Search
  • Follow NativePlanet
Share
» »ಗಂಗಾ ಸಾಗರದಲ್ಲಿ ಸ್ನಾನ ಮಾಡಿದ್ದೀರಾ?

ಗಂಗಾ ಸಾಗರದಲ್ಲಿ ಸ್ನಾನ ಮಾಡಿದ್ದೀರಾ?

ಈ ದ್ವೀಪವು ಹಿಂದೂ ಯಾತ್ರಾ ಸ್ಥಳವಾಗಿದೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಸಾವಿರಾರು ಹಿಂದೂಗಳು ಗಂಗಾ ನದಿ ಮತ್ತು ಬಂಗಾಳ ಕೊಲ್ಲಿಯ ಸಂಗಮದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ

ನೀವು ಗಂಗಾ ನದಿಯ ಬಗ್ಗೆ ಕೇಳಿರುವಿರಿ. ಆದರೆ ಗಂಗಾ ಸಾಗರದ ಬಗ್ಗೆ ಕೇಳಿದ್ದೀರಾ? ಗಂಗಾ ಸಾಗರ ಅನ್ನೋದು ಒಂದು ದ್ವೀಪ. ಇದನ್ನು ಸಾಗರ ದ್ವೀಪ ಎಂದೂ ಕರೆಯಲಾಗುತ್ತದೆ. ಈ ದ್ವೀಪವು ಹಿಂದೂ ಯಾತ್ರಾ ಸ್ಥಳವಾಗಿದೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಸಾವಿರಾರು ಹಿಂದೂಗಳು ಗಂಗಾ ನದಿ ಮತ್ತು ಬಂಗಾಳ ಕೊಲ್ಲಿಯ ಸಂಗಮದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ ನಂತರ ಕಪಿಲ ಮುನಿ ಆಶ್ರಮವಿರುವ ದೇವಾಲಯದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಪ್ರತಿ ವರ್ಷ ಮಕರ ಸಂಕ್ರಾತಿಯಂದು ಗಂಗಾಸಾಗರದಲ್ಲಿ ಮೇಳ ನಡೆಯುತ್ತದೆ.

ಐತಿಹಾಸಿಕ ಕಥೆಯ ಪ್ರಕಾರ

ಐತಿಹಾಸಿಕ ಕಥೆಯ ಪ್ರಕಾರ

ವಿಷ್ಣು ತನ್ನ ಮಗನಾಗಿ ಅವತಾರವೆತ್ತ ಬೇಕು ಎನ್ನುವ ಷರತ್ತಿನ ಮೇಲೆ ಕಾರ್ಡಮ್ ಮುನಿ ವೈವಾಹಿಕ ಜೀವನವನ್ನು ನಡೆಸುತ್ತಾನೆ. ಆ ಕಾರಣ ಕಪಿಲ್ ಮುನಿ ವಿಷ್ಣುವಿನ ಅವತಾರವಾಗಿ ಜನಿಸುತ್ತಾನೆ. ಮತ್ತು ಓರ್ವ ಮಹಾನ್ ಸಂತರಾಗುತ್ತಾರೆ. ಕಪಿಲ್ ಮುನಿಯವರ ಆಶ್ರಮವು ಗಂಗಾಸಾಗರ್ ದ್ವೀಪದಲ್ಲಿದೆ. ಒಂದು ದಿನ ಕಿಂಗ್ ಸಾಗರ್‌ರ ತ್ಯಾಗದ ಕುದುರೆ ಕಣ್ಮರೆಯಾಗುತ್ತದೆ. ಅದನ್ನು ಇಂದ್ರ ಕಳವು ಮಾಡಿರುತ್ತಾನೆ.

ರಾಜನ ಮಕ್ಕಳನ್ನು ಭಸ್ಮ ಮಾಡಿದ ಮುನಿ

ರಾಜನ ಮಕ್ಕಳನ್ನು ಭಸ್ಮ ಮಾಡಿದ ಮುನಿ

PC:Kaushik Saha

ಅರಸನು ತನ್ನ 60,000 ಗಂಡುಮಕ್ಕಳನ್ನು ಕುದುರೆಯನ್ನು ಹುಡುಕಿ ಬರಲು ಕಳುಹಿಸುತ್ತಾನೆ. ಕೊನೆಗೆ ಆ ಕುದುರೆಯುಕಪಿಲ ಮುನಿಯ ಆಶ್ರಮದ ಬಳಿ ಸಿಗುತ್ತದೆ. ಇಂದ್ರನು ಆ ಕುದುರೆಯನ್ನು ಮುನಿಯ ಆಶ್ರಮದ ಪಕ್ಕ ಬಚ್ಚಿಟ್ಟಿದ್ದ. ಹೀಗಾಗಿ ಕಪಿಲ ಮುನಿ ತಪ್ಪಿತಸ್ಥನೆಂದು ಆರೋಪಿಸಲಾಗುತ್ತದೆ. ಇದರಿಂದ ಕ್ರೋದಿತನಾದ ಕಪಿಲ ಮುನಿ ರಾಜನ ಮಕ್ಕಳನ್ನು ಭಸ್ಮ ಮಾಡಿ ನರಕಕ್ಕೆ ಕಳಿಸುತ್ತಾನೆ. ಕೊನೆಗೆ ರಾಜನು ಕಪಿಲ ಮುನಿಯಲ್ಲಿ ಕ್ಷಮೆ ಯಾಚಿಸಿ ತನ್ನ ಮಕ್ಕಳಿಗೆ ಮೋಕ್ಷ ನೀಡುವಂತೆ ಕೋರುತ್ತಾನೆ.

ಧರೆಗಿಳಿದ ಗಂಗೆ

ಧರೆಗಿಳಿದ ಗಂಗೆ

PC:Tarunsamanta
ರಾಜನ ವಂಶಸ್ಥರ ಪ್ರಾರ್ಥನೆಗೆ ಒಪ್ಪಿಕೊಂಡು ಪಾರ್ವತಿ ದೇವಿಯು ಗಂಗೆಯ ರೂಪದಲ್ಲಿ ಧರೆಗಿಳಿದು ಬಂದು ಕೊನೆಯ ಆಚರಣೆಗಳನ್ನು ನಡೆಸಬೇಕು ಎನ್ನುತ್ತಾರೆ. ಅಂತೆಯೇ ಶಿವನಲ್ಲಿ ಪ್ರಾರ್ಥನೆ ಮಾಡಿ ಗಂಗೆಯನ್ನು ಸ್ವರ್ಗದಿಂದ ಭೂ ಲೋಕಕ್ಕೆ ತರುವಂತೆ ಮಾಡುತ್ತಾರೆ. ಅವರ ಬೂದಿಯನ್ನು ಈ ಪವಿತ್ರ ನೀರಿನೊಂದಿಗೆ ಮಿಶ್ರ ಮಾಡಿ ತರ್ಪಣೆ ನೀಡಿದ ನಂತರ ಆ ರಾಜನ ಮಕ್ಕಳಿಗೆ ಮೋಕ್ಷ ಸಿಗುತ್ತದೆ. ಹೀಗೆ ಸ್ವರ್ಗದಿಂದ ಧರೆಗಿಳಿದ ಗಂಗೆ ಇಲ್ಲೇ ಉಳಿದುಕೊಂಡಳು.

ಅತ್ಯುತ್ತಮ ವಾರಾಂತ್ಯದ ತಾಣ

ಅತ್ಯುತ್ತಮ ವಾರಾಂತ್ಯದ ತಾಣ

ಸಾಗರದ್ವೀಪ ಪಶ್ಚಿಮ ಬಂಗಾಳದಲ್ಲಿದೆ. ಸುಂದರ್‌ಬನ್ ದ್ವೀಪದಲ್ಲಿ ನೆಲೆಗೊಂಡಿದ್ದ ತೀರ್ಥಯಾತ್ರೆ ಮತ್ತು ವಿನೋದವನ್ನು ಹೊಂದಿರುವ ಈ ಸುಂದರವಾದ ಗಮ್ಯಸ್ಥಾನವು ಸುಂದರವಾಗಿದೆ. ಸಾಗರದ್ವೀಪ ಕೊಲ್ಕತ್ತಾದಿಂದ ಅತ್ಯುತ್ತಮ ವಾರಾಂತ್ಯದ ಪ್ರವಾಸಿ ತಾಣವಾಗಿದೆ .

ಈ ಅಂಶಗಳನ್ನು ನೆನಪಿನಲ್ಲಿಡ ಬೇಕು

ಈ ಅಂಶಗಳನ್ನು ನೆನಪಿನಲ್ಲಿಡ ಬೇಕು

ಒಂದು ವೇಳೆ ನೀವು ಸಾಗರ ದ್ವೀಪಕ್ಕೆ ಭೇಟಿ ನೀಡಲು ಯೋಚಿಸುತ್ತಿದ್ದಲ್ಲಿಮೊದಲು ಈ ಕೆಳಗಿನ ಎಚ್ಚರಿಕೆಯ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳ ಬೇಕು. ಯಾವಾಗಲೂ ಹಾವು ಮತ್ತು ಸೊಳ್ಳೆ ನಿರೋಧಕಗಳನ್ನು ಒಯ್ಯಿರಿ. ಸಾಗರ ದ್ವೀಪದಲ್ಲಿ ಸಾಕಷ್ಟು ವಿದ್ಯುತ್ ಇರುವುದರಿಂದ ಎಲೆಕ್ಟ್ರಿಕ್ ಟಾರ್ಚ್ಸ್ ಅಥವಾ ಎಮರ್ಜೆನ್ಸಿ ಲೈಟ್ಸ್ ಅನ್ನು ಒಯ್ಯಬೇಕು. ಅಲ್ಲಿ ಕೇವಲ ಪ್ರತಿದಿನ ಸಂಜೆ 6 ಗಂಟೆಯಿಂದ 9 ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಾಗುತ್ತದೆ. ಇನ್ನು ಗಂಗಾ ಸಾಗರ ಮೇಳದ ದಿನದಂದು ಇಡೀ ದಿನ ವಿದ್ಯುತ್ ಪೂರೈಕೆ ಇರುತ್ತದೆ. ಹಾವು ಕಚ್ಚುವುದರಿಂದ ಹೆಚ್ಚು ಜಾಗರೂಕರಾಗಿರಬೇಕು. ಸಾಗರ್ ದ್ವೀಪದಲ್ಲಿ ಹಾವು ಕಡಿತದಿಂದ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಾಗರ ಗ್ರಾಮೀಣ ಆಸ್ಪತ್ರೆಯು ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಸಾಗರ್‌ದ್ವೀಪದಲ್ಲಿರುವ ಏಕೈಕ ಸ್ಥಳವಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Santanu Saha

ಇಂದು ವೇಳೆ ನೀವು ಸಾಗರ ದ್ವೀಪಕ್ಕೆ ಭೇಟಿ ನೀಡಲು ಯೋಚಿಸುತ್ತಿದ್ದಲ್ಲಿ ಮಕರ ಸಂಕ್ರಾಂತಿಯನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಹೋಗುವುದು ಸೂಕ್ತ. ಯಾಕೆಂದರೆ ಮಕರ ಸಂಕ್ರಾತಿ ಸಮಯದಲ್ಲಿ ಬಹಳ ಜನಜಂಗುಳಿಯಿಂದ ಕೂಡಿರುತ್ತದೆ. ನೀವು ಆರಾಮವಾಗಿ ಆ ತಾಣವನ್ನು ಅನ್ವೇಷಿಸಲು ಸಾಧ್ಯವಾಗೋದಿಲ್ಲ. ಒಂದು ವೇಳೆ ನೀವು ಮಕರ ಸಂಕ್ರಾಂತಿ ಸಮಯದಲ್ಲೇ ಅಲ್ಲಿಗೆ ಭೇಟಿ ನೀಡಿದರೆ ಸುಮಾರು 4 ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲಬೇಕು.

ತಲುಪುವುದು ಹೇಗೆ?

ವಿಮಾನದ ಮೂಲಕ: ಕೊಲ್ಕತ್ತಾದಿಂದ ಸಾಗರ್‌ದ್ವೀಪಕ್ಕೆ ವಿಮಾನಯಾನ ಲಭ್ಯತೆಯನ್ನು ಪರಿಶೀಲಿಸಿ. ಕೊಲ್ಕತ್ತಾದಿಂದ ಸಾಗರ್‌ದ್ವೀಪಕ್ಕೆ ನೇರ ವಿಮಾನಗಳು ಲಭ್ಯವಿದೆ. ಹಾರಾಟದ ಮೂಲಕ ಪ್ರಯಾಣ ಸುಮಾರು 1 ಗಂಟೆ ತೆಗೆದುಕೊಳ್ಳುತ್ತದೆ. ವಿಮಾನ ನಿಲ್ದಾಣದಿಂದ ಸಾಗರ್‌ದ್ವೀಪಕ್ಕೆ ಪ್ರಯಾಣಿಸಲು ಹಲವಾರು ಕ್ಯಾಬ್ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿವೆ. ಸಾಗರ್‌ದ್ವೀಪ ಸಮೀಪದ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೊಲ್ಕತಾ ವಿಮಾನ ನಿಲ್ದಾಣ. ಕೊಲ್ಕತಾ ವಿಮಾನ ನಿಲ್ದಾಣದಿಂದ ಸಾಗರ್‌ದ್ವೀಪ ಸುಮಾರು 108 ಕಿ.ಮೀ. ದೂರದಲ್ಲಿದೆ.

ರೈಲಿನ ಮೂಲಕ

ಕೊಲ್ಕತ್ತಾದಿಂದ ಸಾಗರ್‌ದ್ವೀಪ ತಲುಪಲು ರೈಲು ವೇಳಾಪಟ್ಟಿ ಮತ್ತು ಲಭ್ಯತೆ ಕಂಡುಕೊಳ್ಳಿ. ಕೊಲ್ಕತ್ತಾದಿಂದ ಸಾಗರ್‌ದ್ವೀಪಕ್ಕೆ ರೈಲಿನ ಮೂಲಕ ಸುಮಾರು 2 ಗಂಟೆಗಳ ಪ್ರಯಾಣವಿದೆ. ಹತ್ತಿರದ ರೈಲು ನಿಲ್ದಾಣವೆಂದರೆ ದುರ್ಗಾ ಚಕ್ ಟೌನ್. ಇದು ಕೋಲ್ಕತಾ ವಿಮಾನ ನಿಲ್ದಾಣದಿಂದ ಸುಮಾರು 37 ಕಿ.ಮೀ ದೂರದಲ್ಲಿದೆ. ಈ ಮಾರ್ಗವು ಬರ್ಡ್ಧಾಮನ್ ಜಂಕ್ಷನ್ , ಮಾಲ್ಡಾ ಟೌನ್ , ಕಿಶನ್ ಗಂಜ್ , ನ್ಯೂ ಜಲ್ಪೈಗುರಿ ಮೂಲಕ ಸಾಗುತ್ತದೆ.

ರಸ್ತೆ ಮೂಲಕ

ನೀವು ಕೊಲ್ಕತ್ತಾದಿಂದ ಸಾಗರ್‌ದ್ವೀಪಕ್ಕೆ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದೀರೆಂದಾದರೆ ಕಾರ್ ಬುಕ್ ಮಾಡುವುದು ಒಳ್ಳೆಯದು. ನೀವು ಫ್ಯಾಮಿಲಿ ಜೊತೆಗೆ ಹೋಗುತ್ತಿದ್ದೀರೆಂದಾದರೆ ಕಾರ್ ಅಥವಾ ಟ್ಯಾಕ್ಸಿ ಉತ್ತಮವಾಗಿದೆ. ಟೋಲ್‌ ಶುಲ್ಕವನ್ನು ನೀವು ನೀಡಬೇಕಾಗುತ್ತದೆ. ಇನ್ನು ನೀವು ಬಸ್‌ ಮೂಲಕ ಕೊಲ್ಕತ್ತಾದಿಂದ ಸಾಗರ ದ್ವೀಪಕ್ಕೆ ಪ್ರಯಾಣಿಸುವುದಾದರೆ ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಲಭ್ಯವಿದೆ. ಬಸ್‌ನಲ್ಲಿ ೨ ಗಂಟೆಗಳ ಸಮಯ ಹಿಡಿಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X