Search
  • Follow NativePlanet
Share
» »ಶೃಂಗಾರ ರಸ ಉಕ್ಕಿಸುವ ಅತ್ತೆ-ಸೊಸೆ ದೇವಾಲಯ!

ಶೃಂಗಾರ ರಸ ಉಕ್ಕಿಸುವ ಅತ್ತೆ-ಸೊಸೆ ದೇವಾಲಯ!

By Vijay

ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತವಾಗಿರುವ ಭಾರತ ದೇಶದಲ್ಲಿ ಇತಿಹಾಸದ ವೈಭವ ಸಾರುವ, ಶ್ರೀಮಂತ ಶಿಲ್ಪಕಲೆಯ ನೈಪುಣ್ಯತೆಯನ್ನು ಅನಾವರಣಗೊಳಿಸುವ ನೂರಾರು ರಚನೆಗಳನ್ನು ವಿವಿಧ ಸ್ಥಳಗಳಲ್ಲಿ ಕಾಣಬಹುದು. ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದವರೆಗೆ ಎಲ್ಲೆಡೆ ಹಲವಾರು ಐತಿಹಾಸಿಕ ಪ್ರವಾಸಿ ಆಕರ್ಷಣೆಗಳು ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬಳ್ಳಿಗಾವಿಯ ಶೃಂಗಾರ ಕಲೆ

ಅಷ್ಟಾಗಿಯೂ ಭಾರತದಲ್ಲಿ ಕೆಲವು ಚಿತ್ರ-ವಿಚಿತ್ರ ಹೆಸರುಗಳುಳ್ಳ, ಬೆರಗಾಗಿಸುವಂತಹ ಹಿನ್ನಿಲೆಗಳುಳ್ಳ ಅದೆಷ್ಟೊ ದೇವಾಲಯಗಳು, ರಚನೆಗಳು ಉಪಸ್ಥಿತವಿರುವುದನ್ನು ಅಲ್ಲಗಳೆಯುವಂತಿಲ್ಲ. ಇನ್ನೂ ಕಲತ್ಮಕವಾಗಿ ಭಾರತೀಯ ಶಿಲ್ಪಿಗಳು ಅಪಾರ ನಿಪುಣತೆಯನ್ನು ಹೊಂದಿದ್ದರು ಎನ್ನುವುದಕ್ಕೆ ಇಂದು ಕಂಡುಬರುವ ಅದೆಷ್ಟೊ ನೂರಾರು ಶ್ರೀಮಂತ ಶಿಲ್ಪಕಲೆಯುಳ್ಳ ಪುರಾತನ ದೇವಾಲಯಗಳೆ ಸಾಕ್ಷಿ.

ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ವಿಶಿಷ್ಟ ದೇವಾಲಯದ ಕುರಿತು ತಿಳಿಸಲಾಗಿದೆ. ೈದೊಂದು ಪುರಾತನ ದೇವಾಲಯವಾಗಿದ್ದು ಕಾಮಸೂತ್ರದ ಶಿಲ್ಪಕಲೆಗಳಿಗೂ ಸಹ ಅಪಾರ ಖ್ಯಾತಿಗಳಿಸಿದೆ.

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾ ರಾಜಸ್ಥಾನದ ಉದೈಪುರ ಜಿಲ್ಲೆಯಲ್ಲಿರುವ ಒಂದು ಸಣ್ಣ ಐತಿಹಾಸಿಕ ಪಟ್ಟಣ. ಮೇವಾರ ಸಾಮ್ರಾಜ್ಯದ ನಾಲ್ಕನೇಯ ರಾಜನಾದ ನಗರಾದಿತ್ಯನಿಂದ ನಗ್ಡಾ ಆರನೇಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿತು.

ಚಿತ್ರಕೃಪೆ: Dennis Jarvis

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಅಂದು ಮೇವಾರದ ರಾಜಧಾನಿ ನಗರವಾಗಿ ಮರೆದಿತ್ತು ಈ ಪುಟ್ಟ ಪಟ್ಟಣ ನಗ್ಡಾ. ಸ್ವಾಭಾವಿಕವಾಗಿ ರಾಜಧಾನಿ ಪಟ್ಟವಿದ್ದುದರಿಂದ ಇಲ್ಲಿ ಸಾಕಷ್ಟು ದೇವಾಲಯ-ದೇಗುಅಲಗಳ ರಚನೆಯಾಯಿತು. ಈ ಎಲ್ಲ ರಚನೆಗಳು ಸಾಕಷ್ಟು ಅದ್ಭುತವಾದ ಶಿಲ್ಪಕಲೆಯಿಂದ ಕೂಡಿವೆ.

ಚಿತ್ರಕೃಪೆ: Dennis Jarvis

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಇಂತಹ ಕೆಲವು ವಿಶೇಷತೆಗಳನ್ನು ಹುಡುಕುತ್ತ ಹೋದಾಗ ನಮಗೆ ಸಿಗುವ ಒಂದು ವಿಶಿಷ್ಟ ದೇವಾಲಯವೆ ನಗ್ಡಾ ದೇವಾಲಯ. ಬಗೇಲಾ ಕೆರೆಯ ತಟದಲ್ಲಿ ಹಾಗೂ ಕೆರೆಯಲ್ಲಿಯೂ ಸಹ ಈ ದೇವಾಲಯ ಹಾಗೂ ಇದರ ಉಪ ರಚನೆಗಳು ಹರಡಿವೆ.

ಚಿತ್ರಕೃಪೆ: Dennis Jarvis

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಈ ದೇವಾಲಯ ಸ್ಥಿತವಿರುವ ಸ್ಥಳ, ಅಲ್ಲಿನ ಪರಿಸರ ಹಾಗೂ ಕೆರೆಯ ನೋಟಗಳು ಒಂದು ರೀತಿಯಲ್ಲಿ ಅದ್ಭುತವಾಗಿ ಕಂಡುಬರುತ್ತವೆ. ಏನನ್ನೊ ಹೇಳಲು ಹೊರಟಿರುವ ಹಾಗಿದೆ ಪರಿಸರ ಎನ್ನುವ ರೀತಿಯಲ್ಲಿ ಆಭಾಸ ಮೂಡುತ್ತದೆ.

ಚಿತ್ರಕೃಪೆ: Dennis Jarvis

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಇಲ್ಲಿರುವ ದೇವಾಲಯವನ್ನು ಅತ್ತೆ-ಸೊಸೆ ದೇವಾಲಯವೆಂದೆ ಕರೆಯುತ್ತಾರೆ. ಸ್ಥಳೀಯ ಪುರಾಣದಂತೆ ಒಂದು ದೇವಾಲಯವನ್ನು ಅತ್ತೆ ನಿರ್ಮಿಸಿದ್ದರೆ ಇನ್ನೊಂದು ದೇವಾಲಯವನ್ನು ಸೊಸೆ ನಿರ್ಮಿಸಿದಳೆಂಬ ಪ್ರತೀತಿಯಿದೆ.

ಚಿತ್ರಕೃಪೆ: TeshTesh

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಒಂದೆ ಕಲ್ಲು ಹಾಸಿನ ಮೇಲೆ ಈ ಎರಡೂ ದೇವಾಲಯಗಳಿದ್ದರೂ ಅತ್ತೆ ದೇಗುಲವು ಕೊಂಚ ದೊಡ್ಡದಾಗಿದ್ದು ಸೊಸೆ ದೇವಾಲಯವು ಸ್ವಲ್ಪ ಚಿಕ್ಕದಾಗಿದೆ. ಇನ್ನೊಂದು ವಿಶಯವೆಂದರೆ ಈ ದೇವಾಲಯವು ಮೂಲತಃ ವಿಷ್ಣು ದೇವರಿಗೆ ಮುಡಿಪಾಗಿದೆ.

ಚಿತ್ರಕೃಪೆ: Dennis Jarvis

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಈ ದೇವಾಲಯದ ಕೆತ್ತನೆಗಳಂತೂ ಇನ್ನೂ ಅದ್ಭುತ. ಕಾಮಸೂತ್ರದ ಹಲವಾರು ಭಂಗಿಅಗಳು ಇಲ್ಲಿ ಅತ್ಯಂತ ಮನೋಜ್ಞವಾಗಿ ಕೆತ್ತಲ್ಪಟ್ಟಿದ್ದು ಸಾಕಷ್ಟು ಕುಊಹಲ ಕೆರಳಿಸುತ್ತವೆ. ಹಾಗಾಗಿ ಇದೊಂದು ಪ್ರವಾಸಿ ಆಕರ್ಷಣೆಯಾಗಿಯೂ ಸಾಕಷ್ಟು ಗಮನ ಸೆಳೆಯುತ್ತದೆ.

ಚಿತ್ರಕೃಪೆ: Paul Asman and Jill Lenoble

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾ ಪಟ್ಟಣವು ಉದೈಪುರದ ವಾಯವ್ಯಕ್ಕೆ ಸುಮಾರು 23 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ಉದೈಪುರದಿಂದ ಇಲ್ಲಿಗೆ ತೆರಳಲು ಸಾಕಷ್ಟು ಬಸ್ಸುಅಳು ದೊರೆಯುತ್ತವೆ. ಬೇಕಾದವರು ಬಾಡಿಗೆ ಕಾರುಗಳಿಂದಲೂ ಸಹ ಇಲ್ಲಿಗೆ ತಲುಪಬಹುದು. ಅತ್ಯಂತ ಆಕರ್ಷಕವಾಗಿ ಕೆತ್ತಲಾದ ಖಂಬ ಹಾಗೂ ಮಂಟಪ. ಖಂಡಿತವಾಗಿಯೂ ಇದು ನೋಡುಗರನ್ನು ಬೆರುಗುಗೊಳಿಸದೆ ಇರಲಾರದು.

ಚಿತ್ರಕೃಪೆ: ArnoldBetten

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಒಂದೆ ಕಲ್ಲಿನ ಹಾಸಿನ ಮೇಲೆ ಪ್ರತ್ಯೇಕವಾಗಿ ನಿರ್ಮಿತವಾಗಿರುವ ಅತ್ತೆಯ ಹಾಗೂ ಸೊಸೆಯ ದೇವಾಲಯ.

ಚಿತ್ರಕೃಪೆ: Cosimo Roams

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಅತ್ತೆ ಸೊಸೆ ದೇವಾಲಯ ಪಕ್ಕದಲ್ಲಿರುವ ಬಗೇಲಾ ಕೆರೆಯ ಅದ್ಭುತ ನೋಟ.

ಚಿತ್ರಕೃಪೆ: Cosimo Roams

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಶೃಂಗಾರ ರಸವನ್ನು ಉದ್ರೇಕಿಸುವಂತಹ ಅದ್ಭುತ ಮಿಥುನ ಕಲೆಯ ಶಿಲ್ಪಗಳು.

ಚಿತ್ರಕೃಪೆ: Nagarjun Kandukuru

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ಸೊಗಸಾದ ಪ್ರಕೃತಿಯ ಮಧ್ಯೆ ಅಮೋಘವಾಗಿ ನಿಂತು ಅದ್ಭುತವಾಗಿ ನಿರ್ಮಿಸಲ್ಪಟ್ಟು ಪ್ರವಾಸಿಗರಿಗೆ ಅದ್ದೂರಿ ಸ್ವಾಗತ ಕೋರುವ ಸ್ವಾಗತ ಕಮಾನು.

ಚಿತ್ರಕೃಪೆ: Nagarjun Kandukuru

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ದೇವಾಲಯದ ಸುತ್ತಲೂ ನಿರ್ವಹಿಸಲಾಗುತ್ತಿರುವ ಹಸಿರು ಸಂಪತ್ತು. ಇದು ಪ್ರದೇಶಕ್ಕೆ ಮತ್ತಷ್ಟು ಇಂಬನ್ನು ನೀಡಿದೆ. ಹಿನ್ನಿಲೆಯಲ್ಲಿ ಅರಾವಳಿಯ ಪರ್ವತ ಶ್ರೇಣಿ.

ಚಿತ್ರಕೃಪೆ: Nagarjun Kandukuru

ನಗ್ಡಾದ ಅತ್ತೆ ಸೊಸೆ ದೇವಾಲಯ :

ನಗ್ಡಾದ ಅತ್ತೆ ಸೊಸೆ ದೇವಾಲಯ :

ದೇವಾಲಯ ಗೋಡೆಗಳ ಮೇಲ್ಭಾಗದಲ್ಲಿ (ಒಳತಾರಸಿ/ಒಳ ಮಾಳಿಗೆ) ಅತ್ಯದ್ಭುತವಾಗಿ ಅರಳಿರುವ ಮನಸೆಳೆವ ಶಿಲ್ಪಕಲೆಗಳ ಅಮೋಘ ಚಿತ್ತಾರ.

ಚಿತ್ರಕೃಪೆ: Zen Skillicorn

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X