Search
  • Follow NativePlanet
Share
» »ವಿಶ್ವದ ಏಳು ಅದ್ಭುತಗಳನ್ನು ಒಟ್ಟಿಗೆ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ

ವಿಶ್ವದ ಏಳು ಅದ್ಭುತಗಳನ್ನು ಒಟ್ಟಿಗೆ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ

ಐಫಲ್ ಟವರ್ ಇರೋದು ಪ್ಯಾರಿಸ್‌ನಲ್ಲಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಬಹುತೇಕರಿಗೆ ಐಫಲ್ ಟವರ್ ನೋಡಬೇಕೆನ್ನುವ ಆಸೆ ಇರುತ್ತದೆ. ಆದರೆ ಏನ್‌ ಮಾಡೋದು ಎಲ್ಲರಿಗೂ ಪ್ಯಾರಿಸ್ ಹೋಗಲು ಸಾಧ್ಯವಿಲ್ಲ. ಆದ್ರೆ ನೀವು ಪ್ಯಾರಿಸ್‌ಗೆ ಹೋಗದೇನೂ ಐಫಲ್ ಟವರ್‌ನ್ನು ನೋಡಬಹುದು.

ರಾಜಸ್ಥಾನದ ಕೋಟಾ

ರಾಜಸ್ಥಾನದ ಕೋಟಾ

PC:Superfast1111

ಚಂಬಲ್ ನದಿ ತೀರದಲ್ಲಿರುವ ಕೋಟಾವು ರಾಜಸ್ಥಾನದ ಐತಿಹಾಸಿಕ ನಗರಗಳಲ್ಲೊಂದಾಗಿದೆ. ಇಲ್ಲಿ ನಿಮಗೆ ಐತಿಹಾಸಿ ಸ್ಮಾರಕಗಳು , ಪುರಾತನ ಕಟ್ಟಡಗಳು ಕಾಣಸಿಗುತ್ತದೆ. ಅರಮನೆಗಳು, ಕೋಟೆಗಳು, ಗಾರ್ಡನ್‌ನ್ನು ಕಾಣಬಹುದು. ಈ ನಗರವು ಹಿಂದೆ ಬೂಂದಿಯ ರಜಪೂತ ಸಾಮ್ರಾಜ್ಯದ ಭಾಗವಾಗಿತ್ತು. ಇಲ್ಲಿ ಪ್ರಾಚೀನ ಸ್ಥಳಗಳನ್ನು ಹೊರತುಪಡಿಸಿ ಅನೇಕ ಧಾರ್ಮಿಕ ಸ್ಥಳಗಳೂ ಇವೆ. ಒಟ್ಟಾರೆಯಾಗಿ ಹೇಳುವುದಾದರೆ ಕೋಟಾವು ಸಂಪೂರ್ಣ ಪ್ರವಾಸಿ ತಾಣವಾಗಿದೆ. ನೀವು ನಿಮ್ಮ ಕುಟುಂಬಸ್ಥರು ಅಥವಾ ಸ್ನೇಹಿತರ ಜೊತೆ ಕಾಲಕಳೆಯಬಹುದು.

ಗುರುವಾಯೂರಪ್ಪನ ಸನ್ನಿಧಿಯಲ್ಲಿನ ಆನೆಗಳನ್ನೊಮ್ಮೆ ನೋಡಿದ್ದೀರಾ?ಗುರುವಾಯೂರಪ್ಪನ ಸನ್ನಿಧಿಯಲ್ಲಿನ ಆನೆಗಳನ್ನೊಮ್ಮೆ ನೋಡಿದ್ದೀರಾ?

ಚಂಬಲ್ ಪಾರ್ಕ್

ಚಂಬಲ್ ಪಾರ್ಕ್

PC: Vibhss

ಕೋಟಾವನ್ನು ಸುತ್ತಾಡಬೇಕಾದರೆ ನೀವು ಮೊದಲು ಚಂಬಲ್ ಪಾರ್ಕ್‌ನಿಂದ ಪ್ರಾರಂಭಿಸಿ. ಇಲ್ಲಿನ ಸುಂದರ ಗಾರ್ಡನ್ ಚಂಬಲ್ ನದಿಯ ಬಳಿ ಅಮರ್ ನಿವಾಸದಲ್ಲಿದೆ. ಪಿಕ್ನಿಕ್‌ಗೆ ಇದು ಹೇಳಿಮಾಡಿಸಿದ ಸ್ಥಳವಾಗಿದೆ. ಈ ಗಾರ್ಡನ್‌ನಲ್ಲಿ ಒಂದು ಸಣ್ಣ ಕೆರೆಯೂ ಇದೆ. ಅಲ್ಲಿ ಮೊಸಳೆಯನ್ನು ನೋಡಬಹುದು. ಪ್ರವಾಸಿಗರು ಈ ಕೆರೆಯ ಎರಡೂ ಬದಿಗೂ ಹೋಗಬಹುದು.

ಜಗಮಂದಿರ ಪ್ಯಾಲೆಸ್‌ ಹಾಗೂ ಕಿಶೋರ್‌ ಕೆರೆ

ಜಗಮಂದಿರ ಪ್ಯಾಲೆಸ್‌ ಹಾಗೂ ಕಿಶೋರ್‌ ಕೆರೆ

PC: Vibhss

ಚಂಬಲ್‌ ಪಾರ್ಕ್‌ನ ನಂತರ ನೀವು ಜಗಮಂದಿರ ಪ್ಯಾಲೇಸ್ ಹಾಗೂ ಕಿಶೋರ್ ಕೆರೆಯನ್ನು ಭೇಟಿ ನೀಡಬಹುದು. ಫೋಟೋಗ್ರಾಫಿಯ ಹವ್ಯಾಸ ಇರುವವರಿಗೆ ಇದು ಸ್ವರ್ಗಕ್ಕಿಂತ ಕಮ್ಮಿ ಇಲ್ಲ ಎನ್ನ ಬಹುದು. ಈ ಅರಮನೆಯನ್ನು ಕೋಟಾದ ಹಿಂದಿನ ರಾಣಿ ಮನೋರಂಜನೆಗಾಗಿ ನಿರ್ಮಿಸಿದ್ದರು. ಈ ಕೆರೆಯನ್ನು ಬೂಂದಿಯ ರಾಜಕುಮಾರ ದೆಹರಾ ದೇಹ್ ನಿರ್ಮಾಣ ಮಾಡಿದ್ದನು. ಈ ಅರಮನೆಯನ್ನು ನೋಡುವುದರ ಜೊತೆಗೆ ನೀವು ಇಲ್ಲಿನ ಕೆರೆಯ ಆನಂದವನ್ನೂ ಪಡೆಯಬಹುದು.

ಗೋಧಾವರಿ ಧಾಮ ಮಂದಿರ

ಗೋಧಾವರಿ ಧಾಮ ಮಂದಿರ

PC:Bornleeo

ಚಂಬಲ್ ನದಿಯ ಸಮೀಪದಲ್ಲಿ ಹಲವಾರು ಪ್ರವಾಸಿ ಕೇಂದ್ರಗಳಿವೆ. ಅವುಗಳಲ್ಲಿ ಗೋಧಾವರಿ ಧಾಮ ಕೂಡಾ ಒಂದು. ಈ ಮಂದಿರದಲ್ಲಿ ವರ್ಷವಿಡೀ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾ ಇರುತ್ತಾರೆ. ಈ ಮಂದಿರವನ್ನು ಬಿಳಿಯ ಸಂಗಮರ್‌ಮರ್‌ದಿಂದ ನಿರ್ಮಿಸಲಾಗಿದೆ. ಈ ಮಂದಿರದ ವಾಸ್ತುಕಲೆಯು ಯಾರ ಗಮನವನ್ನಾದರೂ ಸೆಳೆಯದೇ ಇರದು. ಅಷ್ಟೊಂದು ಆಕರ್ಷಕವಾಗಿದೆ.

ಬೆಂಗಳೂರಲ್ಲೂ ರಜನಿಕಾಂತ್ , ಅಮಿತಾಬ್‌ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?ಬೆಂಗಳೂರಲ್ಲೂ ರಜನಿಕಾಂತ್ , ಅಮಿತಾಬ್‌ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?

ದರ್ರಾ ವನ್ಯಜೀವಿ ಅಭಯಾರಣ್ಯ

ದರ್ರಾ ವನ್ಯಜೀವಿ ಅಭಯಾರಣ್ಯ

ಐತಿಹಾಸಿಕ ಸ್ಥಳಗಳನ್ನು ಹೊರತುಪಡಿಸಿ ಇಲ್ಲಿ ನೀವು ವನ್ಯ ಜೀವಿ ಅಭಯಾರಣ್ಯದ ರೋಮಾಂಚಕ ಅನುಭವವನ್ನೂ ಪಡೆಯಬಹುದು. ಈ ಅಭಯಾರಣ್ಯವು ಕೋಟಾದ ಪ್ರಮುಖ ಪರ್ಯಾಟನ ಸ್ಥಳವಾಗಿದೆ. ತನ್ನ ಸಮೃದ್ಧ ಜೀವ ವೈದ್ಯತೆಗೆ ಜನಪ್ರೀಯವಾಗಿದೆ. ಇಲ್ಲಿ ನೀವು ವಿಭಿನ್ನ ಗಿಡಮೂಲಿಕೆಗಳ ಜೊತೆಗೆ ಅಸಂಖ್ಯಾತ ಜೀವ ಜಂತುಗಳನ್ನೂ ಕಾಣಬಹುದು.

ವಿಶ್ವರ ಏಳನೇ ಅದ್ಭುತ

ವಿಶ್ವರ ಏಳನೇ ಅದ್ಭುತ

ಈ ಮೇಲಿನ ತಾಣಗಳಣನ್ನು ಹೊರತುಪಡಿಸಿ ನೀವು ಕೋಟಾದ ಪ್ರಮುಖ ಸ್ಥಳವಾದ ಸೆವನ್ ವಂಡರ್ ಪಾರ್ಕ್‌ಗೂ ಹೋಗಬಹುದು. ನೀವು ವಿಶ್ವರ ಏಳೂ ಅದ್ಭುತಗಳನ್ನು ನೋಡಿಲ್ಲವೆಂದಾದಲ್ಲಿ ಈ ಉದ್ಯಾನವನದಲ್ಲಿ ಏಳು ಅದ್ಭುತಗಳನ್ನು ಕಾಣಬಹುದು. ಕೋಟಾದ ಈ ಪಾರ್ಕ್‌ನಲ್ಲಿ ವಿಶ್ವದ ಏಳು ಅದ್ಭುತಗಳ ಕಟ್ಟಡಗಳ ಪ್ರತಿರೂಪವನ್ನು ಕಾಣಸಿಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X