Search
  • Follow NativePlanet
Share
» »ಶನಿ ಶಿಂಗ್ನಾಪುರ: ಬಾಗಿಲುಗಳೇ ಇಲ್ಲದ ಈ ಗ್ರಾಮದ ಹಿಂದಿನ ಕಥೆ ಇಲ್ಲಿದೆ

ಶನಿ ಶಿಂಗ್ನಾಪುರ: ಬಾಗಿಲುಗಳೇ ಇಲ್ಲದ ಈ ಗ್ರಾಮದ ಹಿಂದಿನ ಕಥೆ ಇಲ್ಲಿದೆ

ಹೊರಗಡೆ ಹೊರಟಾಗ ನಮ್ಮ ಮನೆಯ ಬಾಗಿಲುಗಳನ್ನು ನಾವು ಎರಡೆರಡು ಬಾರಿ ಪರಿಶೀಲಿಸುತ್ತೇವೆ ಅಲ್ಲವೇ, ಆದರೆ ಮಹಾರಾಷ್ಟ್ರದ ಶನಿ ಶಿಂಗ್ನಾಪುರ ಎಂಬ ಚಿಕ್ಕ ಹಳ್ಳಿಯಲ್ಲಿ ಮನೆಗೆ ಬೀಗಗಳನ್ನು ಹಾಕುವುದಿರಲಿ, ಮನೆಗೆ ಬಾಗಿಲುಗಳೇ ಇಲ್ಲ. ಹೌದು, ನಂಬಲು ಅಸಾಧ್ಯವೆನಿಸಿದರೂ ಇದೇ ಸತ್ಯ.

ಶನಿ ಶಿಂಗ್ನಾಪುರದಲ್ಲಿ ಅನೇಕ ದೇವಾಲಯಗಳು, ಸ್ಮಾರಕಗಳು, ಕೋಟೆಗಳಿದ್ದು, ಪ್ರತಿಯೊಂದು ಕೂಡ ವಿಭಿನ್ನವಾಗಿದೆ. ಹಾಗೆಯೇ ಇವುಗಳ ಹಿಂದೆ ಅನೇಕ ಕಥೆಗಳಿವೆ. ಮೊದಲನೆಯದಾಗಿ, ನಾವು ಶನಿ ಶಿಂಗ್ನಾಪುರ ಊರಿನಲ್ಲಿ ಮನೆಗಳಿಗೆ ಬಾಗಿಲುಗಳೇಕೆ ಇಲ್ಲ ಎಂಬುದನ್ನು ತಿಳಿಯೋಣ.

ಶನಿ ದೇವರ ಮೇಲೆ ನಂಬಿಕೆ

ಶನಿ ದೇವರ ಮೇಲೆ ನಂಬಿಕೆ

ಶನಿ ಶಿಂಗ್ನಾಪುರ ಗ್ರಾಮದಲ್ಲಿ 4,000 ಜನರು ವಾಸ ಮಾಡುತ್ತಾರೆ. ಸಾಮಾನ್ಯವಾಗಿ ಈ ಗ್ರಾಮದ ಎಲ್ಲಾ ಮನೆಗಳಿಗೂ ಬಾಗಿಲುಗಳಿಲ್ಲ. ಮುಂಭಾಗದಲ್ಲಿ ಕೇವಲ ಬಾಗಿಲಿನ ಚೌಕಟ್ಟು ಇದ್ದರೂ, ಅದಕ್ಕೆ ಬಾಗಿಲು ಇರುವುದಿಲ್ಲ. ಇದರ ಹಿಂದಿನ ಕಾರಣ ಹಿಂದೂಗಳ ದೇವತೆಯಾದ ಶನಿ ದೇವರ ಮೇಲಿನ ನಂಬಿಕೆಯಿಂದಾಗಿ ಈ ಗ್ರಾಮದಲ್ಲಿ ಬಾಗಿಲುಗಳು ಯಾವಾಗಲೂ ತೆರೆದಿರುತ್ತದೆ. ಗ್ರಾಮಸ್ಥರ ಪ್ರಕಾರ, ಶನಿ ದೇವನು ಅವರ ರಕ್ಷಕ. ದುಷ್ಟರ ಕಣ್ಣಿನಿಂದ ಶನಿ ದೇವನು ರಕ್ಷಿಸುತ್ತಾನೆ ಎಂಬ ನಂಬಿಕೆಯಿದೆ. ಶನಿ ದೇವರ ಭಯ ಎಷ್ಟು ಪ್ರಬಲವಾಗಿದೆ ಎಂದರೆ ಬಾಗಿಲು ಇಲ್ಲದಿದ್ದರೂ ಗ್ರಾಮದಲ್ಲಿ ಕಳ್ಳತನದ ವರದಿಗಳಿಲ್ಲ. ಇಡೀ ಗ್ರಾಮವು ನಂಬಿಕೆಯ ಆಧಾರದ ಮೇಲೆ ತಮ್ಮ ಜೀವನವನ್ನು ಕಳೆದಿದ್ದಾರೆ ಎಂಬುದು ಸಾಕಷ್ಟು ಕುತೂಹಲಕಾರಿಯಾಗಿದೆ.

ಕಾರು ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ

ಕಾರು ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ

ಈ ಗ್ರಾಮದಲ್ಲಿ ಯಾರೇ ಕಳ್ಳತನ ಮಾಡಲು ಪ್ರಯತ್ನಿಸಿದರೂ ಅವರಿಗೆ ಮಾರಣಾಂತಿಕ ಕಾಯಿಲೆ, ಕುರುಡುತನ ಮತ್ತು ಮಾನಸಿಕ ಅಸಮತೋಲನದಿಂದ ತಕ್ಷಣ ಶಿಕ್ಷೆಯಾಗುತ್ತದೆ ಎಂದು ಜನರು ನಂಬುತ್ತಾರೆ. ಒಂದು ವೇಳೆ ಯಾರಾದರೂ ತಪ್ಪು ಮಾಡಿದರೆ, ಅಪ್ರಾಮಾಣಿಕರಾಗಿದ್ದರೆ ಅಪಘಾತ ಅಥವಾ ದಿವಾಳಿತನದ ರೂಪದಲ್ಲಿ ಏಳೂವರೆ ವರ್ಷಗಳ ಕಾಲ ದುರದೃಷ್ಟ ಅನುಭವಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಯಾರಾದರೂ ಬೀಗ ಅಥವಾ ಬಾಗಿಲನ್ನು ಸ್ಥಾಪಿಸಿದರೆ, ಅವರಿಗೆ ಗ್ರಹಚಾರ ಕಾಡುತ್ತದೆ ಎಂದು ಜನರು ನಂಬುತ್ತಾರೆ. ಒಮ್ಮೆ ಹಳ್ಳಿಗನೊಬ್ಬನು ತನ್ನ ಮನೆಯ ಪ್ರವೇಶದ್ವಾರದಲ್ಲಿ ಮರದ ಬಾಗಿಲನ್ನು ಹಾಕಲು ಪ್ರಯತ್ನಿಸಿದನು. ಮರುದಿನವೇ ಅವನು ಕಾರು ಅಪಘಾತದಲ್ಲಿ ಮರಣಹೊಂದಿದನು.

ಕನಸಿನಲ್ಲಿ ಬಂದ ದೇವರು

ಕನಸಿನಲ್ಲಿ ಬಂದ ದೇವರು

ದಂತಕಥೆಗಳ ಪ್ರಕಾರ, ಸುಮಾರು ವರ್ಷಗಳ ಹಿಂದೆ ಭಾರೀ ಮಳೆಯಾಯಿತು. ಮಳೆಯ ನಂತರ, ಪನಸನಾಳ ನದಿಯ ದಡದಲ್ಲಿ ಕಪ್ಪು ಕಲ್ಲಿನ ಚಪ್ಪಡಿ ಕೊಚ್ಚಿಹೋಗಿರುವುದನ್ನು ಜನರು ನೋಡಿದರು. ಸ್ಥಳೀಯರು ಕೋಲಿನಿಂದ ಚಪ್ಪಡಿಗೆ ಸ್ಪರ್ಶಿಸಿದಾಗ ಎಲ್ಲಿಂದಲೋ ರಕ್ತ ಸೋರತೊಡಗಿತು. ಅದೇ ರಾತ್ರಿ, ಗ್ರಾಮದ ಮುಖ್ಯಸ್ಥನು ತನ್ನ ಕನಸಿನಲ್ಲಿ ಶನಿ ದೇವರನ್ನು ನೋಡಿದನು, ಶನಿ ದೇವರು ಕಪ್ಪು ಕಲ್ಲಿನ ಚಪ್ಪಡಿ ತನ್ನ ವಿಗ್ರಹ ಎಂದು ಹೇಳಿ, ಗ್ರಾಮದಲ್ಲಿ ತನ್ನ ಹೆಸರಿನಲ್ಲಿ ದೇವಾಲಯವನ್ನು ಮಾಡಲು ಆದೇಶಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಶನಿದೇವನು ಗ್ರಾಮಕ್ಕೆ ಯಾವುದೇ ಹಾನಿಯಾಗದಂತೆ ರಕ್ಷಿಸುವುದಾಗಿ ಹೇಳಿದನು. ಆದರೆ, ದೇಗುಲಕ್ಕೆ ಮೇಲ್ಛಾವಣಿ ಇರಬಾರದು ಎಂಬ ಒಂದು ಷರತ್ತು ಇತ್ತು. ಗ್ರಾಮವನ್ನು ಯಾವುದೇ ಅಡೆತಡೆಯಿಲ್ಲದೆ ಕಾಪಾಡಲು ಈ ಷರತ್ತು ಹಾಕಲಾಗಿತ್ತು.

ಶೌಚಾಲಯಗಳಿಗೂ ಬಾಗಿಲು ಇಲ್ಲ

ಶೌಚಾಲಯಗಳಿಗೂ ಬಾಗಿಲು ಇಲ್ಲ

ಗ್ರಾಮಸ್ಥರು ಕಳ್ಳರಿಂದ ಮತ್ತು ಯಾವುದೇ ದುಷ್ಟ ಶಕ್ತಿಯಿಂದ ಶನಿ ದೇವರು ತಮ್ಮನ್ನು ರಕ್ಷಿಸುತ್ತಾನೆ ಎಂದು ನಂಬುತ್ತಾರೆ. ಆದ್ದರಿಂದ ಅವರು ತಮ್ಮ ಮನೆಗಳ ಬೀಗಗಳನ್ನು ತೆಗೆದಿದ್ದಾರೆ. ಬೀದಿನಾಯಿಗಳನ್ನು ದೂರವಿರಿಸಲು ಮರದ ಫಲಕಗಳನ್ನು ಹಾಕುತ್ತಾರೆ. ಇನ್ನು ತಮ್ಮ ಮನೆಯ ಬೆಲೆಬಾಳುವ ವಸ್ತುಗಳನ್ನು ತೆರೆದ ಸ್ಥಳದಲ್ಲಿ ಬಿಡುತ್ತಾರೆ. ಶೌಚಾಲಯಗಳಿಗೂ ಬಾಗಿಲು ಇಲ್ಲ ಎಂದು ತಿಳಿದರೆ ಅಚ್ಚರಿ ಪಡುತ್ತೀರಿ. ಆದರೆ ತಮ್ಮ ಖಾಸಗಿ ಕೆಲಸಗಳಿಗಾಗಿ ಬಾಗಿಲುಗಳ ಮುಂದೆ ಶೀಟ್ ಹಾಕುತ್ತಾರೆ.

ಹರಿದು ಬರುತ್ತದೆ ಭಕ್ತ ಸಾಗರ

ಹರಿದು ಬರುತ್ತದೆ ಭಕ್ತ ಸಾಗರ

ಪ್ರತಿ ವರ್ಷ, ಶನಿ ದೇವರ ಆಶೀರ್ವಾದ ಪಡೆಯಲು ಗ್ರಾಮಕ್ಕೆ ಭಕ್ತರ ದಂಡೇ ಹರಿದುಬರುತ್ತದೆ. ಅಮವಾಸ್ಯೆಯಂದು, ಈ ದೇವಾಲಯಕ್ಕೆ ದೇಶಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ಏಕೆಂದರೆ ಈ ದಿನವನ್ನು ಶುಭ ದಿನವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ದಿನ ಜಾತ್ರೆಯೂ ನಡೆಯುತ್ತದೆ. ಭಕ್ತರು ಮೂರ್ತಿಗೆ ಎಣ್ಣೆ ಮತ್ತು ನೀರಿನಿಂದ ಸ್ನಾನ ಮಾಡುತ್ತಾರೆ. ಶನಿದೇವನ ಜನ್ಮದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದಲ್ಲದೆ, ಇತರ ದಿನಗಳಿಗೆ ಹೋಲಿಸಿದರೆ ಶನಿವಾರವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಯಾರಿಗೂ ಸತ್ಯ ತಿಳಿದಿಲ್ಲ!

ಯಾರಿಗೂ ಸತ್ಯ ತಿಳಿದಿಲ್ಲ!

2015 ರಲ್ಲಿ ಪೊಲೀಸ್ ಠಾಣೆ ಪ್ರಾರಂಭವಾಯಿತು. ಆದರೆ ಪೊಲೀಸ್ ಠಾಣೆ ಕೂಡ ಈ ಪ್ರೋಟೋಕಾಲ್ ಅನ್ನು ಅನುಸರಿಸುತ್ತದೆ. ಯಾವುದೇ ಗೇಟ್ ಅಥವಾ ಲಾಕ್ ಅನ್ನು ಸ್ಥಾಪಿಸಿಲ್ಲ. ವಿಶೇಷವೆಂದರೆ ಪೊಲೀಸ್ ಠಾಣೆಗೆ ಯಾವುದೇ ದೂರುಗಳು ಬಂದಿಲ್ಲ. ಹಾಗೆಯೇ ಯೂನಿಯನ್ ಕಮರ್ಷಿಯಲ್ ಬ್ಯಾಂಕ್ ಮೊಟ್ಟ ಮೊದಲ ಬಾರಿಗೆ ಬೀಗ ಹಾಕದೆ ಶಾಖೆಯನ್ನು ಶನಿ ಶಿಂಗ್ನಾಪುರದಲ್ಲಿ ತೆರೆಯಿತು. ನಿಗೂಢವೆಂದರೆ ಈ ಗ್ರಾಮವು ತನ್ನದೇ ಆದ ಸಮಸ್ಯೆಗಳನ್ನು ಹೊಂದಿದೆ.

ಕೆಲವರು ತಮ್ಮ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಆದರೆ ಯಾವುದೇ ಪರಿಣಾಮವಿಲ್ಲ ಎಂದು ಹೇಳಿಕೊಂಡಿದ್ದಾರೆ. ನಿಜವಾಗಿ ಯಾರಿಗೂ ಸತ್ಯ ತಿಳಿದಿಲ್ಲ. ಆದರೆ ಕೆಲವರು ತಮ್ಮ ಕುಟುಂಬದ ಸುರಕ್ಷತೆಗಾಗಿ ಬೀಗಗಳನ್ನು ಅಳವಡಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಗಮನಾರ್ಹ ಕಳ್ಳತನಗಳು ನಡೆದಿವೆ. ಆದರೆ ಗ್ರಾಮಸ್ಥರು ಅಂತಹ ವದಂತಿಗಳನ್ನು ನಿರಾಕರಿಸಿದ್ದು, ಇದು ಗ್ರಾಮದ ಹೊರಗೆ ನಡೆದಿದೆ ಎಂದು ಹೇಳಿದ್ದಾರೆ.

ಪ್ರವಾಸಿಗರ ಆಕರ್ಷಣೆ

ಪ್ರವಾಸಿಗರ ಆಕರ್ಷಣೆ

ಈ ವಿಶಿಷ್ಟ ಇತಿಹಾಸದ ಕಾರಣದಿಂದಾಗಿ ಈ ಗ್ರಾಮಕ್ಕೆ ಪ್ರತಿದಿನ ಸುಮಾರು 40,000 ಪ್ರವಾಸಿಗರು ಇಲ್ಲಿನ ಪ್ರಸಿದ್ಧ ಶನಿ ದೇವರ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಗ್ರಾಮಕ್ಕೆ ಬಂದರೆ, ಅಜಂತಾ ಎಲ್ಲೋರಾ ಗುಹೆಗಳು, ಶಿರಡಿ ಮುಂತಾದ ಸ್ಥಳಗಳಿಗೂ ಹೋಗಿ ಬರಬಹುದು. ಶ್ರೀ ಶನೇಶ್ವರ ದೇವಸ್ಥಾನ ಟ್ರಸ್ಟ್ ನಿರ್ವಹಿಸುವ ಕ್ಯಾಂಟೀನ್ ದೇವಸ್ಥಾನದ ಸಮೀಪದಲ್ಲಿದೆ. ಕ್ಯಾಂಟೀನ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಒಟ್ಟಿಗೆ ಊಟ ಮಾಡಬಹುದು.

ಭೇಟಿ ನೀಡುವ ಸಮಯ

ಭೇಟಿ ನೀಡುವ ಸಮಯ

ಸೆಪ್ಟೆಂಬರ್ ನಿಂದ ನವೆಂಬರ್ ಶನಿ ಶಿಂಗ್ನಾಪುರ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರ ಮತ್ತು ಸೌಮ್ಯವಾಗಿರುತ್ತದೆ. ಶನಿ ಶಿಂಗ್ಣಾಪುರ ಶಿರಡಿಯಿಂದ ಸುಮಾರು 70 ಕಿಮೀ ದೂರದಲ್ಲಿದೆ. ಖಾಸಗಿ ಕಾರುಗಳು ಅಥವಾ ಟ್ಯಾಕ್ಸಿಗಳ ಮೂಲಕ ಶಿರಡಿಯಿಂದ ದೇವಸ್ಥಾನಕ್ಕೆ ಸುಲಭವಾಗಿ ಪ್ರಯಾಣಿಸಬಹುದು. ಈ ಎರಡು ಪಟ್ಟಣಗಳ ನಡುವೆ ಬಸ್ಸುಗಳು ಸಹ ಓಡಾಡುತ್ತವೆ. ನೀವು ಪಟ್ಟಣವನ್ನು ಸುತ್ತಲು ಆಟೋರಿಕ್ಷಾಗಳನ್ನು ಬಾಡಿಗೆಗೆ ಪಡೆಯಬಹುದು. ಓಲಾ ಅಥವಾ ಉಬರ್ ಕ್ಯಾಬ್‌ಗಳು ಲಭ್ಯವಿಲ್ಲ. ಸುಮಾರು 140 ಮೀಟರ್ ದೂರದಲ್ಲಿ ನಿಮ್ಮ ವಾಹನಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X