Search
  • Follow NativePlanet
Share
» »ರೋಹಿಡಾ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು

ರೋಹಿಡಾ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು

ಪುಣೆಯು ಸಾಕಷ್ಟು ಪ್ರವಾಸಿ ತಾಣಗಳ ತವರೂರಾಗಿದೆ. ಐತಿಹಾಸಿಕ ತಾಣಗಳಿಂದ ಹಿಡಿದು ಧಾರ್ಮಿಕ ತಾಣಗಳ ವರೆಗೆ ಸಾಕಷ್ಟು ಆಕರ್ಷಕ ಪ್ರವಾಸಿ ತಾಣಗಳನ್ನುಇಲ್ಲಿ ಕಾಣಬಹುದು. ಅಂತಹ ಸುಂದರ ಆಕರ್ಷಕ ತಾಣಗಳಲ್ಲಿ ರೋಹಿಡಾ ಕೋಟೆ ಕೂಡಾ ಒಂದು. ಇದು ಎಲ್ಲಾ ರೀತಿಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಒಂದು ವೇಳೆ ನೀವು ಪ್ರಕೃತಿ ಪ್ರಿಯರಾಗಿದ್ದು, ಸಾಹಸಮಯ ತಾಣಗಳಿಗೆ ಭೇಟಿ ನೀಡಲು ಇಷ್ಟಪಡುವವರಾಗಿದ್ದರೆ, ಚಾರಣ ಪ್ರಿಯರಾಗಿದ್ದರೆ ಪುಣೆಯ ಈ ರೋಹಿಡಾ ಕೋಟೆಗೆ ಭೇಟಿ ನೀಡಲೇ ಬೇಕು. ಹಾಗಾದರೆ ಬನ್ನಿ ಈ ರೋಹಿಡಾ ಕೋಟೆಯ ಬಗ್ಗೆ ಒಂದಿಷ್ಟು ತಿಳಿಯೋಣ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Ccmarathe
ರೋಹಿಡಾ ಕೋಟೆಯು ವರ್ಷವಿಡೀ ಮಧ್ಯಮ ಪ್ರಕಾರದ ಹವಾಮಾನವನ್ನು ಹೊಂದಿರುತ್ತದೆ. ಹಾಗಾಗಿ ಯಾವಾಗ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ಒಂದು ವೇಳೆ ನೀವು ಪುಣೆಯ ಬಿಸಿಲಿನಿಂದ ತಪ್ಪಿಸಿಕೊಳ್ಳ ಬೇಕೆಂದಿದ್ದರೆ ಅಕ್ಟೋಬರ್‌ನಿಂದ ಮಾರ್ಚ್‌ ತಿಂಗಳ ಒಳಗೆ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಾಗಿದೆ. ನೀವು ಮಳೆಗಾಲದಲ್ಲಿ ಈ ಬೆಟ್ಟಕ್ಕೆ ಭೇಟಿ ನೀಡಬಹುದು. ಆದರೆ ಮಳೆಗಾಲದಲ್ಲಿ ಬಂಡೆಗಳು ಜಾರುವುದರಿಂದ ಬೆಟ್ಟ ಹತ್ತುವಾಗ ಮತ್ತು ಇಳಿಯುವಾಗ ಬಹಳ ಜಾಗರೂಕರಾಗಿರಬೇಕು.

ವಿಚಿತ್ರಘಡ್ ಕೋಟೆ

ವಿಚಿತ್ರಘಡ್ ಕೋಟೆ

PC:Pranav Lawate
ಮಹಾರಾಷ್ಟ್ರದ ಪುಣೆಯಲ್ಲಿರುವ ಈ ಕೋಟೆಯುವ ಬೋರ್‌ನಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲಿರುವ ಈ ಕೋಟೆಯನ್ನು ವಿಚಿತ್ರಘಡ್ ಕೋಟೆ ಎಂದೂ ಕರೆಯಲಾಗುತ್ತದೆ. ಈ ಕೋಟೆಯನ್ನು ಹಲವು ಶತಮಾನಗಳ ಹಿಂದೆ ಯಾದವ ಸಾಮ್ರಾಟರು ನಿರ್ಮಿಸಿದ್ದರು ಎನ್ನಲಾಗುತ್ತದೆ.

ಅನೇಕ ಸಾಮ್ರಾಟರಿಂದ ಆಳಲ್ಪಟ್ಟಿದೆ

ಅನೇಕ ಸಾಮ್ರಾಟರಿಂದ ಆಳಲ್ಪಟ್ಟಿದೆ

PC:Ccmarathe
ಆ ನಂತರ ಈ ಕೋಟೆಯು ಮೋಘಲರು, ಮರಾಠರು ಸೇರಿದಂತೆ ಅನೇಕ ಸಾಮ್ರಾಟರಿಂದ ಆಳಲ್ಪಟ್ಟಿತು. ಆದರೆ ಈಗ ಈ ಕೋಟೆಯು ಶಿಥಿಲಾವಸ್ಥೆಯಲ್ಲಿದೆ. ಆದರೂ ಈಗಲು ಪ್ರವಾಸಿಗರು ಈ ಕೋಟೆಯ ಅವಶೇಷಗಳನ್ನು ಕಾಣಬಹುದು. ಇಂದಿಗೂ ಈ ತಾಣವು ಅನೇಕ ಇತಿಹಾಸ ಪ್ರಿಯರ ಮೆಚ್ಚಿನ ತಾಣವಾಗಿದೆ.

ರೋಹಿಡಾ ಮಲ್ಲ ದೇವಾಲಯ

ರೋಹಿಡಾ ಮಲ್ಲ ದೇವಾಲಯ

PC:Ccmarathe
ಬೆಟ್ಟದ ಮೇಲಿರುವ ಈ ಕೋಟೆಯು ಚಾರಣಿಗರು, ಫೋಟೋಗ್ರಾಫರ್‌ಗಳು ಹಾಗೂ ಕ್ಯಾಂಪರ್‌ಗಳಿಂದ ಹೆಚ್ಚು ಜನಪ್ರಿಯವಾಗಿದೆ. ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ ಪ್ರಶಾಂತ ತಾಣವು ನಿಮಗೆ ಪ್ರಶಾಂತತೆಯನ್ನು ಒದಗಿಸುತ್ತದೆ. ನೀವು ಬರೀ ಈ ಕೋಟೆ ನೋಡಲು ಮಾತ್ರವಲ್ಲ ಇಲ್ಲಿರುವ ರೋಹಿಡಾ ಮಲ್ಲ ದೇವಾಲಯವನ್ನೂ ಭೇಟಿ ಮಾಡಬಹುದು. ಅಲ್ಲಿನ ವಾತಾವರಣವು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ಒದಗಿಸುವುದಲ್ಲದೆ, ನಿಮ್ಮ ದೇಹಕ್ಕೂ ಉಲ್ಲಾಸವನ್ನು ನೀಡುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Ccmarathe
ವಿಮಾನದ ಮೂಲಕ: ರೋಹಿಡಾ ಕೋಟೆಗೆ ಸಮೀಪದ ವಿಮಾನ ನಿಲ್ದಾಣವು ಪುಣೆಯಿಂದ ಸುಮಾರು 77 ಕಿ.ಮೀ ದೂರದಲ್ಲಿದೆ. ಒಮ್ಮೆ ನೀವು ಪುಣೆ ತಲುಪಿದ ನಂತರ ಕೋಟೆಗೆ ನೇರ ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು. ಈ ಕೋಟೆಯನ್ನು ತಲುಪಲು ನೀವು ಬೆಟ್ಟವನ್ನು ಚಾರಣ ಮಾಡಬೇಕಾಗಿದೆ. ಜಾರ್ವಾಡಿ ಗ್ರಾಮದಿಂದ ಚಾರಣವನ್ನು ಪ್ರಾರಂಭಿಸಬೇಕು.
ರೈಲು ಮೂಲಕ: ಎಲ್ಲಾ ಇತರ ನಗರಗಳು ಮತ್ತು ಪಟ್ಟಣಕ್ಕೆ ಪುಣೆಗೆ ಉತ್ತಮ ರೈಲು ಸಂಪರ್ಕವಿದೆ. ಆದ್ದರಿಂದ ರೈಲುಗಳ ಮೂಲಕ ಸುಲಭವಾಗಿ ತಲುಪಬಹುದು. ನೀವು ನೇರವಾಗಿ ಪುಣೆಗೆ ತೆರಳಬಹುದು ಮತ್ತು ಅಲ್ಲಿಂದ ಬಜಾರ್ವಾಡಿಯನ್ನು ತಲುಪಲು ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಳ್ಳಬಹುದು. ಪುಣೆ ಮತ್ತು ಬಜಾರ್ವಾಡಿ ನಡುವಿನ ಅಂತರ 73 ಕಿ.ಮೀ.
ರಸ್ತೆಯ ಮೂಲಕ: ರೋಹಿಡಾ ಕೋಟೆಯ ಬೇಸ್ ರಸ್ತೆ ಮೂಲಕ ಸುಲಭವಾಗಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X