Search
  • Follow NativePlanet
Share
» »ಷಾಹಿ ಸೇತುವೆಯ ಸೌಂದರ್ಯವನ್ನು ನೋಡಿ

ಷಾಹಿ ಸೇತುವೆಯ ಸೌಂದರ್ಯವನ್ನು ನೋಡಿ

ಇದೊಂದು ಅದ್ಭುತ ಸೇತುವೆಯಾಗಿದ್ದು, ಗೋಮತಿ ನದಿಗೆ ಇದನ್ನು ಕಟ್ಟಲಾಗಿದೆ.

ಸಾಮಾನ್ಯವಾಗಿ ನದಿಗೆ ಕಟ್ಟಲಾಗಿರುವ ಸೇತುವೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೀವು ನೋಡಿರುತ್ತೀರಿ. ಆದರೆ ಉತ್ತರ ಪ್ರದೇಶದಲ್ಲಿರುವ ಷಾಹಿ ಸೇತುವೆಯು ಎಲ್ಲಕ್ಕಿಂತಲೂ ವಿಭಿನ್ನವಾಗಿದೆ. ಇದೊಂದು ಅದ್ಭುತ ಸೇತುವೆಯಾಗಿದ್ದು, ಗೋಮತಿ ನದಿಗೆ ಇದನ್ನು ಕಟ್ಟಲಾಗಿದೆ. ಈ ಸೇತುವೆಯ ರಚನೆಯು ಸುಂದರವಾಗಿದ್ದು ಸಣ್ಣ ಸಣ್ಣ ಗೋಪುರಗಳನ್ನು ಸೇತುವೆಯ ಮೇಲೆ ನಿರ್ಮಿಸಲಾಗಿದೆ. ಈ ಷಾಹಿ ಸೇತುವೆಯ ಬಗ್ಗೆ ಇನ್ನೊಂದಿಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.

ಸೇತುವೆ ನಿರ್ಮಾಣ

ಸೇತುವೆ ನಿರ್ಮಾಣ

PC:Faizhaider
ಷಾಹಿ ಸೇತುವೆ, ಜೊನ್ಪುರದಲ್ಲಿ 1568 ರಲ್ಲಿ ಮುನಿಮ್ ಖಾನ್‌ರಿಂದ ನಿರ್ಮಿಸಲ್ಪಟ್ಟಿತು. ಮುನಿಮ್ ಖಾನ್ ಅವರು 1567 ರಲ್ಲಿ ಅಕ್ಬರ್ ಎಂಬ ಮಹಾನ್ ಚಕ್ರವರ್ತಿ ಜೊನ್ಪುರ ರಾಜ್ಯಪಾಲರಾಗಿ ನೇಮಕಗೊಂಡರು. ಮುನಿಮ್ ಖಾನ್ ಲೊಡಿಸ್ನಿಂದ ನಾಶವಾದ ಅನೇಕ ಕಟ್ಟಡಗಳನ್ನು ಪುನಃಸ್ಥಾಪಿಸಲು ಮತ್ತು ಮರುನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದರು.

ಎಲ್ಲಿದೆ ಈ ಸೇತುವೆ

ಎಲ್ಲಿದೆ ಈ ಸೇತುವೆ

PC: Sayed Mohammad Faiz Haider
ಷಾಹಿ ಸೇತುವೆಯು ಜೊನ್ಪುರದಿಂದ 1.7 ಕಿಮೀ ದೂರದಲ್ಲಿದೆ. ಈ ಸೇತುವೆಯ ಮೇಲೆ ವಾಹನ ಸಂಚಾರವನ್ನು ಕಾಣಬಹುದು. ಷಾಹಿ ಸೇತುವೆಯು ಜೊನ್ಪುರ ರೈಲ್ವೆ ನಿಲ್ದಾಣದ ಉತ್ತರಕ್ಕೆ 1.7 ಕಿಲೋಮೀಟರ್ ದೂರದಲ್ಲಿದೆ. ಝಫರಾಬಾದ್‌ನ ವಾಯುವ್ಯಕ್ಕೆ 7.3 ಕಿಲೋಮೀಟರ್ ದೂರದಲ್ಲಿ, ಮಾರಿಯಾಹುವಿನ ಉತ್ತರ-ಈಶಾನ್ಯ 16.2 ಕಿಲೋಮೀಟರ್ ದೂರದಲ್ಲಿ ಹಾಗೂ ಕಿರಾಕಟ್ ಪಟ್ಟಣದ ಪಶ್ಚಿಮ-ವಾಯುವ್ಯದಿಂದ 26.6 ಕಿಲೋಮೀಟರ್ ದೂರದಲ್ಲಿದೆ.

 ಮೊಘಲ್ ರಚನೆಗಳಲ್ಲಿ ಒಂದು

ಮೊಘಲ್ ರಚನೆಗಳಲ್ಲಿ ಒಂದು

PC:Varun Shiv Kapur
ಜೊನ್ಪುರದಲ್ಲಿರುವ ಷಾಹಿಸೇತುವೆಯು, ನಗರದ ಪ್ರಮುಖ ಮತ್ತು ಗಮನಾರ್ಹವಾದ ಮೊಘಲ್ ರಚನೆಗಳಲ್ಲಿ ಇದು ಒಂದಾಗಿದೆ. ಷಾಹಿ ಸೇತುವೆಯು ಮುಘಲ್ ಸೇತುವೆ, ಅಕಬರಿ ಸೇತುವೆ ಅಥವಾ ಮುನೀಂ ಖಾನ್ ಸೇತುವೆ ಎಂದು ಕೂಡ ಪ್ರಸಿದ್ಧವಾಗಿದೆ. ಇದನ್ನು ಮುಘಲ್ ದೊರೆ ಅಕ್ಬರನ ಕಾಲದಲ್ಲಿ ಜೌನಪುರದ ಗವರ್ನರ್ ಆಗಿದ್ದ ಮುನೀಂ ಖಾನ್ ಕಟ್ಟಿಸಿದನು.

ಗೋಮತಿ ನದಿಗೆ ಕಟ್ಟಲಾಗಿದೆ

ಗೋಮತಿ ನದಿಗೆ ಕಟ್ಟಲಾಗಿದೆ

1568 -1569 ರಲ್ಲಿ ಇದನ್ನು ಗೋಮತಿ ನದಿಗೆ ಅಡ್ಡಲಾಗಿ ಅಫ್ಜಲ್ ಅಲಿ ಎನ್ನುವ ಅಫ್ಗನ್ ವಾಸ್ತುಶಿಲ್ಪಿ ರೂಪಿಸಿದ. ಇದು ಜೊನ್ಪುರದಲ್ಲಿರುವ ಮುಘಲ್ ಶೈಲಿಯ ವಾಸ್ತುಶಿಲ್ಪಗಳಲ್ಲಿನ ಹೆಗ್ಗುರುತುಗಳಲ್ಲಿ ಒಂದು. ಈ ಸೇತುವೆಯಲ್ಲಿ ನೀರು ಸುಗಮವಾಗಿ ಹರಿಯಲು ಹತ್ತು ಗೇಟುಗಳಿದ್ದು ಇದಕ್ಕೆ ದೊಡ್ಡ ಮಹಾದ್ವಾರಗಳನ್ನು ಅಳವಡಿಸಲಾಗಿದೆ. ಗೋಪುರದ ರೀತಿಯಲ್ಲಿ ನಿರ್ಮಿಸಲಾಗಿದೆ.

ಗೋಪುರ ಕಂಬಗಳು

ಗೋಪುರ ಕಂಬಗಳು

PC:FastilyClone
ಇಲ್ಲಿ ಷಟ್ಕೋನಾಕಾರದ ಗೋಪುರ ಕಂಬಗಳ ಮೇಲೆ ನಿರ್ಮಿಸಲಾಗಿದೆ. ಇವುಗಳು ಸೇತುವೆಯಿಂದ ಹೊರಚಾಚಿ ನಿರ್ಮಾಣವಾಗಿವೆ. ಇವು ಜನರಿಗೆ ವಾಹನ ಸಂಚಾರ ದಟ್ಟಣೆಯಿಂದ ದೂರವಾಗಿ ಸುರಕ್ಷಿತವಾಗಿ ನಿಂತು ಸೇತುವೆಯ ನೋಟವನ್ನು ನೋಡಲು ಮತ್ತು ಮಹಾದ್ವಾರದಿಂದ ಹರಿಯುವ ನೀರಿನ ಸೌಂದರ್ಯವನ್ನು ಸವಿಯಲು ಅನುವು ಮಾಡಿಕೊಡುತ್ತದೆ.

ಭೂಕಂಪದಿಂದ ಹಾನಿಗೊಳಗಾಗಿತ್ತು

ಭೂಕಂಪದಿಂದ ಹಾನಿಗೊಳಗಾಗಿತ್ತು

PC: youtube
ಈ ಸೇತುವೆಯು 1934 ರಲ್ಲಿ ಭೂಕಂಪದಿಂದ ತೀವ್ರವಾಗಿ ಹಾನಿಗೊಳಿಸಲಾಯಿತು. ಅದರಲ್ಲಿ ಹದಿನೈದು ಕಮಾನುಗಳಲ್ಲಿ ಏಳು ಹಾನಿಗೊಳಗಾದವು. ಇವುಗಳನ್ನು ಮರುನಿರ್ಮಿಸಲಾಗಿದೆ ಮತ್ತು ಇಡೀ ಸೇತುವೆಯನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಲಾಗಿದೆ. ಒಂದು ಸಾರ್ವಜನಿಕ ರಸ್ತೆ ಅದರ ಮೇಲೆ ಹಾದು ಹೋದರೂ, ಇದನ್ನು ಪುರಾತನ ಸ್ಮಾರಕವಾಗಿ ನಿರ್ವಹಿಸಲಾಗುತ್ತದೆ. ಬ್ರಿಡ್ಜ್ 1978 ರಿಂದ ಆರ್ಕಿಯಾಲಜಿ ಡೈರೆಕ್ಟರೇಟ್‌ನ(ಯು.ಪಿ.) ರಕ್ಷಣೆ ಮತ್ತು ಸಂರಕ್ಷಣಾ ಪಟ್ಟಿಯಲ್ಲಿದೆ. ಸೇತುವೆಯ ದಕ್ಷಿಣ ತುದಿಯಲ್ಲಿ ಬೌದ್ಧತೆಯ ಕುಸಿತವನ್ನು ಪ್ರತಿನಿಧಿಸುವ ಆನೆಯ ಮೇಲೆ ಪ್ರಭಾವಶಾಲಿ ಸಿಂಹದ ಶಿಲ್ಪಕಲೆಯನ್ನು ಕಾಣಬಹುದು.

ತಲುಪುವುದು ಹೇಗೆ?


ಹತ್ತಿರದ ವಿಮಾನ ನಿಲ್ದಾಣವೆಂದರೆ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣ ಬಾಬಾತ್ಪುರ್. ಇದು ಸುಮಾರು 50 ಕಿ.ಮೀ. ದೂರದಲ್ಲಿದೆ.
ಜಾನ್ಪುರ ನಗರ ಅಥವಾ ಜಾನ್ಪುರ ಜಂಕ್ಷನ್ ಇಲ್ಲಿಗೆ ಸಮೀಪದಲ್ಲಿರು ರೈಲ್ವೆ ನಿಲ್ದಾಣಗಳಾಗಿವೆ. ಸ್ಥಳೀಯ ಆಟೋಗಳ ಮೂಲಕ ನೀವು ಷಾಹಿ ಸೇತುವೆಯನ್ನು ತಲುಪಬಹುದು. ಇದು ಜಾನ್ಪುರ ಬಸ್ ನಿಲ್ದಾಣದಿಂದ ಷಾಹಿ ಸೇತುವೆಯು 2 ಕಿ.ಮೀ ದೂರದಲ್ಲಿದೆ. ಸ್ಥಳೀಯ ಆಟೋಗಳು, ರಿಕ್ಷಾ ಯಾವಾಗಲೂ ಲಭ್ಯವಿರುತ್ತವೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC:Joseph David
ಸಾದರ್ ಇಮಾಂಬರಾ, ಜಾಮಿ ಮಸೀದಿ, ಶೀತ್ಲಾ ದೇವಿ ದೇವಾಲಯ, ನವಾಬ್ ಘಜಿ ಖಾನ್ ಸಮಾಧಿ, ಲಾಲ್ ದರ್ವಾಜಾ ಮಸೀದಿ, ಖಲೀಸ್ ಮುಖ್ಲಿಸ್ ಮಸೀದಿ, ಶಿಟ್ಲಾ ಚೌಕಿಯಾ ಧಾಮ್, ಕದಮ್ ರಸೂಲ್, ಮಿಹಾರ್ ದೇವಿ ದೇವಾಲಯ, ಪಂಝೆ ಶರೀಫ್, ಅಟಾಲಾ ಮಸೀದಿ, ತ್ರಿಲೋಚನ್ ಮಹಾದೇವ್ ದೇವಾಲಯ, ಯಮದಗ್ನಿ ಆಶ್ರಮ, ಪ್ರಾಣಿ ಸಂಗ್ರಹಾಲಯ, ಪುರಾತತ್ವ ವಸ್ತು ಸಂಗ್ರಹಾಲಯ, ಬಾಟನಿ ವಸ್ತುಸಂಗ್ರಹಾಲಯ, ಶಾರ್ಕಿ ರಾಜವಂಶದ ಏಳು ರಾಜರ ಸ್ಮಶಾನ, ಶಾ ಫಿರೋಝ್ನ ರೌಝಾ, ಸೈಕ್ ಬುರ್ಹಾನಾ ಮಸೀದಿ, ಜೌಚಂದ್ರದ ಓಲ್ಡ್ ಕಂಕರ್ ಕೋಟೆಯ ವಾಲ್ಗಳು, ಜಂಝಾರಿ ಮಸೀದಿ ಮುಂತಾದ ಆಕರ್ಷಣೆಗಳನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X