Search
  • Follow NativePlanet
Share
» »ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...

ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...

ಸರಸ್ವತಿ ದೇವಿಯು ಕಲಿಕೆ ಮತ್ತು ಶಿಕ್ಷಣದ ದೇವತೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ಮೊದಲು, ಸರಸ್ವತಿಗೆ ಪೂಜೆ ಮಾಡುವುದು ಹಿಂದೂ ಪರಂಪರೆಯಲ್ಲಿ ಒಂದು ಸಾಂಪ್ರದಾಯಿಕ ಅಭ್ಯಾಸವಾಗಿದೆ. ಅವುಗಳಲ್ಲಿ ಕೆಲವರು ದೇವತೆ ಇರುವ ಸ್ಥಳಗಳಿಗೆ ಹೋಗಿ ವಿಶೇಷವಾಗಿ ಪೂಜಿಸಲಾಗುತ್ತದೆ.

ಇದಕ್ಕಾಗಿಯೇ ಶಾಲೆಗಳ ಪುನಃಸ್ಥಾಪನೆಯ ಸಮಯದಲ್ಲಿ ದೇವಸ್ಥಾನಗಳಿಗೆ ವಿಧ್ಯಾರ್ಥಿಗಳು ಭೇಟಿ ನೀಡುತ್ತಾರೆ. ಆದಾಗ್ಯೂ, ಭಾರತದಲ್ಲಿ ಲಕ್ಷ್ಮಿ ಮತ್ತು ಪಾರ್ವತಿಯೊಂದಿಗೆ ಹೋಲಿಸಿದರೆ ಸರಸ್ವತಿಯ ದೇವಾಲಯಗಳು ಅತ್ಯಂತ ಕಡಿಮೆ ಎಂದೆ ಹೇಳಬಹುದು. ಅವುಗಳನ್ನು ಬೆರಳುಗಳಲ್ಲಿ ಲೆಕ್ಕ ಮಾಡಬಹುದು.

ಲೇಖನದ ಮೂಲಕ ವಿಶಿಷ್ಟವಾದ ಸರಸ್ವತಿ ದೇವಿ ದೇವಾಲಯದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.

೧.ಸರಸ್ವತಿ ದೇವಿ ದೇವಾಲಯ, ಬಾಸರ

೧.ಸರಸ್ವತಿ ದೇವಿ ದೇವಾಲಯ, ಬಾಸರ

PC:YOUTUBE

ಪ್ರಖ್ಯಾತ ಸರಸ್ವತಿ ದೇವಸ್ಥಾನವು ಭಾರತದಲ್ಲಿ ಮಾತ್ರವಲ್ಲದೇ ಬಾಸರದಲ್ಲಿನ ಜ್ಞಾನ ಸರಸ್ವತಿ ದೇವಸ್ಥಾನವು ಒಂದು. ಇದೊಂದು ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಾಲಯವು ಅದಿಲಾಬಾದ್ನ ಬಸಾರದ ಗೋದಾವರಿ ತೀರದಲ್ಲಿದೆ ಮತ್ತು ದಿನನಿತ್ಯ ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

 ೨.ವೇದವ್ಯಾಸ

೨.ವೇದವ್ಯಾಸ

PC:YOUTUBE

ವೇದವಾಸ್ಯರು ಹಿಡಿ ಮಣ್ಣಿನಿಂದ ಮೂರು-ಭಾಗದಷ್ಟು ಮಾಡಲ್ಪಟ್ಟು, ಅವುಗಳನ್ನು ಮಹಾಲಕ್ಷ್ಮಿ, ಸರಸ್ವತಿ ಮತ್ತು ಪಾವತಿಯ ವಿಗ್ರಹಗಳಾಗಿ ರೂಪುಗೊಂಡವು ಎಂದು ಹೇಳಲಾಗುತ್ತದೆ. ಇಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಸರಸ್ವತಿ ದೇವಿಯನ್ನು ನಾವು ಕಾಣಬಹುದು.

 ೩.ಅಕ್ಷರ ಅಭ್ಯಾಸ

೩.ಅಕ್ಷರ ಅಭ್ಯಾಸ

PC:YOUTUBE

ಅನೇಕ ಹೆತ್ತವರು ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವ ಮೊದಲು ತಮ್ಮ ಅಕ್ಷರ ಅಭ್ಯಾಸದ ಕಾರ್ಯಕ್ರಮವನ್ನು ನಡೆಸಲು ಇಲ್ಲಿಗೆ ಬರುತ್ತಾರೆ. ಹೀಗೆ ಮಾಡಿದರೆ ಓದುಗರು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುತ್ತಾರೆ ಎಂದು ನಂಬುತ್ತಾರೆ. ಇದಕ್ಕಾಗಿ ನೀವು ಪ್ರತ್ಯೇಕವಾದ ಶುಲ್ಕವನ್ನು ಪಾವತಿಸಬೇಕು.

೪.ಪಾನಚಿಕ್ಕಡ ಸರಸ್ವತಿ

೪.ಪಾನಚಿಕ್ಕಡ ಸರಸ್ವತಿ

PC:YOUTUBE

ಕೇರಳದ ಪಾನಚಿಕ್ಕಾಡದಲ್ಲಿನ ಸರಸ್ವತಿ ದೇವಸ್ಥಾನ ಕೂಡ ಜನಪ್ರಿಯವಾಗಿದೆ. ಈ ದೇವಸ್ಥಾನವನ್ನು ದಕ್ಷಿಣ ಮೂಕಾಂಬಿಕಾ ದೇವಿ ದೇವಾಲಯ ಎಂದೂ ಕರೆಯಲ್ಪಡುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ನಡೆಯುವ ಸರಸ್ವತಿ ಪೂಜೆ ಬಹಳ ಜನಪ್ರಿಯವಾಗಿದೆ. ಇಲ್ಲಿನ ನವರಾತ್ರಿ ಉತ್ಸವ ಕೂಡಾ ಬಹಳ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಸುಮಾರು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

೫.ಪುಷ್ಕರದಲ್ಲಿನ ಸರಸ್ವತಿ ದೇವಿ ದೇವಾಲಯ

೫.ಪುಷ್ಕರದಲ್ಲಿನ ಸರಸ್ವತಿ ದೇವಿ ದೇವಾಲಯ

PC:YOUTUBE

ಪುಷ್ಕರ್ ಎಂದ ತಕ್ಷಣವೇ ಬ್ರಹ್ಮ ದೇವಸ್ಥಾನವನ್ನು ಸ್ಮರಿಸುತ್ತಾರೆ. ರಾಜಸ್ಥಾನದ ಪುಷ್ಕರದಲ್ಲಿರುವ ಸರಸ್ವತಿ ದೇವಾಲಯ ಕೂಡ ಇದೆ. ಪ್ರತಿ ವರ್ಷ ಸಾವಿರಾರು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವು ಭಾರತೀಯ ವಾಸ್ತುಶಿಲ್ಪ ಶೈಲಿಗೆ ನಿದರ್ಶನವಾಗಿದೆ.

೬.ಬಿಟ್ಸ್ ಪಿಲಾನಿ ಕ್ಯಾಂಪಸ್

೬.ಬಿಟ್ಸ್ ಪಿಲಾನಿ ಕ್ಯಾಂಪಸ್

PC:YOUTUBE

ಸರಸ್ವತಿ ದೇವಿ ದೇವಾಲಯವು ರಾಜಸ್ಥಾನದ ಬಿಟ್ಸ್ ಪಿಲಾನಿ ಕ್ಯಾಂಪಸ್ನಲ್ಲಿದೆ. ಈ ದೇವಾಲಯವನ್ನು ಬಿರ್ಲಾ ಕುಟುಂಬವು ನಿರ್ಮಿಸಿದೆ. 70 ಸ್ತಂಭಗಳನ್ನು ಹೊಂದಿರುವ ಈ ದೇವಾಲಯವನ್ನು ಭಾರತೀಯ ಶಿಲ್ಪವನ್ನು ಪ್ರತಿಬಿಂಬಿಸಲು ನಿರ್ಮಿಸಲಾಗಿದೆ. ಈ ದೇವಾಲಯವನ್ನು ಸಭಾಂಗಣ, ಧ್ಯಾನ ಹಾಲ್, ಪೂಜಾ ಹಾಲ್ ಗಳನ್ನು ಬಿಳಿ ಮಾರ್ಬಲ್ ಕಲ್ಲಿನಿಂದ ಐದು ವಿಭಾಗಗಳಾಗಿ ನಿರ್ಮಾಣ ಮಾಡಲಾಗಿದೆ.

7.ವಿದ್ಯಾಸರಸ್ವತಿ ದೇವಾಲಯ, ವರಂಗಲ್

7.ವಿದ್ಯಾಸರಸ್ವತಿ ದೇವಾಲಯ, ವರಂಗಲ್

PC:YOUTUBE

ಹಂಸವಾಹನದಿಂದ ಕೂಡಿರುವ ಸರಸ್ವತಿಯನ್ನು ತೆಲಂಗಾಣದಲ್ಲಿನ ವರಂಗಲ್‍ನಲ್ಲಿನ ವಿದ್ಯಾ ಸರಸ್ವತಿ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಕಂಚಿ ಶಂಕರಮಠವು ಈ ದೇವಾಲಯದ ನಿವರ್ಹಣ ಜವಾಬ್ಧಾರಿಯನ್ನು ವಹಿಸಿಕೊಂಡಿದೆ. ಈ ದೇವಾಲಯದ ಸುತ್ತ ವಿದ್ಯಾಗಣಪತಿ, ಶನಿಶ್ವರ ದೇವಾಲಯ ತದಿತರ ದೇವಾಲಯಗಳಿವೆ. ಈ ದೇವಾಲಯದಲ್ಲಿ ವೇದಗಳನ್ನು ಹೇಳಿಕೊಡುತ್ತಾರೆ. ಪ್ರಸ್ತುತ 300 ಮಂದಿ ವಿದ್ಯಾರ್ಥಿಗಳು ವೇದಗಳನ್ನು ಕಲಿಯುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X