Search
  • Follow NativePlanet
Share
» »ಹೋಶಂಗಾಬಾದ್‌ನಲ್ಲಿರುವ ಸೇಥಾನಿ ಘಾಟ್ ನೋಡಿದ್ದೀರಾ?

ಹೋಶಂಗಾಬಾದ್‌ನಲ್ಲಿರುವ ಸೇಥಾನಿ ಘಾಟ್ ನೋಡಿದ್ದೀರಾ?

ಮಧ್ಯಪ್ರದೇಶದ ಏಕೈಕ ಹಿಲ್ ಸ್ಟೇಷನ್ ಆದ ಪಂಚ್ಮರ್ಹಿ, ಹೋಶಂಗಾಬಾದ್ ಜಿಲ್ಲೆಯಲ್ಲಿದ್ದು, ಇದು ಶಿವಭಕ್ತರ ತೀರ್ಥಯಾತ್ರಾ ಸ್ಥಳವಾಗಿದೆ.

ಮಧ್ಯಪ್ರದೇಶದಲ್ಲಿರುವ ಹೋಶಂಗಾಬಾದ್ ನರ್ಮದ ನದಿಯ ಉತ್ತರ ತೀರದಲ್ಲಿದೆ. ಈ ಜಾಗವು ದೇಶ ಹಾಗೂ ಮಧ್ಯ ಪ್ರದೇಶ ರಾಜ್ಯದ ಇತಿಹಾಸದಲ್ಲಿ ಗಮನಾರ್ಹ ಸ್ಥಾನ ಹೊಂದಿದೆ. ನರ್ಮದ ನದಿ ತೀರದಲ್ಲಿರುವುದರಿಂದ ಮೊದಲಿಗೆ ನರ್ಮದಾಪುರಂ ಎಂದು ಹೆಸರಿದ್ದರೂ, ಕ್ರಮೇಣ ಇಲ್ಲಿನ ದೊರೆಯಾದ ಹೋಶಾಂಗ್ ಶಾಹ್ ಅವರಿಂದ ಹೋಶಂಗಾಬಾದ್ ಎಂಬ ಹೆಸರು ಬಂತು. ಇದರ ನಂತರ ಈ ನಗರವು ಇಲ್ಲಿನ ಸುಂದರ ಪ್ರಾಕೃತಿಕ ಹಾಗೂ ಆಧ್ಯಾತ್ಮಿಕ ತಾಣಗಳಿಂದ ಬಹಳಷ್ಟು ಯಾತ್ರಿಗಳನ್ನು ತನ್ನೆಡೆಗೆ ಸೆಳೆಯತೊಡಗಿತು.

ನರ್ಮದಾ ಜಯಂತಿ

ನರ್ಮದಾ ಜಯಂತಿ

PC: Maheshbasedia
ಹೋಶಂಗಾಬಾದ್ ನ ಪ್ರಸಿದ್ಧ ಉತ್ಸವ ನರ್ಮದಾ ಜಯಂತಿ. ಈ ಉತ್ಸವ ಹೋಶಂಗಾಬಾದ್ ನ ಪ್ರವಾಸೋದ್ಯಮವನ್ನು ಬಹಳಷ್ಟು ವೃದ್ಧಿಸುತ್ತದೆ. ಸೇಥಾನಿ ಘಾಟ್ ಹೋಶಂಗಾಬಾದ್ ನ ಒಂದು ಗಣ್ಯ ಸ್ಥಳವಾಗಿದೆ. ಜಿಲ್ಲೆಯ ಮೂಲಕ ಹರಿಯುವ ಎರಡು ನದಿಗಳಾದ ನರ್ಮದಾ ಮತ್ತು ತವ ಗಳ ಸಂಗಮ ಬಂದ್ರಬನ್. ಹೋಶಂಗಾಬಾದ್ ನ ಜನರು ಕೃಷಿಯನ್ನು ಆಧರಿಸಿದ್ದಾರೆ. ಅತ್ಯಂತ ಹೆಚ್ಚು ಸೋಯಾ ಕಾಳು ಬೆಳೆಯುವ ನಗರವು ಇದಾಗಿದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC: youtube
ಸತ್ಪುರ ನ್ಯಾಷನಲ್ ಪಾರ್ಕ್, ಅದಮ್‍ಗಢ್ ಬೆಟ್ಟದ ಮೇಲಿನ ಬಂಡೆಗಳ ಕೆತ್ತನೆ, ಬಂಧ್ರಭನ್ ಇತ್ಯಾದಿ ಜಾಗಗಳಲ್ಲಿ ಯಾತ್ರಿಗಳ ದಂಡೇ ಇರುತ್ತದೆ. ಸಲ್ಕಂಪುರ್, ಹೋಶಂಗ್ ಶಾಹ್ ಕೋಟೆ, ಖೇದಪತಿ ಹನುಮಾನ್ ಮಂದಿರ, ರಾಮಜಿ ಬಾಬಾ ಸಮಾಧಿ, ಹೋಶಂಗಾಬಾದ್ ನ ಇತರ ಆಕರ್ಷಣೆಗಳು.

ತೀರ್ಥಯಾತ್ರಾ ಸ್ಥಳ

ತೀರ್ಥಯಾತ್ರಾ ಸ್ಥಳ

PC: Maheshbasedia
ಮಧ್ಯಪ್ರದೇಶದ ಏಕೈಕ ಹಿಲ್ ಸ್ಟೇಷನ್ ಆದ ಪಂಚ್ಮರ್ಹಿ, ಹೋಶಂಗಾಬಾದ್ ಜಿಲ್ಲೆಯಲ್ಲಿದ್ದು, ಇದು ಶಿವಭಕ್ತರ ತೀರ್ಥಯಾತ್ರಾ ಸ್ಥಳವಾಗಿದೆ. ಹೋಶಂಗಾಬಾದ್ ಗೆ ಭೇಟಿ ನೀಡುವ ಮುನ್ನ ಹೋಶಂಗಾಬಾದ್ ನಲ್ಲಿ ವರ್ಷ ಪೂರ್ತಿ ಹಿತವಾದ ವಾತಾವರಣವಿರುತ್ತದೆ. ಈ ನಗರವು ಹತ್ತಿರದ ನಗರಗಳೊಂದಿಗೆ ರೈಲು ಹಾಗೂ ರಸ್ತೆ ಮೂಲಕ ಸಂಪರ್ಕ ಹೊಂದಿದೆ. ಎಲ್ಲಾ ವಿಷಯಗಳಲ್ಲೂ ವೈವಿಧ್ಯತೆ ಮೆರೆಯುವ ಈ ನಗರವನ್ನು, ಮಧ್ಯಪ್ರದೇಶ ಸುತ್ತಾಡ ಬಯಸುವ ಯಾತ್ರಿಗಳು ಭೇಟಿ ನೀಡಲೇಬೇಕು.

ತಲುಪುವುದು ಹೇಗೆ?

ಹೋಶಂಗಾಬಾದ್ ರಾಜ್ಯ ರಾಜಧಾನಿ ಭೋಪಾಲ್‌ನಿಂದ ರಸ್ತೆ ಮತ್ತು ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಅದರಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಹೋಶಂಗಾಬಾದ್ ರೈಲ್ವೆ ನಿಲ್ದಾಣವನ್ನು ರೈಲು ಮೂಲಕ ರಾಜ್ಯದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸಲಾಗಿದೆ. ಅದರ ತಹಸಿಲ್‌ಗಳಲ್ಲಿ ಒಂದಾದ ಇಟಾರ್ಸಿ ದೇಶದ ಪ್ರಮುಖ ರೈಲ್ವೆ ಮಾರ್ಗಗಳ ಜಂಕ್ಷನ್‌ನಿಂದಾಗಿ ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇದು ಜಿಲ್ಲಾ ಕೇಂದ್ರದಿಂದ 18 ಕಿ.ಮೀ ದೂರದಲ್ಲಿದೆ. ಇಟಾರ್ಸಿಯಿಂದ ರೈಲು ಮೂಲಕ 64 ಕಿ.ಮೀ ದೂರದಲ್ಲಿರುವ ಪಿಪರಿಯಾ ಮೂಲಕ ಪಚ್ಮಾರ್ಹಿಯನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X