Search
  • Follow NativePlanet
Share
» »200 ರೂಪಾಯಿಯ ನೋಟಿನ ಮೇಲೆ ಇರುವ ಪ್ರದೇಶ ಯಾವುವು ಎಂಬುದರ ಬಗ್ಗೆ ನಿಮಗೆ ಗೊತ್ತ?

200 ರೂಪಾಯಿಯ ನೋಟಿನ ಮೇಲೆ ಇರುವ ಪ್ರದೇಶ ಯಾವುವು ಎಂಬುದರ ಬಗ್ಗೆ ನಿಮಗೆ ಗೊತ್ತ?

ಭಾರತದ ರಿಸರ್ವ್ ಬ್ಯಾಂಕ್ ದೇಶದಲ್ಲಿಯೇ 200 ರೂಪಾಯಿ ಡಿನಾಮಿನೆಷನ್ ಕೆರೆನ್ಸಿ ನೋಟಗಳನ್ನು ಪ್ರವೇಶ ಮಾಡಿದರು. ನೋಟಿನ ಮುಂಭಾಗದಲ್ಲಿ ಮಹಾತ್ಮಗಾಂಧಿ ಫೋಟು. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪವನ್ನು ಕಾಣಬಹುದಾಗಿದೆ. ಇದು ದೇಶದ ಸಾಂಸ್ಕøತಿ ಪರಂಪರ

ಭಾರತದ ರಿಸರ್ವ್ ಬ್ಯಾಂಕ್ ದೇಶದಲ್ಲಿಯೇ 200 ರೂಪಾಯಿ ಡಿನಾಮಿನೆಷನ್ ಕೆರೆನ್ಸಿ ನೋಟಗಳನ್ನು ಪ್ರವೇಶ ಮಾಡಿದರು. ನೋಟಿನ ಮುಂಭಾಗದಲ್ಲಿ ಮಹಾತ್ಮಗಾಂಧಿ ಫೋಟು. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪವನ್ನು ಕಾಣಬಹುದಾಗಿದೆ. ಇದು ದೇಶದ ಸಾಂಸ್ಕøತಿ ಪರಂಪರೆಯನ್ನು ಬಿಂಬಿಸುವ ವಿಧವಾಗಿ ಚಿಹ್ನೆಗಳನ್ನು ಅಳವಡಿಸಿದ್ದಾರೆ. ನೋಟುಗಳ ರದ್ಧತಿಯ ನಂತರ ಆರ್ಥಿಕ ರಂಗದಲ್ಲಿ ನಗದು ಕೊರತೆಯಿಂದಾಗಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿತು.

ಬೆಂಗಳೂರು ಕೋಟೆಯ ಹೆಬ್ಬಾಗಿಲಿಗೆ ಗರ್ಭಿಣಿ ಸ್ತ್ರೀ ಬಲಿಯಾದ ಕಾರಣವೇನು?ಬೆಂಗಳೂರು ಕೋಟೆಯ ಹೆಬ್ಬಾಗಿಲಿಗೆ ಗರ್ಭಿಣಿ ಸ್ತ್ರೀ ಬಲಿಯಾದ ಕಾರಣವೇನು?

ಹೊಸದಾಗಿ 500 ಹಾಗು 2000 ರೂಪಾಯಿಗಳ ನೋಟನ್ನು ಚಲಾವಣೆಗೆ ತರುವುದಕ್ಕೋಸ್ಕರ ಕಡಿಮೆ ಕರೆನ್ಸಿ ಸಮಸ್ಯೆ ಹೆಚ್ಚಾಗ ತೊಡಗಿತು. ಅಂದರೆ 100 ರೂಪಾಯಿಗಳ ನೋಟಿಗೆ ಅತ್ಯಂತ ಬೇಡಿಕೆಉಂಟಾಯಿತು. ಹೀಗಾಗಿ 200 ರೂಪಾಯಿಯಿಂದಾಗಿ ಕೆಲವು ನಗದು ಕೊರತೆ ಕಡಿಮೆ ಆಗಬಹುದು ಎಂಬ ಉದ್ದೇಶದಿಂದ ಪ್ರಸ್ತುತ ಈ ನೋಟನ್ನು ಹೊಸ ವಿನ್ಯಾಸಗೊಳಿಸಿದ್ದಾರೆ. ಹಾಗೆಯೇ ಈ ನೋಟಿನ ಹಿಂದೆ ಸಾಂಚಿ ಸ್ತೂಪವಿದೆ. ಆ ಸಾಂಚಿ ಸ್ತೂಪದ ವಿಶಿಷ್ಟತೆಯ ಬಗ್ಗೆ ಲೇಖನದಲ್ಲಿ ತಿಳಿದುಕೊಳ್ಳೊಣ.

ಎಲ್ಲಿದೆ?

ಎಲ್ಲಿದೆ?

ಸಾಂಚಿ ಭಾರತದ ದೇಶದಲ್ಲಿನ ಮಧ್ಯ ಪ್ರದೇಶ ರಾಜ್ಯದ ರಾಯ್‍ಸೇನ್ ಜಿಲ್ಲೆಯಲ್ಲಿನ ಒಂದು ಚಿಕ್ಕ ಗ್ರಾಮದಲ್ಲಿದೆ. ಇದು ಭೊಪಾಲಗೆ ಈಶಾನ್ಯ ಮಾರ್ಗದಿಂದ ಸುಮಾರು 46 ಕಿ.ಮೀ ದೂರದಲ್ಲಿದೆ. ಹಾಗೆಯೇ ಮಧ್ಯ ಪ್ರದೇಶ ರಾಜ್ಯದ ಮಧ್ಯದ ಪ್ರಾಂತ್ಯದ ಬೆಸ್‍ನಗರ ಮತ್ತು ವಿದಿಷಾಲಕ್ಕೆ ಸುಮಾರು 10 ಕಿ.ಮೀ ದೂರದಲ್ಲಿ ಸಾಂಚಿ ಸ್ತೂಪವಿದೆ.

ಬೌದ್ಧ ಯಾತ್ರಿಕರ ಮುಖ್ಯವಾದ ಸ್ಥಳ

ಬೌದ್ಧ ಯಾತ್ರಿಕರ ಮುಖ್ಯವಾದ ಸ್ಥಳ

ಇದು ಬಿ.ಸಿ.ಇ 3 ನೇ ಶತಮಾನದಲ್ಲಿ ಸಿ.ಇ 12 ನೇ ಶತಮಾನಕ್ಕೆ ಸೇರಿದ ಬೌದ್ಧ ಸ್ಥೂಪಗಳಿಗೆ ಇದು ನಿಲಯ. ಇದು ಬೌದ್ಧ ಯಾತ್ರಿಕರ ಮುಖ್ಯವಾದ ಸ್ಥಳಗಳಲ್ಲಿ ಇದೂ ಕೂಡ ಒಂದು. ಇಲ್ಲಿನ ಸ್ತೂಪದ ಸುತ್ತ ಇರುವ ತೋರಣಗಳು, ಪ್ರೇಮ, ಶಾಂತಿ, ವಿಶ್ವಾಸ, ಸಾಹಸಗಳಿಗೆ ನಿರ್ದಶನವಾಗಿವೆ.

ಮಹಾ ಸ್ತೂಪ

ಮಹಾ ಸ್ತೂಪ

ಸಾಂಚಿಯಲ್ಲಿನ ಮಹಾ ಸ್ತೂಪವು 3 ನೇ ಶತಮಾನಕ್ಕೆ ಸೇರಿದ ಚಕ್ರವರ್ತಿ ಆಶೋಕ ಸ್ಥಾಪನೆ ಮಾಡಿದನು. ಇದರ ಕೇಂದ್ರ ಭಾಗದಲ್ಲಿ ಅರ್ಥಗೋಳಾಕಾರದ ಇಟ್ಟಿಗೆಗಳಲ್ಲಿ ನಿರ್ಮಾಣ ಮಾಡಿದ ಕಟ್ಟಡವಾಗಿದೆ. ಈ ಕಟ್ಟಡದಲ್ಲಿ ಬುದ್ಧನ ಅಸ್ತಿಕವನ್ನು ಇಟ್ಟಿದ್ದಾರೆ. ಇದರ ಮೇಲಿನ ಭಾಗದಲ್ಲಿ ಅತ್ಯಂತ ಸುಂದರವಾದ ನಿರ್ಮಾಣವನ್ನು ಕಾಣಬಹುದು. ಇದೊಂದು ಅತ್ಯುನ್ನತ ಶ್ರೇಣಿ ನಮೂನೆಯ ಹಾಗೆ ಕಾಣುತ್ತದೆ. ಇದು ಬುದ್ಧನ ಅಸ್ತಿಕಗಳಿಗೆ ಗೌರವವನ್ನು ನೀಡುವ ಉದ್ದೇಶದಿಂದ ನಿರ್ಮಾಣ ಮಾಡಿದ್ದಾರೆ.

ಸಾಂಚಿ ಎಂದರೆ ಏನು?

ಸಾಂಚಿ ಎಂದರೆ ಏನು?

ಸಾಂಚಿ ಬಹುಶಃ ಸಂಸ್ಕøತ ಮತ್ತು ಪಾಳಿ ಪದವಾದ ಸಾಂಚ್ ಎಂಬುದರಿಂದ ಹುಟ್ಟಿದೆ ಎನ್ನಲಾಗಿದೆ. ಇದರ ಅರ್ಥ ಅಳತೆ ಎಂಬುದೇ ಆಗಿದೆ. ಆದರೆ ಹಿಂದಿಯಲ್ಲಿ ಸಾಂಚಿ ಅಥವಾ ಸಾಂಚ್ ಎಂದರೆ ಕಲ್ಲಿನಿಂದ ನಿರ್ಮಾಣ ಮಾಡಿದ ಸ್ಥಳ ಎಂಬುದೇ ಆಗಿದೆ.

ಸಂಗ ಕಾಲ

ಸಂಗ ಕಾಲ

ಈ ಸ್ತೂಪವನ್ನು 2 ನೇ ಶತಮಾನದಲ್ಲಿ ಕೆಲವು ದಾಳಿಕಾರರು ಧ್ವಂಸವನ್ನು ಮಾಡಿದರು. ಸಂಗ ಚಕ್ರವರ್ತಿಯಾದ ಪುಷ್ಯಮಿತ್ರ ಈ ಕೆಲಸವನ್ನು ಮಾಡಿರಬಹುದು ಎಂದು ಊಹಿಸಲಾಗಿದೆ. ಪುಷ್ಯ ಮಿತ್ರನು ಮೂಲ ಸ್ಥೂಪವನ್ನು ಧ್ವಂಸ ಮಾಡಿದ ನಂತರ ಆತನ ಕುಮಾರ ಅಗ್ನಿಮಿತ್ರನು ಅದನ್ನು ಪುನರ್ ನಿರ್ಮಾಣ ಮಾಡಿದನು ಎಂದು ನಂಬಲಾಗಿದೆ.

ಧರ್ಮ ಚಕ್ರ

ಧರ್ಮ ಚಕ್ರ

ಸಂಗ ವಂಶಿಸ್ಥರ ನಂತರ ಆಳ್ವಿಕೆಯ ಕಾಲದಲ್ಲಿ, ಈ ಸ್ತೂಪವನ್ನು ಕಲ್ಲಿನ ನಿರ್ಮಾಣ ಮಾಡಿ ಇನ್ನಷ್ಟು ವಿಸ್ತಾರ ಮಾಡಿದರು. ಗುಮ್ಮಟದ ಸ್ತೂಪದ ಮೇಲೆಭಾಗದಲ್ಲಿ ವಿಸ್ತಾರ ಮಾಡಿದರು. ಆ ಗುಮ್ಮಟವನ್ನು ಧರ್ಮಚಕ್ರವಾಗಿ ಪ್ರಸಿದ್ಧಿ ಹೊಂದಿತು. ಈ ಗೊಮ್ಮಟ ಒಂದು ದೊಡ್ಡ ವೃತ್ತಾಕಾರದ ವೇದಿಕೆಯ ಮೇಲೆ ಪ್ರದಕ್ಷಿಣೆಗಾಗಿ ಏರ್ಪಾಟು ಮಾಡಲಾಯಿತು.

ಶಾತವಾಹನರು

ಶಾತವಾಹನರು

ಭೂಮಿಗೆ ಸಮನಾಂತರವಾಗಿ 2 ಕಲ್ಲಿನ ದಾರಿಗಳಿವೆ. ಅಲ್ಲಿ ಸುಂದರವಾದ ಕಲ್ಲಿನ ಸ್ತಂಭಗಳನ್ನು ಕಾಣಬಹುದಾಗಿದೆ. ಹಾಗೆಯೇ ನಾಲ್ಕು ಭಾಗಗಳಲ್ಲಿಯೂ ನಾಲ್ಕು ದ್ವಾರಗಳನ್ನು ನಿರ್ಮಾಣ ಮಾಡಿದ್ದಾರೆ. ಇವು ಸಂಗ ವಂಶ ಆಳ್ವಿಕೆಯ ಕಾಲದಲ್ಲಿ ನಿರ್ಮಾಣ ಮಾಡಿರುವುದು ಎಂದು ಭಾವಿಸಲಾಗಿದೆ.

ಶಾತವಾಹನರ ಕಾಲ

ಶಾತವಾಹನರ ಕಾಲ

ಇಲ್ಲಿ ಕಲ್ಲಿನ ಸ್ತಂಭಗಳನ್ನು ಬಿ.ಸಿ.ಇ 70 ರಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹಾಗು ಶಾತವಾಹನ ನಿರ್ಮಾಣ ಮಾಡಿದನು ಎಂದು ನಂಬಲಾಗಿದೆ. ಮುಖ್ಯವಾಗಿ ಇಲ್ಲಿನ ಶಿಲ್ಪಗಳು ಅತ್ಯಂತ ಸುಂದರವಾಗಿದ್ದು, ಸೂಕ್ಷ್ಮವಾದ ಕೆತ್ತನೆಗಳಿಂದ ಅಲಂಕೃತಗೊಂಡಿದೆ.

ಬೌದ್ಧ ಸಂಪ್ರದಾಯ

ಬೌದ್ಧ ಸಂಪ್ರದಾಯ

ಅವುಗಳು ಬೌದ್ಧ ಜೀವನದ ಘಟನೆಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಬುದ್ಧ ಜೀವನ ಚರಿತ್ರೆಯು ಸುಲಭವಾಗಿ ಇಲ್ಲಿ ಅರ್ಥ ಮಾಡಿಕೊಳ್ಳಬಹುದು. ಮುಖ್ಯವಾಗಿ ಬೌದ್ಧ ಸಂಪ್ರದಾಯದಿಂದ ಏನು? ಉಪಯೋಗಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

ಧನಸಹಾಯ

ಧನಸಹಾಯ

ಸಾಂಚಿ ಸ್ತೂಪ ನಿರ್ಮಾಣಕ್ಕೆ ಹಲವಾರು ಕಡೆಯಿಂದ ಧನಸಹಾಯ ಬಂದವಂತೆ. ಸ್ತೂಪಕ್ಕೆ ಆಧ್ಯಾತ್ಮಿಕವಾದ ಸ್ಫೂರ್ತಿ ದೊರೆಯಬೇಕು ಎಂಬ ಉದ್ದೇಶದಿಂದ ಭಕ್ತರು, ಸ್ತ್ರೀ, ಪುರುಷರು ಒಂದು ಶಿಲ್ಪಕ್ಕೆ ಬೇಕಾಗುವಷ್ಟು ಹಣವನ್ನು ನೀಡಿ ಶಿಲ್ಪಗಳ ಮೇಲೆ ತಮ್ಮ ಹೆಸರನ್ನು ಬರೆಸಿಕೊಳ್ಳುತ್ತಿದ್ದರಂತೆ. ಬುದ್ಧನ ಜೀವನದಲ್ಲಿ ಯಾವ ದೃಶ್ಯ ಅವರಿಗೆ ಇಷ್ಟವೂ ಆ ದೃಶ್ಯದ ಶಿಲ್ಪಕ್ಕೆ ಹಣವನ್ನು ಪಾವತಿಸುತ್ತಿದ್ದರಂತೆ.

 ಶಿಲ್ಪಿಗಳು

ಶಿಲ್ಪಿಗಳು

ಹೀಗಾಗಿಯೇ ಸ್ತೂಪದ ಮೇಲೆ ಒಂದು ಪ್ರತ್ಯೇಕವಾದ ಬುದ್ಧನ ಶಿಲ್ಪಗಳನ್ನು ಕಾಣಬಹುದಾಗಿದೆ. ಈ ಕಲ್ಲಿನ ಶಿಲ್ಪಗಳು ಬುದ್ಧನಿಗೆ ಕೇವಲ ಮಾನವನಾಗಿ ಚಿತ್ರಿಸಿಲ್ಲ ಬದಲಾಗಿ ಶಿಲ್ಪಿಗಳು ಬುದ್ಧನಿಗೆ ಕೆಲವು ಲಕ್ಷಣಗಳನ್ನು ಕೂಡ ಕೊಟ್ಟು ಕೆತ್ತನೆ ಮಾಡಿದ್ದಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ಸಾಂಚಿ ಸ್ತೂಪಕ್ಕೆ ಭೇಟಿ ನೀಡಲು ಸುಮಾರು 1161 ಕಿ.ಮೀ ದೂರದಲ್ಲಿದೆ. ಸುಮಾರು 25 ಗಂಟೆ ತೆಗೆದುಕೊಳ್ಳುತ್ತದೆ.

ಸಮೀಪದ ವಿಮಾನ ಮಾರ್ಗ: ರಾಜ್ ಭೋಜ ಏರ್‍ಫೋರ್ಟ್ ಸಾಂಚಿ ಸ್ತೂಪಕ್ಕೆ ಅತ್ಯಂತ ಸಮೀಪದ ವಿಮಾನ ನಿಲ್ದಾಣವಾಗಿದೆ.

ಸಮೀಪದ ರೈಲ್ವೆ ಮಾರ್ಗ: ಸಾಂಚಿ ಸ್ತೂಪಕ್ಕೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ವಿಧಿಷಾ ಮತ್ತು ಭೂಪಾಲ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X