! ಕ್ರಿಸ್ತನು ಹಿಂದು ದೇವಾಲಯಕ್ಕೆ ಭೇಟಿ ನೀಡಿದ್ದನೆ? ಎಂದೆನಿಸದೆ ಇರಲಾರದು. ಆದರೆ ಕೆಲವು ತಜ್ಞರ ಪ್ರಕಾರ, ಇದು ಹೌದೆಂದು ಕೆಅಲವರು ನಂಬುತ್ತಾರೆ. ಅದರಲ್ಲೂ ವಿಶೇಷವಾಗಿ ಇಸ್ರೇಲ್ ದೇಶದ ಯಹೂದಿಯರಲ್ಲಿ ಸಾಕಷ್ಟು ಜನರು ಇದನ್ನು ನಂಬುತ್ತಾರೆ.

ಶಂಕರರು ಪಟ್ಟಿ ಮಾಡಿರುವ ಆ ಮಹಾಶಕ್ತಿಪೀಠಗಳು

ಇಸ್ರೇಲಿಗರು ಸಾಮಾನ್ಯವಾಗಿ ನಂಬಿರುವಂತೆ ಕ್ರಿಸ್ತನ ಕಾಲದ ಯಹೂದಿಯರು ಭಾರತದ ಕಾಶ್ಮೀರ ಪ್ರಾಂತ್ಯದಲ್ಲಿ ವಾಸಿಸಿದ್ದರೆಂದು ನಂಬಲಾಗುತ್ತದೆ. ಅಲ್ಲದೆ ಕೆಲವು ಪಂಡಿತರು ಹಾಗೂ ತಜ್ಞರ ಪ್ರಕಾರ ಕಾಶ್ಮೀರಿ ಹಾಗೂ ಇಸ್ರೇಲಿಗರಲ್ಲಿ ಸಾಕಷ್ಟು ಸಾಮ್ಯತೆ ಇರುವುದನ್ನು ಅವಲೋಕಿಸಿ ಇದನ್ನು ಪುಷ್ಟಿಕರಿಸುತ್ತಾರೆ.

ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!

ಚಿತ್ರಕೃಪೆ: Tauqee Zahid

ಇನ್ನೊಂದು ವಿಷಯವೆಂದರೆ ಕ್ರೈಸ್ತರ ಪವಿತ್ರ ಗ್ರಂಥವಾದ ಬೈಬಲ್ ನಲ್ಲೂ ಸಹ ಕ್ರಿಸ್ತನ ಬಾಲ್ಯದಿಂದ ಯೌವನಾವಸ್ಥಯವರೆಗಿನ ಸಮಯದ ಕುರಿತು ಯಾವುದೆ ವಿವರಣೆಗಳಿಲ್ಲ. ಅದನ್ನು "ಲಾಸ್ಟ್ ಹಿಸ್ಟರಿ ಆಫ್ ಜೀಸಸ್" ಎಂದು ಕರೆಯುತ್ತಾರೆ. ಕೆಲವು ಇತಿಹಾಸಕಾರರ ಪ್ರಕಾರ, ಈ ಸಮಯದಲ್ಲಿ ಕ್ರಿಸ್ತನು ಭಾರತಕ್ಕೆ ಭೇಟಿ ನೀಡಿದ್ದನೆನ್ನಲಾಗುತ್ತದೆ.

ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!

ದೇವಾಲಯದೊಳಗೆ, ಚಿತ್ರಕೃಪೆ: Divya Gupta

ಅದರಲ್ಲೂ ವಿಶೇಷವಾಗಿ ಕಾಶ್ಮೀರ ಪ್ರಾಂತ್ಯಕ್ಕೆ ಕ್ರಿಸ್ತನು ಭೇಟಿ ನೀಡಿದ್ದನಂತೆ. ಅದಕ್ಕೆ ಕುರುಹಾಗಿ ಶ್ರೀನಗರದ ಬಳಿಯಿರುವ ಪರ್ವತವೊಂದರ ಮೇಲಿರುವ ಶಂಕರಾಚಾರ್ಯ ದೇವಾಲಯವನ್ನು ಹೆಸರಿಸಲಾಗುತ್ತದೆ. ಹೌದು, ಜಮ್ಮು ಕಾಶ್ಮೀರ ರಾಜ್ಯದ ಶ್ರೀನಗರದ ಜಬರ್ವಾನ್ ಪರ್ವತ ಶ್ರೇಣಿಗಳಲ್ಲಿರುವ ಶಂಕರಾಚಾರ್ಯ ಬೆಟ್ಟದ ಮೇಲಿದೆ ಈ ಶಂಕರಾಚಾರ್ಯ ದೇವಾಲಯ.

ಇದನ್ನು ಜ್ಯೇಷ್ಠೇಶ್ವರ ದೇವಾಲಯ ಎಂತಲೂ ಸಹ ಕರೆಯಲಾಗುತ್ತದೆ ಹಾಗೂ ಶಂಕರಾಚಾರ್ಯ ಬೆಟ್ಟವನ್ನು ಗೋಪದಾರಿ/ಗೋಪಾದ್ರಿ ಬೆಟ್ಟ ಎಂತಲೂ ಸಹ ಕರೆಯಲಾಗುತ್ತದೆ. ಮೂಲತಃ ಶಿವನಿಗೆ ಮುಡಿಪಾದ ಅತ್ಯಂತ ಪುರಾತನ ದೇವಾಲಯ ಇದಾಗಿದೆ. ದೇವಾಲಯದ ಇತಿಹಾಸವು ಕ್ರಿ.ಪೂ 200 ಕ್ಕೆ ಸಂಬಂಧಿಸಿದ್ದರೂ ಪ್ರಸ್ತುತ ರಚನೆಯು 9 ನೇಯ ಶತಮಾನಕ್ಕೆ ಸಂಬಂಧಿಸಿದ್ದೆನ್ನಲಾಗುತ್ತದೆ.

ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!

ಚಿತ್ರಕೃಪೆ: Didier Lamouche

8-9 ನೇಯ ಶತಮಾನದಲ್ಲಿದ್ದ ಅದ್ವೈತ ಮತದ ಸ್ಥಾಪಕರಾದ ಶ್ರೀ ಆದಿ ಶಂಕರಾಚಾರ್ಯರು ಈ ದೇವಾಲಯಕ್ಕೆ ಭೇಟಿ ನೀಡಿ ಇಲ್ಲಿ ತಪಸ್ಸನ್ನಾಚರಿಸಿದ್ದಲ್ಲದೆ ಇದರೊಡನೆ ಸಾಕಷ್ಟು ಬಾಂಧವ್ಯವನ್ನೂ ಬೆಳೆಸಿಕೊಂಡರು. ಹಾಗಾಗಿ ಕ್ರಮೇಣವಾಗಿ ಇದು ಶಂಕರಾಚಾರ್ಯ ದೇವಾಲಯ ಎಂದೆ ಕರೆಯಲ್ಪಡತೊಡಗಿತು.

ಈ ದೇವಾಲಯದಲ್ಲಿ ಶಂಕರ ಗುಹೆಯೂ ಇದ್ದು ಅಲ್ಲಿ ಶಂಕರರು ತಪಸ್ಸು ಮಾಡುತ್ತಿದ್ದರೆನ್ನಲಾಗಿದೆ. ಶಿವನ ಈ ದೇವಾಲಯಕ್ಕೆ ಭೇಟಿ ನೀಡುವವರು ಗುರುಗಳಾದ ಶಂಕರರ ಸನ್ನಿಧಿಗೂ ತೆರಳಿ ಆಶೀರ್ವಾದ ಪಡೆಯುತ್ತಾರೆ. ಇನ್ನೂ ದೇವಾಲಯ ಕಟ್ಟಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಐತಿಹಾಸಿಕ ಉಲ್ಲೇಖಗಳಿವೆ ಹಾಗೂ ಮಾಹಿತಿಗಳಿವೆ.

ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!

ಚಿತ್ರಕೃಪೆ: Divya Gupta

ಈ ದೇವಾಲಯದ ಮೆಟ್ಟಿಲುಗಳ ಮೇಲೆ ಪರ್ಷಿಯನ್ ಭಾಷೆಯಲ್ಲಿ ಬರೆಯಲಾದ ನಾಲ್ಕು ಉಲ್ಲೇಖಗಳು ಅಥವಾ ಶಾಸನಗಳು ಹೀಗಿವೆ: 1. ಇದರ ಕೆಲಸಗಾರ ಬಿಹಿಶ್ತಿ ಜರ್ಗಾರ್ ವರ್ಷ 54 2. ಈ ಖಂಬ ನೆಟ್ಟವರು ಮುರ್ಜಾನ್ ಮಗನಾದ ಖ್ವಾಜಾ ರುಕುನ್ 3. ಈ ಸಮಯದಲ್ಲಿ ಯುಜ್ ಅಸಫ್ ತಮ್ಮ ಪ್ರವಾದಿತ್ವವನ್ನು ಸಾರಿದರು 4. ಅವರು ಜೀಸಸ್ ಇಸ್ರೇಲ್ ಮಕ್ಕಳ ಪ್ರವಾದಿ. ಹೀಗಾಗಿ ಕ್ರಿಸ್ತನು ಈ ದೇವಾಲಯಕ್ಕೆ ಭೇಟಿ ನೀಡಿದ್ದನೆಂಬ ನಂಬಿಕೆಯಿದೆ.

ಶಂಕರರು ಜನಿಸಿದ ಕಾಲಡಿಗೊಂದು ಭೇಟಿ!

ಸೌಂದರ್ಯ ಲಹರಿ ಎಂಬುದು ಆದಿ ಶಂಕರರು ರಚಿಸಿದ ಒಂದು ಸುಪ್ರಸಿದ್ಧ ಸಂಸ್ಕೃತ ಸಾಹಿತ್ಯ ಗ್ರಂಥವಾಗಿದೆ. ಇಂದಿಗೂ ಧಾರ್ಮಿಕಾಸಕ್ತರ, ಶಂಕರರ ಅನುಯಾಯಿಗಳ ನೆಚ್ಚಿನ ಗ್ರಂಥವಾಗಿರುವ ಈ ಸೌಂದರ್ಯಲಹರಿಯನ್ನು ಶಂಕರಾಚಾರ್ಯರು ಈ ದೇವಾಲಯವಿರುವ ಬೆಟ್ಟದ ಮೇಲೆಯೆ ರಚಿಸಿದ್ದಾರೆಂಬ ಪ್ರತೀತಿಯಿದೆ. ಹೀಗಾಗಿ ಈ ದೇವಾಲಯ ಸಾಕಷ್ಟು ಕುತೂಹಲ ಕೆರಳಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X