Search
  • Follow NativePlanet
Share
» »ಶನಿ ಬಾಧೆಯಿಂದ ದೂರವಿರಲು ತೆರಳುತ್ತಾರಂತೆ...ಈ ಕ್ಷೇತ್ರಕ್ಕೆ...

ಶನಿ ಬಾಧೆಯಿಂದ ದೂರವಿರಲು ತೆರಳುತ್ತಾರಂತೆ...ಈ ಕ್ಷೇತ್ರಕ್ಕೆ...

ಈ ಕ್ಷೇತ್ರದಲ್ಲಿ ವಿಶ್ವಾಮಿತ್ರ ಮಹರ್ಷಿಯು ತಪಸ್ಸು ಮಾಡಿ "ಬ್ರಹ್ಮ ಋಷಿ" ಎಂಬ ಪದವಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಶಿವಲಿಂಗವನ್ನು ಕೂಡ ಪ್ರತಿಷ್ಟಾಪಿಸುತ್ತಾನೆ. ಆದರೆ ಆತನ ತಪೋ ದೀಕ್ಷೆ ಭಗ್ನವಾಗಿಸಲು ಕಾಕಾಸುರ ಎಂಬ ರಾ

ಈ ಕ್ಷೇತ್ರದಲ್ಲಿ ವಿಶ್ವಾಮಿತ್ರ ಮಹರ್ಷಿಯು ತಪಸ್ಸು ಮಾಡಿ "ಬ್ರಹ್ಮ ಋಷಿ" ಎಂಬ ಪದವಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಶಿವಲಿಂಗವನ್ನು ಕೂಡ ಪ್ರತಿಷ್ಟಾಪಿಸುತ್ತಾನೆ. ಆದರೆ ಆತನ ತಪೋ ದೀಕ್ಷೆ ಭಗ್ನವಾಗಿಸಲು ಕಾಕಾಸುರ ಎಂಬ ರಾಕ್ಷಸನು ವಿಫಲ ಪ್ರಯತ್ನವನ್ನು ಮಾಡುತ್ತಾನೆ.

ಈ ಕ್ರಮದಲ್ಲಿ ವಿಶ್ವಾಮಿತ್ರನ ಶಾಪದಿಂದಾಗಿ ಇಲ್ಲಿ ಆ ಪುರಾಣದ ಕಾಲದಿಂದಲೂ ಇಂದಿನವರೆವಿಗೂ ಒಂದೇ ಒಂದು ಕಾಗೆ ಕೂಡ ಹಾರುವುದಿಲ್ಲ. ಅದಕ್ಕೆ ನಿದರ್ಶನವಾಗಿ ಈ ಕ್ಷೇತ್ರ ಪರಿಸರ ಪ್ರದೇಶದಲ್ಲಿ ಒಂದು ಕಾಗೆ ಕೂಡ ನಮಗೆ ಕಾಣಿಸುವುದಿಲ್ಲ.

ಅದ್ದರಿಂದ ಈ ಕ್ಷೇತ್ರಕ್ಕೆ ಶನಿದೋಷ ನಿವಾರಣೆಗೆ ಲಕ್ಷಾಧಿ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇನ್ನು ಇಲ್ಲಿನ ಪುರಾಣ ಪ್ರಾಧಾನ್ಯತೆ ಇರುವ ಅನೇಕ ದೇವಾಲಯಗಳನ್ನು ಕೂಡ ದರ್ಶಿಸಿಕೊಳ್ಳಬಹುದು. ಇಷ್ಟು ವಿಶಿಷ್ಟತೆಗಳನ್ನು ಹೊಂದಿರುವ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಪೂರ್ತಿ ವಿವರಗಳನ್ನು ಲೇಖನದ ಮೂಲಕ ತಿಳಿಸುಕೊಳ್ಳಿ.

1.ವೀರಭಾಗವತ ಕ್ಷೇತ್ರ...

1.ವೀರಭಾಗವತ ಕ್ಷೇತ್ರ...

PC:YOUTUBE

ವೀರಭಾಗವತ ಕ್ಷೇತ್ರವೆಂದು ವಿಖ್ಯಾತಿ ಹೊಂದಿರುವ ಸತ್ರಶಾಲ ಗುಂಟೂರು ಜಿಲ್ಲೆಯಲ್ಲಿನ ಪ್ರಮುಖವಾದ ಶೈವ ಕ್ಷೇತ್ರವಾಗಿದೆ. ಈ ಪುಣ್ಯಕ್ಷೇತ್ರದಲ್ಲಿ ಶ್ರೀ ಗಂಗಾಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯು ನೆಲೆಸಿದ್ದಾನೆ.

2.ವೀರಭಾಗವತ ಕ್ಷೇತ್ರ...

2.ವೀರಭಾಗವತ ಕ್ಷೇತ್ರ...

PC:YOUTUBE

ಸುಮಾರು 25 ಕಿ.ಮೀ ದೂರದಲ್ಲಿ ರೆಂಟವಿಂತಲ ಮಂಡಲದಲ್ಲಿ ಈ ಕ್ಷೇತ್ರವು ಪರಮಪವಿತ್ರವಾದುದು ಎಂದು ನಂಬಲಾಗಿದೆ. ಇದು ಕೃಷ್ಣಾ ನದಿ ತೀರದಲ್ಲಿದೆ. ಇಲ್ಲಿ ಕೃಷ್ಣ ಪುಷ್ಕರಣಿ ನಡೆಯುವ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಮಾಡುತ್ತಾರೆ.

3.ಸ್ಥಳೀಯ ಪುರಾಣ

3.ಸ್ಥಳೀಯ ಪುರಾಣ

PC:YOUTUBE

ಸ್ಥಳೀಯ ಪುರಾಣದ ಕಥೆಯ ಪ್ರಕಾರ ವಿಶ್ವಾಮಿತ್ರ ಮಹರ್ಷಿಯು ಪದವಿಯನನು ಪಡೆಯಬೇಕು ಎಂಬ ಆಸೆಯಿಂದ ಸತ್ರಶಾಲದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಿ ಘೋರವಾದ ತಪಸ್ಸನ್ನು ಮಾಡುತ್ತಾ ಇರುತ್ತಾನೆ.

4.ವೀರಭಾಗವತ ಕ್ಷೇತ್ರ...

4.ವೀರಭಾಗವತ ಕ್ಷೇತ್ರ...

PC:YOUTUBE

ಇದನ್ನು ತಿಳಿದುಕೊಂಡು ದೈತ್ಯ ಕುಮಾರನಾದ ಕಾಕಾಸುರನು ಆ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸುವುದುಕ್ಕೆ ಅನೇಕ ಪ್ರಯತ್ನಗಳನು ಮಾಡುತ್ತಾನೆ. ಕೊನೆಗೆ ಕಾವ್..ಕಾವ್.. ಎಂದು ಸತತವಾಗಿ ಕೂಗಿಕೊಳ್ಳುತ್ತಿರುತ್ತಾನೆ.

5.ವೀರಭಾಗವತ ಕ್ಷೇತ್ರ...

5.ವೀರಭಾಗವತ ಕ್ಷೇತ್ರ...

PC:YOUTUBE

ಇದರಿಂದಾಗಿ ಆಗ್ರಹಗೊಂಡ ವಿಶ್ವಾಮಿತ್ರನು ತನ್ನ ತಪಸ್ಸಿಗೆ ಭಂಗ ತಂದ ಕಾಗೆಗಳು ಈ ಕ್ಷೇತ್ರದಲ್ಲಿ ಕಾಲಿಟ್ಟರೆ ಆ ಜಾತಿಯೆಲ್ಲಾ ನಾಶವಾಗುತ್ತದೆ ಎಂದು ಶಪಿಸುತ್ತಾನೆ.

6.ವೀರಭಾಗವತ ಕ್ಷೇತ್ರ...

6.ವೀರಭಾಗವತ ಕ್ಷೇತ್ರ...

PC:YOUTUBE

ಅದ್ದರಿಂದಲೇ ಆ ಪುರಾಣ ಕಾಲದಿಂದಲೂ ಇಂದಿನವರೆವಿಗೂ ಸತ್ರಶಾಲ ಪುಣ್ಯಕ್ಷೇತ್ರದಲ್ಲಿ ಒಂದೇ ಒಂದು ಕಾಗೆಗಳು ಕೂಡ ಕಾಣಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ಹಾಗು ಅಧ್ಯಯನ ಕೂಡ ಮಾಡಿದರು ಕೂಡ ಯಾವುದೇ ಉತ್ತರ ದೊರೆತ್ತಿಲ್ಲ.

7.ವೀರಭಾಗವತ ಕ್ಷೇತ್ರ...

7.ವೀರಭಾಗವತ ಕ್ಷೇತ್ರ...

PC:YOUTUBE

ಇದು ಹೀಗೆ ಇದ್ದರೆ, ಶನಿವಾಹನವಾದ ಕಾಗೆಗಳು ಇಲ್ಲಿ ಹಾರುವುದಿಲ್ಲವಾದ್ದರಿಂದ ಈ ಕ್ಷೇತ್ರದಲ್ಲಿ ಪೂಜೆಗಳನ್ನು ಮಾಡಿದರೆ ಶನಿ ದೋಷಗಳಿಂದ ಭಾದೆ ಹೊಂದುತ್ತಿರುವವರು ಮುಕ್ತಿ ಪಡೆಯಬಹುದು ಎಂದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ.

8.ವೀರಭಾಗವತ ಕ್ಷೇತ್ರ...

8.ವೀರಭಾಗವತ ಕ್ಷೇತ್ರ...

PC:YOUTUBE

ಹಾಗಾಗಿಯೇ ಈ ಕ್ಷೇತ್ರಕ್ಕೆ ಲಕ್ಷಾಧಿ ಮಂದಿ ಭಕ್ತರು ಭೇಟಿ ನೀಡಿ ಪ್ರತ್ಯೇಕವಾದ ಪೂಜೆಗಳನ್ನು ಮಾಡಿಸುತ್ತಿರುತ್ತಾರೆ. ಇಲ್ಲಿ ಶನಿಪರಿಹಾರ ದೋಷ ಪೂಜೆಗಳು ಮಾಡುವುದರಿಂದ ಕುಟುಂಬ ಕಲಹಗಳು ಆಗುವುದಿಲ್ಲ ಎಂದೂ, ವ್ಯಾಪಾರವು ಚೆನ್ನಾಗಿ ನಡೆಯುತ್ತದೆ ಎಂದು ಭಕ್ತರು ನಂಬುತ್ತಾರೆ.

9.ವೀರಭಾಗವತ ಕ್ಷೇತ್ರ...

9.ವೀರಭಾಗವತ ಕ್ಷೇತ್ರ...

PC:YOUTUBE

ಇದು ಹೀಗೆ ಇದ್ದರೆ, ವಿಶ್ವಾಮಿತ್ರನು ಈ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿದ ಶಿವಲಿಂಗವು ತದನಂತರದ ಕಾಲದಲ್ಲಿ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಹೆಸರಿನಿಂದ ಪ್ರಚಾರ ಹೊಂದಿತು.

10.ವೀರಭಾಗವತ ಕ್ಷೇತ್ರ...

10.ವೀರಭಾಗವತ ಕ್ಷೇತ್ರ...

PC:YOUTUBE

ಇನ್ನು ಇಲ್ಲಿ ಅನೇಕ ಮಂದಿ ಸಾಧುಗಳು, ಋಷಿಗಳು ಇಲ್ಲಿ ಸತ್ರಾಲದಲ್ಲಿ ಇದ್ದು, ಅನೇಕ ಯಾಗಗಳು ಮಾಡುತ್ತಿದ್ದರಿಂದ ಈ ಕ್ಷೇತ್ರವನ್ನು ಸತ್ರಶಾಲ ಎಂದು ಹೆಸರು ಬಂದಿತು ಎಂದು ಸ್ಥಳೀಯ ಪ್ರಜೆಗಳು ನಂಬುತ್ತಾರೆ.

11.ವೀರಭಾಗವತ ಕ್ಷೇತ್ರ...

11.ವೀರಭಾಗವತ ಕ್ಷೇತ್ರ...

PC:YOUTUBE

ಇನ್ನು ಇಲ್ಲಿರುವ ದೇವಾಲಯವನ್ನು ಕ್ರಿ.ಶ 1244 ರಲ್ಲಿ ಕಾಕತೀಯ ಮಹಾರಾಜನಾದ ಮಹಾಮಂಡಲೇಶ್ವರ ಕಾಯಸ್ತ ಅಂಬಯ್ಯ ದೇವನು ಸ್ವಾಮಿಗೆ ಧೂಪ, ದೀಪ, ನೈವೇದ್ಯಗಳನ್ನು ಮಾಡಿಸುವುದಕ್ಕೆ ವಸೂಲು ಮಾಡಿದ ಕಂದಾಯವನ್ನು ದೇವಾಲಯದ ನಿರ್ಮಣ ಕಾರ್ಯಕ್ಕೆ ಬಳಸಿದನಂತೆ.

12.ವೀರಭಾಗವತ ಕ್ಷೇತ್ರ...

12.ವೀರಭಾಗವತ ಕ್ಷೇತ್ರ...

PC:YOUTUBE

ಸತ್ರಶಾಲದಲ್ಲಿ ಕೇವಲ ಭ್ರಮರಾಂಬ ಮಲ್ಲಿಕಾಜುನ ದೇವಾಲಯವೇ ಅಲ್ಲದೇ ಅನೇಕ ಪ್ರಾಚೀನವಾದ ಹಾಗು ಪುರಾಣ ಪ್ರಾಧ್ಯಾನ್ಯತೆಯನ್ನು ಹೊಂದಿರುವ ದೇವಾಲಯಗಳು ಕೂಡ ಇವೆ. ಅವುಗಳಲ್ಲಿ ಕುಮಾರಸ್ವಾಮಿ ದೇವಾಲಯ ಅತಿ ಮುಖ್ಯವಾದುದು.

13.ವೀರಭಾಗವತ ಕ್ಷೇತ್ರ...

13.ವೀರಭಾಗವತ ಕ್ಷೇತ್ರ...

PC:YOUTUBE

ಅಷ್ಟೇ ಅಲ್ಲದೇ, ಕಲಿಯುಗ ದೈವವಾದ ವೆಂಕಟೇಶ್ವರ ಸ್ವಾಮಿ ದೇವಾಲಯ, ಕಾಲಭೈರವ, ಚಿಕಟಿ ಮಲ್ಲಯ್ಯ, ಬ್ರಹ್ಮ, ಆಂಜನೇಯ, ಅಮರಲಿಂಗೇಶ್ವರ, ಸಂತಾನ ಮಲ್ಲಿಕಾರ್ಜುನ, ಶ್ರೀ ಚೆನ್ನ ಕೇಶವ ಸ್ವಾಮಿ, ಶ್ರೀ ಉತ್ತರೇಶ್ವರಸ್ವಾಮಿ ದೇವಾಲಯಗಳಿವೆ.

14.ವೀರಭಾಗವತ ಕ್ಷೇತ್ರ...

14.ವೀರಭಾಗವತ ಕ್ಷೇತ್ರ...

PC:YOUTUBE

ಪ್ರತಿ ವರ್ಷ ಇಲ್ಲಿ ಅಷಾಢ ಶುದ್ಧ ಏಕಾದಶಿಯಂದು, ವ್ಯಾಸ ಪೌರ್ಣಿಮ, ಮಹಾಶಿವರಾತ್ರಿ ಪರ್ವದಿನಗಳಲ್ಲಿ ಇಲ್ಲಿ ದೇಶದ ಮೂಲೆ-ಮೂಲೆಗಳಿಂದ ಲಕ್ಷಾಧಿ ಮಂದಿ ಭಕ್ತರು ಇಲ್ಲಿಗೆ ಬಂದು ಸ್ವಾಮಿಗೆ ದರ್ಶಿಸಿಕೊಳ್ಳುತ್ತಿರುತ್ತಾರೆ.

15.ವೀರಭಾಗವತ ಕ್ಷೇತ್ರ...

15.ವೀರಭಾಗವತ ಕ್ಷೇತ್ರ...

PC:YOUTUBE

ಗುಂಟೂರಿನಿಂದ ಸುಮಾರು 125 ಕಿ.ಮೀ ದೂರದಲ್ಲಿ ಸತ್ರಶಾಲವಿದೆ. ಅದೇವಿಧವಾಗಿ ಮಾಚೆರ್ಲುಯಿಂದ ಕೇವಲ 20 ಕಿ.ಮೀ ದೂರದಲ್ಲಿ ಈ ಪವಿತ್ರವಾದ ಪುಣ್ಯಕ್ಷೇತ್ರವಿದೆ. ಗುಂಟೂರು, ಮಾಚಾರ್ಲದ ಮೂಲಕ ಬಸ್ಸಿನ ಮೂಲಕ ಪಾಲ್ವಾಯಿ ಜಂಕ್ಷನ್ ಸೇರಿಕೊಳ್ಳಬೇಕು. ಅಲ್ಲಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ನಿತ್ಯವು ಆಟೋ ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X