Search
  • Follow NativePlanet
Share
» »ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !

ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !

ಸಾಮಾನ್ಯವಾಗಿ ಪುರುಷ ಅಥವಾ ಸ್ತ್ರೀಯರು ಮದುವೆಯ ವಯಸ್ಸಿಗೆ ಬಂದಾಗ ನೂರೆಂಟು ಕನಸುಗಳನ್ನು ಕಾಣುತ್ತಾರೆ. ಮದುವೆಯ ಬಗ್ಗೆ ಪ್ರತಿಯೊಬ್ಬರು ತಮ್ಮದೆ ಆದ ಇಚ್ಛೆಗಳನ್ನು ಹೊಂದಿದ್ದು ತಮಗೆ ತಮ್ಮ ವ್ಯಕ್ತಿತ್ವಕ್ಕೆ ಹೋಲುವ ವ್ಯಕ್ತಿಯೇ ಸಿಗಬೇಕು. ಅವರೊಂದಿಗೆ ಬಾಳ್ವೆ ನಡೆಸಬೇಕು ಎಂದನ್ನುಕೊಳ್ಳುವುದು ಸಹಜ.

ಇಷ್ಟಾರ್ಥ ಸಿದ್ಧಿ

ಇಷ್ಟಾರ್ಥ ಸಿದ್ಧಿ

ಆದರೆ ಅವರಿಗೆ ಇಷ್ಟವಾದ ವ್ಯಕ್ತಿಯ ಜೊತೆ ವಿವಾಹ ನಡೆಯುವುದು ಕೇವಲ ಕೇಲವೆ ಕೆಲವು ಜನರಿಗೆ ಮಾತ್ರ. ಹೀಗಂತ ಚಿಂತಿಸಬೇಕಾಗಿಲ್ಲ. ನೀವು ಯಾವ ರೀತಿಯ ವರ ಅಥವಾ ಕನ್ಯೆಯನ್ನು ಬಯಸುತ್ತಿರೋ ಅದೆ ರೀತಿಯ ವರದಾನ ಪಾಲಿಸುವ ಶಿವ ದೇವಾಲಯವೊಂದಿದೆ.

ಶಕ್ತಿವನೇಶ್ವರ ಕ್ಷೇತ್ರ

ಶಕ್ತಿವನೇಶ್ವರ ಕ್ಷೇತ್ರ

PC:Rsmn

ಈ ದೇವಾಲಯವನ್ನು ಶಕ್ತಿವನೇಶ್ವರ ಕ್ಷೇತ್ರವೆಂದು ಕರೆಯುತ್ತಾರೆ. ಇಲ್ಲಿ ನೀವು ಭೇಟಿ ನೀಡಿ ಶಿವನನ್ನು ಅತ್ಯಂತ ಭಕ್ತಿ ಹಾಗೂ ನಂಬಿಕೆಯಿಂದ ಪ್ರಾರ್ಥಿಸಿದರೆ ನಿಮ್ಮ ಇಷ್ಟಾರ್ಥಕ್ಕೆ ತಕ್ಕುದಾದ ವರ ಅಥವಾ ಕನ್ಯೆಯು ದೊರಕುತ್ತಾಳೆಂಬ ನಂಬಿಕೆಯಿದೆ. ಏಕೆಂದರೆ ಅದೆಷ್ಟೊ ಜನರು ಇಲ್ಲಿಗೆ ಬಂದು ತಾವು ಬಯಸಿದಂತಹ ಜೀವನಸಂಗಾತಿಯನ್ನು ಪಡೆದಿರುವ ಉದಾಹರಣೆಗಳಿವೆ.

ಪಿತೃಪಕ್ಷದಂದು ಇಲ್ಲಿ ಪಿಂಡದಾನ ಮಾಡಿದ್ರೆ ಆತ್ಮಕ್ಕೆ ಶಾಂತಿ ಸಿಗುತ್ತಂತೆಪಿತೃಪಕ್ಷದಂದು ಇಲ್ಲಿ ಪಿಂಡದಾನ ಮಾಡಿದ್ರೆ ಆತ್ಮಕ್ಕೆ ಶಾಂತಿ ಸಿಗುತ್ತಂತೆ

ಶ್ರದ್ಧಾ ಭಕ್ತಿಯಿಂದ ಬೇಡಿ

ಶ್ರದ್ಧಾ ಭಕ್ತಿಯಿಂದ ಬೇಡಿ

PC: Sridharp

ಹಾಗಂತ ಇಲ್ಲಿ ಬಂದವರಿಗೆ ಎಲ್ಲರಿಗೂ ತಮ್ಮ ಇಷ್ಟ ಈಡೇರಿದೆ ಎಂದು ಹೇಳಲಾಗುವುದಿಲ್ಲ. ಯಾರು ಶ್ರದ್ಧಾ ಭಕ್ತಿಯಿಂದ ಇಲ್ಲಿ ಬಂದು ಪ್ರಾರ್ಥಿಸುತ್ತಾರೋ ಅವರ ಬೇಡಿಕೆ ಮಾತ್ರ ಈಡೇರುತ್ತದೆ. ಕಾಟಾಚಾರಕ್ಕೆ ಬಂದವರ ಬೇಡಿಕೆ ಈಡೇರುವುದಿಲ್ಲ.

ಮದುವೆ ವಯಸ್ಸಿನವರೇ ಜಾಸ್ತಿ ಬರುತ್ತಾರೆ

ಮದುವೆ ವಯಸ್ಸಿನವರೇ ಜಾಸ್ತಿ ಬರುತ್ತಾರೆ

ಹಾಗಾಗಿ ಈ ಒಂದು ದೇವಾಲಯಕ್ಕೆ ಹಿರಿಯರಿಗಿಂತಲೂ ಮದುವೆಯ ವಯಸ್ಸಿನ ಯುವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದನ್ನು ಶಿವಕೊಳುಂದೀಶ್ವರರ್ ದೇವಾಲಯ ಎಂದು ಕರೆಯಲಾಗುತ್ತದೆ ಹಾಗೂ ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ತಿರುಶಕ್ತಿಮುಟ್ರಂ ಎಂಬ ಹಳ್ಳಿಯಲ್ಲಿ ಸ್ಥಿತವಿದೆ.

ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದುಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

ತಿರುಶಕ್ತಿಮುಟ್ರಂ

ತಿರುಶಕ್ತಿಮುಟ್ರಂ

PC: VasuVR

ತಿರುಶಕ್ತಿಮುಟ್ರಂ ಇನ್ನೊಂದು ಪ್ರಸಿದ್ಧ ಹಳ್ಳಿಯಾದ ಪಟ್ಟೀಶ್ವರಂ ಬಳಿಯಿದ್ದು ಕುಂಭಕೋಣಂನಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ಇನ್ನೂ ಈ ದೇವಾಲಯ ಈ ರೀತಿಯಾಗಿ ಜೀವನ ಸಂಗಾತಿಯನ್ನೆ ಕರುಣಿಸಲು ಕಾರಣವಾದರೂ ಏನು? ಇದರ ಹಿಂದಿರುವ ಮರ್ಮವಾದರೂ ಏನು? ಆದರೆ ಆ ರೀತಿ ಈ ಕ್ಷೇತ್ರ ಮಹಿಮೆ ಇರುವುದಕ್ಕೆ ಒಂದು ಸುಂದರವಾದ ಕಾರಣವೂ ಇದೆ.

ಪಾರ್ವತಿಯ ತಪಸ್ಸು

ಪಾರ್ವತಿಯ ತಪಸ್ಸು

PC:Rsmn

ಪಾರ್ವತಿಯು ಬೆಳೆಯುತ್ತ ದೊಡ್ಡವಳಾದ ನಂತರ ಶಿವನನ್ನು ಪತಿಯಾಗಿ ಪಡೆಯಬೇಕೆಂಬ ಸದುದ್ದೇಶದಿಂದ ಪಾರ್ವತಿಯು ಪ್ರಸ್ತುತ ದೇವಾಲಯವಿರುವ ಸ್ಥಳದಲ್ಲಿ ಘೋರ ತಪಸ್ಸನ್ನಾಚರಿಸುತ್ತಾಳೆ. ಒಂದೆ ಕಾಲಿನಲ್ಲಿ ನಿಂತು ತಪಸ್ಸನ್ನಾಚರಿಸಲು ಪ್ರಾರಂಭಿಸುತ್ತಾಳೆ. ಶಿವನನ್ನು ಪಡೆದೆ ತಿರುತ್ತೇನೆಂಬ ಇಚ್ಛೆ ಮಾತ್ರ ಸದೃಢವಾಗಿರುತ್ತದೆ.

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ಅಗ್ನಿಯ ರೂಪದಲ್ಲಿ ಶಿವ

ಅಗ್ನಿಯ ರೂಪದಲ್ಲಿ ಶಿವ

ಇದನ್ನು ಗಮನಿಸಿದ ಶಿವ ಕೊನೆಗೆ ಅವಳಿಂದ ಪ್ರಸನ್ನನಾಗುತ್ತಾನೆ. ಆದರೂ ಅವಳನ್ನು ಪರೀಕ್ಷಿಸುವ ದೃಷ್ಟಿಯಿಂದ ಬೇಗನೆ ಪ್ರತ್ಯಕ್ಷನಾಗುವುದಿಲ್ಲ. ಕೊನೆಗೆ ಶಿವನು ಅಗ್ನಿಯ ರೂಪದಲ್ಲಿ ದರ್ಶನ ಕೊಡುತ್ತಾನೆ. ಶಿವನ ಈ ರೂಪವನ್ನು ನೋಡಿದ ಪಾರ್ವತಿ ಕೊಂಚವೂ ಹೆದರದೆ ಆ ಅಗ್ನಿಯನ್ನೆ ತಬ್ಬಿಕೊಳ್ಳುತ್ತಾಳೆ.

ಶಿವ-ಪಾರ್ವತಿ

ಶಿವ-ಪಾರ್ವತಿ

ಆಗ ಶಿವನು ತನ್ನ ನೈಜ ರೂಪದಲ್ಲಿ ಬಂದು ಆಕೆಯನ್ನು ವಿವಾಹವಾಗುತ್ತಾನೆ. ಈ ರೀತಿಯಾಗಿ ಪಾರ್ವತಿಯು ತನಗೆ ಬೇಕಾಗಿದ್ದ ಶಿವನನ್ನೇ ಗಂಡನನ್ನಾಗಿ ಪಡೆಯುತ್ತಾಳೆ. ಆ ಕಾರಣದಿಂದಾಗಿ ಇಲ್ಲಿ ಯಾರೇ ಆಗಲಿ ತಮಗೆ ಬೇಕಾದಂತಹ ಜೀವನಸಂಗಾತಿಯನ್ನು ಬೇಡುತ್ತಾರೋ ಅವರಿಗೆ ಅದೆ ರೀತಿಯ ಫಲ ಸಿಗುತ್ತದೆ ಎಂಬ ನಂಬಿಕೆ.

ಶಿವಲಿಂಗ

ಶಿವಲಿಂಗ

ಈ ಶಿವನ ದೇವಾಲಯದಲ್ಲಿ ಶಿವಲಿಂಗವೂ ಸಹ ಈ ಕಥೆಗೆ ಪೂರಕವಾಗಿರುವಂತೆ ಕಂಡುಬರುತ್ತದೆ. ಅಂದರೆ ಇಲ್ಲಿರುವ ಶಿವಲಿಂಗವನ್ನು ಪಾರ್ವತಿಯು ಗಟ್ಟಿಯಾಗಿ ತಬ್ಬಿಕೊಂಡಿರುವುದನ್ನು ನೋಡಬಹುದು. ಹಾಗಾಗಿ ಈ ದೇವಾಲಯ ಸಾಕಷ್ಟು ಮಹತ್ವ ಪಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X