Search
  • Follow NativePlanet
Share
» » ಕಡಿಮೆ ಬೆಲೆಯಲ್ಲಿ ಬೋಟಿಂಗ್ ಮಾಡಬೇಕಾದ್ರೆ ಸಪುತಾರಾ ಸರೋವರಕ್ಕೆ ಹೋಗಿ

ಕಡಿಮೆ ಬೆಲೆಯಲ್ಲಿ ಬೋಟಿಂಗ್ ಮಾಡಬೇಕಾದ್ರೆ ಸಪುತಾರಾ ಸರೋವರಕ್ಕೆ ಹೋಗಿ

ಸಪುತಾರಾ ಸರೋವರ, ನಾಗೇಶ್ವರ ಮಹಾದೇವ್ ದೇವಾಲಯ ಮತ್ತು ಸನ್‌ರೈಸ್‌ ಪಾಯಿಂಟ್‌ಗಳಂತಹ ಸುಂದರ ಆಕರ್ಷಣೆಗಳ ಮೂಲಕ ನಿಮ್ಮ ಪ್ರವಾಸವನ್ನು ಸುಮಧುರವಾಗಿಸುತ್ತದೆ.

ಸಪುತಾರಾ ಗುಜರಾತಿನ ಡಾಂಗ್ ಜಿಲ್ಲೆಯಲ್ಲಿದೆ. ಇದು ಒಂದು ಜನಪ್ರಿಯ ಗಿರಿಧಾಮವಾಗಿದ್ದು ಇಲ್ಲಿ ವಿಶ್ವದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಥಳವು ಪ್ರಸಿದ್ಧ ಆಕರ್ಷಣೆಗಳು ಮತ್ತು ದೃಶ್ಯಗಳ ಸ್ಥಳಗಳಿಗೆ ಬಂದಾಗ ಪ್ರವಾಸಿಗರಿಗೆ ಸಾಕಷ್ಟು ಕೊಡುಗೆ ನೀಡುತ್ತದೆ.

ಸಪುತಾರಾ ಆಕರ್ಷಣೆಗಳು

ಸಪುತಾರಾ ಆಕರ್ಷಣೆಗಳು

PC: ritesh169O

ಸಪುತಾರಾ ಸರೋವರ, ನಾಗೇಶ್ವರ ಮಹಾದೇವ್ ದೇವಾಲಯ ಮತ್ತು ಸನ್‌ರೈಸ್‌ ಪಾಯಿಂಟ್‌ಗಳಂತಹ ಸುಂದರ ಆಕರ್ಷಣೆಗಳ ಮೂಲಕ ನಿಮ್ಮ ಪ್ರವಾಸವನ್ನು ಸುಮಧುರವಾಗಿಸುತ್ತದೆ. ಇದು ಸುಂದರವಾದ ಸ್ಟೆಪ್ ಗಾರ್ಡನ್ ಮತ್ತು ರೋಸ್ ಗಾರ್ಡನ್ ಅನ್ನೂ ಹೊಂದಿದೆ.

ಸಪುತಾರಾ ಗಿರಿಧಾಮ

ಸಪುತಾರಾ ಗಿರಿಧಾಮ

PC: Master purav

ಈ ಸರೋವರವು ಬೆಟ್ಟದ ಸುತ್ತಮುತ್ತಲಿನ ದೃಶ್ಯಗಳನ್ನು ನೀಡುತ್ತದೆ. ಇದು ಪ್ರಸಿದ್ಧ ಪಿಕ್ನಿಕ್ ಮತ್ತು ಬೋಟ್ ಸ್ಪಾಟ್ ಆಗಿದೆ. ಸಾಕಷ್ಟು ಪ್ರವಾಸಿಗರು ಈ ಸ್ಥಳದಲ್ಲಿ ಉತ್ತಮ ಸಮಯವನ್ನು ಕಳೆಯುತ್ತಾರೆ. ಸತ್ಪುರ ಸರೋವರದಲ್ಲಿ ದೃಶ್ಯಗಳ ನಂತರ ಸಪುತಾರಾ ಸರೋವರದ ದಕ್ಷಿಣದ ದಡದಲ್ಲಿ ನಾಗೇಶ್ವರ ಮಹಾದೇವ್ ದೇವಸ್ಥಾನ ಇದೆ.

ನಾಗೇಶ್ವರ ಮಹಾದೇವ್ ದೇವಸ್ಥಾನ

ನಾಗೇಶ್ವರ ಮಹಾದೇವ್ ದೇವಸ್ಥಾನ

PC: ritesh169O

ನಾಗೇಶ್ವರ ಮಹಾದೇವ್ ದೇವಸ್ಥಾನದಲ್ಲಿ ದರ್ಶನ, ಆರತಿ ಪಡೆದು ದೇವಾಲಯದ ಸುತ್ತಲಿನ ಪ್ರದೇಶಗಳ ಹಸಿರು ನೋಟವನ್ನು ನೀಡುತ್ತವೆ. ಸಪುತಾರಾದಲ್ಲಿನ ಇತರ ಪ್ರವಾಸಿ ಆಕರ್ಷಣೆಗಳನ್ನು ಅನ್ವೇಷಿಸಲು ಹೋಗಿ.. ಸುಂದರ ಸೂರ್ಯೋದಯ ಪಾಯಿಂಟ್, ಸ್ಟೆಪ್ ಗಾರ್ಡನ್ ಮತ್ತು ರೋಸ್ ಗಾರ್ಡನ್ ಅನ್ನು ಭೇಟಿ ಮಾಡಿ. ಸಪುತಾರಾ ರೋಪ್ ವೇಗೆ ಭೇಟಿ ನೀಡಿ ಆನಂದಿಸಿ.

ಸಪುತಾರಾ ಸರೋವರ

ಸಪುತಾರಾ ಸರೋವರ

ಸಪುತಾರಾ ಸರೋವರವು ಸಪುತಾರಾ ಗಿರಿಧಾಮದ ಪ್ರಮುಖ ಆಕರ್ಷಣೆ ಆಗಿದೆ. ಈ ಸರೋವರವು ಬೋಟಿಂಗ್ ಸೌಲಭ್ಯಗಳು ಮತ್ತು ಲೇಕ್ಸೈಡ್ ಮನರಂಜನಾ ಚಟುವಟಿಕೆಗಳನ್ನು ಒದಗಿಸುತ್ತದೆ. ದೋಣಿ ಮನೆಗಳಿಂದ ನೀವು 8:30 ರಿಂದ 6:30 ರವರೆಗೆ ಬೋಟ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಪೆಡಲ್ ಬೋಟ್ ಗೆ ಪ್ರತಿ ವ್ಯಕ್ತಿಗೆ ಅರ್ಧ ಘಂಟೆಗೆ, 20 ರೂ. ಮತ್ತು ದೋಣಿ ಬೋಟ್‌ಗೆ ಪ್ರತಿ ವ್ಯಕ್ತಿಗೆ 5 ರೂ.

ಕಡಿಮೆ ಬೆಲೆಯಲ್ಲಿ ಸರೋವರದ ದೋಣಿ ವಿಹಾರ

ಇಷ್ಟೊಂದು ಕಡಿಮೆ ಬೆಲೆಯಲ್ಲಿ, ಸಪುತಾರಾ ಸರೋವರದ ದೋಣಿ ವಿಹಾರವು ಬಹುಶಃ ದೇಶದಲ್ಲಿ ಅಗ್ಗವಾದ ಬೋಟಿಂಗ್ ಅನುಭವವನ್ನು ನೀಡುತ್ತದೆ ಎನ್ನಬಹುದು. ಇಡೀ ಸಪುತಾರಾ ಗಿರಿಧಾಮದಲ್ಲಿ ಸಪುತಾರಾ ಸರೋವರ ಉತ್ತಮ ಸ್ಥಳವಾಗಿದೆ. ಇದು ಒಂದು ಸಣ್ಣ, ಶಾಂತ ಮತ್ತು ಸುಂದರ ಸ್ಥಳವಾಗಿದೆ. ಸಂಜೆ ಸೂರ್ಯಾಸ್ತದ ಸಮಯವನ್ನು ಈ ಸ್ಥಳದ ಸುತ್ತಲೂ ಕಳೆಯಲು ಉತ್ತಮ ಸಮಯವಾಗಿದೆ.

ಹನಿ ಬೀಸ್ ಕೇಂದ್ರ

ಲೇಕ್ ಪ್ಯಾಡಲ್ ದೋಣಿಗಳು ಮತ್ತು ರೋಯಿಂಗ್ ದೋಣಿಗಳನ್ನು ಹೊಂದಿದೆ. ಸರೋವರದ ಹೊರಗೆ, ಫುಡ್‌ ಸೆಂಟರ್ ಮತ್ತು ಗೇಮಿಂಗ್ ಪಾಯಿಂಟ್‌ಗಳು ಇವೆ. ಹನಿ ಬೀಸ್ ಕೇಂದ್ರವು ಸರೋವರದಿಂದ ಬರೀ 2 ನಿಮಿಷಗಳ ನಡಿಗೆಯ ಅಂತರದಲ್ಲಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಇಲ್ಲಿಗೆ ಬರುವ ಪ್ರವಾಸಿಗರಿಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಸಾಕಷ್ಟು ಪಾರ್ಕಿಂಗ್ ಸ್ಥಳ ಲಭ್ಯವಿದೆ. ಇಲ್ಲಿಗೆ ನೀವು ಭೇಟಿ ನೀಡುವುದಾದರೆ ಸರ್ಕಾರಿ ರಜಾ ದಿನಗಳಲ್ಲಿ ಅಥವಾ ವಿಕೇಂಡ್‌ನಲ್ಲಿ ಭೇಟಿ ನೀಡಬಾರದು. ಇದು ಬಹಳ ಜನಜಂಗುಳಿಯಿಂದ ಕೂಡಿರುತ್ತದೆ. ಸರಿಯಾಗಿ ಎಂಜಾಯ್ ಮಾಡಲು ಸಾಧ್ಯವಾಗೋದಿಲ್ಲ. ಅದಕ್ಕಾಗಿ ವಾರದ ಮಧ್ಯದಲ್ಲಿ ಇಲ್ಲಿಗೆ ಭೇಟಿ
ನೀಡುವುದು ಸೂಕ್ತ.

ಸನ್‌ಸೆಟ್ ಪಾಯಿಂಟ್

ನೀವು ಸಪುತಾರಾದಲ್ಲಿ ಸಂಜೆ ತನಕ ಹಿಂತಿರುಗಲು ಯೋಜಿಸುತ್ತಿದ್ದರೆ, ನೀವು ಸನ್‌ಸೆಟ್ ಪಾಯಿಂಟ್ ಅನ್ನು ಕಳೆದುಕೊಳ್ಳಬಾರದು. ಯಾವುದೇ ಜನಸಮೂಹವು ಇಲ್ಲದಿರುವಾಗ ಈ ಸ್ಥಳದಲ್ಲಿ ಉತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದು. ಸಂಜೆಯ ಸಮಯವನ್ನು ಕಳೆಯಲು ಉತ್ತಮವಾಗಿದೆ. ವಾರಾಂತ್ಯಗಳು, ರಜಾದಿನಗಳು ಮತ್ತು ಉತ್ಸವಗಳನ್ನು ತಪ್ಪಿಸಿ ಮತ್ತು ನೀವು ಈ ಸ್ಥಳವನ್ನು ಪ್ರಶಾಂತವಾಗಿ ಕಾಣುವಿರಿ.

ರೋಪ್ ವೇ

ರೋಪ್‌ ವೇ ಯು ಒಂದು ಸಾಹಸಮಯ ಕ್ರೀಡೆಯಾಗಿದೆ. ಗವರ್ನರ್ಸ್ ಬೆಟ್ಟ ಮತ್ತು ಸೂರ್ಯಾಸ್ತದ ಬಿಂದುಗಳ ಮಧ್ಯೆ ಚಲಿಸುವಾಗ, ಸಪುತಾರಾದಲ್ಲಿ ಸುತ್ತಾಡುವಾಗ ರೋಪ್ ವೇ ಚಟುವಟಿಕೆಯ ಅನುಭವ ಪಡೆಯಲೇ ಬೇಕು. ರೋಪ್‌ ವೇಗೆ ಪ್ರತಿ ವ್ಯಕ್ತಿಗೆ ಸುಮಾರು ರೂ. 50 ಟಿಕೇಟ್ ಇದೆ.

ಟೇಬಲ್‌ ವ್ಯೂ ಪಾಯಿಂಟ್

ಟೇಬಲ್‌ ವ್ಯೂ ಪಾಯಿಂಟ್

ರೋಪ್ ವೇ ಯೋಜಿಸಲು ಉತ್ತಮ ಮಾರ್ಗವೆಂದರೆ ಟೌನ್ವ್ಯೂ ಪಾಯಿಂಟ್ ಎಂದೂ ಕರೆಯಲ್ಪಡುವ ಟೇಬಲ್‌ ವ್ಯೂ ಪಾಯಿಂಟ್. ಇದನ್ನು 4 ಅಥವಾ 4.30 ರ ವೇಳೆಗೆ ತಲುಪ ಬೇಕು. ವಾರಾಂತ್ಯದಲ್ಲಿ ಸಾಮಾನ್ಯವಾಗಿ ಕಾಯುವ ಸಮಯ 20-30 ನಿಮಿಷಗಳಿರುತ್ತದೆ. ಈ ರೋಪ್‌ ವೇಯಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡುವುದು ನಿಜಕ್ಕೂ ಖುಷಿ ನೀಡುತ್ತದೆ. ಈ ಬೆಟ್ಟದ ಮೇಲೆ ಟೇಬಲ್‌ನಂತಹ ಸಮತಟ್ಟಾದ ಸ್ಥಳವಿರುವುದಿಂದ ಇಲ್ಲಿಗೆ ಟೇಬಲ್ ವ್ಯೂ ಪಾಯಿಂಟ್ ಎನ್ನುವ ಹೆಸರು ಬಂದಿದೆ.

ಕಣಿವೆಯ ಮೇಲ್ಬಾಗದ ನೋಟ

ಕಣಿವೆಯ ಮೇಲ್ಬಾಗದ ನೋಟ

ರೋಪ್‌ ವೇ ಪ್ರಯಾಣವು ಸುಮಾರು 5 ರಿಂದ 7 ನಿಮಿಷಗಳ ಕಾಲ ನಡೆಯಲಿದೆ. ಮಧ್ಯದಲ್ಲಿ ಅವರು ನಿಲ್ಲಿಸುತ್ತಾರೆ. ಆದ್ದರಿಂದ ಪ್ರವಾಸಿಗರು ಕಣಿವೆಯ ಮೇಲ್ಭಾಗದಲ್ಲಿನ ವಿಹಂಗಮ ನೋಟವನ್ನು ಆನಂದಿಸಬಹುದು. ಈ ಮೂಲಕ ಪ್ರವಾಸಿಗರು ಗಾಳಿಯಲ್ಲಿ ತೇಲಾಡುತ್ತಾ ಕೆಳಗಿನ ನೋಟವನ್ನೂ ನೋಡಬಹುದು. ಇಷ್ಟೊಂದು ಎತ್ತರದಿಂದ ನೋಡುವುದು ನಿಜಕ್ಕೂ ಪ್ರವಾಸಿಗರನ್ನು ಸಮ್ಮೋಹನಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

ಸಪುತಾರಾ ಲೇಕ್ ಗಾರ್ಡನ್

ಸಪುತಾರಾ ಲೇಕ್ ಗಾರ್ಡನ್

PC:ritesh169O

ಸಪುತಾರಾ ಸರೋವರದ ಹತ್ತಿರ ಲೇಕ್ ಗಾರ್ಡನ್ ಇದೆ. ಗಾರ್ಡನ್ ಒಳಗೆ ಪ್ರವೇಶಕ್ಕೆ ಯಾವುದೇ ಶುಲ್ಕವನ್ನು ಹೊಂದಿಲ್ಲ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ. ಉದ್ಯಾನವು ಸಮೃದ್ಧ ಹಸಿರು ಹುಲ್ಲುಗಳಿಂದ ಆವರಿಸಿದೆ. ಇದು ಆಸನ ಮತ್ತು ವಾಕಿಂಗ್ ಟ್ರೇಲ್ಸ್ ಉತ್ತಮ ಬೆಂಚುಗಳನ್ನು ಹೊಂದಿದೆ. ಕುಟುಂಬದೊಂದಿಗೆ ಸಂಜೆ ಹೊತ್ತಿಗೆ ಕಾಲ ಕಳೆಯಲು ಉತ್ತಮ ತಾಣವಾಗಿದೆ. ಸರೋವರದ ಉದ್ಯಾನವು ಉತ್ತಮ ಆಹಾರದ ಆಯ್ಕೆಗಳನ್ನು ಹೊಂದಿದೆ. ನೀವು ಉದ್ಯಾನಕ್ಕೆ ಪ್ರವೇಶಿಸಿದ ತಕ್ಷಣ, ಸಾಕಷ್ಟು ಫೋಟೋಗ್ರಾಫರ್‌ಗಳು ನಿಮ್ಮನ್ನು ಫೋಟೋ ಕ್ಲಿಕ್ಕಿಸಿಕೊಳ್ಳುವಂತೆ ಸುತ್ತುವರೆದಿರುತ್ತಾರೆ.

ಸ್ಟೆಪ್ ಗಾರ್ಡನ್

ಸ್ಟೆಪ್ ಗಾರ್ಡನ್

ಸಪುತಾರಾದಲ್ಲಿ ಸ್ಟೆಪ್ ಗಾರ್ಡನ್ ಅತ್ಯುತ್ತಮವಾದ ನಿರ್ವಹಣೆಯಾಗಿದೆ. ಇದು 20-25 ಮೆಟ್ಟಿಲುಗಳನ್ನು ಒಳಗೊಂಡಿದೆ. ಇದೊಂದು ಸಣ್ಣ ಉದ್ಯಾನವಾಗಿದ್ದು, ಪ್ರತಿ ಹಂತದಲ್ಲಿ, ನೀವು ವಿಶಾಲವಾದ ಬಣ್ಣ ಬಣ್ಣದ ಹೂವುಗಳನ್ನು ಕಾಣಬಹುದು. ಸಪುತಾರಾದಲ್ಲಿ ರೋಸ್‌ ಗಾರ್ಡನ್ ಕೂಡಾ ಇದೆ. ಹೆಸರೇ ತಿಳಿಸುವಂತೆ ಅಲ್ಲಿ ಬರೀ ಗುಲಾಬಿ ಹೂವುಗಳೇ ತುಂಬಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X