Search
  • Follow NativePlanet
Share
» »ನದಿಯಲ್ಲಿ ಮುಳುಗಿರುವ ಕ್ಷೇತ್ರ: ಸಹಸ್ರ ಲಿಂಗ...ಸಂದರ್ಶನದಿಂದ ಸಂತಾನ ಸೌಭಾಗ್ಯ...

ನದಿಯಲ್ಲಿ ಮುಳುಗಿರುವ ಕ್ಷೇತ್ರ: ಸಹಸ್ರ ಲಿಂಗ...ಸಂದರ್ಶನದಿಂದ ಸಂತಾನ ಸೌಭಾಗ್ಯ...

ಪರಮಶಿವನು ನಿರಾಕಾರನು, ನಿರಾಡಂಬರನು, ಲಿಂಗಕಾರದಲ್ಲಿ ದರ್ಶನವನ್ನು ನೀಡುವ ಆದಿಭೀಕ್ಷುವು. ಆತನು ಏಕಾಂತ ಪ್ರದೇಶದಲ್ಲಿ ನೆಲೆಸಲು ಇಷ್ಟಪಡುತ್ತಾನೆ. ಹಾಗಾಗಿಯೇ ನಮ್ಮ ದೇಶದಲ್ಲಿ ಅನೇಕ ಶೈವಕ್ಷೇತ್ರಗಳು ಪ್ರಶಾಂತವಾದ ವಾತಾರಣದಲ್ಲಿ ಇವೆ. ಇಂಥಹ ವಿಷಯ

By Sowmyabhai

ಪರಮಶಿವನು ನಿರಾಕಾರನು, ನಿರಾಡಂಬರನು, ಲಿಂಗಕಾರದಲ್ಲಿ ದರ್ಶನವನ್ನು ನೀಡುವ ಆದಿಭೀಕ್ಷುವು. ಆತನು ಏಕಾಂತ ಪ್ರದೇಶದಲ್ಲಿ ನೆಲೆಸಲು ಇಷ್ಟಪಡುತ್ತಾನೆ. ಹಾಗಾಗಿಯೇ ನಮ್ಮ ದೇಶದಲ್ಲಿ ಅನೇಕ ಶೈವಕ್ಷೇತ್ರಗಳು ಪ್ರಶಾಂತವಾದ ವಾತಾರಣದಲ್ಲಿ ಇವೆ. ಇಂಥಹ ವಿಷಯಕ್ಕೆ ಸಂಬಂಧಿಸಿದ ಸ್ಥಳವೇ ಸಹಸ್ರಲಿಂಗ ಕ್ಷೇತ್ರವು ಕೂಡ ಒಂದು. ಕರ್ನಾಟಕದಲ್ಲಿನ ಉತ್ತರ ಕನ್ನಡ ಜಿಲ್ಲೆಯಲ್ಲಿನ ಶಿರಸಿ ಪಟ್ಟಣಕ್ಕೆ 17 ಕಿ.ಮೀ ದೂರದಲ್ಲಿ ಈ ಸಹಸ್ರ ಲಿಂಗಗಳ ಮಹಾಕ್ಷೇತ್ರವಿದೆ.

ಈ ಕ್ಷೇತ್ರವನ್ನು ಸಂದರ್ಶಿಸಿದರೆ ಸಂತಾನ ಇಲ್ಲದೆ ಇರುವವರಿಗೆ ಸಂತಾನವಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಈ ಕ್ಷೇತ್ರದಲ್ಲಿನ ಶಿವಲಿಂಗವನ್ನು ದರ್ಶಿಸಲು ಯಾವಾಗಲೂ ಅವಕಾಶವಿರುವುದಿಲ್ಲ. ಕೇವಲ ನದಿಯ ನೀರಿನ ಮಟ್ಟವು ಕಡಿಮೆಯಾದ ಮೇಲೆಯೇ ನಾವು ಈ ಕ್ಷೇತ್ರವನ್ನು ಸಂದರ್ಶಿಸಬಹುದು. ಇದಕ್ಕೆ ಸಂಬಂಧಿಸಿದ ವಿಷಯವನ್ನು ಲೇಖನದ ಮೂಲಕ ತಿಳಿದುಕೊಳ್ಳೊಣ.

1.ನದಿಯೇ ಕ್ಷೇತ್ರವಾಗಿದೆ

1.ನದಿಯೇ ಕ್ಷೇತ್ರವಾಗಿದೆ

PC:YOUTUBE

ಈ ಕ್ಷೇತ್ರದಲ್ಲಿ ನದಿಯೇ ದೇವಾಲಯವಾಗಿ ಮಾರ್ಪಾಟಾಗಿದೆ. ಅದೇ ಶಲ್ಮಲ ನದಿ. ಹೆಸರಿಗೆ ತಕ್ಕಂತೆಯೇ ಸುಂದರವಾದ ಸಂಗೀತ ನಾದವನ್ನು ಮಾಡುತ್ತಾ ಈ ನದಿಯು ಪ್ರವಹಿಸುತ್ತದೆ. ಗಂಗವಲ್ಲಿ ನದಿಗೆ ಉಪನದಿಯಾಗಿರುವ ಈ ನದಿಯಲ್ಲಿಯೇ ನಮ್ಮ ಪರಮಶಿವನು ನೆಲೆಸಿದ್ದಾನೆ. ಶಲ್ಮಲ ನದಿಯಲ್ಲಿ ಸಾವಿರ ಲಿಂಗಗಳು ದರ್ಶನವನ್ನು ನೀಡುತ್ತದೆ. ಹೆಸರಿಗೆ ಮಾತ್ರವೇ ಸಾವಿರ, ವಾಸ್ತವಕ್ಕೆ ಆ ನದಿಯಲ್ಲಿನ ಶಿವಲಿಂಗವನ್ನು ನಾವು ಲೆಕ್ಕ ಹಾಕಲು ಸಾಧ್ಯವಿಲ್ಲ.

2.ಔಷಧ ಮೂಲಿಕೆಗಳು

2.ಔಷಧ ಮೂಲಿಕೆಗಳು

PC:YOUTUBE

ನದಿಯ ನೀರಿನ ಮಟ್ಟವು ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಎಲ್ಲಾ ಶಿವಲಿಂಗಗಳು ಕಂಗೊಳಿಸುತ್ತವೆ. ಪ್ರತಿ ಶಿವಲಿಂಗಕ್ಕೆ ಅಭಿಮುಖವಾಗಿ ನಂದೀಶ್ವರುನು ಇರುತ್ತಾನೆ. ಶಿವರಾತ್ರಿಯ ಸಮಯದಲ್ಲಿ ಈ ಪ್ರದೇಶವು ಭಕ್ತರ ಜನಜಂಗುಳಿ ಅಧಿಕ ಸಂಖ್ಯೆಯಲ್ಲಿರುತ್ತದೆ. ಇನ್ನು ಈ ನದಿಯ ಸುತ್ತಲಿರುವ ಅರಣ್ಯದಲ್ಲಿ ಅಮೂಲ್ಯವಾದ ವನ ಔಷಧ ಮೂಲಿಕೆಗಳಿರುವುದರಿಂದ ಈ ನದಿಯಲ್ಲಿ ಸ್ನಾನವನ್ನು ಮಾಡಿದರೆ ಎಂಥಹ ರೋಗಗಳೇ ಆಗಲಿ ನಯವಾಗುತ್ತದೆ ಎಂದು ನಂಬಲಾಗಿದೆ.

3.ವಿಜಯನಗರ

3.ವಿಜಯನಗರ

PC:YOUTUBE

ವಿಜಯನಗರದ ಸಾಮ್ರಾಜ್ಯದ ರಾಜ ಸದಾಶಿವ ರಾಜ ಈ ಶಿರಸಿ ಪ್ರದೇಶವನ್ನು ಆಳಿದ್ದರಿಂದ ಸಹಸ್ರ ಲಿಂಗವನ್ನು ಇತನೇ ಸ್ಥಾಪಿಸಿದ್ದಾನೆ ಎಂದು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ. ವಿಜಯನಗರದ ರಾಜ ಸದಾಶಿವ ಈ ಸಹಸ್ರ ಲಿಂಗವನ್ನು 1678 ರಿಂದ 1718ರ ಮಧ್ಯೆಭಾಗದಲ್ಲಿ ಸ್ಥಾಪಿಸಿದ ಕಾರಣ, ಸಂತಾನ ಹಾಗೂ ರಾಜ್ಯದ ವಾರಸುದಾರನಿಗೋಸ್ಕರ ಇಲ್ಲಿನ ಶಲ್ಮಲ ನದಿಯ ಮೇಲೆ ಶಿವಲಿಂಗವನ್ನು ಸ್ಥಾಪಿಸಿದ್ದಾನೆ ಎಂದು ಕೆಲವರ ಅಭಿಪ್ರಾಯವಾಗಿದೆ.

4.ಭಕ್ತರು

4.ಭಕ್ತರು

PC:YOUTUBE

ಈ ನದಿಯಲ್ಲಿ ಎಲ್ಲಿ ನೋಡಿದರು ಶಿವಲಿಂಗವು ಅತ್ಯಂತ ರಮಣೀಯವಾಗಿ ಕಾಣುವುದರಿಂದ ಭಕ್ತಿಯು ಅವರಿಸುತ್ತದೆ. ಶಿವ ಭಕ್ತರಿಗೆ ಅತ್ಯಂತ ಸೂಕ್ತ ಸ್ಥಳವೆಂದರೆ ಶಿರಸಿಯಲ್ಲಿನ ಸಹಸ್ರ ಲಿಂಗ. ಇಲ್ಲಿ ಹಲವಾರು ಭಕ್ತರು ದಿನ ನಿತ್ಯ ಶಿವನ್ನು ಆರಾಧಿಸಲು ಹೋಗುತ್ತಿರುತ್ತಾರೆ. ಸಹಸ್ರ ಲಿಂಗ ಈ ನದಿಯಲ್ಲಿರುವುದರಿಂದ ಈ ಸುಂದರ ನದಿಯು ಒಂದು ಆಧ್ಯಾತ್ಮಿಕವಾದ ತಾಣವಾಗಿ ಪ್ರಖ್ಯಾತಿ ಪಡೆದ ಕ್ಷೇತ್ರವಾಗಿದೆ. ಇಂಥಹ ಸುಂದರವಾದ ವಾತಾವರಣದಲ್ಲಿ ಶಿವ ನಾಮ ಸ್ಮರಣೆ ಅತ್ಯಂತ ಭಕ್ತಿದಾಯಕವಾಗಿರುತ್ತದೆ.

5. ಸುಂದರ ಸಹಸ್ರ ಲಿಂಗಗಳು

5. ಸುಂದರ ಸಹಸ್ರ ಲಿಂಗಗಳು

PC:YOUTUBE

ಇಲ್ಲಿನ ವಿಶೇಷವೆನೆಂದರೆ ಪ್ರತಿ ಶಿವಲಿಂಗದ ಎದುರು ಮಹಾನಂದಿಯು ನೆಲೆಸಿರುತ್ತಾನೆ. ಇಲ್ಲಿ ಸಹಸ್ರ ಲಿಂಗವಿದ್ದು ಪ್ರತಿಯೊಂದು ಲಿಂಗಗಳ ಎದುರು ಕೂಡ ನಂದಿಯು ನೆಲೆಸಿರುವುದು ಮತ್ತಷ್ಟು ಸೊಬಗು ನೀಡಿದೆ. ಸುಂದರ ಸಹಸ್ರ ಲಿಂಗಗಳು ಮಳೆಗಾಲದಲ್ಲಿ ಅಷ್ಟು ಗೋಚಾರವಾಗುವುದಿಲ್ಲ. ಹಾಗಾಗಿ ಡಿಸೆಂಬರ್‍ನಿಂದ ಏಪ್ರಿಲ್ ತಿಂಗಳ ಮಧ್ಯೆ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಇಲ್ಲಿನ ಸಹಸ್ರ ಲಿಂಗಗಳು ಕಾಣುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X