Search
  • Follow NativePlanet
Share
» »ಅದೃಷ್ಟವಂತರಿಗಷ್ಟೇ ಸಿಗುತ್ತೆ ಗುಹೆಯೊಳಗೆ ಪ್ರವೇಶ -ವೈಷ್ಣೋದೇವಿ ಮಂದಿರ ರಹಸ್ಯ

ಅದೃಷ್ಟವಂತರಿಗಷ್ಟೇ ಸಿಗುತ್ತೆ ಗುಹೆಯೊಳಗೆ ಪ್ರವೇಶ -ವೈಷ್ಣೋದೇವಿ ಮಂದಿರ ರಹಸ್ಯ

ಪ್ರತಿವರ್ಷ ಲಕ್ಷಾಂತರ ಮಂದಿರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ವೈಷ್ಣೋದೇವಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಅಲ್ಲಿರುವ ಗುಹೆಗೂ ಇದೆ.

ಹಿಂದೂಗಳ ಪವಿತ್ರಸ್ಥಳಗಳಲ್ಲಿ ಜಮ್ಮುಹಾಗೂ ಕಾಶ್ಮೀರದಲ್ಲಿರುವ ವೈಷ್ಣೋದೇವಿ ಮಂದಿರವೂ ಒಂದು. ದೇವಿಯ ತೀರ್ಥ ಸ್ಥಳಗಳಲ್ಲಿ ಒಂದಾದ ವೈಷ್ಣೋ ದೇವಿ ಮಂದಿರವು ಜಮ್ಮು-ಕಾಶ್ಮೀರದ ತ್ರಿಕುಟ ಬೆಟ್ಟದ ಮೇಲೆ ಇದೆ. ಪ್ರತಿವರ್ಷ ಲಕ್ಷಾಂತರ ಮಂದಿರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ವೈಷ್ಣೋದೇವಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಅಲ್ಲಿರುವ ಗುಹೆಗೂ ಇದೆ. ಈ ಗುಹೆಯು ಚಮತ್ಕಾರಿ ಗುಹೆಯಾಗಿದ್ದು ರಹಸ್ಯದಿಂದ ಕೂಡಿದೆ.

ವೈಷ್ಣೋದೇವಿಯ ಗುಹೆಗೆ ಸಂಬಂಧಿಸಿದ ರಹಸ್ಯ

ವೈಷ್ಣೋದೇವಿಯ ಗುಹೆಗೆ ಸಂಬಂಧಿಸಿದ ರಹಸ್ಯ

PC: Abhishek Chandra

ವೈಷ್ಣೋದೇವಿಯ ದರ್ಶನಕ್ಕೆ ಈಗ ಯಾವ ರಸ್ತೆಯ ಮೂಲಕ ಹೋಗಲಾಗುತ್ತದೆಯೋ ಅದು ದೇವಿಯ ದರ್ಶನಕ್ಕೆ ಹೋಗುವ ಮೂಲ ರಸ್ತೆಯಲ್ಲ. ಅದರ ಮೂಲ ರಸ್ತೆಯು ಗುಹಾ ಮಾರ್ಗವಾಗಿದೆ. ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನಿಸಿ 1977ರಲ್ಲಿ ಈ ಪರ್ಯಾಯ ಮಾರ್ಗವನ್ನು ನಿರ್ಮಿಸಲಾಯಿತು.

ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ

 ಗುಹಾ ಮಾರ್ಗ

ಗುಹಾ ಮಾರ್ಗ

PC:Raju hardoi

ಅದೃಷ್ಟವಂತ ಭಕ್ತರಿಗೆ ಈಗಲೂ ಆ ಗುಹಾ ಮಾರ್ಗದಿಂದ ದೇವಿಯ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿ 10 ಸಾವಿರಕ್ಕಿಂತ ಕಡಿಮೆ ಭಕ್ತರಿದ್ದಂದು ಈ ಹಳೆಯ ಮಾರ್ಗವನ್ನು ತೆರೆಯಲಾಗುತ್ತದೆ.

ಬೈರವನ ಶರೀರವಿದೆ

ಬೈರವನ ಶರೀರವಿದೆ

PC: Abhishek Chandra

ವೈಷ್ಣೋದೇವಿಯ ಸನ್ನಿಧಿಯಲ್ಲಿ ಈ ಗುಹೆಗೆ ಬಹಳ ಮಹತ್ವವಿದೆ. ಈ ಪ್ರಾಚೀನ ಗುಹೆಯ ಒಳಗೆ ಬೈರವನ ಶರೀರವಿದೆ ಎನ್ನಲಾಗುತ್ತದೆ. ಇಲ್ಲಿ ದೇವಿಯು ತನ್ನ ತ್ರಿಶೂಲದಿಂದ ಬೈರವನನ್ನು ಸಂಹರಿಸಿದ್ದಳು. ಆಗ ಬೈರವನ ತಲೆ ಹಾರಿ ಬೈರವ ಘಾಟಿ ಬಳಿ ಬಿತ್ತು. ಹಾಗೂ ಶರೀರ ಇಲ್ಲೇ ಉಳಿದಿದೆ ಎನ್ನಲಾಗುತ್ತದೆ.

ಗಂಗಾ ನದಿ

ಗಂಗಾ ನದಿ

PC: Ambrish mishra

ಈ ಪ್ರಾಚೀನ ಗುಹೆಯಲ್ಲಿ ಗಂಗಾ ನದಿಯು ಹರಿಯುತ್ತದೆ. ಈ ನದಿಯಲ್ಲಿ ಪ್ರವಿತ್ರರಾಗಿ ವೈಷ್ಣೋದೇವಿಯ ದರ್ಶನ ಪಡೆಯುವುದರಲ್ಲಿ ಬಹಳ ವಿಶೇಷತೆ ಇದೆ. ಹಾಗಾಗಿ ಈ ಗುಹೆಯು ಮಹತ್ವದ್ದಾಗಿದೆ.

 ಗರ್ಭ ಜೂನ್‌

ಗರ್ಭ ಜೂನ್‌

PC: Raulcaeser

ವೈಷ್ಣೋದೇವಿ ಮಂದಿರ ತಲುಪುವ ಘಾಟಿಯಲ್ಲಿ ಹಲವು ಸಭಾಂಗಣಗಳಿವೆ. ಅವುಗಳಲ್ಲಿ ಅಂದಕುವಾರಿ ಸಭಾಂಗಣ ಕೂಡಾ ಒಂದು. ಇಲ್ಲಿ ಒಂದು ಗುಹೆ ಕೂಡಾ ಇದೆ. ಅದನ್ನು ಗರ್ಭಜೂನ್‌ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. 9 ತಿಂಗಳು ಮಗು ತಾಯಿಯ ಗರ್ಭದಲ್ಲಿ ಯಾವ ರೀತಿ ಇರುತ್ತದೋ ಹಾಗೆಯೇ ದೇವಿಯು ಇಲ್ಲಿ 9 ತಿಂಗಳು ಇದ್ದಳು ಎನ್ನಲಾಗುತ್ತದೆ.

ಮತ್ತೆ ಗರ್ಭದೊಳಗೆ ಹೋಗುವ ಅಗತ್ಯವಿಲ್ಲ

ಮತ್ತೆ ಗರ್ಭದೊಳಗೆ ಹೋಗುವ ಅಗತ್ಯವಿಲ್ಲ

PC: Abhishek Chandra

ಈ ಗರ್ಭಗುಹೆಯೊಳಗೆ ಹೋದ ಮನುಷ್ಯರಿಗೆ ಮತ್ತೆ ಗರ್ಭದೊಳಗೆ ಹೋಗುವ ಅಗತ್ಯವಿರುವುದಿಲ್ಲ. ಒಂದು ವೇಳೆ ಮತ್ತೆ ಗರ್ಭದೊಳಗೆ ಹೋದರೂ ಕಷ್ಟಪಡುವ ಸಂದರ್ಭ ಎದುರಾಗುವುದಿಲ್ಲ. ಜನನವು ಬಹಳ ವೈಭವಯುತವಾಗಿ ನಡೆಯುತ್ತದೆ ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X