Search
  • Follow NativePlanet
Share
» »ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?

ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?

ಸಾಮಾನ್ಯವಾಗಿ ನೀರಿಗೆ ಎಲೆ ಹಾಕಿದ್ರೆ ಏನಾಗುತ್ತೆ , ನೀರಿನ ತೇಲುತ್ತಾ ಇರುತ್ತದೆ. ಅದೇ ಹಣ್ಣುಗಳನ್ನು ಹಾಕಿದ್ರೆ ನೀರಿನ ಒಳಗೆ ಮುಳುಗಿ ಹೋಗುತ್ತದೆ. ಆದ್ರೆ ಇಲ್ಲೊಂದು ವಿಶೇಷ ಸ್ಥಳವಿದೆ. ಇಲ್ಲಿ ನೀವು ಬಿಲ್ವಪತ್ರೆಯನ್ನು ಹಾಕಿದ್ರೆ ನೀರಿನ ಒಳಗೆ ಮುಳುಗುತ್ತದಂತೆ. ಅಂತಹ ಒಂದು ಅದ್ಭುತ ತಾಣದ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ.

ಓಂ ನಮಃ ಶಿವಾಯ್ ಮಂತ್ರ

ಓಂ ನಮಃ ಶಿವಾಯ್ ಮಂತ್ರ

ಹಣ್ಣುಗಳನ್ನು ನೀರಿನೊಳಗೆ ಹಾಕಿ ಓಂ ನಮಃ ಶಿವಾಯ್ ಎಂದು ಹೇಳಿದರೆ ನೀರಿನೊಳಗೆ ಹಾಕಿದ ಹಣ್ಣುಗಳಲ್ಲಿ ಒಂದೆರಡು ನೀರಿನ ಮೇಲೆ ತೇಲುತ್ತದೆ. ಇನ್ನು ಬಿಲ್ವಪತ್ರೆಯನ್ನು ನೀರಿನೊಳಗೆ ಹಾಕಿ ಓಂ ನಮಃ ಶಿವಾಯ್ ಎಂದರೆ ಸಾಕು ಬಿಲ್ವಪತ್ರೆ ನೀರಿನೊಳಗೆ ಮುಳುಗುತ್ತದೆ.

ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!

ರುದ್ರವೃತ್‌ ಕುಂಡ

ರುದ್ರವೃತ್‌ ಕುಂಡ

PC:Alok Verma

ಉತ್ತರ ಪ್ರದೇಶದ ಸೀತಾಪುರದಲ್ಲಿರುವ ರುದ್ರವೃತ್‌ನಲ್ಲಿ ಗೋಮ್ಟಿ ನದಿ ತೀರದಲ್ಲಿರುವ ಕುಂಡದಲ್ಲಿ ಇಂತಹ ಚಮತ್ಕಾರಿ ಘಟನೆಗಳು ನಡೆಯುತ್ತವೆ. ಈ ಕುಂಡದಲ್ಲಿ ಶಿವನ ಲಿಂಗವಿದೆ ಎನ್ನಲಾಗುತ್ತದೆ. ಆದರೆ ಈ ಕುಂಡದಲ್ಲಿ ಎಷ್ಟು ಆಳದಲ್ಲಿ ಶಿವಲಿಂಗ ಇದೆ ಎಂದು ಹೇಳಲಾಗುವುದಿಲ್ಲ.

 ಹಾಲು ನೀರಿನಲ್ಲಿ ವಿಲೀನವಾಗಲ್ಲ

ಹಾಲು ನೀರಿನಲ್ಲಿ ವಿಲೀನವಾಗಲ್ಲ

ರುದ್ರವೃತದಲ್ಲಿ ಶಿವನ ರುದ್ರಾವತಾರದ ಒಂದು ದೇವಾಲಯವಿದೆ. ಸಾಮಾನ್ಯವಾಗಿ ನೀರಿನಲ್ಲಿ ಹಾಲು ಸುರಿದರೆ ಹಾಲು ನೀರಿನಲ್ಲಿ ವಿಲೀನವಾಗುತ್ತದೆ. ಆದರೆ ರುದ್ರವ್ರತ್‌ನಲ್ಲಿ ಈ ನೀರಿನ ಕುಂಡದಲ್ಲಿ ನೀವು ಹಸುವಿನ ಹಾಲನ್ನು ಹಾಕಿದರೆ ಹಾಲು ಒಂದು ದಾರದಂತೆ ನೀರಿನೊಳಗೆ ಹೋಗುವುದು ಕಾಣುತ್ತದೆ.

ಈ ಮಂದಿರದೊಳಗಿದ್ದಾಳೆ ಮುಸ್ಲಿಂ ದೇವಿ, ವಿದೇಶಕ್ಕೆ ಹೋಗ್ಬೇಕಾದ್ರೆ ಇಲ್ಲಿ ಕೈ ಮುಗಿಯಿರಿಈ ಮಂದಿರದೊಳಗಿದ್ದಾಳೆ ಮುಸ್ಲಿಂ ದೇವಿ, ವಿದೇಶಕ್ಕೆ ಹೋಗ್ಬೇಕಾದ್ರೆ ಇಲ್ಲಿ ಕೈ ಮುಗಿಯಿರಿ

ಬಿಲ್ವಪತ್ರೆ ಬಿಟ್ರೆ ಯಾವ ಎಲೆಯೂ ಮುಳುಗೋದಿಲ್ಲ

ಬಿಲ್ವಪತ್ರೆ ಬಿಟ್ರೆ ಯಾವ ಎಲೆಯೂ ಮುಳುಗೋದಿಲ್ಲ

ಇಲ್ಲಿ ಬಿಲ್ವಪತ್ರೆಯನ್ನು ಹೊರತುಪಡಿಸಿ ಉಳಿದ ಯಾವ ಎಲೆಯೂ ನೀರಿನೊಳಗೆ ಮುಳುಗೋದಿಲ್ಲವಂತೆ. ಇದಕ್ಕೆ ಕಾರಣ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಹಣ್ಣು ನೀರಿನೊಳಗೆ ಹಾಕಿದ ತಕ್ಷಣ ಪ್ರಸಾದ ರೂಪದಲ್ಲಿ ಒಂದೆರಡು ಹಣ್ಣು ನೀರಿನ ಮೇಲೆ ತೇಲುತ್ತದೆ. ಜನರು ಇದನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ.

ಶಿವಲಿಂಗ ಕಾಣೋದಿಲ್ಲ

ಶಿವಲಿಂಗ ಕಾಣೋದಿಲ್ಲ

ಇಡೀ ದೇಶದಲ್ಲಿ ಶಿವನ ಅನೇಕ ಮಂದಿರಗಳಿವೆ. ಆದರೆ ಇಲ್ಲಿನ ಶಿವಲಿಂಗ ಬಹಳ ವಿಶೇಷವಾದುದ್ದು, ಭಕ್ತರು ಭಕ್ತಿಯಿಂದ ತಮ್ಮ ಕೋರಿಕೆಯನ್ನು ಶಿವನ ಮುಂದೆ ಇಟ್ಟಲ್ಲಿ ಭಕ್ತರ ಆಸೆ ಈಡೇರುತ್ತದಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X