Search
  • Follow NativePlanet
Share
» »ಈ ಸರೋವರದಲ್ಲಿ ಸುಮಾರು 600 ಅಸ್ಥಿ ಪಂಜರಗಳು ದೊರೆತ್ತಿದ್ದವು

ಈ ಸರೋವರದಲ್ಲಿ ಸುಮಾರು 600 ಅಸ್ಥಿ ಪಂಜರಗಳು ದೊರೆತ್ತಿದ್ದವು

ಆದರೆ ಭಾರತದಲ್ಲಿನ ರಹಸ್ಯವಾದ ರೂಪ್ಕುಂಡ ಸರೋವರ. ಈ ಸರೋವರಕ್ಕೆ ಸ್ಕೆಲಿಟನ್ ಲೇಕ್ ಎಂದೂ ಸಹ ಕರೆಯುತ್ತಾರೆ.ಇಲ್ಲಿ ಸುಮಾರು 600 ಅಸ್ಥಿ ಪಂಜರಗಳು ದೊರೆಕಿರುವುದೇ ಇದಕ್ಕೆ ಈ ಹೆಸರು ಬರಲು ಕಾರಣವಾಗಿದೆ. ರೂಪ್ಕುಂಡ ಸರೋವರವು ಭಾರತ ದೇಶದ ಉತ್ತರಾಖ

ಸರೋವರ ಎಂದಾಗ ನಮಗೆ ನೆನಪಾಗುವುದು ಸುಂದರವಾದ ಪರಿಸರ, ಝಳು ಝಳು ಹರಿಯುವ ನದಿ, ನಿಚ್ಚಳವಾದ ನೀರು ಹೀಗೆ ಹಲವಾರು ನಮ್ಮ ಕಲ್ಪನೆಗೆ ಬರುತ್ತವೆ. ಆದರೆ ಭಾರತದಲ್ಲಿನ ರಹಸ್ಯವಾದ ರೂಪ್ಕುಂಡ ಸರೋವರ. ಈ ಸರೋವರಕ್ಕೆ ಸ್ಕೆಲಿಟನ್ ಲೇಕ್ ಎಂದೂ ಸಹ ಕರೆಯುತ್ತಾರೆ.

ಇಲ್ಲಿ ಸುಮಾರು 600 ಅಸ್ಥಿ ಪಂಜರಗಳು ದೊರೆಕಿರುವುದೇ ಇದಕ್ಕೆ ಈ ಹೆಸರು ಬರಲು ಕಾರಣವಾಗಿದೆ. ರೂಪ್ಕುಂಡ ಸರೋವರವು ಭಾರತ ದೇಶದ ಉತ್ತರಾಖಂಡ ರಾಜ್ಯದಲ್ಲಿದೆ. ಅಷ್ಟೊಂದು ಅಸ್ಥಿ ಪಂಜರಗಳು ಹೇಗೆ ಬಂದವು? ಅದಕ್ಕೆ ಕಾರಣಗಳೇನು ಎಂಬುದಕ್ಕೆ ಹಲವಾರು ದೇಶ, ವಿದೇಶಗಳ ಸಂಶೋಧಕರು ಸಂಶೋಧನೆ ಇಂದಿಗೂ ನಡೆಸುತ್ತಿದ್ದಾರೆ. ಅಲ್ಲಿನ ಅಸ್ಥಿ ಪಂಜರದ ಬಗ್ಗೆ ಒಂದೊಂದು ಸಂಶೋಧನೆಗಳು ಒಂದೊಂದು ರೀತಿಯ ವರದಿಗಳನ್ನು ನೀಡುವುದೇ ಮತ್ತಷ್ಟು ನಿಗೂಢವಾಗಿತ್ತಿದೆ.

ಪ್ರಸ್ತುತ ಲೇಖನದಲ್ಲಿ ಈ ರೂಪ ಸರೋವರದ ಬಗ್ಗೆ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಭಯಂಕರವಾದ ರೂಪ್ಕುಂಡ ಸರೋವರ ಇರುವುದು ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಹಿಮಾಲಯದ ಪ್ರಾಂತ್ಯದಲ್ಲಿದೆ. ಈ ಪ್ರದೇಶದ ಬಳಿ ಯಾವುದೇ ಜನವಸತಿಗಳಿಲ್ಲ. ಸಮುದ್ರ ಮಟ್ಟದಿಂದ ಸುಮಾರು 5,029 ಮೀಟರ್ ಎತ್ತರದಲ್ಲಿದೆ.


PC:YOUTUBE

ಅಸ್ಥಿ ಪಂಜರಗಳು

ಅಸ್ಥಿ ಪಂಜರಗಳು

ರೂಪ್ಕುಂಡ ಸರೋವರದ ಸುತ್ತ ಸುಮಾರು 300 ರಿಂದ 600 ಮಾನವನ ಅಸ್ಥಿ ಪಂಜರಗಳು ಪತ್ತೆಯಾಗಿವೆ. ರೂಪ್ಕುಂಡ ಸರೋವರದ ಬಳಿ ಪತ್ತೆಯಾಗಿರುವ ನೂರಾರು ಅಸ್ತಿ ಪಂಜರದ ಬಗ್ಗೆ ಹಲವಾರು ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿದೆ.


PC:YOUTUBE

ಕಂಡು ಹಿಡಿದವರು

ಕಂಡು ಹಿಡಿದವರು

1942ರಲ್ಲಿ ನಂದಾ ದೇವಿ ಅಟವಿ ರೇಂಜರ್, ಹೆಚ್,ಕೆ ಮತ್ವಾಲ್ ಎಂಬ ವ್ಯಕ್ತಿಯು ಮೊದಲ ಬಾರಿಗೆ ಕಂಡು ಕೊಂಡನು. ಅಲ್ಲಿಯವರೆವಿಗೂ ಈ ಸರೋವರದ ಬಗ್ಗೆದ ಅಸ್ಥಿ ಪಂಜರದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ದೇಶ ವಿದೇಶಗಳಿಂದ ಬಂದ ಹಲವಾರು ಸಂಶೋಧಕರು ರೂಪ್ಕುಂಡ ಸರೋವರದ ಮೇಲೆ ಸಂಶೋಧನೆಯನ್ನು ನಡೆಸಲು ಪ್ರಾರಂಭಿಸಿದರು.

PC:YOUTUBE

ಆಧಾರ

ಆಧಾರ

ಈ ಅಸ್ಥಿ ಪಂಜರ ಯಾಕೆ ಇಲ್ಲಿ ಇವೆ ಎಂಬುದಕ್ಕೆ ಸರಿಯಾದ ಯಾವುದೇ ಆಧಾರಗಳು ಇನ್ನೂ ಸಿಕ್ಕಿಲ್ಲ. ಕೆಲವರು ಮಾತ್ರ ಅಲ್ಲಿನ ಜನರು ಸಾಂಕ್ರಾಮಿಕ ರೋಗ ಅಥವಾ ಭೂ ಕುಸಿತ ಇಲ್ಲವೇ ಹಿಮಗಾಳಿಯ ಹೊಡೆತಕ್ಕೆ ಸಿಕ್ಕಿ ಮರಣಿಸಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.

PC:YOUTUBE

ಸಂಶೋಧನೆ

ಸಂಶೋಧನೆ

ಆದರೆ 2004ರಲ್ಲಿ ಈ ರೂಪ್ಕುಂಡದ ರಹಸ್ಯವನ್ನು ಕಂಡು ಹಿಡಿಯಲೇಬೇಕೆಂದು ಭಾರತ ಹಾಗೂ ಯುರೋಪ್ ಸಂಶೋಧಕರು ಜಂಟಿಯಾಗಿ ಇನ್ನಷ್ಟು ಪುರಾವೆಗಳನ್ನು ಕಂಡುಹಿಡಿದರು. ಈ ಅಸ್ಥಿ ಪಂಜರ 6ನೇ ಶತಮಾನದ ಕಾಲಕ್ಕೆ ಸಂಬಂಧಿಸಿದೆಂದು ಅನುಮಾನ ವ್ಯಕ್ತ ಪಡಿಸಲಾಯಿತು.

PC:YOUTUBE

ಮೃತ ದೇಹ

ಮೃತ ದೇಹ

ರೂಪ್ಕುಂಡ ಸುತ್ತ ಮಂಜಿನಿಂದ ಕೂಡಿರುವುದರಿಂದ, ಅತಿ ಮಯವಾದ ವಾತಾವರಣ ಮತ್ತು ಗಾಳಿಯ ಅತಿ ಕೊರತೆಯಿಂದಾಗಿ ಶವಗಳು ಕೆಡದೇ ಹಾಗೆಯೇ ಇದೆ ಎಂದು ಕೆಲವರು ತಿಳಿಸುತ್ತಾರೆ. ಆ ತಲೆಬುರುಡೆಗಳನ್ನು ಪರೀಕ್ಷಿಸಿದಾಗ ಬೃಹತ್ ಆಲಿಕಲ್ಲುಗಳ ಹೊಡೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆಂದು ಅಭಿಪ್ರಾಯ ಪಡಲಾಯಿತು.

PC:YOUTUBE

ಒಂದೇ ಪ್ರದೇಶದವರಲ್ಲ

ಒಂದೇ ಪ್ರದೇಶದವರಲ್ಲ

ರೂಪ್ಕುಂಡ ಸರೋವರದಲ್ಲಿ ದೊರೆತ ಅಸ್ಥಿ ಪಂಜರಗಳು ಕೆಲವು ಎತ್ತರ ಹಾಗೂ ಕೆಲವು ಕುಳ್ಳದಾದ ಅಸ್ಥಿ ಪಂಜರಗಾಳಾಗಿದ್ದವು. ಸಂಶೋಧನೆಯ ಪ್ರಕಾರ ಅಲ್ಲಿನ ಮೃತರಾದವರು ಒಂದೇ ಪ್ರದೇಶಕ್ಕೆ ಸೇರಿರದೇ ಬೇರೆ ಬೇರೆ ಪ್ರದೇಶಕ್ಕೆ ಸೇರಿದವರಾಗಿದ್ದರು.


PC:YOUTUBE

ಯಾವ ಪ್ರದೇಶದವರು

ಯಾವ ಪ್ರದೇಶದವರು

ಅಲ್ಲಿರುವ ಅಸ್ಥಿ ಪಂಜರಗಳ ಪ್ರಕಾರ ಗಿಡ್ಡದಾಗಿರುವವರು ಟಿಬೇಟಿಯನ್ ಪ್ರದೇಶಕ್ಕೆ ಸೇರಿದ ಕೂಲಿಕಾರರಾಗಿರಬೇಕು ಹಾಗೂ ಎತ್ತರವಾಗಿರುವವರು ಭಾರತ ದೇಶದ ಮಹಾರಾಷ್ಟ್ರ, ಮಧ್ಯೆ ಪ್ರದೇಶಕ್ಕೆ ಸಂಬಂಧಿüಸಿರುವವರಾಗಿರುತ್ತಾರೆ ಎಂದು ತಿಳಿಸಿದರು.


PC:YOUTUBE

ಹೈದ್ರಾಬಾದ್,ಪುಣೆ,ಲಂಡನ್ ಸಂಶೋಧಕರು

ಹೈದ್ರಾಬಾದ್,ಪುಣೆ,ಲಂಡನ್ ಸಂಶೋಧಕರು

ಹೈದ್ರಾಬಾದ್,ಪುಣೆ,ಲಂಡನ್ ಸಂಶೋಧಕರ ಪ್ರಕಾರ ಅಲ್ಲಿ ಮರಣಿಸಿದ ಮನುಷ್ಯರು ರೂಪ್ಕುಂಡ ಸರೋವರದ ಸಮೀಪದ ನಿವಾಸಿಗಳೆಂದು ಹಾಗೂ ಭಾರಿ ಮಳೆಯ ಕಾರಾಣದಿಂದಾಗಿ ಮೃತರಾಗಿದ್ದಾರೆ ಎಂದು ತಿಳಿಸಿದರು. ವಿಶೇಷವೆನೆಂದರೆ ಆ ಮಳೆ ಕ್ರಿಕೆಟ್ ಬಾಲ್‍ನಷ್ಟು ದಪ್ಪ ದಪ್ಪ ಹನಿಗಳಿಂದ ರೂಪ್ಕುಂಡ ಸರೋವರದಲ್ಲಿದ್ದ ಜನರ ಮೇಲೆ ಬಿದ್ದ ಕಾರಣದಿಂದಾಗಿ ಮರಿಣಿಸಿರಬಹುದೇ ವಿನಃ ರೋಗಗಳಿಂದ ಮೃತ ಪಟ್ಟಿಲ್ಲ ಎಂದು ದೃಡಿಕರಿಸಿತು.


PC:Schwiki

ಚಾರಿತ್ರಿಕ ಹಿನ್ನೆಲೆ

ಚಾರಿತ್ರಿಕ ಹಿನ್ನೆಲೆ

ಅಲ್ಲಿರುವ ಅಸ್ಥಿ ಪಂಜರಗಳ ಬಗ್ಗೆ ಯಾವುದೇ ಖಚಿತವಾದ ಹಾಗೂ ಚಾರಿತ್ರಿಕ ಹಿನ್ನೆಲೆಗಳನ್ನು ಇಲ್ಲದೇ ಇರುವುದರಿಂದ ರೂಪ್ಕುಂಡ ಸರೋವರದ ರಹಸ್ಯದ ಕುರಿತು ಅಷ್ಟು ಖಚಿತವಾದ ಮಾಹಿತಿ ದೊರೆತ್ತಿಲ್ಲ. ಏಕೆಂದರೆ ಆ ಪ್ರದೇಶದ ಅಸುಪಾಸಿನಲ್ಲಿ ಯಾವುದೇ ತೀರ್ಥಕ್ಷೇತ್ರಗಳಿಲ್ಲವಾದ್ದರಿಂದ ಇವರ ಬಗೆಗಿನ ವಿಚಾರ ಇನ್ನಷ್ಟು ರಹಸ್ಯವಾಗಿ ಉಳಿದಿದೆ.


PC:Schwiki

ಪ್ರವಾಸ

ಪ್ರವಾಸ

ಆ ಪ್ರದೇಶದಲ್ಲಿ ಕೇವಲ ಮಾನವನ ಅಸ್ಥಿ ಪಂಜರಗಳಿಗೆ ಪ್ರಸಿದ್ಧಿ ಹೊಂದದೆ ಪ್ರವಾಸಿ ತಾಣಕ್ಕೂ ಪ್ರಖ್ಯಾತತೆ ಪಡೆದಿದೆ. ರೂಪ್ಕುಂಡ ಹಿಮಾಲಯವು ಅತ್ಯಂತ ಸುಂದರವಾದ ತಾಣವಾಗಿದೆ. ಅಲ್ಲಿ ಯಾವುದೇ ರಸ್ತೆ ಮಾರ್ಗವಿಲ್ಲದಿರುವುದರಿಂದ ಸತತ 4 ದಿನಗಳ ಕಾಲ ಕಾಲ್ನಡಿಗೆ ಇಂದಲೇ ತಲುಪಬೇಕಾಗುತ್ತದೆ.


PC:Djds4rce

ಟ್ರಿಕ್ಕಿಂಗ್

ಟ್ರಿಕ್ಕಿಂಗ್

ರೂಪ್ಕುಂಡ ಸರೋವರಕ್ಕೆ ಟ್ರಿಕ್ಕಿಂಗ್ ಕೂಡ ಹೋಗಬಹುದು. ಅಲ್ಲಿ ಸುಂದರವಾದ ಬುಗ್ಯಾಲ್ ಹುಲ್ಲುಗಾವಲು ಮತ್ತು ನೈಸರ್ಗಿಕ ಹೂತೋಟವು ಇದೆ. ಜನವಸತಿ ಇಲ್ಲಿದ ಪ್ರದೇಶವಾದ್ದರಿಂದ ಪ್ರವಾಸಿಗರು ತಮ್ಮ ಬಳಿ ಹಲವಾರು ಸರಕುಗಳನ್ನು ಕೊಂಡ್ಯೂಯಬೇಕಾಗುತ್ತದೆ.


PC:Schwiki

ಪ್ರವಾಸ

ಪ್ರವಾಸ

ರೂಪ್ಕುಂಡ ಒಂದು ಆಕರ್ಷಕವಾದ ಪ್ರವಾಸಿ ತಾಣ ಮತ್ತು ಎರಡು ಹಿಮಾಲಯ ಪರ್ವತಗಳ ತಳದಲ್ಲಿರುವ ಚಾಮೋಲಿ ಜಿಲ್ಲೆಯ ಪ್ರವಾಸ ಹಾಗೂ ಟ್ರೆಕ್ಕಿಂಗ್ ಕೈಗೊಳ್ಳಬಹುದಾಗಿದೆ. ಟ್ರೈಸುಲ್(7,120) ಮತ್ತು ನಂದಾ ಘುಂಟಿ(6,310) ಮೀಟರ್‍ಗಳಿದೆ. ಈ ಸರೋವರ ಜುನಾರ್ಗಲಿ ಎಂಬ ಉತ್ತರಕ್ಕೆ ಮತ್ತು ಪೂರ್ವಕ್ಕೆ ಚಂದನಿಯಾ ಕೋಟ್ ಎಂಬ ಶಿಖರದಿಂದ ಸುತ್ತುವರಿದಿದೆ.


PC:Mandeep Thander

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ರೂಪ್ಕುಂಡ ಸರೋವರಕ್ಕೆ ಭೇಟಿ ನೀಡಲು ಸಮೀಪದ ವಿಮಾನ ನಿಲ್ದಾಣವೆಂದರೆ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಇಲ್ಲಿಂದ ರೂಪ್ಕುಂಡ ಸರೋವರಕ್ಕೆ 149 ಕಿ,ಮೀಯಷ್ಟು ಅಂತರದಲ್ಲಿದೆ.


PC:YOUTUBE

ರೂಪ್ಕುಂಡ ಸಮೀಪದ ಪ್ರಸಿದ್ಧವಾದ ಸ್ಥಳಗಳು

ರೂಪ್ಕುಂಡ ಸಮೀಪದ ಪ್ರಸಿದ್ಧವಾದ ಸ್ಥಳಗಳು

ಬಾಗುಬಾಸ್, ಬಿದಿನಿ ಬುಗ್ಯಾಲ್, ರೂಪ್ಕುಂಡ ರೋಂತ್ತಿ, ಜೊನಾರ್ ಗಾಲಿ, ಹೋಮ್ ಕುಂಡ, ಶೈಲ ಸಮುದ್ರ, ಪ್ಯಾಥರ್ ನಚೂಣಿ ಇನ್ನೂ ಹಲವಾರು ಸುಂದರ ಸ್ಥಳಗಳನ್ನು ರೂಪ್ಕುಂಡಗೆ ಭೇಟಿ ಕೊಟ್ಟಾಗ ಕಾಣಬಹುದಾಗಿದೆ.


PC:Sandeep Brar Jat

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X