Search
  • Follow NativePlanet
Share
» »ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಶಿವಮೊಗ್ಗದ ಮತ್ತೂರು ಎಂಬ ಊರಿನಲ್ಲಿ ಜನರು ಕೇವಲ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಇಲ್ಲಿನ ಜನರ ದಿನನಿತ್ಯದ ಭಾಷೆಯಾಗಿದೆ. ಪ್ರತಿಯೊಬ್ಬರು ಸಂಸ್ಕೃತದಲ್ಲಿ ವ್ಯವಹರಿಸುತ್ತಾರೆ.

ಮತ್ತೂರು ಹಾಗೂ ಹೊಸಹಳ್ಳಿ

ಮತ್ತೂರು ಹಾಗೂ ಹೊಸಹಳ್ಳಿ

PC: Sbhar

ಮತ್ತೂರಿನಲ್ಲಿ ರಾಮನ ಮಂದಿರವಿದೆ, ಶಿವಾಲಯವಿದೆ ಹಾಗೂ ಲಕ್ಷ್ಮೀ ಕೇಶವ ದೇವಾಲಯವಿದೆ. ಮಟ್ಟೂರು ಹಾಗೂ ಹೊಸಹಳ್ಳಿ ಎನ್ನುವ ಊರು ಸಂಸ್ಕೃತವನ್ನು ಸ್ಥಳೀಯ ಭಾಷೆಯನ್ನಾಗಿ ಮಾಡಿಕೊಂಡಿದ್ದಾರೆ. ಶಿವಮೊಗ್ಗದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಸುಮಾರು 5 ಸಾವಿರ ಮನೆಗಳಿಗೆ ಸಂಸ್ಕೃತವೇ ಮುಖ್ಯ ಭಾಷೆಯಾಗಿದೆ.

ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ

 ವೈದಿಕ ಜೀವನಶೈಲಿ

ವೈದಿಕ ಜೀವನಶೈಲಿ

ಮತ್ತೂರಿನ ಜನರು ವೈದಿಕ ಜೀವನಶೈಲಿಯನ್ನು ಪಾಲಿಸುತ್ತಿದ್ದಾರೆ. ಮಂತ್ರ ಪಠಿಸುವುದು, ಬರೆಯುವುದು, ಓದುವುದು, ಮಾತನಾಡುವುದು ಎಲ್ಲವೂ ಸಂಸ್ಕೃತದಲ್ಲೇ.

ಸಂಸ್ಕೃತ ಹಳ್ಳಿ

ಸಂಸ್ಕೃತ ಹಳ್ಳಿ

PC: Bala Subs

1981ರಲ್ಲಿ ಈ ಊರಿನಲ್ಲಿ 10 ದಿನಗಳ ಸಂಸ್ಕೃತ ವರ್ಕ್‌ಶಾಪ್ ನಡೆದಿತ್ತು ಅದರಲ್ಲಿ ಈ ಹಳ್ಳಿಯ ಬಹುತೇಕರು ಪಾಲ್ಗೊಂಡಿದ್ದರು. ಉಡುಪಿಯ ಪೇಜಾವರ ಶ್ರೀ ಗಳು ಪಾಲ್ಗೊಂಡಿದ್ದರು. ಪ್ರತಿಯೊಬ್ಬರು ಸಂಸ್ಕೃತ ಮಾತನಾಡುತ್ತಿದ್ದಾರೆ, ಪ್ರತಿ ಮನೆಯವರು ಸಂಸ್ಕೃತ ಮಾತನಾಡುತ್ತಿದ್ದಾರೆ ಇದೊಂದು ಸಂಸ್ಕೃತ ಹಳ್ಳಿ ಎಂದರು ಅಂದಿನಿಂದ ಇಲ್ಲಿನ ಜನರ ಮುಖ್ಯ ಭಾಷೆ ಸಂಸ್ಕೃತವಾಗಿದೆ.

ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ ! ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ !

 ಗುರುಕುಲ ಪಾಠಶಾಲೆ

ಗುರುಕುಲ ಪಾಠಶಾಲೆ

ಇಡೀಮತ್ತೂರು ಒಂದು ಅಗ್ರಹಾರದಂತೆ ರೂಪಿತವಾಗಿದೆ. ಇಲ್ಲಿ ದೇವಾಲಯ ಹಾಗೂ ಹಳ್ಳಿಯ ಪಾಠಶಾಲೆ ಇದೆ. ವೇದಗಳನ್ನು ಪಾಠಶಾಲೆಯಲ್ಲಿ ಪಠಿಸಲಾಗುತ್ತದೆ. ಈ ಪಾಠಶಾಲೆಯ ವಿದ್ಯಾರ್ಥಿಗಳು ಹಳೆಯ ಸಂಸ್ಕೃತದ ಎಲೆಗಳನ್ನು ಸಂಗ್ರಹಿಸಿ, ಕಂಪ್ಯೂಟರ್‌ನಲ್ಲಿ ಸ್ಕ್ರೀಪ್ಟ್‌ನ್ನು ದೊಡ್ಡದಾಗಿ ಮಾಡಿ ಅದರಲ್ಲಿ ಅಳಿಸಿಹೋಗಿರುವ ಅಕ್ಷರಗಳನ್ನು ತಿದ್ದುತ್ತಾರೆ.

 ಸಂಸ್ಕೃತದಲ್ಲೇ ಜಗಳ

ಸಂಸ್ಕೃತದಲ್ಲೇ ಜಗಳ

PC: Ashwatham

ಈ ಊರಲ್ಲಿ ತರಕಾರಿ ಮಾರುವವನಿಗೂ ಸಂಸ್ಕೃತ ಅರ್ಥವಾಗುತ್ತದೆ. ಊರಿನ ಜನರಂತೂ ಸರಾಗವಾಗಿ ಸಂಸ್ಕೃತ ಮಾತನಾಡುತ್ತಾರೆ. ಬೈಕ್‌ನಲ್ಲಿ ಓಡಾಡುವ ಯುವಕರು ಮೊಬೈಲ್‌ನಲ್ಲಿ ಸಂಸ್ಖೃತದಲ್ಲಿ ಮಾತನಾಡುವುದನ್ನು ಇಲ್ಲಿ ಕಾಣ ಬಹುದು. ಹಾಗೆಯೇ ಆಟ ಆಡುವ ಮಕ್ಕಳು ಸಂಸ್ಕೃತದಲ್ಲೇ ಜಗಳವಾಡುವುದನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X