Search
  • Follow NativePlanet
Share
» »ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು..

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು..

ಶಿವನಿಗೆ ಜಟಾಜೂಟವಿದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಶಿವಲಿಂಗಕ್ಕೆ ಜಟಾಜೂಟ ಇರುವುದನ್ನು ನೀವೆಲ್ಲೂ ಕೇಳಿಲ್ಲ ಅಲ್ಲವೇ? ಹಾಗಾದರೆ ಬನ್ನಿ ಆ ಮಹಿಮಾನ್ವಿತವಾದ ದೇವಾಲಯವಿರುವುದು ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯಲ್

ಶಿವನಿಗೆ ಜಟಾಜೂಟವಿದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಶಿವಲಿಂಗಕ್ಕೆ ಜಟಾಜೂಟ ಇರುವುದನ್ನು ನೀವೆಲ್ಲೂ ಕೇಳಿಲ್ಲ ಅಲ್ಲವೇ? ಹಾಗಾದರೆ ಬನ್ನಿ ಆ ಮಹಿಮಾನ್ವಿತವಾದ ದೇವಾಲಯವಿರುವುದು ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯಲ್ಲಿ. ಪ್ರಾರಂಭದಲ್ಲಿ ಈ ನಲ್ಗೊಂಡ ಪ್ರದೇಶವನ್ನು ನೀಲಗಿರಿ ಎಂದು ಕರೆಯುತ್ತಿದ್ದರು. ಬಹುಮನಿಯರ ಕಾಲದಲ್ಲಿ ಈ ಪಟ್ಟಣವನ್ನು ನಲ್ಲಗೊಂಡ ಎಂದು ಮಾರ್ಪಾಟು ಮಾಡಿ ಕರೆದರು. ನಿಜಾಂ ಆಳ್ವಿಕೆಯ ಕಾಲದಲ್ಲಿ ಒಬ್ಬ ಅಧಿಕಾರಿಯ ಅವಶ್ಯಕತೆಗೆ ತಕ್ಕಂತೆ ಈ ಪ್ರದೇಶವನ್ನು ನಲ್ಲಗೊಂಡ ಎಂದೇ ಕರೆಯಲು ಪ್ರಾರಂಭಿಸಿದರು.

ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅದರಲ್ಲಿ ಸ್ವಯಂ ಭೂ ಲಿಂಗದ ದೇವಾಲಯವೂ ಒಂದು. ಈ ದೇವಾಲಯದಲ್ಲಿನ ಶಿವಲಿಂಗಕ್ಕೆ ಜಟಾಜೂಟ ಬೆಳೆಯುತ್ತದೆ ಎಂತೆ. ಹಾಗಾದರೆ ಆ ದೇವಾಲಯ ಯಾವುದು? ಆ ದೇವಾಲಯದ ಮಹಿಮೆಯಾದರೂ ಏನು? ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ ಬನ್ನಿ.

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ನಲ್ಗೊಂಡ ಜಿಲ್ಲೆಯ ಕೋದಾಡದಿಂದ ಸುಮಾರು 23 ಕಿ.ಮೀ ದೂರದಲ್ಲಿನ ಒಂದು ಮಹಿಮಾನ್ವಿತ ದೇವಾಲಯವಿದೆ. ಆ ದೇವಾಲಯವು ಸ್ವಯಂ ಭೂ ದೇವಾಲಯವಾಗಿದ್ದು, ಅದೇ ಶಂಭುಲಿಂಗೇಶ್ವರ ಸ್ವಾಮಿ ದೇವಾಲಯವಾಗಿದೆ. ಎಷ್ಟೋ ಮಾಹಿಮಾನ್ವಿತವಾದ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜರು ಅಷ್ಟಾಗಿ ಪರಿಗಣಿಸಿಲ್ಲದ ಕಾರಣವಾಗಿಯೇ ಈ ದೇವಾಲಯವು ಅಷ್ಟಾಗಿ ಅಭಿವೃದ್ಧಿಗೊಂಡಿಲ್ಲ.

ಒಂದು ಸ್ಥಳ ಪುರಾಣದ ಪ್ರಕಾರ ಇಲ್ಲಿನ ಶಿವಲಿಂಗವು ಬಿಳಿ ಕಲ್ಲಿನ ಶಿವಲಿಂಗ. ಈ ಲಿಂಗದ ಹಿಂದೆ ಜಟಾಜೂಟವಿದೆ. ಇತನನ್ನು ಅರ್ಥನಾರೀಶ್ವರ ರೂಪ ಎಂದು ಕೂಡ ಕರೆಯುತ್ತಾರೆ. ಅರ್ಥನಾರೀಶ್ವರರೇ ಇಲ್ಲಿ ಬಂದು ನೆಲೆಸಿದ್ದಾರೆ ಎಂದು ಭಕ್ತರು ನಂಬಿದ್ದಾರೆ. ಎಲ್ಲಾ ಭಕ್ತರಿಗೂ ಸ್ವಾಮಿಯ ಜಟಾಜೂಟವನ್ನು ಕನ್ನಡಿಯಲ್ಲಿ ತೋರಿಸುತ್ತಾರೆ. ಶಿವಲಿಂಗದ ತಲೆಯ ಮೇಲೆ ಇರುವ ಗಂಗೆಯನ್ನು, ಜಟಾಜೂಟವನ್ನು ಇಲ್ಲಿ ಕಾಣಬಹುದು.

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಅನೇಕ ವರ್ಷಗಳ ಹಿಂದೆ ಇಲ್ಲಿ ಹಸುಗಳು ತಿರುಗುತ್ತಿದ್ದವಂತೆ. ಹನುಮಕೊಂಡ ಸಾವಿರ ಸ್ತಂಭಗಳ ದೇವಾಲಯದಲ್ಲಿ ಶಿವನು, ಅಲ್ಲಿನ ಸ್ಥಳೀಯರು ಗೋ ಮಾಂಸವನ್ನು ನೈವೇದ್ಯವಾಗಿ ಇಡುತ್ತಿದ್ದದ್ದು, ಗೋವಿಗೆ ಹಿಂಸೆಯನ್ನು ನೀಡುತ್ತಿದ್ದರು ಎಂದು ಹೇಳುತ್ತದೆ ಸ್ಥಳ ಪುರಾಣ.

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಒಂದು ಹಸುವು ಶಿವಲಿಂಗದ ಮೇಲೆ ಹಾಲನ್ನು ಸುರಿಯುತ್ತಿತ್ತಂತೆ. ಇದನ್ನು ಕಂಡ ಕೆಲವು ದುಷ್ರ್ಕಮಿಗಳು ನೋಡಿ 11 ಬಾರಿ ಶಿವಲಿಂಗವನ್ನು ನಾಶಗೊಳಿಸಿದರಂತೆ. ಪ್ರತಿಬಾರಿ ಲಿಂಗವು ಹಾಗೆಯೇ ಮತ್ತೊಂಮ್ಮೆ ಬೆಳೆಯುತ್ತಿತ್ತಂತೆ. ಆ ನಂತರದ ಕಾಲದಲ್ಲಿ ಪೂಜೆಗಳನ್ನು ಮಾಡುವುದಕ್ಕೆ ಪ್ರಾರಂಭ ಮಾಡಿದರಂತೆ. ಇಲ್ಲಿ ದೇವಿಯಾದ ಇಷ್ಟಕಾಮೇಶ್ವರಿಯನ್ನು ಪ್ರತಿಷ್ಟಾಪಿಸಿದರು. ಇಲ್ಲಿ ಶಿವರಾತ್ರಿಯ ದಿನಗಳಲ್ಲಿಯೇ ಅಲ್ಲದೇ ಅನೇಕ ಹಿಂದೂ ಹಬ್ಬಗಳಲ್ಲಿಯೂ ಕೂಡ ವಿಶೇಷವಾಗಿ ಪೂಜೆಗಳನ್ನು ಮಾಡುತ್ತಾರೆ.

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಇಲ್ಲಿ ಅನೇಕ ಪ್ರವಾಸಿ ತಾಣಗಳು ಇವೆ. ಅವುಗಳಲ್ಲಿ ಮಟ್ಟಪಲ್ಲಿ, ಪಿಲ್ಲಲಮರ್ರಿ, ರಾಜೀವ್ ಪಾರ್ಕ್, ಫಣಿಗಿರಿ ಬೌದ್ಧ ಸ್ಥಳಗಳು, ಪಾನಗಲ್ ದೇವಾಲಯ, ನಂದಿಕೊಂಡ, ಲತಿಫ್ ಷಾಹಾ ದರ್ಗಾ, ಜೈನ ದೇವಾಲಯ, ರಾಚಕೊಂಡ ಕೋಟೆ, ದೇವರಕೊಂಡ, ಭುವನಗಿರಿ ಕೋಟೆ ಇನ್ನು ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಈ ಪ್ರದೇಶಕ್ಕೆಲ್ಲಾ ಹಲವಾರು ನಗರಗಳಿಂದ ರೈಲು, ರಸ್ತೆ ಹಾಗು ವಿಮಾನ ಮಾರ್ಗದ ಮೂಲಕ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ. ನಲ್ಗೊಂಡ ರೈಲ್ವೆ ನಿಲ್ದಾಣ- ಸಿಕಿಂದ್ರಾಬಾದ್ ರೈಲ್ವೆ ಲೈನ್‍ನ ನಿಲ್ದಾಣ ಮೂಖ್ಯವಾದುದು. ಈ ಪಟ್ಟಣಕ್ಕೆ ಅನೇಕ ರೈಲುಗಳು ಇರುವುದನ್ನು ಕಾಣಬಹುದಾಗಿದೆ. ರಸ್ತೆ ಮಾರ್ಗದ ಮೂಲಕವು ಉತ್ತಮವಾದ ಸಾರಿಗೆ ಸೌಲಭ್ಯವಿದೆ. ನಲ್ಗೊಂಡಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಹೈದ್ರಾಬಾದ್ ವಿಮಾನ ನಿಲ್ದಾಣವಾಗಿದೆ.

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು...

ಈ ಪ್ರದೇಶವು ಬೇಸಿಗೆಯ ಕಾಲದಲ್ಲಿ ಅತಿಯಾದ ಉಷ್ಣದ ವಾತಾವರಣದಿಂದ ಕೂಡಿರುತ್ತದೆ. ಮಳೆಗಾಲದಲ್ಲಿ ಸ್ವಲ್ಪ ಮಳೆಯಾಗುತ್ತದೆ ಎಂದು ವರದಿಯಾಗಿದೆ. ಶೀತಕಾಲದಲ್ಲಿ ಸ್ವಲ್ಪ ಚಳಿ ಇರುತ್ತದೆ. ಶೀತಕಾಲದಲ್ಲಿ ಮಧ್ಯಾಹ್ನದ ಸಮಯದಲ್ಲಿ ಸೂರ್ಯಕಿರಣಗಳ ಪ್ರಭಾವದಿಂದ ಸಂಜೆಯ ಸಮಯದಿಂದ ರಾತ್ರಿಯವರೆಗೆ ವಾತಾವರಣವು ಆಹ್ಲಾದಕರವಾಗಿರುತ್ತದೆ. ಹಾಗಿರುವುದರಿಂದ ಪ್ರವಾಸಿಗರು ಶೀತಕಾಲದಲ್ಲಿ ಭೇಟಿ ನೀಡುವುದು ಅತ್ಯಂತ ಸೂಕ್ತವಾದ ಕಾಲವಧಿ ಎಂದೇ ಹೇಳಬಹುದು.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ರಸ್ತೆ ಮಾರ್ಗದ ಮೂಲಕ
ನಲ್ಗೊಂಡದಿಂದ ಹೈದ್ರಾಬಾದ್, ವರಂಗಲ್, ವಿಜಯವಾಡ ಇನ್ನು ಅನೇಕ ಪ್ರದೇಶಗಳಿಂದ ಅತ್ಯುತ್ತಮ ಸಂಪರ್ಕ ಸಾಧಿಸುತ್ತದೆ, ಇಲ್ಲಿ ಅನೇಕ ಖಾಸಗಿ ಹಾಗು ಸರ್ಕಾರಿ ಬಸ್ಸುಗಳ ವ್ಯವಸ್ಥೆ ಕೂಡ ಲಭ್ಯವಿವೆ.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ರೈಲ್ವೆ ಮಾರ್ಗದ ಮೂಲಕ
ನಲ್ಗೊಂಡ ರೈಲ್ವೆ ಸ್ಟೇಷನ್ ಗುಂಟೂರು-ಸಿಕಿಂದ್ರಾಬಾದ್. ಈ ಲೈನ್‍ನ ಮೇಲೆ ಇದು ಒಂದು ಮುಖ್ಯವಾದ ರೈಲ್ವೆ ನಿಲ್ದಾಣವಾಗಿದೆ. ಭಾರತ ದೇಶದ ಪ್ರಧಾನವಾದ ನಗರಗಳಿಂದ ಇಲ್ಲಿಗೆ ಅನೇಕ ರೈಲುಗಳು ಸಂಪರ್ಕ ಸಾಧಿಸುತ್ತವೆ. ಹೈದ್ರಾಬಾದ್‍ನಿಂದ ಒಂದು ಪಾಸೆಂಜರ್ ರೈಲು ನಲ್ಗೊಂಡಗೆ ಪ್ರತಿ ದಿನ ತಪ್ಪದೇ ಸಂಪರ್ಕವನ್ನು ಹೊಂದಿದೆ.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ವಿಮಾನ ಮಾರ್ಗದ ಮೂಲಕ
ನಲ್ಗೊಂಡಗೆ ನೇರವಾದ ವಿಮಾನ ನಿಲ್ದಾಣವಿಲ್ಲ. ರಾಜಧಾನಿ ನಗರವಾದ ಹೈದ್ರಾಬಾದ್ ವಿಮಾನ ನಿಲ್ದಾಣವೇ ಸಮೀಪದ ವಿಮಾನ ನಿಲ್ದಾಣವಾಗಿದೆ. ಹೈದ್ರಾಬಾದ್‍ನ ರಾಜೀವ್ ಗಾಂಧಿ ಅಂತರ್‍ಜಾತಿಯ ವಿಮಾನ ನಿಲ್ದಾಣವು ನಲ್ಗೊಂಡ ಪಟ್ಟಣದಿಂದ ಸುಮಾರು 110 ಕಿ.ಮೀ ದೂರದಲ್ಲಿದೆ. ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ ಭಾರತ ದೇಶದ ಮೂಲೆ-ಮೂಲೆಗಳಿಂದ ನಿರಂತರ ವಿಮಾನಗಳು ಸಂಪರ್ಕ ಸಾಧಿಸುತ್ತಿರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X