Search
  • Follow NativePlanet
Share
» »ವರ್ಷದಲ್ಲಿ ಕೇವಲ 5 ದಿನ ಮಾತ್ರ ತೆರೆದಿರುತ್ತೆ ಈ ಶಿವಾಲಯ

ವರ್ಷದಲ್ಲಿ ಕೇವಲ 5 ದಿನ ಮಾತ್ರ ತೆರೆದಿರುತ್ತೆ ಈ ಶಿವಾಲಯ

ಶ್ರೀಶೈಲಂ ಸಮೀಪದಲ್ಲಿ ಒಂದು ವಿಶೇಷ ಗುಹಾ ದೇವಾಲಯವಿದೆ. ಇದು ವರ್ಷದಲ್ಲಿ ಬರೀ 3-5 ದಿನಗಳಷ್ಟೇ ತೆರೆದಿರುತ್ತದೆ. ಅದೂ ಕೂಡಾ ವಿಶೇಷ ಸಂದರ್ಭದಲ್ಲಷ್ಟೇ ತೆರೆದಿರುವುದು. ಆ ದೇವಸ್ಥಾನವೇ ಸಾಲೇಶ್ವರಂ ಗುಹಾದೇವಾಲಯ. ಶಿವನಿಗೆ ಸಮರ್ಪಿತವಾದ ಈ ದೇವಾಲಯವು ಕಾಡಿನ ಮಧ್ಯದಲ್ಲಿದೆ.

ಅಪ್ಸರೆಯರು ಈ ಕೊಳದಲ್ಲಿ ಸ್ನಾನ ಮಾಡ್ತಿದ್ದರಂತೆ... ಅಪ್ಸರೆಯರು ಈ ಕೊಳದಲ್ಲಿ ಸ್ನಾನ ಮಾಡ್ತಿದ್ದರಂತೆ...

ಸಾಲೇಶ್ವರಂ ಗುಹಾ ದೇವಾಲಯ

ಸಾಲೇಶ್ವರಂ ಗುಹಾ ದೇವಾಲಯ

PC: youtube

ಶ್ರೀ ಶೈಲಂನಿಂದ 60ಕಿ.ಮೀ ದೂರದಲ್ಲಿರುವ ಸಾಲೇಶ್ವರಂ ಗುಹಾ ದೇವಾಲಯವು 6 ಹಾಗೂ 7 ನೇ ಶತಮಾನಕ್ಕೆ ಸಂಬಂಧಿಸಿದ್ದು. ಚೈತ್ರ ಪೂರ್ಣಿಮಾದ ಉತ್ಸವದ ಸಮಯದಲ್ಲಿ ಕೇವಲ 3-5 ದಿನಗಳ ಕಾಲ ಮಾತ್ರ ತೆರೆದಿರುತ್ತದೆ.

ನಲ್ಲಮಲ ಬೆಟ್ಟಗಳು

ನಲ್ಲಮಲ ಬೆಟ್ಟಗಳು

PC: youtube

ನಲ್ಲಮಲ ಶ್ರೇಣಿಯಲ್ಲಿನ ಹಲವಾರು ಕಣಿವೆಗಳು, ಇದು ಕೃಷ್ಣ ನದಿಯ ದಕ್ಷಿಣಕ್ಕೆ ಹರಿಯುತ್ತದೆ. ಈ ನಲ್ಲಮಲ ಬೆಟ್ಟಗಳು ಕರ್ನೂಲ್, ನೆಲ್ಲೂರು, ಗುಂಟೂರು, ಪ್ರಕಾಶಂ, ಕುಡಾಪಾ ಮತ್ತು ಚಿತ್ತೂರು ಜಿಲ್ಲೆಗಳಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ಮಹಬೂಬ್‌ನಗರ, ನಲ್ಗೊಂಡ ಜಿಲ್ಲೆಗಳಿಂದ ವಿಸ್ತರಿಸಿರುವ ಪೂರ್ವ ಘಟ್ಟಗಳ ಭಾಗವಾಗಿದೆ.

ಕಾಡುಪ್ರಾಣಿಗಳಿಂದ ಕೂಡಿದ ಕಾಡು

ಕಾಡುಪ್ರಾಣಿಗಳಿಂದ ಕೂಡಿದ ಕಾಡು

PC: youtube

ಹಿಂದಿನ ಕಾಲದಲ್ಲಿ ಈ ನಲ್ಲಮಲ್ಲ ಕಾಡಿನ ದಾರಿಯನ್ನು ಭಕ್ತರು ಶ್ರೀ ಶೈಲಂಗೆ ಹೋಗಲು ಬಳಸುತ್ತಿದ್ದರು. ಈ ಕಾಡಿನಲ್ಲಿ ಅನೇಕ ಕಾಡುಪ್ರಾಣಿಗಳಿದ್ದವು, ಹುಲಿ, ಮಂಗ, ಹಾವು, ಜಿಂಕೆ, ಗೂಬೆ ಇತ್ಯಾದಿಗಳಿದ್ದವು. ಭಕ್ತರ ಓಡಾಟದಿಂದಾಗಿ ಈ ಕಾಡುಪ್ರಾಣಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು ಅರಣ್ಯ ಇಲಾಕೆಯು ಸಾಕಷ್ಟು ಶ್ರಮ ವಹಿಸಿದೆ.

ಲಿಂಗಮಯ್ಯ ಜಾತ್ರೆ

ಲಿಂಗಮಯ್ಯ ಜಾತ್ರೆ

PC: youtube

ಸಾಲೇಶ್ವರಂ ಲಿಂಗಮಯ್ಯ ದೇವಸ್ಥಾನ ನಲ್ಲಮಲ್ಲ ಕಾಡಿನಿಂದ ಸುಮಾರು 10 ಕಿ.ಮೀ ದೂರದಲ್ಲಿದ್ದು. ಇಲ್ಲೊಂದು ಜಲಪಾತವಿದೆ. ಈ ಜಲಪಾತದ ಪಕ್ಕಕ್ಕೆ ಗುಹೆಯೊಳಗೆ ಶಿವಲಿಂಗವಿದೆ. ಲಿಂಗಮಯ್ಯ ಜಾತ್ರೆಯು ಸಾಲೇಶ್ವರಂ ದೇವಸ್ಥಾನದಲ್ಲಿ ಎರಡು ವರ್ಷಕ್ಕೋಮ್ಮೆ ನಡೆಯುತ್ತದೆ. ಇದು ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತದೆ.

ಚಾರಣಕ್ಕೆ ಉತ್ತಮವಾದ ಸ್ಥಳ

ಚಾರಣಕ್ಕೆ ಉತ್ತಮವಾದ ಸ್ಥಳ

PC: youtube

ಆಂಧ್ರಪ್ರದೇಶದ ಚಾರಣ ಪ್ರೀಯರಿಗೆ ಬಹಳ ಇಷ್ಟವಾದ ಸ್ಥಳ ಇದಾಗಿದೆ. ಜನರು ಕೇವಲ ಈ ಸಂದರ್ಭದಲ್ಲಷ್ಟೇ ಈ ಸ್ಥಳಕ್ಕೆ ಭೇಟಿ ನೀಡಬಹುದು. ಬೇರೆ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವುದಾದರೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು.

300ಫೀಟ್ ಎತ್ತರದಿಂದ ಧುಮ್ಮಿಕ್ಕುವ ಜಲಪಾತ

300ಫೀಟ್ ಎತ್ತರದಿಂದ ಧುಮ್ಮಿಕ್ಕುವ ಜಲಪಾತ

PC: wikipedia

ಈ ದೇವಸ್ಥಾನ ತಲುಪಲು 4 ಕಿ.ಮೀ ಪಾದಯಾತ್ರೆ ಮಾಡಬೇಕು. 300ಫೀಟ್ ಎತ್ತರದಿಂದ ನೀರು ಹರಿಯುತ್ತದೆ. ಭಕ್ತರು ಮೊದಲು ಈ ನೀರಿನಲ್ಲಿ ಸ್ನಾನಮಾಡಿ ನಂತರ ದೇವಸ್ಥಾನವನ್ನು ತಲುಪಲು ಬೆಟ್ಟ ಹತ್ತಲು ಪ್ರಾರಂಭಿಸುತ್ತಾರೆ. ಗುಹೆಯೊಳಗೆ ದೊಡ್ಡ ಬಂಡೆಗಳ ನಡುವೆ ಇರುವ ಈ ದೇವಸ್ಥಾನದೊಳಕ್ಕೆ ಹೋಗಬೇಕಾದರೆ ಭಕ್ತರು ಸರದಿಯಲ್ಲಿ ಬರಬೇಕು.

Read more about: india temple andhra pradesh travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X